ಆವೃತ್ತಿಗಳು
Kannada

ಮಿಲೇನಿಯಲ್ ಗ್ರಾಹಕರನ್ನು ಸೆಳೆಯುವ 4 ವಿಧಾನಗಳು...

ಟೀಮ್​ ವೈ.ಎಸ್​​.ಕನ್ನಡ

YourStory Kannada
28th Nov 2015
7+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

ತಂತ್ರಜ್ಞಾನ ಮತ್ತು ಸಂವಹನದ ಉನ್ನತಿಯಿಂದಾಗಿ ಕಂಪನಿಗಳು ತಮ್ಮ ಖರ್ಚು ಮತ್ತು ಮನೋವಿಜ್ಞಾನದ ಪರಿಚಯ ಮಾಡಿಕೊಡಬೇಕಾಗಿದೆ. ಸಂಸ್ಥೆಗಳು ಮಿಲೇನಿಯಲ್ ಗ್ರಾಹಕರು ರಚಿಸಿದ ವಿಷಯವನ್ನು ಹಂಚಿಕೊಳ್ಳಲು ಹೆಚ್ಚು ಒಲವು ತೋರುತ್ತಿವೆ. ಗ್ರಾಹಕರನ್ನು ಸೆಳೆಯಲು ಮತ್ತು ಅವರೊಂದಿಗೆ ಬೆರೆಯಲು ಬ್ರಾಂಡ್‍ಗಳು ಸ್ವತಂತ್ರ ವೇದಿಕೆಯನ್ನು ಬಳಸಿಕೊಳ್ಳುತ್ತಿಲ್ಲ. ಬಹುಮಾಧ್ಯಮಗಳ ಮೂಲಕ ಮಾರ್ಕೆಟಿಂಗ್ ಮಾಡುವ ಪ್ರಯತ್ನದ ಮೇಲೆ ಹೆಚ್ಚು ಗಮನಹರಿಸುತ್ತಿವೆ. `ಕಾಮ್‍ಸ್ಕೋರ್' ಪ್ರಕಾರ 18-35 ವರ್ಷದೊಳಗಿನವರ ಖರೀದಿ ಬಲ 170 ಬಿಲಿಯನ್ ಡಾಲರ್‍ಗೂ ಅಧಿಕ. ಈ ಸತ್ಯವನ್ನು ನಿರ್ಲಕ್ಷಿಸುವುದು ನಿಜಕ್ಕೂ ಕಷ್ಟಕರ.

image


ಪ್ರತಿಯೊಂದು ತಂತ್ರಜ್ಞಾನ ಸ್ನೇಹಿ ಬ್ರಾಂಡ್‍ಗಳು ಕೂಡ ಸಹಸ್ರಾರು ಗ್ರಾಹಕರನ್ನು ಸೆಳೆಯುವ ಗುರಿಯನ್ನೇ ಹೊಂದಿರುತ್ತವೆ. ಅವರು ಬ್ರಾಂಡ್‍ಗಳ ಹುದ್ದೆಗಿಂತ ಹೆಚ್ಚಾಗಿ ಸ್ನೇಹಿತರ ಹುದ್ದೆ ಬಗ್ಗೆಯೇ ಹೆಚ್ಚು ಒಲವು ಹೊಂದಿರ್ತಾರೆ. ಮಿಲೇನಿಯಲ್ ಶಾಪರ್‍ಗಳನ್ನು ಸೆಳೆಯಲು ನಾಲ್ಕು ಮಾರ್ಗಗಳು ಇಲ್ಲಿವೆ.

1. ಶಾಪಿಂಗ್ ಅನುಭವಗಳನ್ನು ಎಲ್ಲಾ ಸಾಧನಗಳ ಮೂಲಕ ಸುಲಲಿತಗೊಳಿಸಿ 

ಶೇ. 73ರಷ್ಟು ಮಿಲೇನಿಯಲ್ ಗ್ರಾಹಕರು ತಮ್ಮ ಸ್ಮಾರ್ಟ್‍ಫೋನ್ ಮೂಲಕವೇ ಶಾಪಿಂಗ್ ಮಾಡ್ತಾರೆ. ಪ್ರಯಾಣದ ಸಂದರ್ಭದಲ್ಲಿ ಅಥವಾ ವಾಹನ ದಟ್ಟಣೆಯಲ್ಲಿ ಸಿಲುಕಿದ್ದಾಗಲೇ ಅವರು ಖರೀದಿ ನಿರ್ಧಾರಗಳನ್ನು ತೆಗೆದುಕೊಳ್ತಾರೆ. ಹಾಗಾಗಿ ನಿಮ್ಮ ಬ್ರಾಂಡ್ ಎಲ್ಲ ಡಿವೈಸ್‍ಗಳಲ್ಲೂ ಕಾರ್ಯನಿರ್ವಹಿಸಬೇಕು. ನಿಮ್ಮ ಉದ್ಯಮ ಆ್ಯಪ್ ಆವೃತ್ತಿಯಲ್ಲೂ ಲಭ್ಯವಿರಬೇಕು ಜೊತೆಗೆ ಪ್ರತಿಕ್ರಿಯಾಶೀಲವಾಗಿರಬೇಕು. ಗ್ರಾಹಕರು ಮೊದಲು ಉತ್ಪನ್ನ ಅಥವಾ ಪ್ರಾಡಕ್ಟ್​​​ಗಳನ್ನು ವೆಬ್‍ಸೈಟ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹುಡುಕ್ತಾರೆ. ಖರೀದಿ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮುನ್ನ ಬೇರೆ ಸೈಟ್‍ಗಳಲ್ಲಿ ಆ ಉತ್ಪನ್ನದ ಬಗ್ಗೆ ಎಂತಹ ಅಭಿಪ್ರಾಯವಿದೆ ಅನ್ನೋದನ್ನೂ ಪರಿಶೀಲಿಸುತ್ತಾರೆ.

ಸಲಹೆ: ಆನ್‍ಲೈನ್ ಸ್ಟೋರ್‍ಗಳು ಉತ್ಪನ್ನದ ವಿವರ, ಫೋಟೋ ಮತ್ತು ಗ್ರಾಹಕರ ವಿಮರ್ಷೆಯನ್ನು ಕೂಡ ಒದಗಿಸಿರುತ್ತಾರೆ.

2. ಮಾರ್ಕೆಟಿಂಗ್ ಪ್ರಯತ್ನಗಳನ್ನು ಸಾಮಾಜಿಕ ಹಂಚಿಕೆ ಮೂಲಕ ವಿನ್ಯಾಸಗೊಳಿಸಿ 

`ಇಪ್ಸೋಸ್' ಪ್ರಕಾರ ಬ್ರಾಂಡ್‍ಗಳ ಬಗ್ಗೆ ಅಪ್‍ಡೇಟ್‍ಗಾಗಿ ಶೇ.63ರಷ್ಟು ಗ್ರಾಹಕರು ಸಾಮಾಜಿಕ ಜಾಲತಾಣಗಳನ್ನು ಅವಲಂಬಿಸಿರುತ್ತಾರೆ. ಶೇ.43ರಷ್ಟು ಜನರ ಖರೀದಿ ನಿರ್ಧಾರದ ಮೇಲೆ ಸಾಮಾಜಿಕ ಜಾಲತಾಣಗಳು ಪ್ರಭಾವ ಬೀರುತ್ತವೆ. ಬ್ರಾಂಡ್‍ಗಳ ಜೊತೆ ಬಾಯಿಮಾತಿನ ಸಂವಹನದಲ್ಲಿ ಹೆಚ್ಚು ನಂಬಿಕೆ ಇಟ್ಟಿರುತ್ತಾರೆ. ಒಂದುವೇಳೆ ಉತ್ಪನ್ನಗಳು ಸರಿಯಾದ ಸಮಯಕ್ಕೆ ವಿತರಣೆಯಾಗದಿದ್ದಲ್ಲಿ, ಉತ್ಪನ್ನಗಳ ಬಗ್ಗೆ ತೃಪ್ತಿಯಿಲ್ಲದೇ ಇದ್ದಲ್ಲಿ ಗ್ರಾಹಕರು ತಮ್ಮ ಅಸಮ್ಮತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಪಡಿಸುತ್ತಾರೆ. ಇದನ್ನೇ ಬಳಸಿಕೊಂಡು ಕೆಲ ಬ್ರಾಂಡ್‍ಗಳು ತಮ್ಮ ಉತ್ಪನ್ನಗಳನ್ನು ಸುಧಾರಿಸಲು ಪ್ರಯತ್ನಿಸುತ್ತಾರೆ, ಜೊತೆಗೆ ಗ್ರಾಹಕರೆಡೆಗೆ ಇರುವ ಕಾಳಜಿಯನ್ನು ವ್ಯಕ್ತಪಡಿಸುತ್ತಾರೆ. ಗ್ರಾಹಕರ ಖರೀದಿ ಮೇಲಿನ ಸಾಮಾಜಿಕ ಜಾಲತಾಣಗಳ ಪ್ರಭಾವ ಬೇರೆ ಬೇರೆ ವಿಭಾಗಕ್ಕೆ ಬೇರೆಬೇರೆಯಾಗಿರುತ್ತವೆ. ಲೈಫ್‍ಸ್ಟೈಲ್, ಫ್ಯಾಷನ್, ಮನರಂಜನೆಯ ಇಂಡಸ್ಟ್ರಿಗಳ ಮೇಲೆ ಫೇಸ್‍ಬುಕ್, ಲಿಂಕ್‍ಡೆನ್, ಇನ್‍ಸ್ಟಾಗ್ರಾಮ್, ಟ್ವಿಟ್ಟರ್‍ನಂತಹ ಸಾಮಾಜಿಕ ಜಾಲತಾಣಗಳ ಪ್ರಭಾವ ವಿಭಿನ್ನವಾಗಿದೆ. ಸಾಮಾಜಿಕ ಜಾಲತಾಣಗಳು ನಿಮ್ಮ ಗ್ರಾಹಕರಲ್ಲಿ ಸದಭಿಪ್ರಾಯಮೂಡಿಸುತ್ತಿವೆಯೇ ಎಂಬುದನ್ನು ನೀವೇ ಪರಿಶೀಲಿಸಬೇಕಿದೆ.

image


ಸಲಹೆ : ಸಾಮಾಜಿಕ ಮಾರ್ಕೆಟಿಂಗ್‍ನಲ್ಲಿ ನಿಮ್ಮ ವಿಷಯಗಳ ಬಗ್ಗೆ ಪ್ರಕಟಣೆ ಮತ್ತು ಜಾಹೀರಾತನ್ನು ನೀಡದೇ, ತಾನಾಗಿಯೇ ಗ್ರಾಹಕರನ್ನು ಸೆಳೆಯುವಂತೆ ಮಾಡುವುದು ಉತ್ತಮ.

3. ಮಿಲೇನಿಯಲ್‍ಗಳನ್ನು ತಲುಪಬಲ್ಲ ರೀತಿಯಲ್ಲಿ ಮಾರುಕಟ್ಟೆಯನ್ನು ಅತ್ಯುತ್ತಮಗೊಳಿಸಿ

ವಿಷಯ, ಪ್ರಸ್ತುತತೆ ಮತ್ತು ನಿಶ್ಚಿತಾರ್ಥ ಒಂದು ಬ್ರ್ಯಾಂಡ್‍ನ ಬಗ್ಗೆ ಮಿಲೇನಿಯಲ್ ಗ್ರಾಹಕರನ್ನು ಸೆಳೆಯಲು ಇರುವ ಪ್ರಮುಖ ಅಂಶಗಳು. `ಮಾರ್ಕೆಟಿಂಗ್ ಲ್ಯಾಂಡ್' ಪ್ರಕಾರ ಶೇ.89ರಷ್ಟು ಕಂಪನಿಗಳು ವಿಷಯವಸ್ತುವನ್ನೇ ಆಯ್ದುಕೊಂಡಿವೆ. ಮನರಂಜನೆ, ತಮಾಷೆ, ಸೃಜನಶೀಲತೆ, ಅನನ್ಯತೆ, ಹಾಗೂ ಅವರ ಉದ್ದೇಶದ ಜೊತೆ ವಿಷಯ ವಸ್ತುಗಳು ಬೆರೆಯಬೇಕೆಂಬುದು ಮಿಲೇನಿಯಲ್ ಪೀಳಿಗೆಯ ಬಯಕೆ. ಚೆನ್ನಾಗಿ ಕಾಣಿಸಬಲ್ಲ, ಅದರಿಂದ ನಿಮ್ಮ ವೆಬ್‍ಸೈಟ್ ಬಗೆಗಿನ ಭಾವನೆಯನ್ನು ಅತ್ಯುತ್ತಮವಾಗಿಸಬಲ್ಲ, ವಿಷಯವನ್ನು ಸರಳವಾಗಿ ಹಂಚಿಕೊಳ್ಳಬಲ್ಲ ವಿಷಯ ವಸ್ತುವಿನ ಅಗತ್ಯವಿದೆ. ವಿಷಯದೆಡೆಗಿನ ಕುತೂಹಲವನ್ನು ಕೂಡ ನಿಮ್ಮ ರಣತಂತ್ರದ ಭಾಗವನ್ನಾಗಿಸಿ. ಗ್ರಾಹಕರ ಸಮಸ್ಯೆಗಳನ್ನು ವ್ಯಕ್ತಪಡಿಸುವಂತಹ ವಿಷಯವಸ್ತುಗಳನ್ನು ಪೋಸ್ಟ್ ಮಾಡಿ. ಇದು ನಿಮ್ಮ ಬ್ರ್ಯಾಂಡ್‍ನ ಶೇ.90 ರಷ್ಟು ಜಾಹೀರಾತು ಕೆಲಸವನ್ನು ಮಾಡುತ್ತದೆ. ಕಂಟೆಂಟ್ ಮಾರ್ಕೆಟಿಂಗ್‍ನ ಹೃದಯ, ಸರಿಯಾದ ವಿಷಯ ವಸ್ತುವಿನ ಆಯ್ಕೆ ಹಾಗೂ ಸೂಕ್ತ ಸಮಯದಲ್ಲಿ ಅದನ್ನು ಗ್ರಾಹಕರಿಗೆ ತಲುಪಿಸುವುದರ ಮೇಲಿದೆ.

ಸಲಹೆ: ಪ್ರತಿಯೊಬ್ಬ ಗ್ರಾಹಕನ ಅಗತ್ಯಗಳಿಗೆ ಹೊಂದುವಂತೆ ವಿಷಯ ವಸ್ತುಗಳನ್ನು ವೈಯಕ್ತಿಕಗೊಳಿಸಿ. ನೀವು ಮೊಬೈಲ್ ಆ್ಯಪ್‍ಗಳನ್ನು ಹೊಂದಿದ್ರೆ ನೋಟಿಫಿಕೇಷನ್‍ಗಳನ್ನು ಕಳುಹಿಸಿ.

4. ಲಾಯಲ್ಟಿ ಕಾರ್ಯಕ್ರಮಗಳನ್ನು ಸೇರಿಸಿ 

`ಯಾಹೂ' ಅಂಕಿ-ಅಂಶಗಳ ಪ್ರಕಾರ ಕೂಪನ್ ಅಥವಾ ಡಿಸ್ಕೌಂಟ್ ಮಾಹಿತಿ ತಲುಪಿದ್ರೆ ಮಾತ್ರ ಶೇ. 63ರಷ್ಟು ಮಿಲೇನಿಯಲ್‍ಗಳು ಮಳಿಗೆಗಳಲ್ಲಿ ಪರಿಶೀಲಿಸ್ತಾರೆ. ಶೇ.20ರಷ್ಟು ರಿಯಾಯಿತಿ ನೀಡಿದ್ರೆ ಶೇ.50ರಷ್ಟು ಗ್ರಾಹಕರನ್ನು ರಿಟೇಲ್ ಮಳಿಗೆಗಳತ್ತ ಆಕರ್ಷಿಸಬಹುದು. ಸಂಕ್ಷಿಪ್ತವಾಗಿ , ಮನರಂಜನೆಯ ಮಾತುಗಳಲ್ಲಿ, ಲಾಯಲ್ಟಿ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿ. ಇನ್‍ಸೆಂಟಿವ್ ಎಂದಾಕ್ಷಣ ಕ್ಯಾಶ್‍ಬ್ಯಾಕ್ ಆಫರ್‍ಗಳೇ ಆಗಿರಬೇಕೆಂದೇನಿಲ್ಲ. ಮೊದಲು ಉತ್ಪನ್ನವನ್ನು ಟ್ರೈ ಮಾಡಿ ಬಳಿಕ ವೈಯಕ್ತಿಕವಾಗಿ ಸಂದೇಶ ಕಳಿಸುವಂತ ವ್ಯವಸ್ಥೆಗಳನ್ನು ಕಲ್ಪಿಸಿಕೊಡಿ.

ಸಲಹೆ : ಇ-ಕಾಮರ್ಸ್ ಮಳಿಗೆಗಳು ನಿರಂತರವಾಗಿ ಲಾಯಲ್ಟಿ ಮತ್ತು ಕೂಪನ್ ಕಾರ್ಯಕ್ರಮಗಳನ್ನು ನಡೆಸುತ್ತಿವೆ. ಗ್ರಾಹಕರನ್ನು ಸೆಳೆಯಲು ಮೊಬೈಲ್ ಲಾಯಲ್ಟಿ ಪ್ರೋಗ್ರಾಮ್‍ಗಳನ್ನು ಸೃಷ್ಟಿಸಿ.

ಖರೀದಿಗೆ ಬೇಕಾದ ಹಣ ಹಾಗೂ ಬಲ ಎರಡೂ ಮಿಲೇನಿಯಲ್ ಗ್ರಾಹಕರ ಬಳಿಯಿದೆ. ನಿಮ್ಮ ಬಳಿ ಉತ್ಪನ್ನ ಎಂಬ ಅಸ್ತ್ರವಿದೆ. ಇದು ಸಲಹೆಗಳ ಪ್ರಯೋಗ, ಅನ್ವೇಷಣೆ ಮತ್ತು ಕಾರ್ಯಗತಕ್ಕೆ ಸೂಕ್ತ ಸಮಯ.

ಲೇಖಕರು: ಕಾರ್ತಿಕ್​​ ಅಯ್ಯರ್​​

ಅನುವಾದಕರು: ಭಾರತಿ ಭಟ್​​​​

7+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags