ಆವೃತ್ತಿಗಳು
Kannada

ಫಿಲಿಡೆಲ್ಫಿಯಾದಿಂದ ಮೋಜಾಂಬಿಕ್‌ ತಲುಪಿದ ಭಾರತೀಯ ಸಾಧಕನ ಸಾಮಾಜಿಕ ಹಾಗೂ ವೈದ್ಯಕೀಯ ಯೋಜನೆಗಳ ಸಾಧನೆ

ಟೀಮ್​​ ವೈ.ಎಸ್​​.

29th Sep 2015
Add to
Shares
3
Comments
Share This
Add to
Shares
3
Comments
Share

25 ವರ್ಷದ ಧೈರ್ಯ ಪೂಜಾರ ತಾವು ಸೇರಿದ್ದ ಅಮೇರಿಕನ್ ಕಂಪೆನಿಗೆ, ಮೊದಲನೆಯ ದಿನವೇ ರಾಜೀನಾಮೆ ನೀಡಿ ಹೊರಬಂದಿದ್ದರು. ಇದನ್ನು ಕೆಲವರು ಧೈರ್ಯ ಅಂದರೆ ಇನ್ನೂ ಕೆಲವರು ದಿಟ್ಟ ನಿರ್ಧಾರ ಅಂದರು. ಇನ್ನು ಕೆಲವರು ಬೇರೆ ರೀತಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅದೇನೆ ಇರಲಿ ಕೊನೆಗೆ ಇದರ ಫಲಿತಾಂಶ ಮಾತ್ರ ಧೈರ್ಯ ಪೂಜಾರ ಬದುಕಿನಲ್ಲಿ ಹೊಸ ತಿರುವೊಂದನ್ನು ಸೃಷ್ಟಿಸಿತ್ತು. 3 ವರ್ಷಗಳ ಹಿಂದೆ ಅಂದರೆ 2012ರ ಜುಲೈ 2ರಂದು ಪೂಜಾರ ಎಂ.ಎಸ್. ಮುಗಿಸಿಕೊಂಡ ಕೆಲವು ಸ್ನೇಹಿತರ ಜೊತೆ ಅಮೇರಿಕಾದ ಹೆಲ್ತ್​​ಕೇರ್​​ ಕಂಪೆನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದರು. ಮೊತ್ತಮೊದಲ ದಿನ ಸಂಜೆ 5.30ರವರೆಗೆ ಕೆಲಸ ಮುಗಿಸಿದ್ದ ಧೈರ್ಯ ಪೂಜಾರ, ಅವರಿಗೆ ಸಂಸ್ಥೆಯೇ ಒದಗಿಸಿದ್ದ ಹೋಟೆಲ್ ರೂಂಗೆ ಬಂದವರೇ ನಿರ್ಧರಿಸಿದ್ದರು. ಅಂದು ಅವರು ತೆಗೆದುಕೊಂಡ ತೀರ್ಮಾನವೇ, ಇನ್ನು ಕಂಪೆನಿಗೆ ಹೋಗಿ ಕೆಲಸ ಮಾಡುವುದಿಲ್ಲ ಅನ್ನೋದಾಗಿತ್ತು.

ಮುಂಬೈ ಮೂಲದ ಧೈರ್ಯ ಪೂಜಾರ ತಮ್ಮ ಉದ್ಯಮ ಕ್ಷೇತ್ರದ ಪಯಣವನ್ನು ಆರಂಭಿಸಿದ್ದು ಅವರಿಗೆ ಕೇವಲ 19 ವರ್ಷ ನಡೆಯುತ್ತಿದ್ದಾಗ. ಆದರೆ ಆಗಿನ್ನೂ ಕಾಲೇಜು ಕಲಿಯುತ್ತಿದ್ದ ಪೂಜಾರ ಹಳೆಯ ಹಾಗೂ ಉಪಯೋಗಿಸಲ್ಪಟ್ಟ ಕಾಲೇಜಿನ ಅಭ್ಯಾಸ ಪುಸ್ತಕಗಳ ಮಾರಾಟಕ್ಕಾಗಿ ಇ-ಕಾಮರ್ಸ್ ಆರಂಭಿಸಿದ್ದರು. ಅವರ ಈ ಉಪಾಯ 2009ರಲ್ಲಿ ವಿನೂತನ ಯೋಜನೆ ಅನ್ನುವ ತಲೆಬರಹದಡಿಯಲ್ಲಿ ಎಕಾನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ವರದಿಯಾಗಿತ್ತು. ಇದು ಅವರ ಉದ್ಯಮವನ್ನು ಪ್ರಮೋಟ್ ಮಾಡಲು ಸಾಕಷ್ಟು ನೆರವಾಯಿತು.

image


ಅಂದು ಉದ್ಯಮ ಪ್ರಗತಿಗೆ ಸಂಬಂಧಪಟ್ಟ ಕಾರ್ಯಾಗಾರವೊಂದಕ್ಕೆ ಹೋದಾಗ, ಅಲ್ಲಿನ ಭದ್ರತಾ ಸಿಬ್ಬಂದಿ ನಮ್ಮನ್ನು ಕಾಲೇಜು ಹುಡುಗರು ಉದ್ಯಮಿಗಳಲ್ಲ ಅಂತ ಭಾವಿಸಿದ್ದ. ಅಂದು ಎಲಿವೇಟರ್ ಪಿಚ್ ಹಾಗೂ ಬಿಸಿನೆಸ್ ಪಾಥ್ ಅನ್ನುವ ಎರಡು ಹೊಸ ಪದಗಳನ್ನು ಮೊದಲ ಬಾರಿಗೆ ಕೇಳಿದ್ದೆ ಅಂದಿದ್ದಾರೆ ಧೈರ್ಯ. ಆದರೆ ಸಂಸ್ಥೆಯ ಸದಸ್ಯರು ಅಮೇರಿಕಾಗೆ ಹೋಗಿದ್ದರಿಂದ ಅವರ ಸಂಸ್ಥೆಯನ್ನು ಮುಚ್ಚಬೇಕಾಯಿತು.

ಇ-ಕಾಮರ್ಸ್ ಉದ್ಯಮದಲ್ಲಿ ಅಂದು ಅನುಭವಿಸಿದ ಸೋಲು ಇಂದು ಧೈರ್ಯ ಪೂಜಾರ ಅದೇ ಕ್ಷೇತ್ರದಲ್ಲಿಯೇ ಅಮೇರಿಕಾದಂತಹ ರಾಷ್ಟ್ರದಲ್ಲಿ ಕಾಲಿಡಲು ಸಹಕಾರಿಯಾಗಿದೆ. ಇ-ಕಾಮರ್ಸ್ ಉದ್ಯಮದಲ್ಲಿ ಸಮರ್ಥ ಹೂಡಿಕೆದಾರರ ಗಮನಸೆಳೆಯುವಲ್ಲಿ ಅವರು ಯಶಸ್ವಿಯಾಗಿದ್ದರು. ಪೂಜಾರ ಹೇಳುವಂತೆ ಅಂದು ಮುಗ್ಗರಿಸಿದ್ದರಿಂದ ಈ ಹಾದಿಯಲ್ಲಿ ಏನನ್ನು ಮಾಡಬಾರದು ಅನ್ನುವ ತಿಳುವಳಿಕೆ ಬಂದಿತು.

image


ಯಾವುದೇ ಸಂಸ್ಥೆಯಲ್ಲಿ 9ರಿಂದ 5ರವರೆಗೆ ಶಿಫ್ಟ್ ಆಧಾರದಲ್ಲಿ ಕೆಲಸ ಮಾಡುವುದಿಲ್ಲ ಅನ್ನುವ ಸಂಗತಿ ತಮ್ಮ ಉದ್ಯಮವನ್ನು ಆರಂಭಿಸುವ ಮುನ್ನವೇ ಅವರಿಗೆ ಗೊತ್ತಿತ್ತು. ಪೂಜಾರಗೆ 15 ವರ್ಷವಿದ್ದಾಗ ಅವರ ತಂದೆ ಹೇಳಿದ್ದ ಮಾತನ್ನು ಅವರು ನೆನಪು ಮಾಡಿಕೊಳ್ತಾರೆ. ಐಐಟಿಯಲ್ಲಿ ಎಂಜಿನಿಯರಿಂಗ್ ಮುಗಿಸುವ ಎಂಜಿನಿಯರ್​ಗಳಿಗೆ ಅಮೇರಿಕಾದ ಟಾಪ್ ಸಂಸ್ಥೆಗಳಿಂದ ವಾರ್ಷಿಕ 75 ಲಕ್ಷ ರೂಪಾಯಿ ಪ್ಯಾಕೇಜ್ ಆಧಾರದಲ್ಲಿ ಕೆಲಸಕ್ಕೆ ಸೇರಿಸಿಕೊಳ್ಳುತ್ತಾರೆ. ಮಗನೂ ಐಐಟಿಯಲ್ಲೇ ಕಲಿತು ಅಂತಹ ಎಂಜಿನಿಯರ್ ಆಗಬೇಕು ಅನ್ನುವುದು ಧೈರ್ಯ ತಂದೆಯ ಮಾತಿನ ತಾತ್ಪರ್ಯವಾಗಿತ್ತು. ಆದರೆ ಧೈರ್ಯ, ಅಪ್ಪನಿಗೆ ತಾನೇ ಸ್ವಂತ ಕಂಪೆನಿಯೊಂದನ್ನು ಹುಟ್ಟುಹಾಕಿ ಕೆಲವರಿಗೆ ಕೆಲಸ ಕೊಡುವುದಾಗಿ ವಿಶ್ವಾಸಪೂರ್ವಕವಾಗಿ ಅಂದೇ ಹೇಳಿದ್ದರು.

ಡ್ರೆಕ್ಸೆ​ಲ್​​ನಿಂದ ಮೋಜಾಂಬಿಕ್ ವರೆಗೆ

image


ಮೊದಲ ದಿನವೇ ತಮ್ಮ ಕೆಲಸ ತೊರೆದ ಧೈರ್ಯ, ಫಿಲಿಡೆಲ್ಫಿಯಾದ ಡ್ರೆಕ್ಸೆಲ್ ವಿಶ್ವವಿದ್ಯಾನಿಲಯದ ಡೀನ್ ಜೊತೆ ಸಂಪರ್ಕ ಸಾಧಿಸಿದರು. ಹಿಂದೆ ಅವರು ಅಂತರಾಷ್ಟ್ರೀಯ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳುವ ಯೋಜನೆ ಹಾಕಿಕೊಂಡಿದ್ದರು. ಅವರು ಡೀನ್ ಬಳಿ ಯಾವುದೇ ಸಂಭಾವನೆ ಇಲ್ಲದೇ ಕಾರ್ಯಕ್ರಮ ನಡೆಸಿಕೊಡೋದಾಗಿ ಹೇಳಿದ್ದರು.

ಹಣವಿಲ್ಲದೆ ಕೆಲಸದ ನಿರ್ವಹಣೆ ಹೇಗೆ ಮಾಡುತ್ತೀಯಾ ಅಂತ ಡೀನ್ ಕೇಳಿದ್ದಾಗ, ಧೈರ್ಯ ಇಂತಹ ಸವಾಲುಗಳಿಗೆ ಸಿದ್ಧನಾಗದೇ ಹೋದರೆ ತಾವೆಂದೂ ಉತ್ತಮ ಉದ್ಯಮಿಯಾಗಲು ಸಾಧ್ಯವಿಲ್ಲ ಅನ್ನುವ ಉತ್ತರ ಮಾತ್ರ ಕೊಟ್ಟಿದ್ದರು.

ಆ ಅಂತರಾಷ್ಟ್ರೀಯ ಈವೆಂಟ್ ಹಮ್ಮಿಕೊಂಡ ಧೈರ್ಯರಿಗೆ ಅವರ ಬಹುದಿನದ ಕನಸು ನನಸಾಗುವ ಅವಕಾಶ ಒದಗಿಬಂದಿತ್ತು. ಅದೇ ಕಾರ್ಯಕ್ರಮದಲ್ಲಿ ನ್ಯೂಯಾರ್ಕ್ ಹಾಗೂ ಅಮೇರಿಕಾದ ಬೇರೆ ಭಾಗಗಳ ಬೃಹತ್ ಹೂಡಿಕೆದಾರರುಗಳ ಪರಿಚಯ ಅವರಿಗಾಗಿತ್ತು.

ಆಗ ಒಬ್ಬ ಹೂಡಿಕೆದಾರ ಅವರಿಗೆ ನೇರವಾದ ಪ್ರಶ್ನೆಯೊಂದನ್ನು ಕೇಳಿದ್ದರು. 24 ವರ್ಷದ ಹುಡುಗ ದೊಡ್ಡ ಖಾಸಗಿ ವಿದ್ಯಾಸಂಸ್ಥೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸುತ್ತಾರೆ ಮತ್ತು ಅವರಿಗೆ ಆಫ್ರಿಕಾದ ಪರಿಚಯವೇ ಇಲ್ಲ ಅನ್ನುವಾಗ ಯಾವ ನಂಬಿಕೆಯ ಆಧಾರದಲ್ಲಿ ಅವರು ಹಣ ಹೂಡಬಹುದು. ಪ್ರಾಯಶಃ ಅವರ ಈ ಪ್ರಶ್ನೆಗೆ ಧೈರ್ಯ ಅವರ ಬಳಿ ಉತ್ತರವಿರಲಿಲ್ಲ.

ಆದರೆ ಅದರ ಮುಂದಿನ ತಿಂಗಳೇ, ಅವರು ಸಂಘರ್ಷಕ್ಕೊಳಗಾದ ಆಫ್ರಿಕಾದ ಮೊಜಾಂಬಿಕ್ ಅನ್ನುವ ಪ್ರದೇಶದ ನಾನ್-ಇಂಗ್ಲೀಷ್ ಕಲಿಕೆಯ ಕಾರ್ಯಕ್ರಮದ ಮುಖ್ಯಸ್ಥರಾಗಿದ್ದರು. ಇಲ್ಲಿ ಆಶ್ಚರ್ಯದ ಸಂಗತಿ ಎಂದರೆ ಧೈರ್ಯ ತಮ್ಮ ಬದುಕಿನಲ್ಲಿ ಯಾವತ್ತೂ ಆಫ್ರಿಕಾಗೆ ಟೂರ್ ಹೋಗುವ ಯೋಜನೆಯನ್ನೇ ಹಾಕಿಕೊಂಡಿರಲಿಲ್ಲ.

ಕ್ವಾಂಬಾ ಆಗಿ ಮೊಜಾಂಬಿಕ್​​ನ ಭಾಗವಾದ ಧೈರ್ಯ:

ಆ ಪ್ರದೇಶಕ್ಕೆ ಹೊಸಬರಾಗಿದ್ದ ಧೈರ್ಯ ಅವರಿಗೆ ಎದುರಾದ ಮೊದಲ ಸವಾಲೇ ಸ್ಥಳೀಯ ಭಾಷೆ. ಆದರೆ ಸ್ಥಳೀಯವಾಗಿ ಬಳಕೆಯಾಗುತ್ತಿದ್ದ ಪೋರ್ಚುಗಲ್ ಕಲಿಯಲು ಮುಂದಾದ ಧೈರ್ಯ ಸುಮಾರು 5 ತಿಂಗಳು ನಿರಂತರ ಕಠಿಣ ಪರಿಶ್ರಮಪಟ್ಟರು. ಬಳಿಕ ಮೊಜಾಂಬಿಕ್ ಸಮುದಾಯದ ಭಾಗವಾಗಿ ಗುರುತಿಸಿಕೊಂಡು ಸ್ಥಳೀಯ ಆಸ್ಪತ್ರೆಯೊಂದರಲ್ಲಿ ಬಯೋ-ಮೆಡಿಕಲ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸತೊಡಗಿದರು.

image


ಅಲ್ಲಿನ ಜನರಿಗೆ ಬಯೋಮೆಡಿಕಲ್ ಉಪಕರಣಗಳನ್ನು ಉಪಯೋಗಿಸಲು ಬರುತ್ತಿರಲಿಲ್ಲ. ಕೆಲವೊಮ್ಮೆ 50ರಿಂದ 80 ಸಾವಿರ ಡಾಲರ್ ಮೌಲ್ಯದ ಉಪಕರಣಗಳನ್ನು ಉಪಯೋಗಿಸುವುದು ದುಸ್ತರವಾಗುತ್ತಿತ್ತು. ಆಗ ಧೈರ್ಯ ಅಲ್ಲಿನ ಸ್ಥಳೀಯರಿಗೆ ಆ ಉಪಕರಣಗಳನ್ನು ಹೇಗೆ ಬಳಸಬಹುದು ಅನ್ನುವ ಕುರಿತಾದ ತರಬೇತಿಗೆ ಮುಂದಾದರು. ಅದೊಂದು ಚಿಕ್ಕ ಪ್ರದೇಶವಾದ ಕಾರಣ ಮೊದಲು ಪರಿಕರಗಳನ್ನು ಜೋಡಿಸಲು ಕಲಿತ ಅಲ್ಲಿನ ಬಹುತೇಕ ಮಂದಿ ನಂತರ ಅದನ್ನು ಉಪಯೋಗಿಸುವುದು ಹೇಗೆ ಅನ್ನುವುದನ್ನೂ ತಿಳಿದುಕೊಂಡರು. ನಿಧಾನವಾಗಿ ಅಮೇರಿಕಾದಿಂದ ಬಂದ ಭಾರತೀಯ ಯುವಕನೊಬ್ಬ ವೈದ್ಯಕೀಯ ಪರಿಕರಗಳನ್ನು ಜೋಡಿಸಿ ಉಪಯೋಗಿಸುವುದು ಕಲಿಸುತ್ತಿರುವ ವಿಷಯ ಹರಡತೊಡಗಿತು.

ಹೀಗೆ ಅವರು ಕರೆ ಬಂದಾಗ ಹೋಗಿ ರಿಪೇರಿ ಮಾಡುವವರಾದರು. ಅಲ್ಲಿನ ಜನತೆ ಅವರ ಮನೆಯ ಎಲೆಕ್ಟ್ರಿಕ್ ವಸ್ತುಗಳನ್ನು ಜೋಡಿಸಲೂ ಅವರನ್ನು ಕರೆಯತೊಡಗಿದ್ದರು. ಈ ಎಲ್ಲಾ ಅನುಭವಗಳನ್ನು ಎಂಜಾಯ್ ಮಾಡಿದ ಅವರಿಗೆ ಅಲ್ಲಿನ ಸಮುದಾಯದವರು ಒಂದು ವಿಶಿಷ್ಟ ಆಫ್ರಿಕನ್ ಹೆಸರು ನೀಡಿದ್ದರು. ಆ ಹೆಸರೇ ಕ್ವಾಂಬಾ.

ಮೋಜಾಂಬಿಕ್​ನಲ್ಲಿ ಟಿಇಡಿ ಕಾರ್ಯಕ್ರಮದ ಆಯೋಜನೆ:

ಟೆಡ್ ಎಕ್ಸ್ ಕಾರ್ಯಾಗಾರ ಆಯೋಜಿಸಿ ಅದರ ಮೂಲಕ ಬೃಹತ್ ಉದ್ದಿಮೆದಾರರು ಹಾಗೂ ಬಂಡವಾಳ ಹೂಡಿಕೆದಾರರ ಜೊತೆ ಸಂಶೋಧಕರನ್ನು ಸೇರಿಸಿ ಮೋಜಾಂಬಿಕ್​​ ಹೊರಗಿನ ಪ್ರಪಂಚದಿಂದ ದೂರ ಉಳಿದೂ ಸ್ವಾವಲಂಭಿಯಾಗಿ ಬದುಕುತ್ತಿದೆ ಅಂತ ಹೇಳುವ ಇಚ್ಛೆ ಅವರಿಗಿತ್ತು. ಅದಕ್ಕೆ ತಕ್ಕಂತೆ ಮೋಜಾಂಬಿಕ್ ಜನತೆಯೂ ತಮ್ಮ ಅನುಭವದ ಕಥೆ ಹೇಳಿಕೊಳ್ಳಲು ಉತ್ಸುಕರಾಗಿದ್ದರು.

ಟೆಡ್ ಎಕ್ಸ್ ಕಾರ್ಯಕ್ರಮವೇನೋ ನಡೆಯಿತು. ನ್ಯೂಯಾರ್ಕ್​ನಿಂದ ಬಂದ ಅತಿಥಿಗಳಿಗೆ ಟೆಡ್ ಪತ್ರಗಳನ್ನು ತೆಂಗಿನ ಗರಿ ಹಾಗೂ ಬಾಳೆಯ ಎಲೆಗಳಲ್ಲಿ ಬರೆದು ನೀಡಲಾಯಿತು. ಒಂದೊಂದು ನೀರಿನ ಬಾಟೆಲ್ ಹಾಗೂ ಪಾರ್ಲೆ-ಜಿ ಬಿಸ್ಕೇಟ್ ಪ್ಯಾಕ್ ಕೊಡಲಾಯಿತು. ಸ್ಥಳೀಯ ಸ್ಟುಡಿಯೋ ಒಂದರಿಂದ ಕ್ಯಾಮರಾ ಬಾಡಿಗೆ ತಂದು ಫೋಟೋಗಳನ್ನು ತೆಗೆಯಲಾಯಿತು. ಕೊನೆಗೆ ಆ ಅತಿಥಿಗಳು ನೀಡಿದ್ದ 3 ಸಾವಿರ ಡಾಲರ್ ಮೌಲ್ಯದ ಪರಿಕರವೂ ಕಸ್ಟಂನಲ್ಲಿ ಕಳೆದುಹೋಯಿತು ಅಂತ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ ಧೈರ್ಯ.

ಡ್ರೆಕ್ಸೆಲ್ ಮರುಪ್ರವಾಸ ಹಾಗೂ ವೈ-ಸೆಂಟರ್ ಉಗಮ:

ಮೋಜಾಂಬಿಕ್​​ನಲ್ಲಿ ಪ್ರಾಥಮಿಕ ಸಮಸ್ಯೆಗಳನ್ನು ಅರಿತುಕೊಂಡು ಡ್ರೆಕ್ಸೆಲ್​​ಗೆ ಹಿಂದಿರುಗಿದ್ದ ಧೈರ್ಯಗೆ ಡ್ರಕ್ಸೆಲ್​ನಲ್ಲಿ ಅಂತರಾಷ್ಟ್ರೀಯ ಕಾರ್ಯಕ್ರಮದ ಯೋಜನೆಗಳು ಸಾಕಷ್ಟು ತೊಂದರೆಗಳಿಗೆ ಸಿಕ್ಕಿ ಮುಚ್ಚಿ ಹೋಗಿದ್ದು ನಿರಾಸೆ ತರಿಸಿತ್ತು.

ಆದರೆ ತಮ್ಮ ಕಾರ್ಯಯೋಜನೆಯನ್ನು ಸ್ಪಷ್ಟವಾಗಿ ತಿಳಿಸಲು ಧೈರ್ಯ ವೈ-ಸೆಂಟರ್ ಸಂಸ್ಥೆಯನ್ನು ಹುಟ್ಟುಹಾಕಿದರು. ವೈ-ಸೆಂಟರ್ ವಿದ್ಯಾರ್ಥಿಗಳಿಗೆ ಅಂತರಾಷ್ಟ್ರೀಯ ಸ್ಥಳಗಳಿಗೆ ಕರೆದೊಯ್ದು ಪರಿಣಾಮಕಾರಿಯಾಗಿ ಕೆಲಸ ಮಾಡುವುದು ಹೇಗೆ ಅಂತ ವಿವರಿಸತೊಡಗಿತು.

ಕೆಲವು ಸುತ್ತಿನ ಮಾತುಕಥೆಯ ಬಳಿಕ ಯೋಜನೆಗಳನ್ನು ಅಂತಿಮಗೊಳಿಸಿ ಸಣ್ಣ ತಂಡವೊಂದರ ಸಹಾಯದಿಂದ 2014ರಲ್ಲಿ ಅಮೇರಿಕಾದ ಫಿಲಿಡೆಲ್ಫಿಯಾದಲ್ಲಿ ವೈ-ಸೆಂಟರ್ ಸಂಸ್ಥೆಯನ್ನು ಧೈರ್ಯ ನೋಂದಾಯಿಸಿದರು. ಆದರೆ ಅಮೇರಿಕಾದಲ್ಲಿ ಭಾರತೀಯನೊಬ್ಬ ಉದ್ಯಮಿಯಾಗುವುದು ಅಷ್ಟು ಸುಲಭವಾಗಿರಲಿಲ್ಲ. ಅವರ ವಿದ್ಯಾರ್ಥಿ ವೀಸಾ ಅಂತಿಮಗೊಳ್ಳುವ ಹಂತಕ್ಕೆ ಬಂದಿತ್ತು. ಜೊತೆಗೆ ಯಾವ ಆರಂಭಿಕ ಉದ್ಯಮಗಳಿಗೂ ಅಮೇರಿಕಾದಲ್ಲಿ ನೇರವಾಗಿ ವೀಸಾ ನೀಡುವ ಸೌಲಭ್ಯವಿರಲಿಲ್ಲ. ಹೀಗಾಗಿ ಧೈರ್ಯ ಕೆಲವು ಕಾಲೇಜುಗಳಿಗೆ ಅರೆಕಾಲಿಕ ಉಪನ್ಯಾಸಕರಾಗಿ ಮಕ್ಕಳಿಗೆ ಪಾಠ ಹೇಳಿಕೊಡಲು ಪ್ರಾರಂಭಿಸಿದರು. ಬೋಧನೆಗೆ ಕರೆದ ಮೊದಲ ವಿವಿ ದಿ ವಾರ್ಟನ್. ಸ್ಕೂಲ್ ಉಪನ್ಯಾಸಕ್ಕೆ ಆಯ್ಕೆ ಮಾಡಿದ್ದ ವಿಷಯ, ಅಮೇರಿಕಾದ ಮರುನಿರ್ಮಾಣ-ಉದ್ಯಮಶೀಲತೆಯ ಹಾದಿ..!

ವೈ-ಸೆಂಟರ್ ಯೋಜನೆ ಆರಂಭಿಸಿದ ನಂತರ ಅವರಿಗೆ ಅಮೇರಿಕಾದಲ್ಲಿ ಹಲವು ಸಮಸ್ಯೆಗಳು ಎದುರಾಗಿದ್ದವು. ಏಕೆಂದರೆ ಅವರಿಗೆ ಯಾವುದೇ ಉನ್ನತ ಮೂಲಗಳ ನೆರವಿರಲಿಲ್ಲ ಹಾಗೂ ಅವರ ಹೆಸರಿನಿಂದ ಮುಂದೆ ಪಿಹೆಚ್​ಡಿಯಂತಹ ಸ್ನಾತಕೋತ್ತರ ಗೌರವವಿರಲಿಲ್ಲ. ಹಾಗಾಗಿ ಅವರಿಗೆ ಯಾವುದೇ ಶಿಕ್ಷಣ ಸಂಸ್ಥೆಯಲ್ಲಿ ವೈ- ಸೆಂಟರ್ ತೆರೆಯಲು ಸ್ಥಳ ಸಿಗಲಿಲ್ಲ. ಆಗ ಅನಿವಾರ್ಯವಾಗಿ ಅವರು ವೈಸೆಂಟರ್​​ಗೆ ಸಾಮಾಜಿಕವಾಗಿ ಸ್ಥಾನಮಾನ ಹೊಂದಿರುವ ಗೌರವಾನ್ವಿತರನ್ನು ಸೇರಿಸಿಕೊಳ್ಳಲು ಮುಂದಾದರು. ಪ್ರಧಾನ ಕಾರ್ಯದರ್ಶಿ ಕಚೇರಿಯ, ಯುನೈಟೆಡ್ ನೇಷನ್ಸ್ ಒಸಿಹೆಚ್ಎನ ಲೋಕೋಪಕಾರಿ ಹಣಕಾಸು ವಿಭಾಗದ ಉನ್ನತ ಸಮಿತಿಯಲ್ಲಿದ್ದ ಟೆನ್ಸಾಯ್ ಆಸ್ಫಾ ಅನ್ನುವವರನ್ನು ವೈಸೆಂಟರ್​ನ ಸಲಹಾ ಸಮಿತಿಗೆ ನೇಮಿಸಿಕೊಂಡರು.

ನಂತರ ವೈ ಸೆಂಟರ್​​ಗೆ ಆಸ್ಫಾ ಸ್ಥಳ ಒದಗಿಸಿಕೊಟ್ಟರು. ವೈಸೆಂಟರ್​​ನ ಸಂಸ್ಥಾಪಕ ನಿರ್ದೇಶಕರಾಗಿ ಪ್ರೊಫೆಸರ್ ಮೈಕಲ್ ಗ್ಲಾಸರ್ ನೇಮಕಗೊಂಡರು. ಯೋಜನಾ ನಿರ್ದೇಶಕರಾಗಿ ಆದಿತ್ಯ ಬ್ರಹ್ಮಭಟ್ ನೇಮಿಸಲ್ಪಟ್ಟರು. ಹೀಗೆ ವೈ ಸೆಂಟರ್ ತನ್ನ ಕುಟುಂಬವನ್ನು ದೊಡ್ಡದಾಗಿಸಿಕೊಂಡಿತು.

ಬಳಿಕ ಈ ಯುವ ಉದ್ಯಮಿ ಪೆನ್ಸಿಲ್ವೇನಿಯಾ ಹಾಗೂ ಡ್ರಕ್ಸೆಲ್ ವಿಶ್ವವಿದ್ಯಾನಿಲಯಗಳಲ್ಲಿ ಯೋಜನೆ ಪ್ರಾರಂಭಿಸಿದರು. ಈ ಕಾರ್ಯ ಯೋಜನೆಗೆ ಫಿಲ್ಲಿ ಡುಗೂಡರ್ ಪ್ರಶಸ್ತಿಯೂ ದೊರೆಯಿತು. ಜೊತೆಗೆ ಕಂಪೆನಿಯ ಮಾರ್ಕೆಟಿಂಗ್ ಹಾಗೂ ಪ್ರಮೋಷನ್​​ಗಾಗಿ 30 ಸಾವಿರ ಅಮೆರಿಕನ್ ಡಾಲರ್ ನೆರವು ಸಿಕ್ಕಿತು. ಇದಾದ ನಂತರ ಫಿಲಿಡೆಲ್ಫಿಯಾದ ನಿಯತಕಾಲಿಕವೊಂದರಲ್ಲಿ ಧೈರ್ಯ ಮೊದಲ ದಿನವೇ ಕೆಲಸ ಬಿಟ್ಟು ಉದ್ಯಮ ಆರಂಭಿಸಿದ ಕಥೆ ಪ್ರಕಟವಾಗಿತ್ತು. ಫಿಲಿಡೆಲ್ಫಿಯಾ ನಗರದಲ್ಲಿ ಅವರು ವೈಸೆಂಟರ್​ನ ಮುಖ್ಯ ಕಚೇರಿ ಆರಂಭಿಸಿದರು.

ಮಲೇರಿಯಾ ಹಾಗೂ ಗರ್ಭಿಣಿಯರಿಗಾಗಿಯೇ ಸೃಷ್ಟಿಯಾದ ಎಸ್ಎಮ್ಎಸ್ ಆ್ಯಪ್:

ವೈ ಸೆಂಟರ್ ಸೆಟ್ ಅಪ್ ಪೂರ್ತಿಯಾದ ಬಳಿಕ ಧೈರ್ಯ ಮೊಜಾಂಬಿಕ್ ಜನರಿಗೆ ಕಾಡುತ್ತಿದ್ದ ಮಲೇರಿಯಾ ಕಾಯಿಲೆಗೆ ಸಹಾಯ ಮಾಡಲು ಹೋಗಬೇಕಾಯಿತು. ಅವರು ಅಲ್ಲಿನ ರೋಗಿಗಳಿಗಾಗಿ ಎಸ್ಎಮ್ಎಸ್ ಆ್ಯಪ್ ಒಂದನ್ನು ಸೃಷ್ಟಿಸಿದರು. ಅಂತರಾಷ್ಟ್ರೀಯ ಹಣಕಾಸು ಅನುದಾನಗಳಿಂದ ಅವರಿಗೆ ಉಚಿತ ಸೌಕರ್ಯ ಸಿಗುತ್ತದೆ ಅನ್ನುವ ವಿಷಯದ ಜಾಗೃತಿಗೆ ಅವರು ಮುಂದಾದರು. ಆದರೆ ಅನಕ್ಷರತೆ ಹಾಗೂ ವೈದ್ಯಕೀಯ ಕೇಂದ್ರಗಳು ದೂರವಿದ್ದ ಕಾರಣ ಆ ಜನತೆ ಆಸ್ಪತ್ರೆಗಳಿಗೆ ಹೋಗಲಾಗಲಿಲ್ಲ.

ಮಲೇರಿಯಾದ ಬಗ್ಗೆ ಜಾಗೃತಿ ಹೊಂದಿರದ ಕಾರಣ ಮೊಜಾಂಬಿಕ್ ಜನರ ಸಾವಿನ ಸಂಖ್ಯೆ ಹೆಚ್ಚತೊಡಗಿತ್ತು. ಅಲ್ಲಿ ಬದುಕಬೇಕಂದರೆ ಮುಖ್ಯವಾಗಿ ಮೂರು ವಸ್ತುಗಳಿರಬೇಕು. ಸೆಲ್​ಫೋನ್​​​, ಒಂದು ಕ್ಯಾನ್ ಕೋಕಾಕೋಲಾ ಹಾಗೂ ದೇವರಲ್ಲಿ ನಂಬಿಕೆ ಅನ್ನುವುದು ಒಂದು ಪ್ರಸಿದ್ಧ ಮಾತು. ಅದರಂತೆ ಅಲ್ಲಿ ಒಂದು ಬಾಟೆಲ್ ನೀರಿಗಿಂತ ವಿಫುಲವಾಗಿ ಕೋಕಾಕೋಲಾ ಕ್ಯಾನ್ ಸಿಗುತ್ತಿತ್ತು.

ಕೂಡಲೆ ಧೈರ್ಯ ಮೊಬೈಲ್​​ನಲ್ಲಿ ಒಂದು ಅಪ್ಲಿಕೇಶನ್ ಸಿದ್ಧಪಡಿಸಿದರು. ಅದು ಹಳೆಯ ಮಾದರಿಯ ನೋಕಿಯಾ ಫೋನ್​ನಲ್ಲಿದ್ದ ಸ್ನೇಕ್ ಅನ್ನುವ ಗೇಮ್​ನಂತೆ ಇತ್ತು. ಈ ಆ್ಯಪ್​ನಿಂದ ರೋಗಿಗಳಿಂದ ಒಂದು ಎಸ್ಎಮ್ಎಸ್ ಹೊರಟು ಕ್ಲೌಡ್ ಸೇವೆಗಳಲ್ಲಿ ರಿಜಿಸ್ಟರ್ ಆದ ಆಸ್ಪತ್ರೆಗಳಿಗೆ ಸಂದೇಶ ರವಾನೆಯಾಯಿತು. ಅದರಿಂದ ವೈದ್ಯಕೀಯ ಸೇವೆ ಒದಗಿಸುವ ಜನರಿಗೆ ಮೋಜಾಂಬಿಕ್ ತಲುಪಲು ಅನುಕೂಲವಾಯಿತು.

ಸಾಮಾನ್ಯವಾಗಿ ಆಫ್ರಿಕನ್ನರು ಮುಂದುವರೆದ ರಾಷ್ಟ್ರಗಳಿಂದ ಬಂದ ಜನರನ್ನು ನಂಬುತ್ತಿರಲಿಲ್ಲ. ಯಾವುದೇ ಅಭಿವೃದ್ಧಿ ಹೊಂದಿದ ರಾಷ್ಟ್ರದವರಾದರೂ ಅವರನ್ನು ದುಡಿಸಿಕೊಳ್ಳುವ ಹಾಗೂ ಅವರನ್ನು ದೋಚಲು ಬರುತ್ತಾರೆ ಅನ್ನುವ ಅಪನಂಬಿಕೆ ಅವರಲ್ಲಿತ್ತು. ಈ ಎಸ್ಎಮ್ಎಸ್ ಆ್ಯಪ್​ನಿಂದ ಅವರ ರೋಗಗ್ರಸ್ಥ ಸ್ಥಿತಿ ಹೊರಜಗತ್ತಿನ ಡಾಕ್ಟರನ್ನು ತಲುಪಿತು ಹಾಗೂ ಹವಾಮಾನ ವರದಿಗಳನ್ನು ನಿರ್ಧರಿಸಲು ನೆರವಾಯಿತು.

ಈಗ ಈ ಆ್ಯಪ್ ಅನ್ನು ಯುನೈಟೆಡ್ ನೇಷನ್ಸ್ ತಾಯಿಯಿಂದ ಮಗುವಿಗೆ ಹೆಚ್‌ಐವಿ ಹರಡದಂತೆ ತಡೆಯಲು ಉಪಯೋಗಿಸಿಕೊಳ್ಳುತ್ತಿದೆ ಎನ್ನುತ್ತಾರೆ ಧೈರ್ಯ. ಮೋಜಾಂಬಿಕ್‌ನ ಹೆಚ್‌ಐವಿ ಪೀಡಿತ ಗರ್ಭಿಣಿಯರು ಅದರ ಬಗ್ಗೆ ಮಾತನಾಡಲು ಹಿಂಜರಿಯುತ್ತಿದ್ದರು. ಅವರಲ್ಲಿ ಬಹುತೇಕರು ತರುಣಿಯರಾಗಿದ್ದು, ಬಹಳಷ್ಟು ಸಂದರ್ಭದಲ್ಲಿ ತಮ್ಮ ಗರ್ಭಾವಸ್ಥೆಯನ್ನು ಮುಚ್ಚಿಡಲು ಮುಂದಾಗುತ್ತಿದ್ದರು. ಆದರೆ ಒಂದು ಹಂತ ತಲುಪಿದ ನಂತರ ಇದಕ್ಕೆ ಯಾವುದೇ ಪರಿಹಾರೋಪಾಯಗಳಿರುತ್ತಿರಲಿಲ್ಲ.

ಹೆಚ್‌ಐವಿ ಹರಡದಂತೆ ತಡೆಯಲು ಗರ್ಭಿಣಿ ಮಹಿಳೆ ತನ್ನ ಗರ್ಭಾವಸ್ಥೆಯ ಮೊದಲ ದಿನಗಳಿಂದಲೇ ಸರಿಯಾದ ಚಿಕಿತ್ಸೆ ಪಡೆದುಕೊಳ್ಳುವುದು ಅನಿವಾರ್ಯವಾಗಿತ್ತು. ಹಾಗಾಗಿ ಈ ಎಸ್ಎಂಎಸ್ ಆ್ಯಪ್‌ನಲ್ಲಿ ತಮ್ಮ ಸಂಪೂರ್ಣ ವೈದ್ಯಕೀಯ ಮಾಹಿತಿ ನೀಡಲು ಅನುಕೂಲವಾಗುವಂತೆ ರಹಸ್ಯ ಕಾರ್ಯಯೋಜನೆ ಅಳವಡಿಸಲಾಯಿತು. ಹೀಗೆ ಮಲೇರಿಯಾಗೆ ಉಬೇರ್ ಹಾಗೂ ಪ್ರಗ್ನೆನ್ಸಿ ಟೆಸ್ಟಿಂಗ್ ಅನ್ನೋ ಆ್ಯಪ್ ಹುಟ್ಟಿಕೊಂಡಿತು.

ಮುಂದಿನ ಯೋಜನೆ

ವೈಸೆಂಟರ್ ಈಗ ಮೋಜಾಂಬಿಕ್‌ನಲ್ಲಿ ಅಲ್ಲಿನ ಆರೋಗ್ಯ, ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವಾಲಯದ ಸಹಯೋಗದೊಂದಿಗೆ ಕೆಲವು ಅವಶ್ಯಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಜೊತೆಗೆ 4 ಮುಖ್ಯ ಅಮೆರಿಕನ್ ವಿವಿಗಳ ವಿದ್ಯಾರ್ಥಿಗಳನ್ನು ಇದೇ ಕಾರ್ಯಕ್ರಮದಡಿ ಆಫ್ರಿಕಾ ಪ್ರವಾಸಕ್ಕೆ ಕಳುಹಿಸುತ್ತಿದೆ. 2014ರಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆದ ವಿಶ್ವ ಸಾಮಾಜಿಕ ಉದ್ದಿಮೆದಾರರ ಘಟಕದ ಕಾರ್ಯಾಗಾರದಲ್ಲಿ ವಿಶ್ವ ಆರ್ಥಿಕತೆ ಅನ್ನುವ ವಿಚಾರದ ಮೇಲೆ ಧೈರ್ಯ ಮಾತನಾಡಲು ಫಿಲಿಡೆಲ್ಫಿಯಾ ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ್ದರು.

ಧೈರ್ಯ ಫಿಲಿಡೆಲ್ಫಿಯಾ, ನ್ಯೂಜೆರ್ಸಿ ಮುಂತಾದ ಕೆಲವು ವಿವಿಗಳಲ್ಲಿ ಸುಮಾರು 5ಕ್ಕೂ ಹೆಚ್ಚು ಸೆಮಿನಾರ್‌ಗಳನ್ನು ನೀಡಿದ್ದಾರೆ. ಮೈಕ್ರೋಸಾಫ್ಟ್ ಸಂಸ್ಥೆಯ ಸಹಯೋಗದೊಂದಿಗೆ ಸುಮಾರು 800 ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದಾರೆ. ಅಮೆರಿಕಾದ ಉನ್ನತ ಸಂಸ್ಥೆಗಳು ಹಾಗೂ ಯುನೈಟೆಡ್ ನೇಷನ್‌ನ ಸದಸ್ಯರೊಂದಿಗೆ ಕಲೆತು ಈ ವಿಚಾರದಲ್ಲಿ ಸಲಹಾ ಸಮಿತಿ ರಚಿಸಿದ್ದಾರೆ.

ಧೈರ್ಯ, ಫಿಲಿಡೆಲ್ಫಿಯಾದ ಬಿಸಿನೆಸ್ ನಿಯತಕಾಲಿಕೆವೊಂದರಲ್ಲಿ ಮುಖಪುಟದ ಸೆಲೆಬ್ರಿಟಿಯಾಗಿದ್ದಾರೆ. ಅದಕ್ಕಿಂತ ಮುಖ್ಯವಾಗಿ ಅವರ ಸಾಧನೆಗೆ ಸಂದ ಗೌರವವೆಂದರೆ ಅವರಿಗೆ 2015ರಲ್ಲಿ ಅಮೆರಿಕನ್ ಇಮಿಗ್ರೇಶನ್-01ಎ ವೀಸಾ ಒದಗಿಸಿದೆ. ಈ ವೀಸಾವನ್ನು ಅತ್ಯಂತ ಪ್ರತಿಭಾವಂತ ವಲಸಿಗರಿಗೆ ಮಾತ್ರ ಅಮೆರಿಕಾ ನೀಡುತ್ತದೆ.

Add to
Shares
3
Comments
Share This
Add to
Shares
3
Comments
Share
Report an issue
Authors

Related Tags