ಆವೃತ್ತಿಗಳು
Kannada

`ಕಂಪನಿ' ಮಾರಾಟ ಮಾಡಲು ಸರಳ ಸೂತ್ರ...

ಟೀಮ್​ ವೈ.ಎಸ್​​.ಕನ್ನಡ

26th Nov 2015
Add to
Shares
7
Comments
Share This
Add to
Shares
7
Comments
Share

`ಇನ್‍ಬೌಂಡಿಯೋ' ಕಂಪನಿಯನ್ನು ಮಾರಾಟ ಮಾಡಿದಾಗಿನಿಂದ ಪುಷ್ಕರ್ ಗಾಯಕ್ವಾಡ್ ಅವರಿಗೆ ಸಾಲು ಸಾಲು ಫೋನ್ ಕರೆಗಳು, ಇಮೇಲ್‍ಗಳು ಬರ್ತಾನೇ ಇವೆ. ಎಲ್ರೂ ಉದ್ಯಮವನ್ನು ಮಾರಾಟ ಮಾಡುವುದು ಹೇಗೆ ಅನ್ನೋದನ್ನೇ ಕೇಳ್ತಿದ್ದಾರೆ. ಪುಷ್ಕರ್ ಅವರು ಕಳೆದ 2 ತಿಂಗಳಿನಿಂದ ನೀಡ್ತಾ ಇರೋ ಸಲಹೆ ಎಲ್ಲಾ ಉದ್ಯಮಿಗಳಿಗೂ ಪೂರಕವಾದದ್ದು. ಆ ಅತ್ಯಮೂಲ್ಯ ಸಲಹೆಗಳನ್ನು ಒಂದೊಂದಾಗಿ ನೋಡೋಣ.

ಮೊದಲು ನೀವು ತಿಳಿದುಕೊಳ್ಳಬೇಕಾದ ವಿಷಯ...

1. ನೀವು ಪ್ರಸ್ತಾಪವನ್ನು ತೆಗೆದುಕೊಂಡು ಬೇರೆಯವರ ಬಳಿ ಹೋಗುವುದಕ್ಕೂ, ಬೇರೊಬ್ಬರು ಪ್ರಸ್ತಾಪದೊಂದಿಗೆ ನಿಮ್ಮ ಬಳಿ ಬರುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ.

2. ಇದು ತುಂಬಾ ಸಮಯ ತೆಗೆದುಕೊಳ್ಳುವಂತಹ ಪ್ರಕ್ರಿಯೆ, ಕಡಿಮೆ ಅಂದ್ರೂ 6 ತಿಂಗಳಾಗಬಹುದು. ಒಬ್ಬ ಸಹಸಂಸ್ಥಾಪಕ ತನ್ನೆಲ್ಲಾ ಸಮಯವನ್ನು ಇದೇ ಕೆಲಸಕ್ಕೆ ಮೀಸಲಾಗಿಡಬೇಕು.

image


3. ವಾಸ್ತವವಾದಿಗಳಾಗಿರಿ : ನೀವು ಸಂಸ್ಥೆಯನ್ನು ಮಾರಲು ಮುಂದಾಗಿದ್ದೀರಾ ಎಂದಾದ್ರೆ, ಅದು ಸ್ಥಗಿತಗೊಂಡಿರಬೇಕು, ನೀವು ಅದರಲ್ಲಿ ಆಸಕ್ತಿ ಕಳೆದುಕೊಂಡಿರಬೇಕು, ಅಥವಾ ಹೊಸ ಸಾಹಸಕ್ಕೆ ನೀವು ಮುಂದಾಗಿರಬೇಕು. ಇದೇ ಕಾರಣವಾಗಿದ್ರೆ ನಿಮಗೆ ಒಳ್ಳೆಯ ಮೌಲ್ಯ ಸಿಗುವುದಿಲ್ಲ. ಖರೀದಿದಾರರು ಹೆಚ್ಚಿನ ಮೌಲ್ಯ ನಿರೀಕ್ಷಿಸ್ತಾರೆ, ಅದು ಉದ್ಯಮದ ವಾಸ್ತವತೆ. ವಾಸ್ತವವಾದ ನಿರೀಕ್ಷೆಗಳಿದ್ರೆ, ಮಾರುಕಟ್ಟೆಯನ್ನು ಚೆನ್ನಾಗಿ ಅರ್ಥಮಾಡಿಕೊಂಡ್ರೆ ಸಮಯವನ್ನು ಉಳಿತಾಯ ಮಾಡಬಹುದು. ಒಬ್ಬ ಸಂಸ್ಥಾಪಕನಾಗಿ ನಿಮ್ಮ ಉದ್ಯಮಕ್ಕೆ ಒಳ್ಳೆಯ ಮೌಲ್ಯ ಸಿಗಬೇಕೆಂದು ನೀವು ಬಯಸುವುದು ಸಹಜ. ನೀವು ಪಟ್ಟ ಕಷ್ಟ, ಸಮಯ, ಖರ್ಚು ಮಾಡಿದ ಹಣ, ಕಡಿಮೆ ಸಂಬಳದಲ್ಲೇ ಬದುಕಿದ ರೀತಿ ಎಲ್ಲವನ್ನೂ ನೆನೆಸಿಕೊಂಡ್ರೆ ಹಾಗನ್ನಿಸೋದು ಸಹಜ. ಆದ್ರೆ ಖರೀದಿದಾರ ಕೊಡಲು ಬಯಸಿದ ಮೊತ್ತದಲ್ಲಿ ಇದರಿಂದ ಯಾವುದೇ ಬದಲಾವಣೆಯಾಗುವುದಿಲ್ಲ. ಬಹುತೇಕ ಸಂದರ್ಭದಲ್ಲಿ ನಷ್ಟವಾದ್ರೂ ಸರಿ ಎಂದುಕೊಂಡು ಉದ್ಯಮ ಮಾರಾಟ ಮಾಡಿದವರಿದ್ದಾರೆ.

4. ಎಲ್ಲಾ ಉತ್ಪನ್ನ ಹಾಗೂ ಆಸ್ತಿಪಾಸ್ತಿಗಳನ್ನು ನೀವು ಮಾರಾಟ ಮಾಡಿದ್ರೂ ಖರೀದಿದಾರ ನಿಮ್ಮ ಬೆಂಬಲ ಕೋರಬಹುದು. ಕೆಲವು ತಿಂಗಳುಗಳ ಕಾಲ ಜೊತೆಗಿದ್ದು ಸಹಕಾರ ನೀಡುವಂತೆ ಮನವಿ ಮಾಡಬಹುದು. ಕೆಲವರು ಮೊದಲೇ ಸಂಬಳ ನಿಗದಿ ಮಾಡಬಹುದು, ಇನ್ನು ಕೆಲವರು ಕಾರ್ಯದಕ್ಷತೆಯ ಆಧಾರದ ಮೇಲೆ ವೇತನ ಕೊಡಬಹುದು, ಅಥವಾ ಪಾಲುದಾರರಾಗಲು ಕೂಡ ಇಚ್ಛಿಸಬಹುದು. ಅವರ ಮುಂದೆ ಇಂತಹ ಹಲವು ಆಯ್ಕೆಗಳಿವೆ. ಆದ್ರೆ ಪುಷ್ಕರ್ ಅವರ ಗುರಿ ಸ್ಪಷ್ಟವಾಗಿತ್ತು. `ಇನ್‍ಬೌಂಡಿಯೋ' ಸಂಸ್ಥೆಯನ್ನು ಮಾರಾಟ ಮಾಡಿದ ಅವರು, `ಎರೋಲೀಡ್ಸ್' ಬಗ್ಗೆ ಸಂಪೂರ್ಣ ಗಮನಹರಿಸಿದ್ರು.

5. ಅತ್ಯಂತ ನಿಧಾನವಾದ ಈ ಪ್ರಕ್ರಿಯೆ ಒಮ್ಮೊಮ್ಮೆ ತಪ್ಪಾದರೂ ಆಗಬಹುದು. ಇದಕ್ಕೆ ಹೆಚ್ಚು ಒತ್ತು ಕೊಡುವುದು ಅಸಾಧ್ಯ. ಮಾರಾಟ ಪ್ರಕ್ರಿಯೆ ಜೊತೆಗೆ ನೀವು ಭಾವನೆಗಳನ್ನು ಬೆರೆಸಿದ್ರೆ ಅದು ನೋವು ಕೊಡುತ್ತೆ.

ನಿಮ್ಮ ಉದ್ಯಮ ಮಾರಾಟಕ್ಕೂ ಮುನ್ನ ಮಾಡಬೇಕಾದ ಕಾರ್ಯ...

1. ಅರ್ಹ ಖರೀದಿದಾರರ ಹೆಸರುಗಳನ್ನು ಪಟ್ಟಿ ಮಾಡಿ. ನೀವು ಸಂಪರ್ಕಿಸಲು ಬಯಸುವ ಕಂಪನಿಗಳ ವಿವರ ಇರಲಿ. ಅಂತಹ ವ್ಯಕ್ತಿಗಳ ವಿವರ ಪುಷ್ಕರ್ ಗಾಯಕ್ವಾಡ್ ಅವರ ಲಿಂಕ್ಡ್​​​ಇನ್ ನೆಟ್‍ವರ್ಕ್‍ನಲ್ಲಿತ್ತು.

2. ಸಂಸ್ಥೆಯ ಎಲ್ಲ ದಾಖಲೆಗಳು ಮತ್ತು ಹಣಕಾಸಿನ ಲೆಕ್ಕಾಚಾರಗಳು ಸರಿಯಾಗಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಈ ತಯಾರಿ ಮಾಡಿಕೊಳ್ಳದೇ ಇದ್ದಿದ್ರಿಂದ ಪುಷ್ಕರ್ ಅವರು ಬಹಳ ಸಮಯ ವ್ಯರ್ಥ ಮಾಡಬೇಕಾಗಿ ಬಂದಿತ್ತು.

ಸಂಪರ್ಕಿಸಲು ಆರಂಭಿಸುವುದು ಹೇಗೆ..?

1. ಲಿಂಕ್ಡ್​​​ಇನ್‍ನ ಇ-ಮೇಲ್ ವ್ಯವಸ್ಥೆಯ ಮೂಲಕ ಅರ್ಹ ಖರೀದಿದಾರರಿಗಾಗಿ ಪುಷ್ಕರ್ ಗಾಯಕ್ವಾಡ್ ಹುಡುಕಾಟ ನಡೆಸಿದ್ರು. ಕೆಲವರು ಇನ್ನಷ್ಟು ವಿವರ ಕೇಳಿ ರಿಪ್ಲೈ ಮಾಡಿದ್ರೂ ಅದು ವರ್ಕೌಟ್ ಅಗಿರಲಿಲ್ಲ. ಸರಿಯಾದ ಮೌಲ್ಯ ನೀಡುವ ಅರ್ಹ ಖರೀದಿದಾರರು ಸಿಗಲಿಲ್ಲ ಎಂಬ ಕಾರಣ ಸಾಮಾನ್ಯವಾಗಿತ್ತು.

2. ಫ್ಲಿಪ್ಪಾ : ಇದರಲ್ಲಿ ಸಪ್ಪಳ ಜೋರಾಗಿಯೇ ಇದೆ, ಆದ್ರೂ ಗೋಚರತೆಯನ್ನು ಹುಡುಕಲು ಇದು ಸೂಕ್ತವಾದದ್ದು. ನೀವು ಬಳಸಿಕೊಳ್ಳಬಹುದಾದಂತಹ ಒಪ್ಪಂದ ಅವಕಾಶ ಕೂಡ ಇದರಲ್ಲಿದೆ.

3. ಎಫ್‍ಇ ಇಂಟರ್‍ನ್ಯಾಶನಲ್ : ಹ್ಯಾಕರ್‍ನ್ಯೂಸ್ ನೋಡಿದ್ರೆ ಯಾವಾಗ್ಲೂ ಈ ಹೆಸರು ಕಣ್ಣಿಗೆ ಬೀಳುತ್ತೆ. ಸಾಫ್ಟ್‍ವೇರ್ ಉತ್ಪನ್ನಗಳನ್ನು ಮಾರಾಟ ಮಾಡಲು ಇದು ಅತ್ಯಂತ ಸೂಕ್ತವಾದ ವೇದಿಕೆ.

4. `ಬ್ಯುಸಿನೆಸ್ ಫಾರ್ ಸೇಲ್' ಮತ್ತು `ಬಿಝ್ ಬೈ ಸೆಲ್'ನತ್ತಲೂ ಗಮನಹರಿಸಲು ಮರೆಯಬೇಡಿ. ಇವು ಕೂಡ ಸಕ್ರಿಯ ಬಳಕೆದಾರರನ್ನು ಹೊಂದಿವೆ.

5. ನೀವು ಇನ್ನಷ್ಟು ಸಂಶೋಧನೆ ಮಾಡಲು ಬಯಸಿದ್ರೆ `ಕ್ವೋರಾ' ನತ್ತ ಕೂಡ ಒಮ್ಮೆ ನೋಡಿ.

6. ದಲ್ಲಾಳಿಗಳು : ಬ್ಯುಸಿನೆಸ್ ಬ್ರೋಕರ್‍ಗಳು ಬೇಕಂದ್ರೆ ತುಂಬಾ ಜನ ಸಿಗ್ತಾರೆ. ಸರಿಯಾದ ಖರೀದಿದಾರರನ್ನು ಹುಡುಕಲು ನಿಮಗೆ ಸಹಾಯ ಮಾಡಲು ಅವರು ಶೇ.10-15ರಷ್ಟು ಹಣ ಪಡೆಯುತ್ತಾರೆ. 100,000 ಡಾಲರ್‍ನಿಂದ ಹಿಡಿದು 2 ಮಿಲಿಯನ್ ಡಾಲರ್‍ವರೆಗೂ ಅವರು ಡೀಲ್ ಮಾಡಿಕೊಡ್ತಾರೆ. ಅಂತಹ ದಲ್ಲಾಳಿ ಸಂಸ್ಥೆಗಳಿಗಾಗಿ ನೀವು ಆನ್‍ಲೈನ್‍ನಲ್ಲಿ ಹುಡುಕಾಟ ನಡೆಸಬೇಕು.

ಕಾನೂನು ಕೆಲಸ...

1. ಕಾನೂನು ಕಾರ್ಯಗಳನ್ನೆಲ್ಲ ನೋಡಿಕೊಳ್ಳಲು ಯಾರನ್ನಾದ್ರೂ ನೇಮಕ ಮಾಡಿಕೊಳ್ಳುವುದು ಒಳಿತು. ಅದರಿಂದ ನಿಮ್ಮ ಸಮಯವೂ ಉಳಿತಾಯವಾಗುತ್ತದೆ. ಖರೀದಿದಾರ ಕಾನೂನು ಕೆಲಸಗಳನ್ನೆಲ್ಲ ನೋಡಿಕೊಳ್ತಾ ಇದ್ರೆ ಆ ಕರಡು ಪ್ರತಿಗಳನ್ನು ಪರಿಶೀಲಿಸಲು ಕಾನೂನು ತಜ್ಞರ ಅವಶ್ಯಕತೆಯಿರುತ್ತದೆ.

2. ನೀವು ಭಾರತದಲ್ಲಿದ್ದು, ಖರೀದಿದಾರರು ವಿದೇಶದವರಾಗಿದ್ರೆ ಹಣದ ವಿನಿಮಯ ನಿಜಕ್ಕೂ ತಲೆನೋವಿನ ಕೆಲಸ. ಇದಕ್ಕೂ ಒಬ್ಬ ದಲ್ಲಾಳಿಯನ್ನು ನೇಮಕ ಮಾಡಿಕೊಂಡ್ರೆ ನಿಮ್ಮ ಕೆಲಸ ಸುಲಭವಾಗುತ್ತದೆ. ಅಷ್ಟೇ ಅಲ್ಲ ದೊಡ್ಡ ಮೊತ್ತದ ವ್ಯವಹಾರದಲ್ಲಿ ಖರೀದಿದಾರರನ್ನು ನೀವು ಮುಖತಃ ಭೇಟಿಯಾಗುವುದು ಒಳಿತು.

ಲೇಖಕರು: ಪುಷ್ಕರ್​ ಗಾಯಕ್ವಾಡ್​​

ಅನುವಾದಕರು: ಭಾರತಿ ಭಟ್​​​​

Add to
Shares
7
Comments
Share This
Add to
Shares
7
Comments
Share
Report an issue
Authors

Related Tags