ಆವೃತ್ತಿಗಳು
Kannada

ಅಜ್ಜಿ ಕಥೆಗೆ ಸರಕಾರಿ ಆರ್ಡರ್..!

ಟೀಮ್​ ವೈ.ಎಸ್​. ಕನ್ನಡ

YourStory Kannada
26th May 2017
Add to
Shares
6
Comments
Share This
Add to
Shares
6
Comments
Share

ಅಜ್ಜಿ ಕಥೆಗಳ ಬಗ್ಗೆ ನಮಗೆಲ್ಲಾ ಗೊತ್ತು. ಮಕ್ಕಳಾಗಿದ್ದಾಗ ಅಜ್ಜಿ ಕಥೆಗಳನ್ನು ಕೇಳಿಸಿಕೊಂಡೇ ನಿದ್ದೆ ಹೋಗ್ತಾ ಇದ್ದೆವು. ಅಜ್ಜಿ ಹೇಳಿದ ಕಥೆಗಳು ಇವತ್ತಿಗೂ ನೆನಪಿಗೆ ಬರುತ್ತವೆ. ಇನ್ನು ಕೆಲವೊಮ್ಮೆ ಅಜ್ಜಿ ತನ್ನಷ್ಟಕ್ಕೆ ತಾನೇ ಹುಟ್ಟಿಸಿಕೊಂಡು, ಹೇಳಿದ ಕಥೆ ನಗು ತರುತ್ತದೆ. ಆದ್ರೆ ಈಗ ಅಜ್ಜಿ ಕಥೆಗೆ ಎಲ್ಲೂ ಸ್ಥಾನವಿಲ್ಲ. ಮುಂದಿನ ಪೀಳಿಗೆ ಹೊತ್ತಿಗೆ ಅಜ್ಜಿ ಕಥೆ ಅನ್ನುವುದು ಗೊತ್ತೇ ಇಲ್ಲದ ವಿಷಯವಾಗುವ ಭಯ ಎದುರಾಗುತ್ತಿದೆ. ಅಜ್ಜಿ ಹೇಳುತ್ತಿದ್ದ ಕಥೆಗಳು ಭಾರತೀಯ ಸಂಸ್ಕೃತಿಯ ಒಂದು ಭಾಗ ಎಂದೇ ಬಿಂಬಿತವಾಗಿದೆ.

image


ತಾಂತ್ರಿಕವಾಗಿ ಅಭಿವೃದ್ಧಿಯಾಗಿದ್ದು ಮತ್ತು ಸ್ಮಾರ್ಟ್ ಫೋನ್​ಗಳ ದುನಿಯಾದಲ್ಲಿ ಇವತ್ತು ಅಜ್ಜಿ ಕಥೆಗೆ ಸ್ಥಾನವಿಲ್ಲ. ಆದ್ರೆ ಸಂಬಂಧವನ್ನು ದೂರ ಮಾಡಲು ಟೆಕ್ನಾಲಜಿಯಿಂದ ಸಾಧ್ಯವಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡು ರಾಜಸ್ತಾನ ಶಿಕ್ಷಣ ಇಲಾಖೆ ಹೊಸ ನಿಯಮ ಜಾರಿಗೆ ತರುತ್ತಿದೆ. ಅಜ್ಜಿ ಕಥೆಗೆ ವೇದಿಕೆ ಮಾಡಿಕೊಡುತ್ತಿದೆ. ಆದ್ರೆ ಇದು ಮನೆಯಲ್ಲಿ ಅಲ್ಲ ಬದಲಾಗಿ ಶಾಲೆಯ ಹೊತ್ತಿನಲ್ಲಿ. 1ನೇ ತರಗತಿಯಿಂದ 5ನೇ ತರಗತಿಯ ತನಕದ ವಿದ್ಯಾರ್ಥಿಗಳು ವಾರದಲ್ಲಿ ಒಂದು ದಿನ ಅಜ್ಜಿ ಕಥೆಯನ್ನು ಕೇಳಬೇಕಿದೆ.

“ ಅಜ್ಜಿ ಕಥೆಯ ಮೂಲಕ ಕುಟುಂಬದ ಹಿರಿಯರನ್ನು ಗೌರವಿಸುವ ಮತ್ತು ಕುಟುಂಬದ ಜೊತೆ ಮಕ್ಕಳನ್ನು ಹೊಂದಿಕೊಳ್ಳುವಂತೆ ಮಾಡುವ ಉದ್ದೇಶ ಇಟ್ಟುಕೊಳ್ಳಲಾಗಿದೆ. ಕೌಟುಂಬಿಕ ಮಹತ್ವ ಮತ್ತು ಹಿರಿಯರಲ್ಲಿದ್ದ ಬುದ್ದಿವಂತಿಕೆಯ ಬಗ್ಗೆ ಅರಿತುಕೊಳ್ಳುವ ಉದ್ದೇಶವೂ ಇದೆ. ”
- ಅರುಣ್ ಕುಮಾರ್ ಶರ್ಮಾ, ಡೆಪ್ಯೂಟಿ ಡೈರೆಕ್ಟರ್ ಸೆಕೆಂಡರಿ ಎಜುಕೇಷನ್, ರಾಜಸ್ತಾನ

ಮಕ್ಕಳಿಗೆ ಕಥೆ ಹೇಳಲು ಇಚ್ಛಿಸುವ ಅಜ್ಜಿಯರು ಪ್ರತೀ ಶನಿವಾರ ಶಾಲೆಗೆ ಬರಬಹುದು. ಒಂದು ವೇಳೆ ಅಜ್ಜಿಯಂದಿರು ಶಾಲೆಗೆ ಬಾರದೇ ಹೋದರೆ, ಶಾಲೆಯಲ್ಲಿರುವ ವಯಸ್ಸಾದ ಟೀಚರ್​ಗಳು ಆ ಜವಾಬ್ದಾರಿಯನ್ನು ನಿಭಾಯಿಸಲಿದ್ದಾರೆ. ಆರಂಭದಲ್ಲಿ ಈ ಯೋಜನೆಯನ್ನು ಶಾಲೆಯಲ್ಲಿರುವ ಶಿಕ್ಷಕರ ಮೂಲಕ ನಿಭಾಯಿಸುವ ಯೋಚನೆ ಇತ್ತು. ಆದರೆ ವಯಸ್ಸಾದವರ ಮಾತುಗಳಿಗೆ ಹಾಗೂ ಅವರ ವೈಯಕ್ತಿಕ ಯೋಚನೆಗಳಿಗೆ ಗೌರವ ಕೊಡುವ ಉದ್ದೇಶದಿಂದ ಅಜ್ಜಿಯರಿಗೆ ಈ ಅವಕಾಶ ಮಾಡಿಕೊಡಲಾಗಿದೆ. ಕಥೆ ಹೇಳಲು ಬರಲು ಅಜ್ಜಿಯರಿಗೆ ಗೌರವಧನ ಕೂಡ ಸಿಗಲಿದೆ.

ಇದನ್ನು ಓದಿ: ಕೈ ತುಂಬಾ ಸಂಬಳ ಬರುವ ಕೆಲಸ ಬಿಟ್ರು- ಬಡವರ ಆರೋಗ್ಯ ಸೇವೆಗೆ ನಿಂತ ಮೊಬೈಲ್ ಡಾಕ್ಟರ್..!

ಅಂದಹಾಗೇ ಅಜ್ಜಿಯಂದಿರು ಮಕ್ಕಳಿಗೆ ಹೇಳುವ ಕಥೆಗಳ ಬಗ್ಗೆ ಶಾಲೆ ಮತ್ತು ಅಲ್ಲಿನ ಶಿಕ್ಷಕರು ಗಮನ ಇಡಲಿದ್ದಾರೆ. ಯಾವುದೇ ರೀತಿಯ ಪಕ್ಷಪಾತದ ಕಥೆಗಳಿಗೆ ಇಲ್ಲಿ ಅವಕಾಶವಿಲ್ಲ. ಅಭಿವೃದ್ಧಿಯ ಹೆಸರಿನಲ್ಲಿ ತಾಂತ್ರಿಕತೆಯೇ ಜೀವನವನ್ನು ಕಂಟ್ರೋಲ್ ಮಾಡುತ್ತಿರುವುದರಿಂದ ಈ ರೀತಿಯ ಹೆಜ್ಜೆಗಳು ಅವಶ್ಯಕವಾಗಿತ್ತು. ಅಜ್ಜಿಯರು ಹೇಳುವ ಕಥೆಗಳಿಂದ ಮಕ್ಕಳಿಗೆ ಜ್ಞಾನ ಹಾಗೂ ನೈತಿಕತೆಯ ಬಗ್ಗೆ ಅರಿವಾಗಲಿದೆ. ಕೌಟುಂಬಿಕ ಮೌಲ್ಯಗಳನ್ನು ಅರಿಯಲು ಮತ್ತು ತಿಳಿಯಲು ಇದು ಅತ್ಯುತ್ತಮ ವೇದಿಕೆ. ಆದ್ರೆ ಧರ್ಮ ಹಾಗೂ ರಾಜಕೀಯ ಕಥೆಗಳಿಗೆ ಅವಕಾಶ ಕೊಡಬಾರದು. ರಾಜಸ್ತಾನ ಸರಕಾರ ಹಾಗೂ ಶಿಕ್ಷಣ ಇಲಾಖೆ ಇಟ್ಟಿರುವ ಹೆಜ್ಜೆ ಹಲವು ರಾಜ್ಯಗಳಿಗೆ ಮಾದರಿ ಆಗಬಹುದು.

ಇದನ್ನು ಓದಿ:

1. ಮಗು ಯಾರದ್ದೋ...! ಎದೆಹಾಲು ನೀಡುವವರು ಇನ್ಯಾರೋ..! 

2. ಆ್ಯಸಿಡ್ ದಾಳಿಗೆ ಒಳಗಾದ ಸಂತ್ರಸ್ಥೆ- 17 ಶಸ್ತ್ರಚಿಕಿತ್ಸೆಗಳ ಬಳಿಕ ಕಂಕಣ ಭಾಗ್ಯ..!

3. ದೇವರ ಕೋಣೆಯಲ್ಲೇ ಮುಗಿದು ಹೋಯಿತು ಮಗಳ ಮದುವೆ..!

Add to
Shares
6
Comments
Share This
Add to
Shares
6
Comments
Share
Report an issue
Authors

Related Tags