ದೆಹಲಿಯ ಜಂಕ್‌ಯಾರ್ಡ್‌ ಕೆಫೆಯ ಹಿಂದಿರುವ ಉದ್ಯಮಿಯ ಯಶೋಗಾಥೆ

ಉಮಾಂಗ್‌ ತೇವಾರಿಯವರು ಆರಂಬಿಸಿದ ಬಿಗ್‌ ಫಿಶ್‌ ವೆಂಚರ್ಸ್‌ ದೆಹಲಿಯಲ್ಲಿ ಟೇಬಲ್‌ ರೆಸ್ಟೋರೆಂಟ್, ಕೆಫೆಗಳು ಮತ್ತು ಕ್ಲಬ್‌ಗಳನ್ನು ಪರಿಚಯಿಸಿದೆ. ಇದು ಶೇಕಡಾ 20 ರಿಂದ 30 ರಷ್ಟು ಹೂಡಿಕೆಯ ವಹಿವಾಟನ್ನು ಹೊಂದಿದೆ.

ದೆಹಲಿಯ ಜಂಕ್‌ಯಾರ್ಡ್‌ ಕೆಫೆಯ ಹಿಂದಿರುವ ಉದ್ಯಮಿಯ ಯಶೋಗಾಥೆ

Tuesday October 15, 2019,

3 min Read

ಬಿಗ್‌ ಫಿಶ್‌ ವೆಂಚರ್ಸ್‌ನ ಸಂಸ್ಥಾಪಕರಾದ, ಉಮಾಂಗ್ ತೇವಾರಿಯವರು

ಉಮಾಂಗ್‌ ತೇವಾರಿಯವರು 2000ರಲ್ಲಿ ಲಂಡನ್‌ನಲ್ಲಿ ಎಂಬಿಎ ಓದುತ್ತಿದ್ದಾಗ, ಅನುಭವ ಮತ್ತು ಮಾನ್ಯತೆಗಾಗಿ ಆತಿಥ್ಯ ವಿಭಾಗದಲ್ಲಿ ಅರೆಕಾಲಿಕ ಕೆಲಸ ಮಾಡುತ್ತಿದ್ದರು. ನಿರ್ಮಾಣದ ಹಿನ್ನೆಲೆ ಹೊಂದಿರುವ ಕುಟುಂಬದಿಂದ ಬಂದಿರುವ ಅವರು ಯಾವಾಗಲೂ ಕುಟುಂಬದ ವ್ಯವಹಾರಕ್ಕೆ ಸೇರಲು ಯೋಜಿಸಿದ್ದರು. ಆದಾಗ್ಯೂ, ತನ್ನ ಹುಟ್ಟೂರಾದ ದೆಹಲಿಯಲ್ಲಿ ಸ್ವಂತ ಕೆಫೆ ತೆರೆಯಬೇಕೆಂಬ ಕನಸು ಅವರ ಮಾರ್ಗವನ್ನು ಬದಲಾಯಿಸಿತು.


ತನ್ನ ವಿದ್ಯಾಭ್ಯಾಸವನ್ನು ಮುಗಿಸಿ 2002ರಲ್ಲಿ ದೆಹಲಿಗೆ ಮರಳಿದ ನಂತರ, 43ವರ್ಷ ವಯಸ್ಸಿನ ಅವರು ಆತಿಥ್ಯ ಉದ್ಯಮದಲ್ಲಿ ಬಹಳ ವ್ಯತ್ಯಾಸ ಉಂಟಾಗಿರುವುದನ್ನು ಗಮನಿಸಿದರು.


"ದೆಹಲಿಯಲ್ಲಿ ನನಗೆ ನೆರೆ ಹೊರೆಯ ಬಾರ್ ಅಥವಾ ಕೆಫೆಯ ಸಂಸ್ಕೃತಿ ಕಾಣಲಿಲ್ಲ. ಮೋತಿ ಮಹಲ್‌ ಮತ್ತು ಇತರ ಉತ್ತಮ ಡೈನಿಂಗ್‌ ರೆಸ್ಟೋರೆಂಟ್‌ಗಳಂತಹ ಪ್ರಮುಖ ಸ್ಥಳಗಳಿಗೆ ಹೋಗಲು ಜನರು ಇಷ್ಟಪಡುತ್ತಿದ್ದರು. ಆದ್ದರಿಂದ ನನ್ನ ಅನುಭವಗಳನ್ನು ಸೆಳೆಯಲು ಮತ್ತು ಜನರಿಗೆ ಸಂಪೂರ್ಣ ವಿಭಿನ್ನ ವಾತಾವರಣ ಒದಗಿಸಲು ನಿರ್ಧರಿಸಿದೆ" ಎಂದು ಯುವರ್ ಸ್ಟೋರಿಗೆ ಹೇಳಿದರು.


ಆದರೆ ಅವರ ತಂದೆಗೆ ಮಗನನ್ನು ಕುಟುಂಬದ ವ್ಯವಹಾರದಲ್ಲಿ ಮುಂದುವರೆಸುವ ಯೋಚನೆಯಿತ್ತಾದರೂ, ಉಮಾಂಗ್‌ರವರು ಸ್ವಂತದ್ದೇನಾದರೂ ಮಾಡಲು ಅವರು ಸಂಪೂರ್ಣ ಬೆಂಬಲವನ್ನು ಕೊಟ್ಟರು. ಕೆಫೆಯನ್ನು ಆರಂಭಿಸಲು ತರಬೇತಿ ಪಡೆಯಲು ಉಮಾಂಗ್‌ರವರು ನಿರ್ಧರಿಸಿದರು, ಆದರೆ ಅವರ ತಂದೆ ನಿಜವಾದ ಅನುಭವ ಕೆಲಸದ ಮೇಲೆ ಪರಿಣಾಮ ಬೀರುತ್ತದೆ ಎಂದು ಭರವಸೆ ನೀಡಿದ್ದರು. ಆದ್ದರಿಂದ ಅವರು 2002ರಲ್ಲಿ ತಮ್ಮ ತಂದೆಯಿಂದ 35 ಲಕ್ಷ ರೂ ಪಡೆದುಕೊಂಡು ವಸಂತ್ ವಿಹಾರ್‌ನಲ್ಲಿ ಆಕ್ಸಿಜನ್‌ ಕೆಫೆ ಮತ್ತು ಬಾರ್‌ಅನ್ನು ತೆರೆದರು.


ಆಕ್ಸಿಜನ್‌ ಕೆಫೆ ಬಹು ಬೇಗನೆ ಜನಪ್ರಿಯವಾಯಿತು ಮತ್ತು ದೆಹಲಿಯ ಯುವಜನಾಂಗದವರಿಗೆ ಹ್ಯಾಂಗ್‌ಔಟ್‌ ಮತ್ತು ಪಾರ್ಟಿ ಮಾಡುವ ಸ್ಪಾಟ್‌ ಆಗಿ ಬದಲಾಯಿತು. ಆದಾಗ್ಯೂ, ಹತ್ತಿರದ ವಸತಿ ಪ್ರದೇಶಗಳಿಂದ ಜನಸಂದಣಿ ಮತ್ತು ಶಬ್ಧದ ಕುರಿತಾಗಿ ದೂರುಗಳು ಬಂದಾಗ ಉಮಾಂಗ್‌ರವರಿಗೆ ಹಿನ್ನೆಡೆಯುಂಟಾಗಲು ಪ್ರಾರಂಭವಾಯಿತು.


"ನನ್ನ ಕೆಫೆ ವಾಣಿಜ್ಯ ಕಟ್ಟಡದಲ್ಲಿದೆ. ಆದರೆ, ನೆರೆಹೊರೆಯ ಜನರು ವಿವಿಧ ಕಾರಣಗಳಿಗಾಗಿ ದೂರು ನೀಡಲು ಪ್ರಾರಂಭಿಸಿದರು. ನನ್ನ ವ್ಯವಹಾರ ಉತ್ತಮವಾಗಿ ನಡೆಯುತ್ತಿತ್ತು, ಆದರೆ ನಾನದನ್ನು ಸ್ಥಗಿತಗೊಳಿಸಲು ಒತ್ತಡ ಹೇರಲಾಯಿತು" ಎಂದು ಉಮಾಂಗ್‌ರವರು ಹೇಳುತ್ತಾರೆ.

ನಂತರ ನಾಲ್ಕೈದು ವರ್ಷದವರೆಗೆ ಕುಟುಂಬದ ವ್ಯವಹಾರದಲ್ಲಿ ಉಮಾಂಗ್‌ರವರು ಅಲ್ಪ ತೃಪ್ತಿಯೊಂದಿಗೆ ಕೆಲಸ ಮಾಡಿದರು. ಅವರು ಹೀಗೆ ಹೇಳುತ್ತಾರೆ, "ನಿರ್ಮಾಣ ವ್ಯವಹಾರದಲ್ಲಿ ಯಾವುದೇ ಸೃಜನಶೀಲತೆಯಿರಲಿಲ್ಲ, ಇದು 9-5 ರ ಏಕತಾನತೆಯ ಕೆಲಸವಾಗಿತ್ತು, ಅದನ್ನು ಮಾಡಲು ನನಗೆ ಎಂದಿಗೂ ಇಷ್ಟವಿರಲಿಲ್ಲ. ನನ್ನ ಕೆಲಸದಲ್ಲಿ ನನಗೆ ಉತ್ಸಾಹವಿರಬೇಕಿತ್ತು ಅದಕ್ಕಾಗಿ ಕೆಲಸ ಮಾಡಲು ಪ್ರಾರಂಭಿಸಿದೆ."


2009 ರಲ್ಲಿ, ಅವರು ತಮ್ಮ ಕಳೆದುಹೋದ ಶಕ್ತಿಯನ್ನು ಮರಳಿ ಪಡೆದರು ಮತ್ತು ಇನ್ನೂ ಹೆಚ್ಚಿನ ಶಕ್ತಿಯೊಂದಿಗೆ ಆತಿಥ್ಯ ವಿಭಾಗವನ್ನು ಮತ್ತೆ ಗುರಿಯಾಗಿಸಿ ಕೆಲಸ ಮಾಡಲು ನಿರ್ಧರಿಸಿದರು. ಅವರು ದೆಹಲಿಯ ಹೌಜ್ ಖಾಸ್ ವಿಲೇಜ್‌ನಲ್ಲಿ ಔಟ್‌ ಆಫ್‌ ದಿ ಬಾಕ್ಸ್‌ ಕೆಫೆ ತೆರೆದರು


ಔಟ್‌ ಆಫ್‌ ದಿ ಬಾಕ್ಸ್‌ನ ಶಾಖೆಗಳು

ದೆಹಲಿಯಲ್ಲಿ ಸ್ಥಳೀಯವಾಗಿರುವ ಹೋಲ್‌ಸೇಲ್‌ ಬಾರ್


ಔಟ್ ಆಫ್‌ ದಿ ಬಾಕ್ಸ್‌ ಉದ್ಘಾಟನೆಯಾದ ನಂತರ, ಎರಡು ವರ್ಷದ ಅವಧಿಯಲ್ಲಿ, ಉಮಾಂಗ್‌ರವರು ದೆಹಲಿ ಎನ್‌ಸಿಆರ್‌ನಾದ್ಯಂತ ರಾಸ್‌, ಜಂಕ್‌ಯಾರ್ಡ್‌ ಕೆಫೆ, ಓಎಮ್‌ಜಿ, ಸ್ಕೂಟರ್, ಕೀ, ಮತ್ತು ದಿ ವಾಲ್ಟ್‌ ಸೇರಿ ಇನ್ನೂ ಐದು ಶಾಖೆ ತೆರೆದರು. ವಿಶಾಲ ಪ್ರಮಾಣದ ವಿಸ್ತರಣೆ ಕುರಿತು ಮಾತನಾಡುತ್ತಾ, ಆ ಸಮಯದಲ್ಲಿ ಆತಿಥ್ಯ ವ್ಯವಹಾರದಲ್ಲಿ ಅಷ್ಟೊಂದು ಜನಜಂಗುಳಿಯಿರಲಿಲ್ಲ ಎಂದು ಉಮಾಂಗ್‌ರವರು ಹೇಳುತ್ತಾರೆ. "ನಾನು ಇದ್ದಕ್ಕಿದ್ದಂತೆ ಉದ್ಯಮವನ್ನು ವಿಸ್ತರಿಸುವ ಬಗ್ಗೆ ಯೋಚಿಸಿದ್ದೇನೆ. ನನ್ನ ಸಾಹಸೋದ್ಯಮಕ್ಕೆ ಕಾಲಿಡುವ ಮೊದಲ ದಿನದಿಂದ, ನಾನು ಒಂದು ವಿಷಯಕ್ಕೆ ಅಂಟಿಕೊಂಡು ಕೂರುವುದಿಲ್ಲ ಎಂಬುದನ್ನು ತಿಳಿದಿದ್ದೆ. ನಾನದನ್ನು ಬಹು-ಕ್ರಿಯಾತ್ಮಕಗೊಳಿಸಬೇಕಾಗಿದೆ. ಆದ್ದರಿಂದ ನಾನು ಪಬ್‌, ಕೆಫೆ ಮತ್ತು ಉತ್ತಮ ಡೈನಿಂಗ್‌ ಪ್ರದೇಶದ ಕುರಿತು ಯೋಜನೆ ರೂಪಿಸುವ ಕೆಲಸ ಮಾಡಲು ಪ್ರಾರಂಭಿಸಿದೆ. ಕೇವಲ ಯುವ ಜನಾಂಗವನ್ನು ಗುರಿಯಾಗಿಸುವುದರ ಬಗ್ಗೆ ಮಾತ್ರವಲ್ಲ, ಪ್ಯಾಮಿಲಿ ಮತ್ತು ಕಾಲೇಜು ವಿದ್ಯಾರ್ಥಿಗಳನ್ನೂ ಸಹ ಆಕರ್ಷಿಸುವ ಯೋಜನೆಯಾಗಿತ್ತು. ಅದು ಎಲ್ಲರಿಗೂ ಒಂದು ಸ್ಥಳವಾಗಿರಬೇಕು ಎಂಬುದು ನನ್ನ ಆಸೆಯಾಗಿತ್ತು."


ಇಂದು ಬಿಗ್‌ ಫಿಶ್‌ ವೆಂಚರ್ಸ್‌ ತಮ್ಮ ಹೂಡಿಕೆಯ ಶೇಕಡಾ 15-20 ರಷ್ಟು ವಹಿವಾಟನ್ನು ಸಿಪಿ ಲೋಕಲ್‌ನಲ್ಲಿ ಸ್ಥಿರ ಬೆಳವಣಿಗೆಯೊಂದಿಗೆ ದಾಖಲಿಸಿದೆ. ಇದು ಗುರ್ಗಾಂವ್, ಸೆಕ್ಟರ್-29ನಲ್ಲಿ ಪ್ರಾಂಚೈಸಿಯನ್ನು ಹೊಂದಿದೆ ಮತ್ತು ಗರಂ ಧರಂನೊಂದಿಗೆ ಚಂಡೀಘರ್, ಲುದಿಯಾನಾ, ಮೊಹಾಲಿ, ನೊಯ್ಡಾ ಮತ್ತು ಫರಿದಾಬಾದ್‌ನಲ್ಲಿ ಪ್ರಾಂಚೈಸಿ ಮಾಡಲಾಗಿದೆ. ಚಂಡೀಘರ, ಲುದಿಯಾನಾ ಮತ್ತು ಫರೀದಾಬಾದ್‌ನಲ್ಲಿರುವ ಜಂಕ್‌ಯಾರ್ಡ್‌ ಕೆಫೆಯ ಯೋಜನೆಗಳನ್ನು ಸಹ ಅಂತಿಮಗೊಳಿಸಲಾಗಿದೆ.

ಮಾರುಕಟ್ಟೆಯ ಗಾತ್ರ ಮತ್ತು ಸ್ಪರ್ಧೆ

"ಇಂದು ವ್ಯವಹಾರದ ಬಗ್ಗೆ ತಿಳಿದವರು ಅಥವಾ ತಿಳಿಯದೇ ಇದ್ದವರೂ ಕೆಫೆ ಅಥವಾ ಬಾರ್‌ ಅನ್ನು ತೆರೆಯುತ್ತಾರೆ. ನಾನು ಉದ್ಯಮಕ್ಕೆ ಕಾಲಿಟ್ಟಾಗ ವ್ಯವಹಾರವನ್ನು ಹೇಗೆ ನಡೆಸಬೇಕೆಂದು ತಿಳಿದವರು ಬೆರಳೆಣಿಕೆಯಷ್ಟುದ್ದರು ಮತ್ತು ಆರೋಗ್ಯಕರ ಸ್ಪರ್ಧೆಯಿತ್ತು," ಎಂದು ಹೇಳುತ್ತಾ ಉಮಾಂಗ್‌ರವರು, "ಮಾರುಕಟ್ಟೆಗೆ ಪ್ರವೇಶಿಸುವ ಅನೇಕ ಹೊಸ ಸ್ಪರ್ಧಿಗಳಿಗೆ ತಾಳ್ಮೆಯಿಲ್ಲ, ತ್ವರಿತ ಯಶಸ್ಸನ್ನು ಗಳಿಸಲು ಅವರು ಮಾರ್ಕೆಟಿಂಗ್ ಗಿಮಿಕ್‌ ಮತ್ತು ಶಾರ್ಟ್‌ ಕಟ್‌ಗಳನ್ನು ಬಳಸುತ್ತಾರೆ, ಅದು ವಿಫಲಗೊಳ್ಳುತ್ತದೆ. ಅದಕ್ಕಾಗಿಯೇ ಅನೇಕ ಹೊಸ ಪಬ್‌ಗಳು ಮತ್ತು ರೆಸ್ಟೋರೆಂಟ್‌ಗಳು ತೆರೆದ ಕೂಡಲೇ ಮುಚ್ಚಲ್ಪಡುತ್ತದೆ" ಎಂದು ಹೇಳುತ್ತಾರೆ


ಸರ್ಕಾರದ ಕಟ್ಟುನಿಟ್ಟಿನ ಕಾನೂನು ಮತ್ತು ನೀತಿಗಳು ಈ ವಿಭಾಗಕ್ಕೆ ಪ್ರವೇಶಿಸುವುದನ್ನು ತಡೆಯುವುದರಿಂದ ಮಾರುಕಟ್ಟೆಯ ಗಾತ್ರವು ನಿರ್ಭಂಧಿಸಲ್ಪಟ್ಟಿದೆ, ಎಂದು ಅವರು ಹೇಳುತ್ತಾರೆ.


ಎಲ್‌ಐವಿ, ದೆಹಲಿ

ದೊಡ್ಡ ಸವಾಲು

ಸವಾಲುಗಳ ಬಗ್ಗೆ ಮಾತನಾಡುತ್ತಾ, ಪರವಾನಗಿ ಪ್ರಕ್ರಿಯೆ ಬಹಳ ಬೇಸರದ ಸಂಗತಿಯಾಗಿದೆ ಎಂದು ಉಮಾಂಗ್‌ರವರು ಹೇಳುತ್ತಾರೆ. "ಮದ್ಯದ ಪರವಾನಗಿ ಮಾತ್ರವಲ್ಲ, ಫೈರ್‌ ಎನ್‌ಓಸಿ ಪಡೆಯುವುದೂ ಒಂದು ರೀತಿಯ ಹೋರಾಟವಾಗಿದೆ, ಮತ್ತು ಈ ದಿನಗಳಲ್ಲಿ ಜನರು ಆತಿಥ್ಯ ಉದ್ಯಮಕ್ಕೆ ಕಾಲಿಡುವುದನ್ನು ತಡೆಯಲು ಇದು ಪ್ರಾಥಮಿಕ ಕಾರಣವಾಗಿದೆ. ನಮಗೆ ಹೊರಾಂಗಣ ಮತ್ತು ಟೆರೇಸ್‌ ಆಸನಗಳಿಗೆ ಅನುಮತಿ ಬೇಕು. ಇದಕ್ಕೆ ವ್ಯತಿರಿಕ್ತವಾಗಿ, ಚಾಯ್‌ವಾಲಾಗಳಿಗೆ ರಸ್ತೆ ಬದಿಗಳಲ್ಲಿ ಚಹಾ ತಯಾರಿಸಲು ಮತ್ತು ಮಾರಾಟ ಮಾಡಲು ಯಾವುದೇ ಪರವಾನಗಿ ಅಗತ್ಯವಿಲ್ಲ" ಎಂಬುದು ಅವರ ಅಭಿಪ್ರಾಯವಾಗಿದೆ.


ರೆಸ್ಟೋರೆಂಟ್‌ಗಳಲ್ಲಿ ಶೀಶಾ ಒದಗಿಸಲು ರೂಪಿಸಲಾದ ಕಾನೂನುಗಳ ಕುರಿತಾಗಿಯೂ ಹೇಳಿದ್ದಾರೆ, ಎಲ್ಲ ರೀತಿಯ ಕಾನೂನು ಮತ್ತು ನಿಯಮಗಳಲ್ಲಿ ಅವರು ತೊಂದರೆಗೊಳಗಾಗಿರುವುದನ್ನು ಹೇಳಿದರು.

ಮುಂದಿನ ದಾರಿ

ಗುರ್ಗಾಂನ ಗಾರ್ಡನ್‌ ಗ್ಯಾಲರಿಯಾದಲ್ಲಿ ಅಂದಾಜು 60,000 ಚದರ ಅಡಿ ವಿಸ್ತೀರ್ಣದಲ್ಲಿ ಏಷ್ಯಾದ ಅತಿದೊಡ್ಡ ರೆಸ್ಟೋರೆಂಟ್ ಒಂದನ್ನು ತೆರೆಯಲು ನಾನು ಯೋಜಿಸುತ್ತಿದ್ದೇನೆ ಎಂದು ಉಮಾಂಗ್‌ರವರು ಹಂಚಿಕೊಂಡಿದ್ದಾರೆ. ಅವರು ತಮ್ಮ ಬ್ರ್ಯಾಂಡ್‌ಗಳನ್ನು ಪ್ಯಾನ್‌-ಇಂಡಿಯಾವಾಗಿಸಲು ಯೋಜಿಸುತ್ತಿದ್ದಾರೆ, ಅದೇ ಸಮಯದಲ್ಲಿ ಫ್ರಾಂಚೈಸಿಗಳನ್ನು ಸಹ ನೀಡುತ್ತಾರೆ.