ನಿಮ್ಮಭಾಷೆಯಲ್ಲೇ ನಿಮ್ಮ ಸ್ಮಾರ್ಟ್​ಫೋನ್- "ಇಂಡಸ್ ಆಪರೇಟಿಂಗ್ ಸಿಸ್ಟಮ್​"ನಿಂದ “ಭಾರತ್” ಕ್ರಾಂತಿ

ಟೀಮ್​ ವೈ.ಎಸ್​. ಕನ್ನಡ

ನಿಮ್ಮಭಾಷೆಯಲ್ಲೇ  ನಿಮ್ಮ ಸ್ಮಾರ್ಟ್​ಫೋನ್- "ಇಂಡಸ್ ಆಪರೇಟಿಂಗ್ ಸಿಸ್ಟಮ್​"ನಿಂದ “ಭಾರತ್” ಕ್ರಾಂತಿ

Sunday April 16, 2017,

4 min Read

ಇವತ್ತು ಎಲ್ಲವೂ ಡಿಜಿಟಲ್. ಡಿಜಿಟಲ್ ಕಾಲದ ಜೊತೆ ಓಡಾಡುವುದು ಅನಿವಾರ್ಯ ಅನ್ನುವಂತಹ ಪರಿಸ್ಥಿತಿ ಕೂಡ ಎದುರಾಗಿದೆ. ಭಾರತದಲ್ಲಂತೂ ಡಿಜಿಟಲ್ ಸಂಸ್ಕೃತಿ ಬೆಳೆಯುತ್ತಿದೆ. ವಿಶ್ಚದ ಬಲಾಢ್ಯ ರಾಷ್ಟ್ರಗಳ ಜೊತೆ ಡಿಜಿಟಲ್ ಆಗಿ ಹೆಜ್ಜೆ ಇಡುವ ಪ್ರಯತ್ನವನ್ನು ಭಾರತ ಮಾಡುತ್ತಿದೆ. ಭಾರತದಲ್ಲಿ ವಿವಿಧ ಸಂಸ್ಕೃತಿ ಇದೆ. ವಿವಿಧ ಭಾಷೆಗಳಿವೆ. ಹೀಗಾಗಿ ಡಿಜಿಟಲ್ ಕ್ರಾಂತಿ ವಿವಿಧ ರೀತಿಯಲ್ಲಿ ನಡೆಯುತ್ತಿದೆ. ಬಹುತೇಕ ಡಿಜಿಟಲ್ ಸಂಸ್ಕೃತಿ ಇಂಗ್ಲೀಷ್​ನಲ್ಲೇ ಇರುವ ಕಾರಣ, ಅದು ಅಭಿವೃದ್ಧಿಗೆ ತಡೆಯಾಗುತ್ತಿದೆ. ಆದ್ರೆ ಭಾಷೆಗಳ ಅಡೆತಡೆಗಳನ್ನು ದಾಟಿದ್ರೆ ಸುಲಭವಾಗಿ ಜನರಿಗೆ ಹತ್ತಿರವಾಗುತ್ತದೆ. ಹೀಗಾಗಿ ಇವತ್ತು ಭಾರತದಲ್ಲಿ ವಿವಿಧ ಭಾಷೆಗಳಲ್ಲಿನ ಸಾಫ್ಟ್​ವೇರ್ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ.

image


ವಿವಿಧ ಭಾಷೆಗಳಲ್ಲಿ ತಾಂತ್ರಿಕ ಅಭಿವೃದ್ಧಿ, ಭಾಷೆ ಮತ್ತು ಡಿಜಿಟಲ್ ಕಾಲದ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ. ಈಗಾಗಲೇ ಆನ್​ಲೈನ್ ಉದ್ಯಮದಲ್ಲಿ ರೆವರಿ ಮತ್ತು ಪ್ರೊಸೆಸ್9ನಂತಹ ಕಂಪನಿಗಳು ವಿವಿಧ ಭಾಷೆಗಳಲ್ಲಿ ಉದ್ಯಮ ನಡೆಸಿಕೊಂಡು ಯಶಸ್ಸಿನ ಮೆಟ್ಟಿಲು ಹತ್ತಿದೆ. ಈಗ ಮುಂಬೈ ಮೂಲದ ಇಂಡಸ್ ಒಎಸ್ (ಈ ಹಿಂದೆ ಫಸ್ಟ್ ಟಚ್ ಎಂದು ಹೆಸರು ಪಡೆದುಕೊಂಡಿತ್ತು) ಇಂಗ್ಲೀಷೇತರ ಭಾಷೆಯ ಬಳಕೆದಾರರನ್ನು ಸ್ಮಾರ್ಟ್ ಫೋನ್ ಫ್ರೆಂಡ್ಲಿ ಆಗುವಂತೆ ಮಾಡಲು ಹಾರ್ಡ್​ವೇರ್ ಮೂಲಕ ಪ್ರಯತ್ನ ಪಡುತ್ತಿದೆ.

ವಿಶ್ವದ ಮೊದಲ ಪ್ರಾದೇಶಿಕ ಆಪರೇಟಿಂಗ್ ಸಿಸ್ಟಮ್

2013ರಲ್ಲಿ ಐಐಟಿ ಮುಂಬೈಯ ಹಳೆ ವಿದ್ಯಾರ್ಥಿಗಳಾದ ರಾಕೇಶ್ ದೇಶ್​ಮುಖ್, ಆಕಾಶ್ ಡೊಂಗ್ರೆ ಮತ್ತು ಸುಧೀರ್ ಬಿ. ಭಾರತದಲ್ಲಿ ಸ್ಮಾರ್ಟ್​ಫೋನ್ ಬಳಕೆದಾರರಿಗೆ ಭಾಷೆಯೇ ದೊಡ್ಡ ಹಿನ್ನಡೆ ಅನ್ನುವುದನ್ನು ಅರಿತುಕೊಂಡರು. ಹೀಗಾಗಿ ಆ ನಿಟ್ಟಿನಲ್ಲಿ ಬೇರೆ ಯಾವುದಾದರೂ ದಾರಿ ಹುಡುಕಿ, ವಿವಿಧ ಭಾಷೆಗಳ ಮೂಲಕ ಜನರು ಸ್ಮಾರ್ಟ್​ಫೋನ್ ಫ್ರೆಂಡ್ಲಿ ಆಗಬೇಕು ಅನ್ನುವ ಉದ್ದೇಶದ ಮೂಲಕ ಕಾರ್ಯ ಆರಂಭಿಸಿದ್ರು. ಅದಕ್ಕಾಗಿ ಹೊಸ ರೀತಿಯಸ ಆಪರೇಟಿಂಗ್​ ಸಿಸ್ಟಮ್​ ಬೇಕು ಅನ್ನುವ ಬಗ್ಗೆ ಯೋಜನೆಗಳನ್ನು ಮಾಡಿದ್ರು. ಆದ್ರೆ ಒಎಸ್ ಡೆವಲಪ್ ಮಾಡುವ ಹಂತದಲ್ಲಿ ಕೇವಲ ಒಂದು ಭಾಷೆಗೆ ಸೀಮಿತವಾಗುವ ಹಾಗಿರಲಿಲ್ಲ. ಯಾಕಂದ್ರೆ ಭಾರತದಲ್ಲಿ ಹಲವು ಭಾಷೆಗಳಿವೆ. ಈ ನಿಟ್ಟಿನಲ್ಲಿ ಕೆಲಸ ಆರಂಭಿಸಿದ್ರು.

“ ದೇಶದ ವಿವಿಧತೆ ನಮಗೆ ಸಾಕಷ್ಟು ದೊಡ್ಡ ಸವಾಲಾಗಿತ್ತು. ವಿವಿಧ ರೀತಿಯ ಸಂಸ್ಕೃತಿ ಮತ್ತು ಜನರ ನಡುವೆ ವಿವಿಧ ರೀತಿಯ ತಾಂತ್ರಿಕ ಅಂಶಗಳು ಇರಬೇಕು. ಈ ರೀತಿಯಲ್ಲಿ ಕೆಲಸ ಮಾಡುವುದು ನಮಗೆ ಅತೀ ದೊಡ್ಡ ಚಾಲೆಂಜ್ ಆಗಿತ್ತು. ”
- ರಾಕೇಶ್, ಸಾಫ್ಟ್​​ವೇರ್ ಎಂಜಿನಿಯರ್

ಭಾರತೀಯ ಭಾಷೆಯಲ್ಲಿ ಆಪರೇಟಿಂಗ್ ಸಿಸ್ಟಮ್ ಅನ್ನು ಉಪಯೋಗಿಸುವುದು ಮೊದಲ ಸಾಹಸ ವಾಗಿತ್ತು. ಹೀಗಾಗಿ ಕೆಲವು ಸ್ಮಾರ್ಟ್​ಫೋನ್ ಬಳಕೆದಾರರನ್ನು ಬೇಟಿ ಮಾಡಿ ಅವರ ಅವಶ್ಯಕತೆಗಳ ಮತ್ತು ಆಪರೇಟಿಂಗ್ ಸಿಸ್ಟಮ್​ಗಳ ಅಭಿವೃದ್ಧಿ ಬಗ್ಗೆ ಅಧ್ಯಯನ ಮಾಡಲು ಆರಂಭಿಸಿದ್ರು. ಹೀಗಾಗಿ ಆ್ಯಂಡ್ರಾಯ್ಡ್ ಫೋನ್ ಮತ್ತು ಭಾರತದ ವಿವಿಧ ಗ್ರಾಹಕರ ನಡುವೆ ಇದ್ದ ಅಂತರವನ್ನು ಅರಿತುಕೊಂಡು ಭಾರತದ ಪ್ರಾದೇಶಿಕ ಭಾಷೆಗಳನ್ನು ಬಳಸುವವರಿಗಾಗಿ ಹೊಸ ಆಪರೇಟಿಂಗ್ ಸಿಸ್ಟಮ್ ಅನ್ನು ಮಾರುಕಟ್ಟೆಗೆ ಪರಿಚಯಿಸಿಸುವ ಪ್ಲಾನ್​ಗಳನ್ನು ಸಿದ್ಧಪಡಿಸಿದ್ರು.

ಇದನ್ನು ಓದಿ: ಬೀದಿನಾಯಿಗಳ ಪಾಲಿನ “ದೇವರು”- 700ಕ್ಕೂ ಹೆಚ್ಚು ಬೀದಿನಾಯಿಗಳ ಪಾಲಿಗೆ ಆಶ್ರಯದಾತ ಸಾಫ್ಟ್ಎಂಜಿನಿಯರ್..!

ಆಪರೇಟಿಂಗ್ ಸಿಸ್ಟಮ್ ಅಭಿವೃದ್ಧಿ ಪಡಿಸಿಕೊಂಡ ಮೇಲೆ ಈ ಮೂವರಿಗೆ ಅತ್ಯಂತ ದೊಡ್ಡ ಸವಾಲಾಗಿದ್ದಿದ್ದು ಅದರ ಪರೀಕ್ಷೆ. ಹೀಗಾಗಿ ಆಪರೇಟಿಂಗ್ ಸಿಸ್ಟಮ್​ನ ಪೈಲಟ್ ಪ್ರಾಜೆಕ್ಟ್ ಪರೀಕ್ಷೆಗಾಗಿ ಕೆಲವೇ ಕೆಲವು ಭಾಷೆಗಳನ್ನು ಮತ್ತು ಪ್ರದೇಶಗಳನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಮೊದಲ ಪ್ರಯತ್ನದಲ್ಲೇ ಈ ಮೂವರ ಪ್ರಾದೇಶಿಕ ಆಪರೇಟಿಂಗ್ ಸಿಸ್ಟಮ್ ಅದ್ಭುತ ಯಶಸ್ಸು ಕಂಡಿತ್ತು. ಅಷ್ಟೇ ಅಲ್ಲ ಈಗ ತನ್ನದೇ ಬ್ರಾಂಡ್ ಮೂಲಕ ದೊಡ್ಡ ಯಶಸ್ಸು ಸಾಧಿಸಿದೆ.

“ ಪೈಲಟ್ ಪ್ರಾಜೆಕ್ಟ್​ನ ಪ್ರಯೋಗಕ್ಕಾಗಿ ನಾವು ಗುಜರಾತ್ ಭಾಷೆಯನ್ನು ಆಯ್ಕೆ ಮಾಡಿಕೊಂಡಿದ್ದೆವು. ಸೌರಾಷ್ಟ್ರದ ಕೆಲವು ಭಾಗಗಳಲ್ಲೂ ಪರೀಕ್ಷೆ ನಡೆಸಿದ್ದೆವು. ಗ್ರಾಹಕರ ಫೀಡ್ ಬ್ಯಾಕ್ ಅನ್ನು ಅರಿತುಕೊಳ್ಳುವ ಸಲುವಾಗಿ ನಾವು ನಮ್ಮ ಕೈಯಿಂದಲೇ ಖರ್ಚು ಮಾಡಿ ನಮ್ಮ ಆಪರೇಟಿಂಗ್ ಸಿಸ್ಟಮ್ ಹೊಂದಿದ್ದ ಸ್ಮಾರ್ಟ್​ಫೋನ್​ಗಳನ್ನು ಗ್ರಾಹಕರಿಕೆ ಹಂಚಿಕೆ ಮಾಡಿದ್ದೆವು”.
- ರಾಕೇಶ್, ಸಾಫ್ಟ್​ವೇರ್ ಎಂಜಿನಿಯರ್

ಪೈಲಟ್ ಪ್ರಾಜೆಕ್ಟ್​ನ ಪ್ರಯೋಗದ ವೇಳೆ ಈ ಮೂವರು ತಾವು ನೀಡಿದ್ದ ಸ್ಮಾರ್ಟ್ ಫೋನ್ ಗ್ರಾಹಕರ ಮೊಬೈಲ್ ನಂಬರ್ ಅನ್ನು ಕೂಡ ಪಡೆದುಕೊಂಡರು. ಈ ಮೂಲಕ ಓ.ಎಸ್. ಬಗ್ಗೆ ಅವರ ಫೀಡ್ ಬ್ಯಾಕ್ ತಿಳಿದುಕೊಳ್ಳುವ ಉದ್ದೇಶ ಈ ಮೂವರದ್ದಾಗಿತ್ತು. ಇಂಡಸ್ ಆಪರೇಟಿಂಗ್ ಸಿಸ್ಟಮ್ ಬಗ್ಗೆ ಎಲ್ಲಾ ಗ್ರಾಹಕರು ಹರ್ಷ ವ್ಯಕ್ತಪಡಿಸಿದ್ರು. ಅಷ್ಟೇ ಅಲ್ಲ ಇಲ್ಲಿನ ಭಾಷೆಗಳು ಸ್ಮಾರ್ಟ್ ಫೋನ್ ಬಳಕಗೆ ಸ್ಪೂರ್ತಿದಾಯಕವಾಗಿದೆ ಅನ್ನುವ ಫೀಡ್ ಬ್ಯಾಕ್ ಬಂತು. ಇದು ರಾಕೇಶ್ ಮತ್ತು ತಂಡಕ್ಕೆ ಹೊಸ ಸ್ಪೂರ್ತಿ ತಂದಿತ್ತು. ಅಷ್ಟೇ ಅಲ್ಲ ಇಂಡಸ್ ಆಪರೇಟಿಂಗ್ ಸಿಸ್ಟಮ್ ಮೂಲಕ ರಾಕೇಶ್ ಮತ್ತು ತಂಡ ಸರಿಯಾದ ದಾರಿಯಲ್ಲಿ ಮುನ್ನುಗ್ಗತ್ತಿದೆ ಅನ್ನುವುದನ್ನು ಅರಿತುಕೊಂಡ್ರು.

ಅದ್ಭುತ ಬೆಳವಣಿಗೆ

ತನ್ನದೇ ಸ್ಮಾರ್ಟ್ ಬೆಳವಣಿಗೆಯ ನಂತರ 2015ರಲ್ಲಿ ಇಂಡಸ್ ಆಪರೇಟಿಂಗ್ ಸಿಸ್ಟಮ್ ಮೈಕ್ರೋಮ್ಯಾಕ್ಸ್ ಜೊತೆ ಸೇರಿಕೊಂಡು ಅದ್ಭುತ ಯಶಸ್ಸುಸಂಪಾದಿಸಿತ್ತು. ಪ್ರಾಯೋಗಿಕವಾಗಿ ಮೈಕ್ರೋಮ್ಯಾಕ್ಸ್ ಇಂಡಸ್ ಆಪರೇಟಿಂಗ್ ಸಿಸ್ಟಮ್ ಹೊಂದಿದ್ದ ಸುಮಾರು 100000 ಸ್ಮಾರ್ಟ್ ಫೋನ್​ಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಯಿತು. ಯೂನಿಟ್ 3ರ ಈ ಮಾಡೆಲ್ ಫೋನ್​ಗಳು ಕೇವಲ ಒಂದೇ ಒಂದು ತಿಂಗಳಲ್ಲಿ 75,000ಕ್ಕಿಂತಲೂ ಅಧಿಕ ಗ್ರಾಹಕರ ಕೈ ಸೇರಿತು. ಇಂದು ಇಂಡಸ್ ಆಪರೇಟಿಂಗ್ ಸಿಸ್ಟಮ್​ ಹೊಂದಿರುವ ಶೇಕಡಾ 80ಕ್ಕೂ ಅಧಿಕ ಫೋನ್​ಗಳು ಮೈಕ್ರೋಮ್ಯಾಕ್ಸ್ ಬಳಿಯಲ್ಲಿದೆ. ಭಾರತದಾದ್ಯಂತ ಸುಮಾರು 7 ಮಿಲಿಯನ್​ ಗ್ರಾಹಕರು ಈಗ ಇಂಡಸ್ ಆಪರೇಟಿಂಗ್ ಸಿಸ್ಟಮ್ ಒಳಗೊಂಡಿರುವ ಸ್ಮಾರ್ಟ್​ಫೋನ್ ಬಳಸುತ್ತಿದ್ದಾರೆ.

ಅಂದಹಾಗೇ, ಪೈಲಟ್ ಪ್ರಾಜೆಕ್ಟ್ ಪರೀಕ್ಷೆ ವೇಳೆಯಲ್ಲಿ ಗುಜರಾತಿ ಭಾಷೆಯನ್ನು ಐ-ಫೋನ್ ಕೂಡ ಸಪೋರ್ಟ್ ಮಾಡಿತ್ತು. ಆರಂಭದಲ್ಲಿ ಒಟ್ಟು 10 ಭಾಷೆಗಳಲ್ಲಿ ಇಂಡಸ್ ಆಪರೇಟಿಂಗ್ ಸಿಸ್ಟಮ್ ಅನ್ನು ತಯಾರಿಸಲಾಗಿತ್ತು. ಸದ್ಯ 12 ಭಾಷೆಗಳಲ್ಲಿ ಇಂಡಸ್ ಒಎಸ್ ಲಭ್ಯವಿದೆ. ಈಗ ಐ-ಫೋನ್​ಗಳಿಗೂ ಇಂಡಸ್ ಆಪರೇಟಿಂಗ್ ಸಿಸ್ಟಮ್ ಅನ್ನು ಅಭಿವೃದ್ಧಿ ಪಡಿಸಲಾಗಿದೆ. ಆ್ಯಂಡ್ರಾಯ್ಡ್​ನಲ್ಲಿ ಶೇಕಡಾ 82ರಷ್ಟು ಬಳಕೆದಾರರು ಇಂಡಸ್ ಆಪರೇಟಿಂಗ್ ಸಿಸ್ಟಮ್ ಬಳಸ್ತಾ ಇದೆ, ಐ-ಫೋನ್​ಗಳಲ್ಲಿ ಇದರ ಪ್ರಮಾಣ ಶೇಕಡಾ 2ರಷ್ಟಿದೆ. ಸದ್ಯಕ್ಕೆ ಇಂಡಸ್ ಮೈಕ್ರೋಮ್ಯಾಕ್ಸ್, ಇಂಟೆಕ್ಸ್, ಕಾರ್ಬನ್, ಸೆಲ್ಕಾನ್, ಸ್ವೈಪ್ ಮತ್ತು ಟ್ರಯೋ ಮೊಬೈಲ್​ಗಳ ಜೊತೆ ಒಪ್ಪಂದ ಮಾಡಿಕೊಂಡಿದೆ. ಸುಮಾರು 50ಕ್ಕೂ ಅಧೀಕ ಸ್ಮಾರ್ಟ್​ಫೋನ್ ಮಾಡೆಲ್​ಗಳಲ್ಲಿ ಇಂಡಸ್ ಆಪರೇಟಿಂಗ್ ಸಿಸ್ಟಮ್ ಬಳಕೆಯಲ್ಲಿದೆ.

“ ಭಾರತೀಯರು ಇಂಟರ್ ನೆಟ್ ಮತ್ತು ಡಿಜಿಟಲ್ ಸರ್ವೀಸ್​ಗಳನ್ನು ಹೆಚ್ಚಾಗಿ ಸ್ಮಾರ್ಟ್​ಫೋನ್​ಗಳಲ್ಲೇ ಬಳಸುತ್ತಿದ್ದಾರೆ. ನಮ್ಮ ಆಪರೇಟಿಂಗ್ ಸಿಸ್ಟಮ್ ಡಿಜಿಟಲ್ ಕಾಮರ್ಸ್, ಕಂಟೆಂಟ್​ಗಳಿಗೆ ಗೇಟ್​ ವೇ ತರಹದಲ್ಲಿ ಕೆಲಸ ನಿರ್ವಹಿಸುತ್ತಿದೆ. ”
- ರಾಕೇಶ್, ಸಾಫ್ಟ್​ವೇರ್ ಎಂಜಿನಿಯರ್

ಆದಾಯದ ಮಾದರಿ ಮತ್ತು ಭವಿಷ್ಯದ ಯೋಜನೆಗಳು

ಇಂಡಸ್ ಆಪರೇಟಿಂಗ್ ಸಿಸ್ಟಮ್ ಲೈಸನ್ಸಿಂಗ್ ಫೀಸ್​ಗಳ ಮೂಲಕ ಆದಾಯ ಪಡೆಯುತ್ತಿದೆ. ಆ್ಯಪ್ ಬಝಾರ್​ಗಳನ್ನು ಕೂಡ ಆದಾಯದ ಮೂಲವನ್ನಾಗಿ ಮಾಡಿಕೊಂಡಿದೆ. ಒರಿಜಿನಲ್ ಇಕ್ಯುಪ್​ಮೆಂಟ್ ಮ್ಯಾನ್ಯುಫ್ಯಾಕ್ಚರರ್ಸ್ (OEVM)ಮೂಲಕ ಲೈಸನ್ಸ್ ಖರೀದಿ ವೇಳೆಯಲ್ಲಿ ಇಂಡಸ್ ಆದಾಯ ಪಡೆದ್ರೆ, ಆ್ಯಪ್ ಬಝಾರ್​ನಲ್ಲಿ ಪೇಯ್ಡ್ ಆ್ಯಪ್ ಮತ್ತು ಆ್ಯಪ್ ಪ್ರೊಮೋಷನ್​ಗಳ ಮೂಲಕ ಹಣ ಸಂಪಾದಿಸುತ್ತಿದೆ. ಸದ್ಯದಲ್ಲಿ ಅಂತರಾಷ್ಟ್ರೀಯ ಬ್ರಾಂಡ್ ಸ್ಮಾರ್ಟ್ ಫೋನ್​ಗಳಿಗೂ ಇಂಡಸ್ ಆಪರೇಟಿಂಗ್ ಸಿಸ್ಟಮ್ ಅಭಿವೃದ್ಧಿ ಪಡಿಸುವ ಯೋಜನೆ ರೂಪಿಸಿಕೊಂಡಿದೆ. ಇದಕ್ಕಾಗಿ ಚೀನಾದಲ್ಲಿ ಕಚೇರಿ ತೆರೆಯುವ ಪ್ಲಾನ್​ಗಳನ್ನೂ ಮಾಡಲಾಗಿದೆ.

ಮಾರುಕಟ್ಟೆ ಅವಲೋಕನ ಮತ್ತು ಸ್ಪರ್ಧೆ

ಗ್ಲೋಬಲ್ ಟೆಕ್ ಸ್ಪರ್ಧಿಗಳಾದ ಆ್ಯಂಡ್ರಾಯ್ಸ್, ಐಒಎಸ್ ಮತ್ತು MIUIನಿಂದ ಇಂಡಸ್ ಆಪರೇಟಿಂಗ್ ಸಿಸ್ಟಮ್​ಗೆ ದೊಡ್ಡ ಸ್ಪರ್ಧೆ ಇದೆ. ಆದ್ರೆ ಭಾರತೀಯ ಭಾಷೆಗಳಲ್ಲಿ ಒಎಸ್ ತಯಾರು ಮಾಡಿದ್ದು ಇಂಡಸ್ ಪಾಲಿಗೆ ಬ್ರೇಕ್ ಪಾಯಿಂಟ್ ಆಗಿದೆ. ಸದ್ಯಕ್ಕೆ ಭಾರತದಲ್ಲಿ 300 ಮಿಲಿಯನ್ ಸ್ಮಾರ್ಟ್​ಫೋನ್ ಬಳಕೆದಾರರಿದ್ದು, 2020ರ ವೇಳೆಗೆ ಇದರ ಸಂಖ್ಯೆ ಸುಮಾರು 730 ಮಿಲಿಯನ್ ದಾಟುವ ಸಾಧ್ಯತೆ ಇದೆ. ಈ ಎಲ್ಲಾ ಸ್ಮಾರ್ಟ್ ಫೋನ್ ಬಳಕೆದಾರರ ಸಮಸ್ಯೆಗಳನ್ನು ಬಗೆಹರಿಸಿ ಅವರ ಮನ ಗೆಲ್ಲುವುದೇ ಇಂಡಸ್​ನ ಮೊದಲ ಉದ್ದೇಶವಾಗಿದೆ. ಒಟ್ಟಿನಲ್ಲಿ ಇಂಡಸ್ ಭಾರತದ ಮಾರುಕಟ್ಟೆ ಪ್ರವೇಶಿಸಿದ ಮೇಲೆ ಆಂಡ್ರಾಯ್ಡ್​, ಐಒಎಸ್, MIUI, ಸೇರಿದಂತೆ ಹಲವು ದೊಡ್ಡ ದೊಡ್ಡ ಸಾಫ್ಟ್​ವೇರ್ ಕಂಪನಿಗಳು ಸ್ವಲ್ಪ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿರುವುದು ಸ್ಪಷ್ಟವಾಗಿದೆ. 

ಇದನ್ನು ಓದಿ:

1. ಬಹುಮುಖ ಪ್ರತಿಭೆ "ಪರಿಸರ ಚಂದ್ರಶೇಖರ್"..!

2. ಸುಖ ನಿದ್ದೆಗೆ ಸೂಪರ್ ಆ್ಯಪ್..!

3. ನಾಟಿ ಫ್ಯಾಕ್ಟರಿಯ Naughty ಸ್ಟೋರಿ..!