ಆವೃತ್ತಿಗಳು
Kannada

ಐಐಟಿಯಲ್ಲಿ ಕಲಿತ ಯಶಸ್ವಿ ಉದ್ಯಮಿಗಳಿಂದ ಯಶಸ್ಸು, ವೈಫಲ್ಯಗಳ ವ್ಯಾವಹಾರಿಕ ಪಾಠ

ಟೀಮ್​​ ವೈ.ಎಸ್​​. ಕನ್ನಡ

YourStory Kannada
28th Nov 2015
Add to
Shares
2
Comments
Share This
Add to
Shares
2
Comments
Share

ಭೂತ ಹಾಗೂ ವರ್ತಮಾನ:

1847ರ ಸಂದರ್ಭದಲ್ಲಿ ಉತ್ತರಭಾರತದ ಗಂಗಾ ನದಿಯ ತಟದಲ್ಲಿ ರಾಯಲ್ ಬ್ರಿಟೀಶ್ ಸೇನೆಯ ಯುವ ಕಮಾಂಡರ್ ಇನ್ ಚೀಫ್ ಯೋಜನೆಯೊಂದನ್ನು ರೂಪಿಸತೊಡಗಿದ್ದರು. ಸಿವಿಲ್ ಎಂಜಿನಿಯರಿಂಗ್ ಜೊತೆ ಬೌದ್ಧಿಕ ಪ್ರವೀಣತೆಗೆ ಸಂಬಂಧಪಟ್ಟ ಸಂಸ್ಥೆಯೊಂದನ್ನು ಸ್ಥಾಪಿಸುವ ಯೋಜನೆ ರೂಪಿಸಲಾಯಿತು. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ರೂರ್ಕಿಯಲ್ಲಿ ಸ್ಥಾಪಿಸುವ ನೀಲನಕ್ಷೆ ಸಿದ್ಧವಾಗಿತ್ತು.

image


160 ವರ್ಷಗಳ ನಂತರ ಹಿಂದೆ ಥಾಮ್ಸನ್ ಕಾಲೇಜ್ ಆಫ್ ಸಿವಿಲ್ ಎಂಜಿನಿಯರ್ ಎಂದು ಕರೆಸಿಕೊಳ್ಳುತ್ತಿದ್ದ ಐಐಟಿ ರೂರ್ಕಿ ಭಾರತದ ಸುಪ್ರಸಿದ್ಧ ತಾಂತ್ರಿಕ ಕಲಿಕಾ ಕೇಂದ್ರವೆನಿಸಿದೆ. ತಾಂತ್ರಿಕತೆ, ವೈಜ್ಞಾನಿಕತೆ ಹಾಗೂ ನಿರ್ವಹಣಾ ಶಾಸ್ತ್ರದ ಕೌಶಲ್ಯಗಳನ್ನು ಕಲಿಸಲೆಂದೇ ವಿಶೇಷವಾಗಿ ಐಐಟಿ ರೂರ್ಕಿಯನ್ನು ಆರಂಭಿಸಲಾಗಿದೆ. ಉದ್ಯಮಶೀಲತೆ ಹಾಗೂ ಜಾಗತಿಕ ವ್ಯಾವಹಾರಿಕ ನಾಯಕರನ್ನು ಹುಟ್ಟುಹಾಕುವುದೇ ಇದರ ಅತಿಮುಖ್ಯ ಧ್ಯೇಯ. ಭೌಗೋಳಿಕವಾಗಿ ಅತ್ಯಂತ ಚಿಕ್ಕ ಪಟ್ಟಣವಾದರೂ ಈ ವಿಶೇಷತೆಗಳಿಂದ ಇದು ದೇಶದಲ್ಲೇ ಪ್ರಖ್ಯಾತಿ ಪಡೆಯುತ್ತಿದೆ.

ಸಾಧಕರ ದೊಡ್ಡ ಪಟ್ಟಿಯನ್ನೇ ನೀಡಿದ ಸಂಸ್ಥೆ:

ಕಾಮನ್​ಫ್ಲೋರ್.ಕಾಮ್(Commonfloor.com), ಐಐಟಿ ರೂರ್ಕಿಯಲ್ಲಿ ಕಲಿತ ಲಲಿತ್ ಮಂಗಲ್ ಹಾಗೂ ಸುಮಿತ್ ಜೈನ್​​ರ ಕನಸಿನ ಕೂಸು. ಮಲ್ಟಿ ಬಿಲಿಯನ್ ಡಾಲರ್ ವಹಿವಾಟಿನ ಇನ್​ಮೊಬಿ ಆ್ಯಡ್ ಸರ್ವೀಸ್​ ಸಂಸ್ಥೆಯ ಸಿಟಿಓ ಹಾಗೂ ಸಹ ಸಂಸ್ಥಾಪಕರಾದ ಮೋಹಿತ್ ಸಕ್ಸೇನಾ, 1997ರ ಬ್ಯಾಚ್​​ನ ವಿದ್ಯಾರ್ಥಿ. ಕಾಮನ್​ಫ್ಲೋರ್, ಇನ್​ಮೊಬಿ, ಆಕ್ಸಿಜನ್, ಜೈಪೀ ಗ್ರೂಪ್​​ಗಳ ಜೊತೆ, ಪ್ರಗತಿ ಕಾಣುತ್ತಿರುವ ಆರಂಭಿಕ ಸಂಸ್ಥೆಗಳಾದ ರೋಝರ್ಪೇ, ಫುಡ್​ಫಂಡಾ, ಇನ್ಸ್​​ಟಾಲೈವ್ಲೀ, ರೇಯ್ಸ್ಎಕ್ಸ್​​​ಫರ್ಟ್, ಈಝೀಸೋಲಾರೇ ಮುಂತಾದವು ಭಾರತೀಯ ಯುವ ಉದ್ಯಮಿಗಳ ಸಾಧನೆಯ ಹೆಗ್ಗುರುತು.

ಇತ್ತೀಚೆಗೆ ಭಾರತದಲ್ಲಿ ಕಂಡು ಬರುತ್ತಿರುವ ಔದ್ಯಮಿಕ ಅಲೆಗಳಲ್ಲಿ ಐಐಟಿ ತಾಂತ್ರಿಕ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿದೆ. ಬಾಂಬೆ, ದೆಹಲಿ ಹಾಗೂ ಖರಗ್ಪುರದಂತಹ ಐಐಟಿ ಸಂಸ್ಥೆಗಳು ಉದ್ಯಮ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ನಿರ್ವಹಿಸುತ್ತಿವೆ. ಇನ್ನೊಂದೆಡೆ ರೂರ್ಕಿಯಂತಹ ಪ್ರಾಚೀನ ತಾಂತ್ರಿಕ ಕಲಿಕಾ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಔದ್ಯಮಿಕ ಕಲಿಕೆಯ ಸಂಪೂರ್ಣ ಸ್ವಾತಂತ್ರ್ಯ ಕಲ್ಪಿಸಿ, ತನ್ನ ಕ್ಯಾಂಪಸ್​ನಲ್ಲಿಯೇ ಯುವ ಉದ್ಯಮಿಗಳನ್ನು ಹುಟ್ಟುಹಾಕುತ್ತಿದೆ.

2015ರ ಥೋಮ್ಸೋ ವಾರ್ಷಿಕ ಸಾಂಸ್ಕೃತಿಕ ಉತ್ಸವದಲ್ಲಿ ಐಐಟಿ ರೂರ್ಕಿಯ ಔದ್ಯಮಿಕ ಅಭಿವೃದ್ಧಿ ವಿಭಾಗ ವೆಂಚರ್ ಅನ್​ಪ್ಲಗ್ಡ್ ಅನ್ನುವ ಕಾರ್ಯಕ್ರಮವನ್ನು ಆಯೋಜಿಸಿತ್ತು. ಇದರಲ್ಲಿ ಔದ್ಯಮಿಕ ಪ್ರಗತಿ ಹಾಗೂ ಹೊಸ ಉದ್ಯಮಿಗಳ ಬೆಳವಣಿಗೆ ಅನ್ನುವ ಸಂಗತಿಗಳತ್ತ ಮುಖ್ಯವಾಗಿ ಬೆಳಕು ಚೆಲ್ಲಲಾಗಿದೆ.

ಔದ್ಯಮಿಕ ಪ್ರವೀಣರ ಪ್ಯಾನಲ್

ಐಐಟಿ ರೂರ್ಕಿಯಲ್ಲಿ ಕಲಿತ ಉದ್ಯಮಿಗಳ ಪ್ಯಾನಲ್ ಡಿಸ್ಕಷನ್ ಯುವ ಸಾಧಕರಿಗೆ ಮಾರ್ಗದರ್ಶನ ನೀಡುವಂತದಾಗಿತ್ತು. ಯುಎಸ್ಆಕ್ಸಿಜನ್ ಸಂಸ್ಥೆಯ ಸಿಇಓ ಪ್ರಮೋದ್ ಸಕ್ಸೇನಾ, ಇನ್ಮೊಬಿ ಸಂಸ್ಥೆಯ ಸಿಟಿಓ ಹಾಗೂ ಸಹ ಸಂಸ್ಥಾಪಕಮೋಹಿತ್ ಸಕ್ಸೇನಾ, ಟೆಕ್ನೋಪಾರ್ಕ್ ಅಡ್ವೈಸರ್ ಸಂಸ್ಥೆಯ ಚೇರ್ಮನ್ ಅರವಿಂದ್ ಸಿಂಗಾಲ್, ಫುಡ್ಪಾಂಡಾದ ಸಿಇಓ ಹಾಗೂ ಸಹ ಸಂಸ್ಥಾಪಕ ಸೌರಭ್ ಕೊಚ್ಚಾರ್ ಐಐಟಿ ರೂರ್ಕಿಯ ವಿದ್ಯಾರ್ಥಿಗಳೇ ಆಗಿದ್ದವರು ಈ ಪ್ಯಾನಲ್ನಲ್ಲಿದ್ದರು. ಇವರೆಲ್ಲರ ಅನುಭವ, ಪರಿಣಿತಿ, ಸಾಮರ್ಥ್ಯ ಹಾಗೂ ಕೌಶಲ್ಯಗಳು ಚರ್ಚೆಯಲ್ಲಿ ಬಹಿರಂಗವಾದವು. ಇವು ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವಂತಹ ಪ್ಯಾನಲ್ ಚರ್ಚೆಯಾಗಿತ್ತು.

image


2 ಸಾವಿರ ಡಾಲರ್​​ನಿಂದ ಮಿಲಿಯನ್​​ವರೆಗೆ

ಸಮುದಾಯದ ಅಗತ್ಯತೆಗಳನ್ನು ಅರಿತುಕೊಂಡು ಸೂಕ್ತ ಹೂಡಿಕೆ ಮಾಡುವುದು ನಿಜವಾದ ಸಕ್ಸಸ್ ಅನ್ನುವುದು ಬಹುತೇಕ ಉದ್ಯಮಿಗಳ ನಂಬಿಕೆ. ಮೋಹಿತ್ ತಮ್ಮ ಇನ್ಮೊಬಿ ಸಂಸ್ಥೆಯ ಆರಂಭಿಕ ದಿನಗಳನ್ನು ನೆನಪು ಮಾಡಿಕೊಳ್ಳುತ್ತಾ ಸಂಸ್ಥೆ ನಡೆದು ಬಂದ ಹಾದಿಯನ್ನು ವಿವರಿಸಿದ್ದರು. ಅವರು ತಮ್ಮ ಉಳಿತಾಯದ ಹಣವಾದ 2 ಸಾವಿರ ಡಾಲರ್ಗಳಿಂದ ಕಟ್ಟಿ ಬೆಳೆಸಿದ ಸಂಸ್ಥೆ ಇಂದು ಮಲ್ಟಿ ಮಿಲಿಯನ್ ಮೌಲ್ಯ ಹೊಂದಿದೆ.

ಇರುವ ಉದ್ಯಮಗಳನ್ನೇ ಮತ್ತೆ ಪ್ರಾರಂಭಿಸುವುದು ಲಾಭದಾಯಕವಲ್ಲ. ಇದೇ ಪ್ರಯತ್ನದಲ್ಲಿ ಮೋಹಿತ್ ಹಾಗೂ ಅವರ ಕೋ ಪಾರ್ಟನರ್ ಒಮ್ಮೆ ಹಿನ್ನಡೆ ಕಂಡಿದ್ದರು. ಆ ಬಳಿಕ ಮಾರುಕಟ್ಟೆಯನ್ನು ಅವಲೋಕಿಸಿದ ಅವರು ಆಗಿನ ಸಂದರ್ಭದಲ್ಲಿ ಅವಶ್ಯಕಥೆ ಇದ್ದ ಮೊಬೈಲ್ ಜಾಹಿರಾತುಗಳ ಬಗ್ಗೆ ಗಮನ ಹರಿಸಿದರು. ಏಷಿಯನ್ ರಾಷ್ಟ್ರಗಳಲ್ಲಿ ಉದ್ಯಮ, ವ್ಯವಹಾರ ಹಾಗೂ ತಂತ್ರಜ್ಞಾನ ಮುಂದುವರೆಯುತ್ತಿದ್ದ ಕಾರಣ ಮೊಬೈಲ್ ಅಡ್ವಟೈಸ್​​ಮೆಂಟ್​​ಗೆ ವಿಸ್ತಾರವಾದ ವ್ಯಾಪ್ತಿ ಕಂಡುಬಂದಿತ್ತು. ಹೀಗಾಗಿ ಹುಟ್ಟಿಕೊಂಡಿದ್ದು ಇನ್ಮೊಬಿ ಸಂಸ್ಥೆ.

ಫುಡ್​ಫಂಡಾದ ಸೌರಭ್ ಸಹ ತಮ್ಮ ಸಂಸ್ಥೆಯನ್ನು ಲಾಂಚ್ಮಾಡುವ ಮುನ್ನ ಮಾರುಕಟ್ಟೆಯ ಅಗತ್ಯತೆಗಳ ಬಗ್ಗೆ ಸ್ಪಷ್ಟತೆ ಕಂಡುಕೊಂಡಿದ್ದರು. ಅವರಿಗೂ ಸಹ ಗ್ರಾಹಕರ ಅಗತ್ಯತೆಗಳ ಬಗ್ಗೆ ಸೂಕ್ತ ಜ್ಞಾನವಿರದ ಕಾರಣ ಮೊದಲ ಪ್ರಯತ್ನದಲ್ಲಿ ಹಿನ್ನಡೆಯಾಗಿತ್ತು. ಪ್ರಿಂಟ್ವೆನ್ಯೂ.ಕಾಮ್ನ ಸಹ ಸಂಸ್ಥಾಪಕರು ಸಹ ಇದೇ ತೊಂದರೆ ಅನುಭವಿಸಿದ್ದರು. ಆದರೆ ತಮ್ಮ ಪ್ರಯತ್ನದಿಂದ ಹಿಂದೆ ಸರಿಯದೇ ಸೂಕ್ತವಾದ ಮಾಧ್ಯಮಗಳ ಮೂಲಕ ಮಾರುಕಟ್ಟೆಯನ್ನು ಅರಿತು, ಗ್ರಾಹಕರ ಸಮಸ್ಯೆಗಳನ್ನು ಪರಿಹರಿಸಲು ಮುಂದಾದರು. ಈ ರಿಯಾಲಿಟಿ ಚೆಕ್ ಯತ್ನ ಅವರಿಗೆ ಮಾರುಕಟ್ಟೆಯ ಸಮೀಕ್ಷೆಯನ್ನೊದಗಿಸಿತು.

ಉದ್ಯಮದ ಗೋಡೆಗೆ ಬೇಕಿರುವ ಇನ್ನೊಂದು ಮುಖ್ಯ ಇಟ್ಟಿಗೆ

ಯಾವುದೇ ಸಂಸ್ಥೆಯನ್ನು ಪ್ರಾರಂಭಿಸುವ ಮುನ್ನ ಮೂಲ ಬಂಡವಾಳದ ಜೊತೆ ಮಾರುಕಟ್ಟೆಯ ಮೂಲಭೂತ ಅಗತ್ಯತೆಗಳ ಸಮೀಕ್ಷೆ ನಡೆಸುವುದು ಸಹ ಅತ್ಯಗತ್ಯ. ಇದೇ ನಿಜವಾದ ಉದ್ಯಮದ ಮಂತ್ರ. ಕ್ಷಿಪ್ರವಾಗಿ ಯೋಚಿಸಿ ತುರ್ತಾಗಿ ಜಾರಿಗೊಳಿಸುವವನು ನಿಜವಾದ ಯಶಸ್ವಿ ಉದ್ಯಮಿಯಾಗುತ್ತಾನೆ.

ಇಂದು ಉದ್ಯಮವೆಂದರೇ ಸಮಯದೊಂದಿಗಿನ ಸ್ಪರ್ಧೆ ಇದ್ದಂತೆ. ಇಂದಿನ ತಾಂತ್ರಿಕ ಜಗತ್ತಿನಲ್ಲಿ ಹೊಸ ಸವಾಲುಗಳನ್ನು ಎದುರಿಸಿ ಬದಲಾಗುತ್ತಿರುವ ಟ್ರೆಂಡ್ಗೆ ತಕ್ಕಂತೆ ಮಾರ್ಪಾಡಬೇಕಾದ ಅಗತ್ಯವಿದೆ ಅನ್ನುವುದು ಆಕ್ಸಿಜನ್ ವ್ಯಾಲೆಟ್ನ ಪ್ರಮೋದ್ರ ಅಭಿಪ್ರಾಯ. ತಂತ್ರಜ್ಞಾನಾಧಾರಿತ ಉದ್ಯಮ ಮಹತ್ವದ ತಿರುವು ಪಡೆದುಕೊಳ್ಳುತ್ತಿದೆ. ಪ್ರತಿಯೊಂದು ಉದ್ಯಮದ ಉದ್ದೇಶ ಹೂಡಿಕೆಯಷ್ಟೇ ಆಗಿರುವುದಿಲ್ಲ.

ಯಶಸ್ಸು, ವೈಫಲ್ಯ ಹಾಗೂ ಇವರೆಡರ ನಡುವಿನ ಸಮತೋಲನ:

ಸರಿಯಾದ ಗ್ರಾಹಕರನ್ನು ಗುರುತಿಸಿ ಅವರ ಅಗತ್ಯತೆಗಳನ್ನು ಪೂರೈಸುವ ಜೊತೆಗೆ ಸೇವೆಯ ಗುಣಮಟ್ಟ ಹಾಗೂ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳುವುದೂ ಅತಿಮುಖ್ಯ. ಉದ್ಯಮಿಗಳು ವೇಗವಾಗಿ ಯೋಚಿಸುವ ಜೊತೆಗೆ ಸ್ಮಾರ್ಟ್ ಆಗಿ ಯೋಚಿಸಬೇಕಾದ ಅಗತ್ಯವಿದೆ. ಔದ್ಯಮಶೀಲತೆಯ ಯಶಸ್ಸು ಅದರಲ್ಲಿರುವ ವೃತ್ತಿಪರತೆ, ಪರಿಪೂರ್ಣತೆ ಹಾಗೂ ಬದ್ಧತೆಯಲ್ಲಿ ನಿಂತಿರುತ್ತದೆ. ಇದನ್ನು ಸ್ವತಃ ಅನುಭವಕ್ಕೆ ನಿಲುಕಿಸಿಕೊಂಡವರು ಅರವಿಂದ್.

ವ್ಯಾವಹಾರಿಕ ಶಿಸ್ತು ಅತಿ ಮುಖ್ಯ ಆಯಾಮ. ಬಹುತೇಕ ಉದ್ಯಮಗಳು ಕೊನೆಯಾಗಿದ್ದಕ್ಕೆ ಅತಿಮುಖ್ಯ ಕಾರಣ ಅವುಗಳು ಲಾಭಗಳಿಸಲಿಲ್ಲ ಅನ್ನುವುದಲ್ಲ. ಅವುಗಳಲ್ಲಿ ಮುಖ್ಯವಾಗಿ ಬೇಕಿದ್ದ ಶಿಸ್ತಿನ ಕೊರತೆ ಇತ್ತು. ಅವುಗಳಲ್ಲಿ ಕೆಲವು ಉದ್ಯಮಗಳು ಮಾರುಕಟ್ಟೆಯ ಅಗತ್ಯತೆರಗಳಿಗೆ ತಕ್ಕಂತೆ ಕಾರ್ಯಾಚರಣೆ ನಡೆಸುತ್ತಿದ್ದವು. ಅತ್ಯುತ್ತಮವಾದ ಹೂಡಿಕೆಯ ಸೌಕರ್ಯವೂ ಇತ್ತು. ಆದರೆ ಸರಿಯಾದ ನಿಟ್ಟಿನಲ್ಲಿ ಶಿಸ್ತು ಅಳವಡಿಸಿಕೊಳ್ಳದ ಕಾರಣ ಆ ಹೂಡಿಕೆ ವ್ಯರ್ಥವಾಯಿತು ಅನ್ನುವ ಉದಾಹರಣೆ ನೀಡುವ ಮೂಲಕ ಸೌರಭ್ ಉದ್ಯಮಿಗಳಿಗಿರಬೇಕಾದ ಶಿಸ್ತಿನ ಬಗ್ಗೆ ಅರಿವು ಮೂಡಿಸಿದ್ದರು. ಬದುಕಿನಲ್ಲಿ ವೈಫಲ್ಯ ಅನ್ನುವುದೂ ಸಹ ಮಹತ್ವದ್ದು. ಅದನ್ನು ಕೇವಲವಾಗಿ ನೋಡದೇ ಅದಕ್ಕೂ ಗೌರವ ನೀಡಬೇಕು ಅನ್ನುವುದು ಸೌರಭ್ ಅಭಿಪ್ರಾಯ.

ಮಾಪನ ಮಾಡುವುದು ಅಥವಾ ಮಾಡದೇ ಇರುವುದು

ಹೊಸದಾಗಿ ಸಂಸ್ಥೆಯನ್ನು ಆರಂಭಿಸುವ ಪ್ರತಿಯೊಬ್ಬ ಉದ್ಯಮಿಗಳೂ ತಾವು ಒಂದಲ್ಲೊಂದು ದಿನ ಎಲಾನ್ ಮಸ್ಕ್, ಮಾರ್ಕ್ ಜುಕರ್ಬರ್ಗ್ ರಂತೆ ಯಶಸ್ಸು ಸಾಧಿಸಬೇಕೆಂದು ಕನಸು ಕಾಣುತ್ತಾರೆ. ಆದರೆ ವಾಸ್ತವದಲ್ಲಿ 10ರಲ್ಲಿ 9 ಸ್ಟಾರ್ಟ್ಅಪ್ ಸಂಸ್ಥೆಗಳು ವೈಫಲ್ಯ ಕಾಣುತ್ತಿವೆ. ಯುವ ಉದ್ಯಮಿಗಳಲ್ಲಿ ಅತಿಯಾದ ಆತ್ಮವಿಶ್ವಾಸ ಹಾಗೂ ಆಸಕ್ತಿ ಕಾಣಿಸುತ್ತಿದೆ ಆದರೆ ಅತಿ ಮುಖ್ಯವಾಗಿ ಬೇಕಿರುವ ಸಹನೆ ಕಂಡುಬರುತ್ತಿಲ್ಲ. ಸಾಮರ್ಥ್ಯ ಹಾಗೂ ಉತ್ಸಾಹಗಳಿದ್ದರೂ ಯುವ ಉದ್ಯಮಿಗಳು ಸೋಲುತ್ತಿರುವುದಕ್ಕೆ ಕಾರಣ ಮಾಪನದ ಕೊರತೆ. ತಮ್ಮ ಸಂಸ್ಥೆಯ ವ್ಯಾಪ್ತಿ ಹಾಗೂ ಮಾಪನ ಮಾಡುವಲ್ಲಿ ಎಡವುತ್ತಿರುವುದೇ ಸಂಸ್ಥೆಗಳ ವೈಫಲ್ಯಕ್ಕೆ ಕಾರಣ. ಇಂದಿನ ಸೂಪರ್ಮಾಲ್ ಹಾಗೂ ಇ-ಕಾಮರ್ಸ್ ಉದ್ಯಮದಲ್ಲೂ ಮರುಕಳಿಸುತ್ತಿರುವ ಒಂದೇ ಬಗೆಯ ಆಲೋಚನೆ ಕಂಡು ಬರುತ್ತಿದೆ. ಇಲ್ಲಿ ಪ್ರಯೋಗಗಳ ಕೊರತೆ ಕಂಡು ಬರುತ್ತಿದೆ. ಗ್ರಾಹಕರ ಬೇಡಿಕೆಗಳ ಬಗ್ಗೆ ಸ್ಷಷ್ಟತೆಗಳಿಲ್ಲ. ಸಮಸ್ಯೆಗಳನ್ನು ಪರಿಹರಿಸುವತ್ತಲೂ ಉದ್ಯಮಗಳು ಗಮನ ಹರಿಸುತ್ತಿಲ್ಲ. ಆದರೂ ಈ ಕ್ಷೇತ್ರದಲ್ಲಿ ಸಾಕಷ್ಟು ದೊಡ್ಡ ಹೂಡಿಕೆ ಕಂಡುಬರುತ್ತಿದೆ. ಅರವಿಂದ್ ಹೇಳುವಂತೆ ಪ್ರತಿಯೊಂದು ವ್ಯವಹಾರವೂ ಮಾಪನವಾಗುವುದಿಲ್ಲ, ಕ್ಷಿಪ್ರಗತಿಯಲ್ಲಿ ಕಾಣುವ ಪ್ರಗತಿ ಸಾಕಷ್ಟು ಒತ್ತಡ ಹೇರುತ್ತದೆ ಹಾಗೂ ಇದು ಉದ್ಯಮದ ಬೆಳವಣಿಗೆಯನ್ನು ಸಾಯಿಸುತ್ತದೆ. ಹಾಗಾಗಿ ಯಾವುದೇ ಉದ್ಯಮದಲ್ಲಿ ಹೂಡಿಕೆ ಮಾಡುವ ಮುನ್ನ ಸಾಕಷ್ಟು ಯೋಜನೆ ಮಾಡಬೇಕು. ಇ-ಕಾಮರ್ಸ್ ಮಾರುಕಟ್ಟೆ ಹಾಗೂ ವ್ಯವಹಾರದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುತ್ತಾ ಮೋಹಿತ್ ಸಹ ನಿರಂತರ ಹೂಡಿಕೆ ಉದ್ಯಮದ ಪ್ರಗತಿಯ ನಿಟ್ಟಿನಲ್ಲಿ ಅಪಾಯಕಾರಿ ಅಂದಿದ್ದಾರೆ.

image


ಜಪಾನ್ನ ಪ್ರಸಿದ್ಧ ವ್ಯಾವಹಾರಿಕ ನುಡಿಗಟ್ಟಿನಂತೆ ಮೊದಲ ಬಾರಿಗೆ ಮಾಡುವ ಯಾವುದೇ ಕೆಲಸವನ್ನಾದರೂ ಪರಿಪೂರ್ಣವಾಗಿ ಮಾಡಬೇಕು. ಇನ್ಮೊಬಿ ಸಂಸ್ಥಾಪಕರು ಹೇಳುವಂತೆ ವ್ಯವಹಾರದ ಆಲೋಚನೆಯಲ್ಲಿ ಸ್ಪಷ್ಟತೆ ಇರಬೇಕು, ಹೂಡಿಕೆಯಲ್ಲಿ ಶಿಸ್ತು ಇರಬೇಕು ಹಾಗೂ ಮಾರುಕಟ್ಟೆಯನ್ನು ಅವಲೋಕಿಸುವುದರಲ್ಲಿ ವಿವೇಕವಿರಬೇಕು, ಆಗ ಮಾತ್ರ ಉದ್ಯಮವೊಂದು ಯಶಸ್ವಿಯಾಗಲು ಸಾಧ್ಯ.

ಅನುವಾದಕರು: ವಿಶ್ವಾಸ್​​​

Add to
Shares
2
Comments
Share This
Add to
Shares
2
Comments
Share
Report an issue
Authors

Related Tags