ದೆಹಲಿ‌ ಚುನಾವಣೆಯಲ್ಲಿ ಮತ ಚಲಾಯಿಸಿದ 111 ವರ್ಷದ ಶತಾಯುಷಿ

ಶತಾಯುಷಿಯಾದ ಕಾಳಿತಾರ ಮಂಡಲ್ ಸಿಆರ್ ಪಾರ್ಕ್‌ನಲ್ಲಿ ತಮ್ಮ ಕುಟುಂಬದೊಂದಿಗೆ ಮತ ಚಲಾಯಿಸಿ ಅನೇಕರ ಗಮನ ಸೆಳೆದಿದ್ದಾರೆ.

12th Feb 2020
  • +0
Share on
close
  • +0
Share on
close
Share on
close

ಭಾರತವು ಜನಸಂಖ್ಯೆ ಹಾಗೂ ಮತದಾರರ ವಿಷಯದಲ್ಲಿ ಹೆಚ್ಚಿನ ಯುವಜನತೆಯನ್ನು ಹೊಂದಿದ ದೇಶವಾಗಿದೆ. ಆದರೆ ಇಲ್ಲಿ ಹಲವಾರು ವೃದ್ಧರು ಕೂಡ ಇದ್ದಾರೆ ಹಾಗೂ ಅವರು ರಾಜಕೀಯದ ಕುರಿತಾಗಿ ಚೆನ್ನಾಗಿ ತಿಳಿದುಕೊಂಡಿದ್ದಾರೆ.


ಇತ್ತೀಚೆಗೆ ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ 111 ವರ್ಷದ ಕಾಳಿತಾರ ಮಂಡಲ್ ಮತ ಚಲಾಯಿಸಿದ ಅತ್ಯಂತ ಹಿರಿಯ ಮತದಾರರಾಗಿದ್ದಾರೆ. ಕಳೆದ ಶನಿವಾರ ಸಿಆರ್ ಪಾರ್ಕ್‌ನಲ್ಲಿ ತಮ್ಮ ಕುಟುಂಬದೊಂದಿಗೆ ಮತ ಚಲಾಯಿಸಿದರು. ಇದನ್ನು ಅನೇಕ ಜನರು ಗುರುತಿಸಿದ್ದಾರೆ.


ಕಾಳಿತಾರ ಮಂಡಲ್ (ಚಿತ್ರಕೃಪೆ: ಎಎನ್‌ಐ)


ಪಿಟಿಐ ಜೊತೆ ಮಾತನಾಡಿದ ಕಾಳಿತಾರ, 


"ಈ ಚುನಾವಣೆಯಲ್ಲಿ ಮತ ಚಲಾಯಿಸಿದ್ದು ನನಗೆ ಸಂತಸ ತಂದಿದೆ. ನಾನು ಎಷ್ಟು ಚುನಾವಣೆಗಳಲ್ಲಿ ಮತ ಚಲಾಯಿಸಿದ್ದೇನೆ ಎಂಬುದು ನನಗೆ ಜ್ಞಾಪಕವಿಲ್ಲ. ಒಬ್ಬ ಜವಾಬ್ದಾರಿಯುತ ಪ್ರಜೆಯಾಗಿ ನಾವು ಮತ ಚಲಾಯಿಸಬೇಕು. ಇತರೆ ನಾಗರಿಕರು ಕೂಡ ಹೊರ ಬಂದು ಮತ ಚಲಾಯಿಸುವಂತೆ ನಾನು ಒತ್ತಾಯಿಸುತ್ತೇನೆ,” ಎಂದರು, ವರದಿ ಫರ್ಸ್ಟ್‌ಪೋಸ್ಟ್.


ಕಾಳಿತಾರ ಸೇರಿದಂತೆ ದೆಹಲಿಯಲ್ಲಿ 132 ಜನ ನೂರು ವರ್ಷ ಮೀರಿದ ಮತದಾರರಿದ್ದು, ಅದರಲ್ಲಿ 68 ಪುರುಷರು ಮತ್ತು 64 ಮಹಿಳೆಯರು ಸೇರಿದ್ದಾರೆ. ದೆಹಲಿಯ ಮುಖ್ಯ ಚುನಾವಣೆಯ ಹಿರಿಯ ಅಧಿಕಾರಿಯೊಬ್ಬರು, "ನೂರು ವರ್ಷ ಮೀರಿದಂತಹ ಕನಿಷ್ಟ 66 ಜನರು ಇಂದು ಮತದಾನ ಕೇಂದ್ರಗಳಲ್ಲಿ ಮತ ಚಲಾಯಿಸಿದ್ದಾರೆ. ಅದರಲ್ಲಿ ಐದು ಜನರು ಅಂಚೆ ಮತಗಳನ್ನು ಚಲಾಯಿಸಿದ್ದಾರೆ. ಒಟ್ಟಾರೆ ಮತದಾನದ ಕುರಿತಾಗಿ ಹೆಚ್ಚಿನ ಅಂಕಿ ಅಂಶಗಳು ಬರಲಿವೆ," ಎಂದಿದ್ದಾರೆ, ವರದಿ ದಿ ಹಿಂದೂ.


ಮತದಾನ ಕೇಂದ್ರದಲ್ಲಿ ಕಾಳಿತಾರರವರು ಒಬ್ಬ ವಿಐಪಿಯಂತೆ ಆಗಿದ್ದರು ಮತ್ತು ಮತ ಚಲಾಯಿಸಲು ಬಂದ ಅನೇಕ ಜನರು ನೂರು ಹನ್ನೊಂದು ವರ್ಷ ಮೀರಿದ ಇವರನ್ನು ನೋಡಲು ಬಯಸುತ್ತಿದ್ದರು‌. ಸ್ವಲ್ಪ ಕಾಲ ಅಲ್ಲಿ ಹೆಚ್ಚಿನ ಜನಸಂದಣಿಯು ಕಂಡು ಬಂದಿತು.


ಕಾಳಿತಾರ ಮಂಡಲ್ (ಚಿತ್ರಕೃಪೆ: ದಿ ವೈರ್ )


ಸಹಾಯಕ ರಿಟರ್ನಿಂಗ್ ಅಧಿಕಾರಿಯಾದ ಹರೀಶ್‌ಕುಮಾರ್ ಮಾತನಾಡಿ,


“ಈ ಕೆಲಸ ಮಾಡಲು ನನಗೆ ತುಂಬಾ ಖುಷಿಯಾಗಿದೆ. ಅವರು ಈ ವಯಸ್ಸಿನಲ್ಲಿಯೂ ಮನೆಯಿಂದ ಆಚೆ ಬಂದು ತಮ್ಮ ಮತವನ್ನು ಚಲಾಯಿಸಿದ್ದಾರೆ. ಇದು ಪ್ರಜಾಪ್ರಭುತ್ವದ ಮತದಾನದ ಹಕ್ಕನ್ನು ಚಲಾಯಿಸುವುದು ಭಾರತೀಯರಾದ ನಮಗೆಲ್ಲರಿಗೂ ಸ್ಪೂರ್ತಿಯಾಗಬೇಕು," ಎಂದರು, ವರದಿ ದಿ ಹಿಂದೂ.

ಚುನಾವಣೆಯಲ್ಲಿ ಮತ ಚಲಾಯಿಸಿದ ಮತ್ತೊರ್ವ ನೂರು ವರ್ಷ ವಯಸ್ಸಿನ ಜುಯಿಬೈದಾ ಖತುನ್ ಇದುವರೆಗೂ ಯಾವುದೇ ಚುನಾವಣೆಯಲ್ಲಿ ಮತ ಚಲಾಯಿಸುವುದನ್ನು ತಪ್ಪಿಸಿಲ್ಲ. ಅವರು ಶನಿವಾರದಂದು ಮಾಟಿಯಾ ಮಹಲ್ ಕ್ಷೇತ್ರದ ತರ್ಕಮನ್ ಗೇಟ್ ಪ್ರದೇಶದ ಬುಲ್ಬುಲೆ ಖಾನಾ ಶಾಲೆಯಲ್ಲಿ ತಮ್ಮ ಮತ ಚಲಾಯಿಸಿದರು.


ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, kannada.ys@yourstory.com ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.
  • +0
Share on
close
  • +0
Share on
close
Share on
close

Our Partner Events

Hustle across India