ಆವೃತ್ತಿಗಳು
Kannada

ಕಾಶ್ಮೀರದ ಕ್ರಿಕೆಟಿಗರಿಗೆ ಇವರೇ ಮಾದರಿ- ಧರ್ಮದ ಕಟ್ಟಳೆಗಳನ್ನು ಮೆಟ್ಟಿನಿಂತ ಶಕೀನಾ ಅಖ್ತರ್..!

ಟೀಮ್​ ವೈ.ಎಸ್​. ಕನ್ನಡ

YourStory Kannada
28th Dec 2016
Add to
Shares
5
Comments
Share This
Add to
Shares
5
Comments
Share

ಭಾರತದಲ್ಲಿ ಮಹಿಳಾ ಕ್ರಿಕೆಟ್ ಈಗಷ್ಟೇ ಸದ್ದು ಮಾಡುತ್ತಿದೆ. ಆಡುವ ಕನಸುಗಳು ಹೆಚ್ಚಾಗುತ್ತಿವೆ. ಆದ್ರೆ ನಮ್ಮಲ್ಲಿ ಮಹಿಳೆಯರು ಕ್ರಿಕೆಟ್ ಬಗ್ಗೆ ಕನಸುಗಳನ್ನು ಕಂಡು, ಕಾರಣಾಂತರಗಳಿಂದ ಬಿಟ್ಟ ಹಲವು ಮಹಿಳೆಯರು ಸಿಗುತ್ತಾರೆ. ಸಕೀನಾ ಅಖ್ತರ್, ಭಾರತದ ಪರವಾಗಿ ಕ್ರಿಕೆಟ್ ಆಡುವ ಕನಸನ್ನು ಕಂಡಿದ್ದರು. ಆದ್ರೆ ಕುಟುಂಬ ಅವರ ಕನಸುಗಳನ್ನು ಚಿಗುರಿನಲ್ಲೇ ಕತ್ತರಿಸಿತ್ತು. ಆದ್ರೆ ಶಕೀನಾ ಹಠ ಬಿಡಲಿಲ್ಲ. ಕ್ರಿಕೆಟ್ ಆಟಗಾರ್ತಿ ಆಗದೇ ಇದ್ದರೆ ಏನಂತೆ, ಕ್ರಿಕೆಟ್ ಆಟಗಾರ್ತಿಯರನ್ನು ರೂಪಿಸುವ ಕೋಚ್ ಆಗುತ್ತಿದ್ದಾರೆ. ಛಲ ಮತ್ತು ಹಠದಿಂದ ಶಕೀನಾ ಕಳೆದ 8 ವರ್ಷಗಳಿಂದ ಕಾಶ್ಮೀರ ಯೂನಿವರ್ಸಿಟಿ ಮಹಿಳಾ ತಂಡದ ಕೋಚ್ ಆಗಿದ್ದಾರೆ. ಶಕೀನಾ ಕೋಚ್ ಆಗಿ ದೇಶದಲ್ಲಿ ಅದೆಷ್ಟೋ ಕ್ರಿಕೆಟ್ ಆಟಗಾರ್ತಿಯರನ್ನು ರೂಪಿಸಿದ್ದಾರೆ.

image


ಕಾಶ್ಮೀರದ ಶ್ರೀನಗರದ ಮುನಾವರಬಾದ್​ನ ನಿವಾಸಿ ಆಗಿರುವ ಶಕೀನಾ ಕ್ರಿಕೆಟ್ ಜೀವನವನ್ನು ಬಿಟ್ಟು ಬೇರೆ ಯೋಚನೆ ಕೂಡ ಮಾಡಿರಲಿಲ್ಲ. ಸದ್ಯದ ಮಟ್ಟಿಗೆ ಶಕೀನಾ ಕಾಶ್ಮೀರದ ಏಕೈಕ ಮಹಿಳಾ ಕ್ರಿಕೆಟ್ ಕೋಚ್ ಅನ್ನುವ ಖ್ಯಾತಿ ಪಡೆದುಕೊಂಡಿದ್ದಾರೆ. ಸದ್ಯಕ್ಕೆ ಶಕೀನಾ ಜಮ್ಮು ಕಾಶ್ಮೀರದ ಅಂಡರ್ 19 ಬಾಲಕಿಯರ ತಂಡಕ್ಕೆ ಕೋಚಿಂಗ್ ನೀಡುತ್ತಿದ್ದಾರೆ.

“ ನಾನು ಚಿಕ್ಕವಳಿದ್ದಾಗ ನಮ್ಮ ಗಲ್ಲಿಯ ಹುಡುಗರ ತಂಡದ ಸದಸ್ಯೆ ಆಗಿದ್ದೆ. ಅಲ್ಲೇ ನಾನು ಆಟದ ಪಟ್ಟುಗಳನ್ನು ಕಲಿತೆ. ”
ಶಕೀನಾ, ಕ್ರಿಕೆಟ್ ಕೋಚ್

ಶಕೀನಾ ಹೈ ಸ್ಕೂಲ್ ಸೇರುವ ತನಕ ಕ್ರಿಕೆಟ್ ಆಡುವ ತನಕ. ಆದ್ರೆ ಬಾಲಕಿಯರು ಕ್ರಿಕೆಟ್ ಆಡುವುದನ್ನು ಕಾಶ್ಮೀರದಲ್ಲಿ ದೊಡ್ಡ ತಪ್ಪು ಎಂದು ಬಿಂಬಿಸುತ್ತಿದ್ದರು. ಹೀಗಾಗಿ ಆಟವನ್ನು ಕೈ ಬಿಟ್ರು. ಆದ್ರೆ ಹೈ ಸ್ಕೂಲ್ ಕೊನೆಯ ಹಂತದಲ್ಲಿ ಮತ್ತೆ ಕ್ರಿಕೆಟ್ ತಂಡವನ್ನು ಸೇರಿಕೊಂಡರು. ಅಂತರ್ ಶಾಲಾ, ಜಿಲ್ಲಾ ಮತ್ತು ರಾಜ್ಯ ಮಟ್ಟದ ಕ್ರಿಕೆಟ್ ಟೂರ್ನಿಯಲ್ಲಿ ಮಿಂಚಿದ್ರು. 1998ರಲ್ಲಿ ಶಕೀನಾ ಅಂಡರ್ 19 ತಂಡದಲ್ಲಿ ಕಾಣಿಸಿಕೊಂಡರು. ಆಡಿದ ಮೊದಲ ಟೂರ್ನಿಯಲ್ಲೇ ಬ್ಯಾಟಿಂಗ್ ಮತ್ತು ಬೌಲಿಂಗ್​ನಲ್ಲಿ ಅಗ್ರಸ್ಥಾನ ಪಡೆದು ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.

ಇದನ್ನು ಓದಿ: ಕಾಡು ರಕ್ಷಿಸಲು ಮರಗಳ ಮೇಲೆ ಕಲಾಕೃತಿ : ನಾರಿಯರ ಕೈಚಳಕದಲ್ಲಿ ಸ್ವರ್ಗವಾಗಿದೆ ಮಧುಬನಿ

ಕಾಲೇಜ್ ಸೇರಿಕೊಂಡ ಮೇಲೆ ಶಕೀನಾ ಕ್ಲಾಸ್​ಗೆ ಹೋಗಿದ್ದಕ್ಕಿಂತ ಮೈದಾನದಲ್ಲಿ ಕ್ರಿಕೆಟ್ ಅಭ್ಯಾಸ ಮಾಡಿದ್ದೇ ಹೆಚ್ಚು. ಕುಟುಂಬ ಶಕೀನಾ ಬೆಂಬಲಕ್ಕೆ ನಿಂತ್ರೂ ಓದಿಗೆ ಮೊದಲ ಆದ್ಯತೆ ನೀಡಬೇಕು ಅನ್ನುವ ಷರತ್ತು ವಿಧಿಸಿತ್ತು. ನಂತರ ಶಕೀನಾ ಉನ್ನತ ವಿದ್ಯಾಭ್ಯಾಸಕ್ಕಾಗಿ ಕಾಶ್ಮೀರ ಯೂನಿವರ್ಸಿಟಿ ಸೇರಿಕೊಂಡರು. ಆದ್ರೆ ಕ್ರಿಕೆಟ್ ಅವರನ್ನು ಸೆಳೇದುಕೊಂಡಿತ್ತು. ಓದಿಗೆ ಗುಡ್ ಬೈ ಹೇಳಿದ್ರು. ದೆಹಲಿಯಲಲ್ಲಿ ಡಿಪ್ಲೋಮಾ ಇನ್ ಸ್ಪೋರ್ಟ್ಸ್ ಮಾಡಲು ಆರಂಭಿಸಿದ್ರು. ಬಿಸಿಸಿಐನ ಲೆವೆಲ್ "ಎ" ಕೋಚಿಂಗ್ ಪರೀಕ್ಷೆಯಲ್ಲಿ ಪಾಸ್ ಆದ್ರು. ಸ್ಪೋರ್ಟ್ಸ್ ಕೌನ್ಸಿಲ್ ಕಾಶ್ಮೀರದಲ್ಲಿ ಕೋಚ್ ಆಗಿ ಸೇರಿಕೊಂಡು ಬಾಲಕಿಯರಿಗೆ ಕ್ರಿಕೆಟ್ ಕಲಿಸಲು ಆರಂಭಿಸಿದ್ರು.

ಶಕೀನಾರ ಮೊದಲ ಕ್ಯಾಂಪ್ ಪೋಲೊ ಕ್ರೀಡಾಂಗಣದಲ್ಲಿ ಆರಂಭವಾಗಿತ್ತು. ಕಾಶ್ಮೀರದ ವಿವಿಧ ಕಡೆಗಳಿಂದ ಸುಮಾರು 250 ಹುಡುಗರು ಈ ಕ್ಯಾಂಪ್​ಗೆ ಆಗಮಿಸಿದ್ದರು. ಆದ್ರೆ ಕೆಲಸ ತೃಪ್ತಿಕೊಡಲಿಲ್ಲ. ಹಲವು ಕೆಲಸಗಳಿಗೆ ಅರ್ಜಿ ಹಾಕಿದ್ರು. ಕೊನೆಗೆ 2007ರಲ್ಲಿ ಕಾಶ್ಮೀರ ಯೂನಿವರ್ಸಿಟಿಯಲ್ಲಿ ಕ್ರಿಕೆಟ್ ಕೋಚ್ ಆಗಿ ಸೇರಿಕೊಂಡರು. ಸದ್ಯ ಕಾಶ್ಮೀರ ಯೂನಿವರ್ಸಿಟಿಯಲ್ಲಿ ಶಕೀನಾ ಹುಡುಗರು ಮತ್ತು ಹುಡುಗಿಯರಿಗೆ ಕ್ರಿಕೆಟ್ ಪಾಠ ಹೇಳಿಕೊಡುತ್ತಿದ್ದಾರೆ.

ಶಕೀನಾ ಇನ್ನೂ ಎರಡು ಕೋಚಿಂಗ್ ಎಕ್ಸಾಂ ಪಾಸ್ ಮಾಡುವ ಲೆಕ್ಕಾಚಾರದಲ್ಲಿದ್ದಾರೆ. ಭಾರತದಲ್ಲಿರುವ ಹಲವು ಮಹಿಳಾ ಕ್ರಿಕೆಟರ್​ಗಳಿಗೆ ಪಾಠ ಹೇಳೊಕೊಡುವ ಕನಸು ಕಾಣುತ್ತಿದ್ದಾರೆ. ಶಕೀನಾ ಕ್ರಿಕೆಟ್ ಆಸಕ್ತಿಯೇ ಅವರನ್ನು ಇಲ್ಲಿ ತನಕ ಕೈ ಹಿಡಿದುಕೊಂಡು ಬಂದಿದೆ. ಶಕೀನಾಗೆ ಯುವರ್ ಸ್ಟೋರಿ ಕಡೆಯಿಂದಲೂ ಆಲ್ ದಿ ಬೆಸ್ಟ್.

ಇದನ್ನು ಓದಿ:

1. ಟಿ ಶರ್ಟ್ ಮೇಲೆ ಕನ್ನಡ ಅಭಿಮಾನ- ಸ್ಟಾರ್ಟ್​ಅಪ್​ನ ಸಾಧನೆಗೆ ಗ್ರಾಹಕರು ಕೊಟ್ರು ಬಹುಮಾನ..!

2. ಅಂದು ವೇಶ್ಯೆ, ಇಂದು ಬಾಲಿವುಡ್ ಕಥೆಗಾರ್ತಿ..!

3. ನಿಮಗಿಷ್ಟವಿರುವ ಕೆಲಸ ಮಾಡಿ- ಕೈ ತುಂಬಾ ಸಂಬಳ ಪಡೆಯಿರಿ

Add to
Shares
5
Comments
Share This
Add to
Shares
5
Comments
Share
Report an issue
Authors

Related Tags