ಐಐಟಿ ಪದವೀದರರಾದ ಇವರು ಅಭಿವೃದ್ಧಿಪಡಿಸಿದ ಸಾಧನ ವಾಹನ ಮಾಲಿನ್ಯ ನಿಯಂತ್ರಣಕ್ಕೆ ನೆರವಾಗುತ್ತಿದೆ
ದೇಬಯಾನ್ ಸಾಹಾರವರು ಅಭಿವೃದ್ಧಿಪಡಿಸಿದ ‘-2.5' ಸಾಧನವನ್ನು ವಾಹನದ ಸೈಲೆನ್ಸರ್ ಪೈಪ್ಗೆ ಅಳವಡಿಸಬಹುದು, ಇದು ಮ್ಯಾಗ್ನೆಟ್ನಂತೆ ಕೆಲಸ ಮಾಡುತ್ತದೆ ಮತ್ತು ವಾತಾವರಣದಿಂದ ಮಾಲಿನ್ಯಕಾರಕ ಕಣಗಳನ್ನು ಆಕರ್ಷಿಸುತ್ತದೆ.
Monday October 21, 2019,
2 min Read
ವಾಯುಮಾಲಿನ್ಯಕ್ಕೆ ವಾಹನ ಮಾಲಿನ್ಯ ಪ್ರಮುಖ ಕಾರಣ ಎಂಬ ಅಂಶ ನಮ್ಮಲ್ಲಿ ಹಲವರಿಗೆ ತಿಳಿದಿಲ್ಲ. ಹಲವಾರು ಸರ್ಕಾರಗಳು ಈ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನ ನಡೆಸುತ್ತಲೇ ಇವೆ. ಉದಾಹರಣೆಗೆ, ದೆಹಲಿ ಸರ್ಕಾರವು ಜನವರಿ 2016 ಕ್ಕೆ ‘ಬೆಸ-ಸಮ-ನಿಯಮ’ ವನ್ನು ಪರಿಚಯಿಸಿತು, ಅಲ್ಲಿ ವಾಹನಗಳು ಅವುಗಳ ಪರವಾನಗಿ ಫಲಕದ ಸಂಖ್ಯೆಯನ್ನು ಅವಲಂಬಿಸಿ ನಿರ್ದಿಷ್ಟ ದಿನಗಳಲ್ಲಿ ಮಾತ್ರ ರಸ್ತೆಗಿಳಿಯಬಹುದು.
ಸಮೀಕ್ಷೆಯೊಂದರ ಪ್ರಕಾರ ದೇಶದಲ್ಲಿ 21 ಕೋಟಿಗೂ ಹೆಚ್ಚು ವಾಹನಗಳಿವೆ. ಮತ್ತು, ಅರ್ಧದಷ್ಟು ವಾಹನಗಳನ್ನು ರಸ್ತೆಯಿಂದ ದೂರವಿರಿಸುವುದರಿಂದ ಕಡಿಮೆ ಇಂಗಾಲದ ಹೊರಸೂಸುವಿಕೆ ಉಂಟಾಗುತ್ತದೆ, ಇದರಿಂದ ಸ್ವಲ್ಪ ಮಟ್ಟಿಗೆ ವಾಯುಮಾಲಿನ್ಯ ನಿಗ್ರಹಿಸಲು ಸಹಾಯಮಾಡುತ್ತದೆಯಾದರೂ ಇದು ದೃಡವಾದ ಯೋಜನೆಯಾಗಿಲ್ಲ.
ವಾಹನ ಮಾಲಿನ್ಯ ನಿಯಂತ್ರಣಕ್ಕೆ ಸಹಾಯ ಮಾಡಲು, ಐಐಟಿ ಖರಗ್ಪುರ ಪದವೀಧರರು ಮಾಲಿನ್ಯಕಾರಕವನ್ನು ನಿಯಂತ್ರಿಸಲು '-2.5' ಎಂಬ ಸಾಧನವನ್ನು ಅಭಿವೃದ್ಧಿಪಡಿಸಿದ್ದಾರೆ. ಮೆಕಾನಿಕಲ್ ಇಂಜಿನೀಯರ್ ಆಗಿರುವ ದೇಬಯಾನ್ ಸಾಹಾರವರು ವಾಹನ ಮಾಲಿನ್ಯವನ್ನು ನಿಯಂತ್ರಿಸುವ ಸಾಧನವನ್ನು ಅಭಿವೃದ್ಧಿಪಡಿಸಿದ್ದು, ಅದನ್ನು ವಾಹನದ ಸೈಲೆನ್ಸರ್ ಪೈಪ್ ಬಳಿ ಅಳವಡಿಸಬಹುದಾಗಿದೆ.
"ನಾವು ಅಭಿವೃದ್ಧಿಪಡಿಸಿದ ತಂತ್ರಜ್ಞಾನವು ಪಿಎಂ 2.5ನಂತಹ ಮಾಲಿನ್ಯಕಾರಕಗಳ ಮೇಲೆ ಪ್ರಭಾವ ಬೀರಲು ವಿದ್ಯುತ್ ಶಕ್ತಿ ಮತ್ತು ತರಂಗ ಶಕ್ತಿಯ ಸಂಯೋಜನೆಗಳನ್ನು ಬಳಸಿಕೊಳ್ಳುತ್ತದೆ, ಉದಾಹರಣೆಗೆ, ಅವು ಸುತ್ತುವರಿದ ವಾತಾವರಣದಿಂದ ಇತರ ಮಾಲಿನ್ಯಕಾರಕ ಕಣಗಳನ್ನು ಆಕರ್ಷಿಸುವ ಮ್ಯಾಗ್ನೆಟ್ನಂತೆ ಕಾರ್ಯನಿರ್ವಹಿಸುತ್ತದೆ. ಅವು ದೊಡ್ಡದಾಗುತ್ತಿದ್ದಂತೆ ಭಾರವಾಗುತ್ತವೆ ಮತ್ತು ಮಣ್ಣಿನ ನೆಲದ ಮೇಲೆ ಸುರಕ್ಷಿತವಾಗಿ ಬೀಳುತ್ತದೆ," ಎಂದು ದೇಬಯಾನ್ರವರು ಬಿಸಿನೆಸ್ ಸ್ಟ್ಯಾಂಡರ್ಡ್ಸ್ಗೆ ಹೇಳುತ್ತಾರೆ.
ಪಿಎಂ 2.5 ಎನ್ನುವುದು ಗೋಚರತೆಯನ್ನು ಕಡಿಮೆ ಮಾಡುವ ಗಾಳಿಯಲ್ಲಿನ ಸಣ್ಣ ಕಣಗಳಾಗಿವೆ, ಮತ್ತು ಅದರ ಪ್ರಮಾಣದಲ್ಲಿ ಏರಿಕೆ ಉಂಟಾದಾಗ ಗಾಳಿಯು ಮಬ್ಬಾಗಿ ಕಾಣಿಸುತ್ತದೆ. ಇದು ಶ್ವಾಸಕೋಶದ ಆಳಕ್ಕೆ ಇಳಿಯಬಲ್ಲ ಪ್ರಮುಖ ವಾಯು ಮಾಲಿನ್ಯಕಾರಕವಾಗಿದ್ದು, ಅಲ್ಪಾವದಿಯ ಆರೋಗ್ಯ ಪರಿಣಾಮಗಳಾದ ಕಣ್ಣು, ಮೂಗು, ಗಂಟಲು ಮತ್ತು ಶ್ವಾಸಕೋಶದ ಕಿರಿಕಿರಿ, ಕೆಮ್ಮು ಉಸಿರಾಟದ ತೊಂದರೆ ಮುಂತಾದ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದು ಅಸ್ತಮಾ ಮತ್ತು ಹೃದ್ರೋಗದಂತಹ ತೀವ್ರವಾದ ಖಾಯಿಲೆಗಳಿಗೆ ಕಾರಣವಾಗಬಹುದು.
ದೇಬಯಾನ್ರವರು ಅಭಿವೃದ್ಧಿಪಡಿಸಿದ ಸಾಧನವನ್ನು ಕಾರುಗಳಿಂದ ಬಸ್ಸುಗಳವರೆಗೆ ಯಾವುದೇ ವಾಹನಕ್ಕೆ ಅಳವಡಿಸಬಹುದು. ಒಮ್ಮೆ ಅಳವಡಿಸಿದ ನಂತರ, ಸಾಧನವು ಕಾರಿನ ಸೈಲೆನ್ಸರ್ ಮಾತ್ರವಲ್ಲ ಇತರ ಕಾರುಗಳಿಂದ ಮತ್ತು ಸುತ್ತ ಮುತ್ತಲಿಂದ ಮಾಲಿನ್ಯಕಾರಕವನ್ನು ಹೀರಿಕೊಳ್ಳುತ್ತದೆ.
“ರಸ್ತೆಯಲ್ಲಿ ಹೋಗುತ್ತಿರುವ ಒಂದು ಕಾರು ಈಗ ಪರಿಸರದಲ್ಲಿ ತಕ್ಷಣ ಮಾಲಿನ್ಯವನ್ನು ನಿವಾರಿಸುತ್ತದೆ ಮತ್ತು ಸುತ್ತ ಮುತ್ತಲಿನ 10 ಕಾರುಗಳಿಂದ ಹೊರಸೂಸುವ ಮಾಲಿನ್ಯವನ್ನು ತಡೆಯುತ್ತದೆ. ಸಮಸ್ಯೆಯ ಆಳಕ್ಕೆ ಇಳಿಯುವುದು ಮುಖ್ಯ, ಪಿಎಂ 2.5 ಎನ್ನುವುದು ಸಮಸ್ಯೆಯಲ್ಲ ಅದರ ಚಿಕ್ಕ ಗಾತ್ರದಿಂದ ಸಮಸ್ಯೆ ಉಂಟಾಗುತ್ತಿದೆ. ಇದು ನಮ್ಮ ಶ್ವಾಸ ಕೋಶ ಮತ್ತು ರಕ್ತನಾಳವನ್ನು ಸುಲಭವಾಗಿ ಪ್ರವೇಶಿಸಬಲ್ಲದು," ಎಂದು ಅವರು ಹೇಳಿದರು
ಪ್ರಸ್ತುತ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದ ಗ್ಲೋಬಲ್ ಬಯೋಡಿಸೈನ್ ವಿದ್ಯಾರ್ಥಿಯಾಗಿರುವ ದೇಬಯಾನ್ರವರು, ಮಾಲಿನ್ಯವನ್ನು ನಿಯಂತ್ರಿಸಲು ವಾಹನಗಳಲ್ಲಿ ತಮ್ಮ ಸಾಧನ ಅಳವಡಿಸಲು ವಿವಿಧ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಸ್ಕೂಪ್ ವೂಪ್ ವರದಿ ಮಾಡಿದೆ.
ನಿಮ್ಮ ಬಳಿಯೂ ಸ್ಪೂರ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್ಬುಕ್ ಹಾಗೂ ಟ್ವಿಟರ್ ನಲ್ಲಿ ಫಾಲೊ ಮಾಡಿ.