ಆವೃತ್ತಿಗಳು
Kannada

ಕಸದಿಂದ ಪರಿಸರವನ್ನು ರಕ್ಷಿಸುವ ಕೊಲ್ಕತ್ತಾ ಮೂಲದ ಸ್ಟಾರ್ಟ್ಅಪ್ ಸಂಸ್ಥೆ- ಇದು ವೈಟಲ್ ವೇಸ್ಟ್​ನ ಸ್ಪೂರ್ತಿದಾಯಕ ಕಥೆ

ಟೀಮ್​ ವೈ.ಎಸ್​. ಕನ್ನಡ

17th May 2017
Add to
Shares
10
Comments
Share This
Add to
Shares
10
Comments
Share

ಕಸದ ಸಮಸ್ಯೆ ಎಲ್ಲಾ ಕಡೆಯೂ ದೊಡ್ಡದಾಗುತ್ತಿದೆ. ನಗರ ಪ್ರದೇಶಗಳಲ್ಲಂತೂ ಕಸ ವಿಲೇವಾರಿ ಮಾಡುವುದೇ ದೊಡ್ಡ ತಲೆನೋವು. ಆದ್ರೆ ಕೊಲ್ಕತ್ತಾದಲ್ಲಿ ಕಸದ ಸಮಸ್ಯೆಗೆ ಪರಿಹಾರ ಹೇಳಲು ಸಂಸ್ಥೆಯೊಂದು ಹುಟ್ಟಿದೆ. ನಗರ ವಾಸಿಗಳ ಟೆನ್ಷನ್ ದೂರಮಾಡುವ ಯೋಜನೆ ಈ ಸಂಸ್ಥೆಗಿದೆ. ಅಷ್ಟೇ ಅಲ್ಲ ಕಸದಿಂದಲೇ ವಿವಿಧ ಉತ್ಪನ್ನಗಳನ್ನು ಉತ್ಪತ್ತಿ ಮಾಡುವ ಬಗ್ಗೆ ಪ್ಲಾನ್ ಮಾಡಿದೆ.

“ ನನ್ನ ಕಠಿಣ ವೃತ್ತಿ ಸನ್ನಿವೇಶಗಳು ನನ್ನ ಮನೆಯ ಕಸ ವಿಂಗಡಣೆಗೂ ಸಮಯ ನೀಡುತ್ತಿರಲಿಲ್ಲ. ನಾವಿದ್ದ ಅಪಾರ್ಟ್​ಮೆಂಟ್​ನಲ್ಲಿ ಸೆಕ್ಯುರಿಟಿಯ ಕಾರಣಕ್ಕಾಗಿ ಕಸ ಪಡೆಯುವವರನ್ನು ಒಳಗಡೆ ಬಿಡುತ್ತಿರಲಿಲ್ಲ. ನನ್ನ ಮನೆಯ ಮೂಲೆಯಲ್ಲಿ ಹೆಚ್ಚುತ್ತಿದ್ದ ಕಸವನ್ನು ಏನು ಮಾಡಬೇಕು ಅನ್ನುವ ಪ್ರಶ್ನೆಯೇ ನನ್ನನ್ನು ದೊಡ್ಡಾಗಿ ಕಾಣುತ್ತಿತ್ತು. ”

ಹೀಗಂತ ಮಾತು ಆರಂಭಿಸಿದ್ದು, 34 ವರ್ಷದ ತುಷಾರ್ ಹಿಮತ್ಸಿಂಗ್ಕ. ತುಷಾರ್ "ವೈಟಲ್ ವೇಸ್ಟ್" ಅನ್ನುವ ಸಂಸ್ಥೆಯ ಸಂಸ್ಥಾಪಕ. ತುಷಾರ್ ಮತ್ತು ಪ್ರಶಾಂತ್ ಬೋತ್ರಾ ಗೆಳೆಯರು. ಲಂಡನ್ ಸ್ಕೂಲ್ ಆಫ್ ಕಾಮರ್ಸ್​ನಿಂದ ಎಂಬಿಎ ಪದವಿ ಪಡೆದಿದ್ದರು. ಕಾರ್ಪೋರೇಟ್ ಸಂಸ್ಥೆಯಲ್ಲಿ ಲಕ್ಷಾಂತರ ರೂಪಾಯಿ ಸಂಬಳ ಪಡೆಯುತ್ತಿದ್ದರು. ಆದ್ರೆ ಸಿಟಿ ಆಫ್ ಜಾಯ್ ಅಂತಾನೇ ಖ್ಯಾತಿ ಪಡೆದಿರುವ ಕೊಲ್ಕತ್ತಾದ ಜನರಿಗೆ ಕಸದಿಂದ ಮುಕ್ತಿ ನೀಡಬೇಕು ಅಂತ ಯೋಚನೆ ಮಾಡಿದ್ದರು. 2016ರ ಮೇ ತಿಂಗಳಿನಲ್ಲಿ "ವೈಟಲ್ ವೇಸ್ಟ್" ಅನ್ನುವ ಕಂಪನಿಯನ್ನು ಹುಟ್ಟುಹಾಕಿ ಕೊಲ್ಕತ್ತಾದ ಜನರಿಗೆ ಕಸದಿಂದ ಮುಕ್ತಿ ನೀಡಿ, ಅದರಿಂದ ಮರುಬಳಕೆಯ ವಸ್ತುಗಳನ್ನು ತಯಾರು ಮಾಡಬೇಕು ಅನ್ನನುವ ಯೋಚನೆ ಮಾಡಿದ್ರು.

image


ನಾವು ಕಸವನ್ನು ಎಲ್ಲಿಬೇಕೋ ಅಲ್ಲಿ ಬಿಸಾಡುವ ಸಮಾಜದ ಮಧ್ಯೆ ಬದುಕುತ್ತಿದ್ದೇವೆ . ಆದ್ರೆ ಅದರ ಮರುಬಳಕೆಯ ಬಗ್ಗೆ ಒಂಚೂರು ಯೋಚನೆ ಮಾಡುತ್ತಿಲ್ಲ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ 2015ರಲ್ಲಿ ಬಿಡುಗಡೆ ಮಾಡಿರುವ ವರದಿ ಪ್ರಕಾರ ಭಾರತದಲ್ಲಿ ಪ್ರತಿದಿನ ಸುಮಾರು 0.14 ಮಿಲಿಯನ್ ಟನ್ ಕಸದ ಉತ್ಪತ್ತಿಯಾಗುತ್ತಿದೆ. ಆದ್ರೆ ಇದರ ಮರುಬಳಕೆ ಪ್ರಮಾಣ ತೀರ ಕಡಿಮೆ ಇದೆ.

ಉತ್ಪತ್ತಿಯಾದ ಕಸವನ್ನು ನಿರ್ವಹಣೆ ಮಾಡುವ ಕೆಲಸ ಅತ್ಯಂತ ಕಷ್ಟವಾಗಿದೆ. ಅಷ್ಟೇ ಅಲ್ಲ ಕಸವನ್ನು ಎಲ್ಲೆಂದರಲ್ಲಿ ಎಸೆಯುತ್ತಿರುವುದರಿಂದ ಪರಿಸರಕ್ಕೂ ಹಾನಿಯಾಗುತ್ತಿದೆ. ಅಲ್ಯೂಮಿನಿಯಂ ವಸ್ತುಗಳು, ಗ್ಲಾಸ್ ಪೀಸ್​ಗಳು, ಪೇಪರ್, ಕಾರ್ಡ್ ಬೋರ್ಡ್ ನಂತಹ ವಸ್ತುಗಳನ್ನು ಮರುಬಳಕೆ ಮಾಡಬಹುದು. ಆದ್ರೆ ಮರುಬಳಕೆಯ ಬಗ್ಗೆ ಯೋಚನೆ ಮಾಡುವುದಕ್ಕಿಂತ ಹೆಚ್ಚು ಅದನ್ನು ಕಸವನ್ನಾಗಿ ಬಿಸಾಡುವುದೇ ಹೆಚ್ಚಿದೆ. ಒಂದು ವೇಳೆ ಮರುಬಳಕೆಯಾಗುವ ವಸ್ತುಗಳನ್ನು ಹಲವು ಬಾರಿ ಬಳಸಿದರೆ, ಕಸ ಕಡಿಮೆಯಾಗಿ ಪರಿಸರ ಹಾನಿ ಕಡಿಮೆಯಾಗುತ್ತದೆ. ಕಸ ನಿರ್ವಹಣೆಯಲ್ಲಿ ಎಡವಿರುವುದು, ಹಸಿರು ಮನೆ ಪರಿಣಾಮ ಸೇರಿದಂತೆ ಪ್ರಕೃತಿಯ ಹಲವು ಸಹಜ ನಿಯಮಗಳಿಗೆ ಸಾಕಷ್ಟು ತೊಂದರೆಯುಂಟು ಮಾಡುತ್ತಿದೆ.

ಇದನ್ನು ಓದಿ: ವಾಯುಸೇನೆಯಲ್ಲಿ ಮಹಿಳೆಯರ ಪವರ್- ಯುದ್ಧವಿಮಾನಗಳಲ್ಲಿ ಮಹಿಳಾ ಪೈಲಟ್​ಗಳ ದರ್ಬಾರ್

"ವೈಟಲ್ ವೇಸ್ಟ್" ಕೊಲ್ಕತ್ತಾದ ಕಾರ್ಪೋರೇಟ್ ಕಚೇರಿ, ಶಾಲೆ ಹಾಗೂ ವಸತಿ ಪ್ರದೇಶಗಳಿಂದ ಕಸವನ್ನು ಸಂಗ್ರಹಿಸಿ ಅದನ್ನು ಮರುಬಳಕೆ ಮಾಡುವ ಬಗ್ಗೆ ತಿಳಿಸಿಕೊಡುತ್ತಿದೆ. "ವೈಟಲ್ ವೇಸ್ಟ್" ಸ್ಟಾರ್ಟ್ ಅಪ್ ಕಸವನ್ನು ಸಂಗ್ರಹಿಸುವಲ್ಲಿಂದ ಹಿಡಿದು, ಅದರಿಂದ ಮರುಬಳಕೆಯಾಗುವ ವಸ್ತುಗಳ ತನಕ ಆ ಕಸವನ್ನು ವಿಂಗಡಣೆ ಮಾಡುತ್ತದೆ. ಕಸರಹಿತ ಪರಿಸರವನ್ನು ಸೃಷ್ಟಿಸಲು ಈ ಸ್ಟಾರ್ಟ್ ಅಪ್ ಸಂಸ್ಥೆ ಇನ್ನಿಲ್ಲದಂತೆ ಶ್ರಮಿಸುತ್ತಿದೆ.

image


ತುಷಾರ್ ದಶಕಗಳ ಕಾಲ ಬ್ಯಾಂಕಿಂಗ್, ಇನ್ಶೂರೆನ್ಸ್, ರಿಯಲ್ ಎಸ್ಟೇಟ್ ಮತ್ತು ಲಾಜಿಸ್ಟಿಕ್ ಸರ್ವೀಸ್ ವಲಯಗಳಲ್ಲಿ ಕೆಲಸ ಮಾಡಿದ್ದರು. ಪ್ರಶಾಂತ್ 19 ವರ್ಷಗಳ ಕಾಲ ಚಿಲ್ಲರೆ ವ್ಯಾಪಾರ ಮತ್ತು ಉತ್ಪಾದನಾ ವಯಲದಲ್ಲಿ ಅನುಭವ ಪಡೆದಿದ್ದರು. ಕಳೆದ 1 ವರ್ಷದಲ್ಲಿ "ವೈಟಲ್ ವೇಸ್ಟ್" 50ಟನ್ ಕಸವನ್ನು ಸಂಗ್ರಹಿಸಿದೆ. 10 ಶಾಲೆಗಳು, ಮತ್ತು 20,000 ವಿಭಿನ್ನ ವಲಯದಿಂದ ಕಸವನ್ನು ಸಂಗ್ರಹಿಸಿದೆ. ಕೊಲ್ಕತ್ತಾ ಕ್ರಿಕೆಟ್ ಮತ್ತು ಫುಟ್ಬಾಲ್ ಕ್ಲಬ್, ಐರನ್ ಮೌಂಟೇನ್, ಹೆಚ್​ಡಿಎಫ್​ಸಿ ಹೋಮ್​ಲೋನ್ ಸೇರಿದಂತೆ ಹಲವು ಸಂಸ್ಥೆಗಳಿಂದ ಕಸವನ್ನು ಸಂಗ್ರಹಿಸಿದೆ.

image


ಜಾಗೃತಿಯ ಕೊರತೆ

ಕಳೆದ ಒಂದು ವರ್ಷದಿಂದ "ವೈಟಲ್ ವೇಸ್ಟ್" ಕಸವನ್ನು ಸಂಗ್ರಹಿಸುತ್ತಿದೆ. ಆದ್ರೆ ಈವರೆಗೆ ಜನರಿಗೆ ಕಸವನ್ನು ವಿಂಗಡಿಸುವ ಬಗೆಯಾಗಲಿ ಅಥವಾ ಮರುಬಳಕೆಯ ಬಗ್ಗೆ ಜಾಗೃತಿ ಹೆಚ್ಚಿಲ್ಲ. ಅಷ್ಟೇ ಅಲ್ಲ ಕಸವನ್ನು ಮನಸ್ಸು ಬಂದ ಕಡೆ ಎಸೆಯುವುದು ಕಡಿಮೆಯೂ ಆಗಿಲ್ಲ.

“ ಕಸ ವಿಂಗಡಣೆ ಮತ್ತು ಮರುಬಳಕೆ ಬಗ್ಗೆ ಜನರು ಸಾಕಷ್ಟು ಯೋಚನೆ ಮಾಡಬೇಕಿದೆ. ಅಷ್ಟೇ ಅಲ್ಲ ಜನರಿಗೆ ಈ ಬಗ್ಗೆ ತಿಳಿಸುವುದು ನಮ್ಮ ಪಾಲಿನ ದೊಡ್ಡ ಸವಾಲು ”
ತುಷಾರ್, ವೈಟಲ್ ವೇಸ್ಟ್ ಸಂಸ್ಥಾಪಕರು

ಕೊಲ್ಕತ್ತಾದ ವಿವಿಧದೆಡೆಯಿಂದ ಕಸ ಸಂಗ್ರಹಿಸಿರುವ "ವೈಟಲ್ ವೇಸ್ಟ್", ಜನರಿಗೆ ಕಸವಿಂಗಡಣೆ, ಮರುಬಳಕೆ ಮಾಡುವ ಬಗ್ಗೆ ತಿಳಿಸಿಕೊಡುತ್ತಿದೆ. ಅಷ್ಟೇ ಅಲ್ಲ ತನ್ನ ಜೊತೆ ಒಪ್ಪಂದ ಮಾಡಿಕೊಂಡ ಸಂಸ್ಥೆಗಳಿಗೆ ವೇಸ್ಟ್ ಆಡಿಟ್ ರಿಪೋರ್ಟ್ ಕೂಡ ನೀಡಲಿದೆ. ಸಂಸ್ಥೆಯಿಂದ ಸಂಗ್ರಹಿಸಿದ ಒಟ್ಟಾರೆ ಕಸ ಮತ್ತು ಅದರಿಂದ ಉತ್ಪತ್ತಿಯಾದ ಮರುಬಳಕೆ ವಸ್ತುಗಳ ಬಗ್ಗೆ ಆಡಿಟ್ ರಿಪೋರ್ಟ್​ನಲ್ಲಿ ಅಂಕಿಅಂಶ ನೀಡಲಾಗುತ್ತದೆ. ಈ ಮೂಲಕ ಕಸ ವಿಂಗಡಣೆಯಿಂದ ಆಗುವ ಲಾಭದ ಬಗ್ಗೆ ತಿಳುವಳಿಕೆ ನೀಡುವ ಉದ್ದೇಶ ಇಟ್ಟುಕೊಳ್ಳಲಾಗಿದೆ.

"ವೈಟಲ್ ವೇಸ್ಟ್" ಇತ್ತೀಚೆಗೆ ಕಸ ವಿಂಗಡಣೆ ಹಾಗೂ ಮರುಬಳಕೆ ಬಗ್ಗೆ ಸಕಷ್ಟು ಜ್ಞಾನವನ್ನು ನೀಡುತ್ತಿದೆ. ಶಾಲಾ ಕಾಲೇಜುಗಳಿಗೆ ತೆರಳಿ ಈ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದೆ. "ವೈಟಲ್ ವೇಸ್ಟ್" ಶಾಲಾ ಕಾಲೇಜುಗಳಿಂದ ಕಸವನ್ನು ಸಂಗ್ರಹಿಸಿ, ಅದರಿಂದ ಪಡೆದ ಹಣದಿಂದ ಮತ್ತೊಂದು ಶಾಲೆಗೆ ಹಣಕಾಸಿನ ನೆರವು ನೀಡುತ್ತಿದೆ. ಸದ್ಯಕ್ಕೆ "ವೈಟಲ್ ವೇಸ್ಟ್" ಆರಂಭಿಕ ಹೆಜ್ಜೆ ಇಡುತ್ತಿದ್ದು, ಮುಂದಿನ ದಿನಗಳಲ್ಲಿ ತನ್ನ ಸಮಾಜಮುಖಿ ಕಾರ್ಯದ ಮೂಲಕ ಜನರ ಮನಗೆದ್ದು, ಲಾಭದ ಹೆಜ್ಜೆ ಇಡುವ ಯೋಚನೆ ಮಾಡುತ್ತಿದೆ.

ಇದನ್ನು ಓದಿ:

1. ಬಡ ಕುಟುಂಬದ ಕುಡಿಗಳಿಗೆ ಇವರೇ ಆಶಾಕಿರಣ – 74ರ ಹರೆಯದಲ್ಲೂ ಫ್ರೀಯಾಗಿ ನೀಡ್ತಿದ್ದಾರೆ 500 ಮಕ್ಕಳಿಗೆ ಶಿಕ್ಷಣ

2. ಸಿಲಿಕಾನ್​ ಸಿಟಿಯಲ್ಲಿ ಟ್ರಾಂಪೋಲಿನ್​ ಟ್ರೆಂಡ್​- ಬೆಂಗಳೂರಿನಲ್ಲಿದೆ ಅತಿ ದೊಡ್ಡ ಪ್ಲೇ ಸ್ಟೇಷನ್​..! 

3. ಟ್ರಾಫಿಕ್ ಬಗ್ಗೆ ಟೆನ್ಷನ್ ಬಿಟ್ಟುಬಿಡಿ- ಹೊಸ ಸಾರಿಗೆ ವ್ಯವಸ್ಥೆಗೆ ಯೋಜನೆ ರೂಪಿಸಿದೆ ಬಿಬಿಎಂಪಿ

 

 

Add to
Shares
10
Comments
Share This
Add to
Shares
10
Comments
Share
Report an issue
Authors

Related Tags