ಆವೃತ್ತಿಗಳು
Kannada

ಇದು ಮಕ್ಕಳಿಂದ ಮಕ್ಳೇ ಮಾಡಿದ ಚಿತ್ತಾರದ ಶಾಲೆ

ಆರಾಭಿ ಭಟ್ಟಾಚಾರ್ಯ

YourStory Kannada
9th Apr 2016
Add to
Shares
3
Comments
Share This
Add to
Shares
3
Comments
Share
image


ದೇಶದ ಬಡರಾಜ್ಯ ಅಂತಾನೇ ಕರೆಸಿಕೊಳ್ಳೋ ಬಿಹಾರದಲ್ಲಿ ದೇಶವನ್ನೇ ನಾಚಿಸುವಂತಿರೋ ಶಾಲೆಯೊಂದಿದೆ. ಇಲ್ಲಿ ಎಲ್ಲವೂ ಕಲರ್ ಫುಲ್. ಕಲೆಯ ಮಡಿಲಿನಲ್ಲಿ ಮಕ್ಕಳು ಪಾಠ ಕಲೆಯುತ್ತಾರೆ. ಬಿಹಾರದ ಬಳಿ ಇರೋ ಸುಜಾತ ಅನ್ನೋ ಪುಟ್ಟ ಹಳ್ಳಿಯಲ್ಲಿದೆ ದೇಶವನ್ನೇ ಬೆರಗುಗೊಳಿಸೋ ಶಾಲೆ. ನಿರಂಜನ ಪಬ್ಲಿಕ್ ವೆಲ್​ಫೇರ್ ಶಾಲೆಯಲ್ಲಿ ಓದೋ ಮಕ್ಕಳಿಗೆ ಕಲಾದೇವಿಯ ಮಡಿಲಲ್ಲಿ ಅಕ್ಷರ ಕಲಿಯೋ ಅವಕಾಶ ಸಿಕ್ಕಿದೆ. ಕಲೆಗೆ ಹಾಗೂ ಕುಂಚಕಾರರಿಗೆ ಪ್ರಸಿದ್ದಿಯಾಗಿರೋ ಜಪಾನಿಯರು ಹಾಗೂ ಭಾರತಿಯರ ಕೈಯಲ್ಲಿ ಶಾಲೆಯ ಗೋಡೆಗಳು ಸುಂದರವಾದ ಬಣ್ಣಗಳಿಂದ ಅರಳಿನಿಂತಿದೆ.

image


ಶಾಲೆಯ ಗೋಡೆಗಳಲ್ಲಿ ಅರಳಿದೆ ಬಣ್ಣದಲೋಕ

ಬಡರಾಜ್ಯದಲ್ಲಿ ಮಕ್ಕಳನ್ನ ಶಾಲೆಗಳತ್ತ ಸೆಳೆಯೋದಕ್ಕೆ ಹರಸಾಹಸ ಮಾಡಬೇಕಾಗುತ್ತೆ. ಮಕ್ಕಳು ಕೆಲಸಕ್ಕೆ ಹೋದರೆ ಒಂದಿಷ್ಟು ಹಣ್ಣ ಬರುತ್ತೆ ಅನ್ನೋ ಯೋಚನೆಯಲ್ಲಿರೋ ಪೋಷಕರ ಮನ ಒಲಿಸೋದರ ಜೊತೆಯಲ್ಲಿ ಮಕ್ಕಳಿಗೆ ಶಾಲೆಯಲ್ಲಿ ಏನೋ ವಿಶೇಷತೆ ಇದೆ ಅನ್ನಿಸೋದನ್ನ ಮಾಡಬೇಕು. ಇದಕ್ಕಾಗಿ ಬಿಹಾರದ ನಿರಂಜನ ಪಬ್ಲಿಕ್ ವೆಲ್​ಫೇರ್ ಶಾಲೆ ಶಿಕ್ಷಕರು ಹಾಗೂ ಎನ್​ಜಿಓಗಳು ಈ ಕಲಾದೇವಿಯನ್ನ ಆಸರೆಯಾಗಿ ಮಾಡಿಕೊಂಡಿದ್ದಾರೆ. ಪ್ರತಿಗೋಡೆಗಳು ಬಣ್ಣಗಳಿಂದ ತುಂಬಿದ್ದು ಮಕ್ಕಳಿಗಂತೂ ಶಾಲೆಯ ಕೊಠಡಿಗೆ ಬಂದ್ರೆ ಅವ್ರನ್ನ ಈ ಬಣ್ಣದ ಲೋಕ ಬೇರಯದ್ದೇ ಪ್ರಪಂಚಕ್ಕೆ ಕರೆದೊಯ್ಯುತ್ತದೆ.

ಇದನ್ನು ಓದಿ: ನನಗೆ ಗೊತ್ತಿಲ್ಲ ಎನ್ನಲು ಏಕೆ ಮುಜುಗರ..?

image


ಮಕ್ಕಳಿಗಾಗಿ ಮಕ್ಕಳಿಂದಲೇ ಅರಳಿದ ಕಲಾಲಯ

2010ರಲ್ಲಿ ಆರಂಭವಾದ ಈ ಶಾಲೆ 400 ಮಕ್ಕಳಿಂದ ಪ್ರಾರಂಭವಾಯ್ತು. ಅಲ್ಲಿಯ ಶಿಕ್ಷಕರು ,ಕೆಲವು ಎನ್ ಜಿ ಓ ಹಾಗೂ ಸ್ವಯಂ ಸೇವಕರಿದ ಈ ಶಾಲೆ ಇಂದು ಮೂರು ವರ್ಷ ಯಶಸ್ವಿಯಾಗಿ ಪೂರೈಸಿದೆ. ಮಕ್ಕಳಿಗೆ ಕೇವಲ ಪಾಠ ಮಾತ್ರ ಸಾಲದು ಪುಸ್ತಕದ ಪಾಠವನ್ನು ಹೊರತು ಪಡಿಸಿ ಅವ್ರನ್ನ ಬೆಳೆಸಬೇಕು ಅನ್ನೋ ಉದ್ದೇಶದಿಂದ ಪ್ರತಿ ವರ್ಷವೂ ಆರ್ಟ್ ಫೆಸ್ಟಿವಲ್ ಅನ್ನ ಆಯೋಜಿಸಲಾಗುತ್ತಿದೆ. ಈ ಕಲಾ ಹಬ್ಬದಲ್ಲಿ ಇಂಡಿಯಾ ಹಾಗೂ ಜಪಾನಿನಿ ಪ್ರಸಿದ್ದ ಹಾಗೂ ಆಸಕ್ತ ಕಲಾವಿದರು ಶಾಲೆಯ ಗೋಡೆಗಳ ಮೇಲೆ ಚಿತ್ತಾರಗಳನ್ನ ಮೂಡಿಸಿಸುತ್ತಾರೆ. ಶಾಲೆಯ ಅಕ್ಕ ಪಕ್ಕದಲ್ಲಿರೋ ವಸ್ತುಗಳನ್ನ ಬಳಸಿಕೊಂಡು ಇಡೀ ಶಾಲೆಯ ಒಳಾಂಗಣವನ್ನ ಕಲರ್ ಫುಲ್ ಆಗಿ ಮಾಡುತ್ತಾರೆ. ಇನ್ನೂ ವಿಶೇಷ ಅಂದ್ರೆ ಮಕ್ಕಳನ್ನೂ ಕೂಡ ಇದರಲ್ಲಿ ಬಳಸಿಕೊಳ್ಳಲಾಗುತ್ತದೆ. ಮಕ್ಕಳು ತಾವೇ ಮಾಡಿದ ಚಿತ್ತಾರವನ್ನ ಎಂದಿಗೂ ಹಾಳು ಮಾಡಲ್ಲ. ಇಂತಹ ಕೆಲಸಗಳು ಮಕ್ಕಳಿಗೆ ಇಷ್ಟವಾಗಿ ಹೆಚ್ಚಾಗಿ ಶಾಲೆ ಕಡೆಗೆ ಒಲವು ತೋರುತ್ತಾರೆ ಅನ್ನೋದು ಅಲ್ಲಿಯ ಶಿಕ್ಷಕರ ಉದ್ದೇಶ.

image


ಚಿತ್ತಾರಗಳ ಮೂಲಕ ಪರಂಪರೆ ಸಾರ್ತಿರೋ ಶಾಲೆ

ನಿರಂಜನ ಪಬ್ಲಿಕ್ ವೆಲ್​ಫೇರ್ ಶಾಲೆಯಲ್ಲಿ ಇಡೀ ಶಾಲಾ ಒಳಾಂಗಣ ಗೋಡೆಗಳ ಮೇಲೆಬಣ್ಣ ಬಣ್ಣ ಚಿತ್ತಾರ ಮೂಡಿಸೋದಕ್ಕೆ ಮತ್ತೊಂದು ಮುಖ್ಯ ಕಾರಣ ಬಿಹಾರದ ಪರಂಪರೆ ಸಾರೋ ಉದ್ದೇಶ. ಕಾಲ ಬದಲಾದಂತೆ ಜೀವನ ಶೈಲಿಗಳು ಕೂಡ ಬದಲಾಗುತ್ತದೆ. ಇದರಿಂದ ಈಗಿನ ಯುವಜನರು ಹಿಂದಿನ ಪರಂಪರೆ ಹಾಗೂ ಸಂಸ್ಕೃತಿಯನ್ನ ಮರೆತು ಬಿಡ್ತಿದ್ದಾರೆ. ಆದ್ರಿಂದ ಈಗಿನ ಮಕ್ಕಳಿಗೆ ಬಿಹಾರದ ಪರಂಪರೆಯನ್ನ ತಿಳಿಸೋ ಹಿನ್ನಲೆಯಲ್ಲಿ ಅನೇಕ ಗೋಡೆಗಳ ಮೇಲೆ ಬಿಹಾರ ಸಂಸ್ಕೃತಿಯ ಚಿತ್ತಾರವನ್ನ ಮೂಡಿಸಲಾಗಿದೆ. ಇದರಿಂದ ಈ ಶಾಲೆಯಲ್ಲಿ ಅಭ್ಯಾಸ ಮಾಡೋ ವಿದ್ಯಾರ್ಥಿಗಳು ಕೇವಲ ಪುಸ್ತಕದಲ್ಲಿರೋ ವಿದ್ಯೆ ಮಾತ್ರವಲ್ಲದೆ ತಮ್ಮ ಸಂಸ್ಕೃತಿಯನ್ನು ಕೂಡ ಕಲಿಯೋದಕ್ಕೆ ಸಾಧ್ಯವಾಗ್ತಿದೆ. ಶಾಲೆಗಳಿರೋದು ಕೇವಲ ವಿದ್ಯಾಭ್ಯಾಕ್ಕೆ ಮಾತ್ರವಲ್ಲ ಪರಿಶ್ರಮ ಹಾಗೂ ಆಸಕ್ತಿ ಇದ್ರೆ ಮಕ್ಕಳಿಗೆ ಎಲ್ಲಾ ರೀತಿ ವಿದ್ಯೆಯನ್ನ ಕಲಿಸಬಹುದು ಅನ್ನೋದಕ್ಕೆ ಈ ಶಾಲೆಯೆ ಉದಾಹರಣೆ. 

ಇದನ್ನು ಓದಿ:

1. ಸುಗಮ ಸಂಚಾರಕ್ಕೆ ಮಹಿಳಾ ಟ್ರಾಫಿಕ್ ಫೋರಮ್

2. ಇದು ಬರಿ ಜಾಹೀರಾತು ಅಲ್ಲ ಗುರು...ಬೇರೆ ಏನೋ ಇದೆ..!

3. ಪೋಲಿಯೋ ಬಾಧಿತ ಈಗ ಟ್ರಾಫಿಕ್ ವಾರ್ಡನ್..!

Add to
Shares
3
Comments
Share This
Add to
Shares
3
Comments
Share
Report an issue
Authors

Related Tags