ಆವೃತ್ತಿಗಳು
Kannada

ಆಲ್ಕೋಹಾಲ್​, ಸಿಗರೇಟ್​ನಿಂದ ಹುಟ್ಟಿದ ವ್ಯಥೆ- ರೋಚಕವಾಗಿದೆ "ಬುಕ್​ ಮೈ ಶೋ" ಕಥೆ..!

ಟೀಮ್​ ವೈ.ಎಸ್​. ಕನ್ನಡ

1st Oct 2016
Add to
Shares
4
Comments
Share This
Add to
Shares
4
Comments
Share

ಅಂದಹಾಗೇ, ಬುಕ್ ಮೈ ಶೋ ಹುಟ್ಟಿದ್ದು ಒಂದು ರೋಚಕ ಸ್ಟೋರಿ. ಆಶೀಶ್​ ಹೇಮ್​ರಜನಿ ಇದ್ರ ಸಂಸ್ಥಾಪಕರು. ಟೆಕ್​ಸ್ಪಾರ್ಕ್ಸ್ 2016ರಲ್ಲಿ ಆಶೀಶ್ ಯುವರ್ ಸ್ಟೋರಿಯ ಜೊತೆ ಸಮ ಹಂಚಿಕೊಂಡಿದ್ದಾರೆ. ಬುಕ್ ಮೈ ಶೋದ ಜರ್ನಿಯ ಬಗ್ಗೆ ಹೇಳಿದ್ದಾರೆ.

“ನಾನು ಒಂದು ಅಡ್ವಟೈಸಿಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿದೆ. ಅಲ್ಲಿ ಎಲ್ಲರ ಕೈಯಲ್ಲೂ ಸಿಗರೇಟ್ ಮತ್ತು ಚಹಾ ಇರ್ತಾ ಇತ್ತು. ನಾನು ಯಾವತ್ತೂ ಕೂಡ ಸ್ಮೋಕ್ ಮತ್ತು ಆಲ್ಕೋಹಾಲ್ ಕಡೆ ತಿರುಗಿಯೂ ನೋಡಿಲ್ಲ. ಇವರೆಲ್ಲಾ ಯಾಕೆ ಹೀಗೆ ಅಂತ ಯೋಚನೆ ಮಾಡಿದೆ. ತಕ್ಷಣಕ್ಕೆ ಉತ್ತರ ಸಿಗಲಿಲ್ಲ. ಹೀಗಾಗಿ ಚಿಕ್ಕ ಬ್ರೇಕ್ ತೆಗೆದುಕೊಳ್ಳುವುದಕ್ಕಾಗಿ ರಜಾ ಹಾಕಿದೆ”

ಹೀಗಂತ ಹೇಳಿಕೊಂಡೆ ಪ್ರಯಾಣದ ಕಥೆಯನ್ನು ಆರಂಭಿಸಿದ್ರು ಆಶೀಶ್

image


ಆಶೀಶ್ 90ರ ದಶಕದ ಅಂತ್ಯದಲ್ಲಿ ಮತ್ತು 2000ದ ಮೊದಲಿನಲ್ಲಿ ಹಲವು ಬಾರಿ ಆಫೀಸ್ ಕೆಲಸ ನಿಮಿತ್ತ ದಕ್ಷಿಣ ಆಫ್ರಿಕಾ ಮತ್ತು ಬೊಟ್ಸ್​ವಾನಾಗಳಿಗೆ ಬೇಟಿ ನೀಡಬೇಕಾಗಿತ್ತು. ಈ ಸಮಯದಲ್ಲಿ ಆಶೀಶ್​ ಉದ್ಯಮಗಳ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದರು ಕೂಡ. ಒಂದು ಬಾರಿ ಆಶೀಶ್ ಸುಸ್ತನ್ನು ಹೆಚ್ಚಿಸುವ ರಸ್ತೆ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ರೆಡಿಯೋ ಒಂದು ರಗ್ಬಿ ಪಂದ್ಯದ ಟಿಕೆಟ್ ನೀಡುತ್ತಿರುವ ವಿಷಯ ಗಮನಕ್ಕೆ ಬಂತು. ಇದನ್ನೇ ಆಶೀಶ್ ವಿಶೇಷವಾಗಿ ಯೋಚನೆ ಮಾಡಿದ್ರು. ಭಾರತದಲ್ಲಿ ವಿಶೇಷವಾಗಿ ಈ ಕಾನ್ಸೆಪ್ಟ್ ಮೂಲಕ ಉದ್ದಿಮೆ ಮಾಡಬೇಕೆಂಬ ನಿರ್ಧಾರಕ್ಕೆ ಬಂದುಬಿಟ್ರು. ಹಾಗೇ ಹುಟ್ಟಿಕೊಂಡಿದ್ದೇ ಬುಕ್ ಮೈ ಶೋ. ಅಷ್ಟೇ ಅಲ್ಲ ಹಲವು ಘಟನೆಗಳು ಕೂಡ ಆಶೀಶ್ ಗಮನಕ್ಕೆ ಬಂದಿತ್ತು.

“ ಭಾರತೀಯರು ಟಿಕೆಟ್ ಖರೀದಿ ಮಾಡಲು ದೊಡ್ಡ ದೊಡ್ಡ ಕ್ಯೂಗಳಲ್ಲಿ ನಿಂತಿರುತ್ತಾರೆ. ಟಿಕೆಟ್ ಪಡೆಯೋದಿಕ್ಕಾಗಿ ಕೆಲವರು ಹರಸಾಹಸ ಮಾಡುತ್ತಿದ್ದರು. ಆದ್ರೆ ಸರತಿ ಸಾಲು ದೊಡ್ಡದಾಗುತ್ತಿದ್ದಂತೆಯೇ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತದೆ. ಪೊಲೀಸರು ಕ್ಯೂನಲ್ಲಿ ನಿಂತಿದ್ದವ ಮೇಲೆ ಲಾಠಿ ಚಾರ್ಚ್ ಕೂಡ ಮಾಡುತ್ತಾರೆ. ಟಿಕೆಟ್​ಗಾಗಿ ಬಂದವರು ಲಾಠಿ ಏಟಿನ ರುಚಿ ತಿನ್ನುವ ಘಟನೆ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯಿತು.”
- ಆಶೀಶ್ ಹೇಮ್​ರಜನಿ, ಸಂಸ್ಥಾಪಕ ಬುಕ್ ಮೈ ಶೋ

ಆಶೀಶ್ ಪ್ರಯಾಣ ವೈನ್ ತಯಾರಿಸುವ ಪ್ರದೇಶಕ್ಕೆ ಮುಂದುವರೆದಿತ್ತು. ಅಲ್ಲಿ ವೈನ್ ಉಚಿತವಾಗಿಯೂ ದೊರೆಯುತ್ತಿತ್ತು. ಆ ಪ್ರದೇಶಗಳಲ್ಲಿ ಜನರು ಚಹಾದ ಬದಲು ಕೈಯಲ್ಲಿ ವೈನ್​ಗಳನ್ನು ಹಿಡಿಯುತ್ತಿದ್ದರು. ಕೊಂಚ ವೈನ್ ಹೊಟ್ಟೆ ಸೇರುತ್ತಾ ಇದ್ದಂತೆ ಮಾತುಗಳು ಬದಲಾಗುತ್ತಿತ್ತು.

“ ಆದರೆ ನಾನು ಅವರೆಲ್ಲಗಿಂತಲೂ ವಿಭಿನ್ನ. ನಾನು ಒಬ್ಬ ಭಾರತೀಯ. ಹೀಗಾಗಿ ನನಗೆ ವೈನ್ ಕುಡಿಯುವುದಕ್ಕೆ ಮನಸ್ಸು ಬರಲಿಲ್ಲ. ಇದೇ ಯೋಚನೆ ಮಧ್ಯಾಹ್ನ ಮೂರು ಗಂಟೆ ಹೊತ್ತಿಗೆ ನನ್ನ ತಲೆಯನ್ನು ಸಾಕಷ್ಟು ಬಾರಿ ಕೊರೆದಿತ್ತು. ಕೊನೆಗೆ ನಾನೂ ಕೂಡ ಸಿಗರೇಟ್ ಸೇದಿದೆ. ಮಧ್ಯ ಸೇವನೆ ಮಾಡಿದೆ. ಎಚ್ಚರವಾದಾಗ ನಾನು ನನ್ನ ಯೂತ್ ಹಾಸ್ಟೆಲ್​ನ ಬೆಡ್ ಮೇಲಿದ್ದೆ. ಅಷ್ಟೇ ಅಲ್ಲ ನನ್ನ ಬಾಸ್​ಗೆ 186 ರೂಪಾಯಿಗಳ ಬಿಲ್ ಕೂಡ ತಲುಪಿತ್ತು. ನಾನು ಅಲ್ಲಿ ರಾಜಿನಾಮೆ ನೀಡುವ ನಿರ್ಧಾರ ಮಾಡಿದೆ. ನನಗೆ ಇನ್ನೊಂದು ಬೆಳಗ್ಗೆಯನ್ನು ವಿಭಿನ್ನವಾಗಿ ನೋಡುವ ಆಸೆ ಹುಟ್ಟಿತ್ತು. ”

ಆಶೀಶ್ ಮರುದಿನ ಮಾಯಾ ನಗರಿ ಮುಂಬೈಯನ್ನು ಏನೋ ತಲುಪಿದ್ರು. ಆದ್ರೆ ಕೈಯಲ್ಲಿ ಕೆಲಸವಿರಲಿಲ್ಲ. ಹೀಗಾಗಿ ಕೊಂಚ ಕಷ್ಟವಾಗುತ್ತಿತ್ತು. ಕನಸು ಕಂಡವನಿಗೆ ಸಾಧನೆ ಮಾಡಬೇಕು ಅನ್ನೋ ಗುರಿ ಇರುತ್ತದೆ ಹೊರತು ಅದನ್ನು ಕೈಬಿಡುವ ಮನಸ್ಸು ಇರುವುದಿಲ್ಲ. ಹೀಗಾಗಿ ಆಶೀಶ್ ಹಲವು ತನ್ನ ಉದ್ಯಮದ ಪ್ಲಾನ್​ಗಳನ್ನು ಹಿಡಿದುಕೊಂಡು ಹಲವು ಹೂಡಿಕೆದಾರರ ಮುಂದೆ ಹೋದ್ರು. ಕೊನೆಗೆ ಆಶೀಶ್ ಕನಸಿನ ಪ್ರಾಜೆಕ್ಟ್​ಗೆ 2 ಕೋಟಿ ರೂಪಾಯಿ ಬಂಡವಾಳ ಸಿಕ್ಕಿತ್ತು. ಅಲ್ಲಿಂದ ಆರಂಭವಾಗಿತ್ತು ಆಶೀಶ್ ಯಶಸ್ಸಿನ ಪ್ರಯಾಣ. ಬುಕ್ ಮೈ ಶೋ ಹೊಸ ಸಂಚಲನ ಸೃಷ್ಟಿಸಲು ಆರಂಭಿಸಿತು.

ಇದನ್ನು ಓದಿ: ಉದ್ಯಮ+ಉದ್ಯಮಿ+ಗ್ರಾಹಕ= ಟೆಕ್​ಸ್ಪಾರ್ಕ್​..!

1999ರಲ್ಲಿ ಬುಕ್ ಮೈ ಶೋಗೆ ಆನ್​ಲೈನ್​ ಬುಕ್ಕಿಂಗ್​ಗಿಂತ ಹೆಚ್ಚಾಗಿ ಫೋನ್​ಕಾಲ್ ಬುಕ್ಕಿಂಗ್​ಗಳೇ ಹೆಚ್ಚಾಗಿದ್ದವು. ಕೆಲವು ಕಂಪನಿಗಳು ಕ್ಯಾಶ್ ಡೆಲಿವರಿಯನ್ನು ಕೂಡ ಬುಕ್ ಮೈ ಶೋ ಕೈಗೆ ಕೊಟ್ಟಿದ್ದವು. 2001ರಲ್ಲಿ ನ್ಯೂಸ್ ಕಾರ್ಪ್​ನಿಂದ ಬುಕ್ ಮೈ ಶೋ ಮತ್ತೊಂದು ಫಂಡಿಂಗ್ ಪಡೆಯಿತು. 2002ರಲ್ಲಿ ಬುಕ್ ಮೈ ಶೋದ ಟೀಮ್ 150 ಜನರಿಂದ 6 ಜನರಿಗೆ ಇಳಿದಿತ್ತು. 2500 ಸ್ಕ್ವೇರ್​ಫೀಟ್ ಆಫೀಸ್​ನಿಂದ ಬಾಂದ್ರಾದ ಮನೆಯೊಂದಕ್ಕೆ ಶಿಫ್ಟ್ ಆಗಿತ್ತು.

ಆದ್ರೆ ಬುಕ್ ಮೈ ಶೋ ತಂಡ ಮಾತ್ರ ಯಾವ ಬೆಳವಣಿಗೆಗೂ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ. ಆರ್ಥಿಕ ಸ್ಥಿತಿ ಕಡೆಗೆ ಗಮನವನ್ನು ಇಟ್ಟುಕೊಂಡಿತ್ತು.

“ ನಾವು ಟಿಕೆಟಿಂಗ್ ಕಾಲ್ ಸೆಂಟರ್​ನ್ನು ಒಂದು ಸಾಫ್ಟ್​ವೇರ್ ಮೂಲಕ ರನ್ ಮಾಡ್ತಾ ಇದ್ದೆವು. ಈವೆಂಟ್​ಗಳ ಸಮಯದಲ್ಲಿ ಹೆಚ್ಚು ಬುಕಿಂಗ್​ಗಳು ಬರುತ್ತಿದ್ದವು. ಆದ್ರೆ ಬುದ್ಧಿ ಉಪಯೋಗಿಸಿದ್ರೆ ಅತೀ ಕಠಿಣ ಸಮಸ್ಯೆಗೂ ಸುಲಭವಾಗಿ ಪರಿಹಾರ ಹುಡುಕಬಹುದು. ನಾನೂ ಕೂಡ ಅದನ್ನೇ ಮಾಡಿದೆ. ”

ಪ್ರಯಾಣ ಸುಲಭವಾಗಿತ್ತು. ಕಷ್ಟವಾಗಿದೆ ಅಂತ ಬಿಡೋದಿಕ್ಕೂ ಆಗಿಲ್ಲ.

“ಒಬ್ಬ ನಿರಾಶವಾದಿ ಗ್ಲಾಸ್ ಅರ್ಧ ಖಾಲಿ ಇದೆ ಅನ್ನುತ್ತಾನೆ. ಒಬ್ಬ ಆಶಾವಾದಿ ಗ್ಲಾಸ್ ಅರ್ಧ ತುಂಬಿದೆ ಅನ್ನುತ್ತಾನೆ. ಆದ್ರೆ ಒಬ್ಬ ಉದ್ಯಮಿ ಮಾತ್ರ ಖಾಲಿ ಇರುವುದನ್ನು ಮಾತ್ರ ಗಮನಿಸುತ್ತಾನೆ. ಅಷ್ಟೇ ಅಲ್ಲ ಆ ಖಾಲಿ ಇರುವ ಜಾಗಕ್ಕೆ ತನ್ನ ಕನಸುಗಳನ್ನು ತುಂಬುತ್ತಾನೆ. ”

ಹೀಗೇ ಹೇಳುತ್ತಾ ತನ್ನ ಯಶಸ್ಸಿನ ಕಥೆಯನ್ನು ಮುಗಿಸಿದ್ರು ಬುಕ್ ಮೈ ಶೋ ಸಂಸ್ಥಾಪಕ ಆಶೀಶ್ ಹೇಮ್ ರಜನಿ.

ಇದನ್ನು ಓದಿ:

1. ಹೆದರದೆ ಮುನ್ನುಗ್ಗಿ: ನಿಮ್ಮ ಹಿಂದೆ ನಾವಿದ್ದೇವೆ’ -ಪ್ರಿಯಾಂಕ ಖರ್ಗೆ

2. ಇಟ್ಸ್‌ ಕೂಲ್‌ ಟು ಬಿ ಎ ಸ್ಟಾರ್ಟ್‌ಅಪ್‌: ಶ್ರದ್ಧಾಶರ್ಮಾ

3. ಟೆಕ್​ಸ್ಪಾರ್ಕ್​2016ಕ್ಕೆ ಕ್ಷಣಗಣನೆ- ನಿಮ್ಮನ್ನು ಸ್ವಾಗತಿಸುತ್ತಿದೆ ಯುವರ್​ಸ್ಟೋರಿ

Add to
Shares
4
Comments
Share This
Add to
Shares
4
Comments
Share
Report an issue
Authors

Related Tags