ಆವೃತ್ತಿಗಳು
Kannada

ಎಂಐಟಿಯಿಂದ ಹೊರಬಿದ್ದು, ಆನ್ ಡಿಮ್ಯಾಂಡ್ ಸೇವಾ ಉದ್ಯಮ ಫಿಕ್ಸ್​​​ಮಾಸ್ಟರ್ಸ್ ಆರಂಭಿಸಿದರು

ಟೀಮ್​​ ವೈ.ಎಸ್​​.ಕನ್ನಡ

25th Nov 2015
Add to
Shares
1
Comments
Share This
Add to
Shares
1
Comments
Share

ಇದು ಆನ್​​ಡಿಮ್ಯಾಂಡ್ ಸೇವಾ ಉದ್ಯಮಗಳು ಬೆಳೆಯುತ್ತಿರುವ ಕಾಲ. ವಿಶ್ವಾದ್ಯಂತ ಆನ್​​ಡಿಮ್ಯಾಂಡ್ ಸೇವೆಗಳಿಗೆ ಹೆಚ್ಚು ಬೇಡಿಕೆಯಿದೆ. ಈಗಾಗಲೇ ಅನೇಕ ಕಂಪನಿಗಳು ಈ ಹಾದಿಯಲ್ಲಿ ಯಶಸ್ವಿಯಾಗಿವೆ. ಹಲವು ಸ್ಟಾರ್ಟ್ಅಪ್ ಕಂಪನಿಗಳು ಈ ಹಂತದಲ್ಲಿ ಸಫಲವಾಗಿವೆ. ಡೂರ್ಮಿಂಟ್, ಹೌಸ್ಜಾಯ್, ಅರ್ಬನ್ ಕ್ಲ್ಯಾಪ್ ಮತ್ತು ಕ್ವಿಕ್ ಮುಂತಾದ ಆನ್​​​ಡಿಮ್ಯಾಂಡ್ ಸೇವಾ ಕಂಪನಿಗಳು ಈಗಾಗಲೇ ತಮ್ಮ ವಹಿವಾಟನ್ನು ನಡೆಸಿವೆ. ಮನೆಗಳಿಗೆ ಬೇಕಾದ ಸೇವೆಯನ್ನು ಒದಗಿಸುವಲ್ಲಿ ಈ ಆನ್​​ಡಿಮ್ಯಾಂಡ್ ಸ್ಟಾರ್ಟ್ಅಪ್ ಉದ್ಯಮಗಳು ಸಹಾಯಕವಾಗಿವೆ.

ಇವತ್ತಿನ ಬ್ಯೂಸಿ ಬದುಕಿನಲ್ಲಿ ಜನಸಾಮಾನ್ಯಗರಿಗೆ ಯಾವುದಕ್ಕೂ ಸಮಯವಿರುವುದಿಲ್ಲ. ತಮ್ಮ ಮನೆಗೆಲಸ ಮಾಡಿಕೊಳ್ಳಲು ಅವರಿಗೆ ಸಮಯವಿರುವುದಿಲ್ಲ. ಸಣ್ಣ-ಸಣ್ಣ ಕೆಲಸಗಳಿಗೂ ಒಂದು ದಿನ ರಜೆ ಹಾಕುವಂತಹ ಪ್ರಮಯ ಒದಗಿ ಬರುತ್ತದೆ. ಮನೆಯ ಯಾವುದೇ ಕೆಲಸವಿರಲಿ ಅಂತಹ ಕೆಲಸ ಮಾಡುವವರನ್ನು ಹುಡುಕುವುದೆ ಒಂದು ತಲೆನೋವಿನ ಸಂಗತಿ. ಆದರೆ ಈ ಆನ್​​ಡಿಮ್ಯಾಂಡ್ ಉದ್ಯಮಗಳು ಎಲ್ಲ ರೀತಿಯ ಸೇವೆಯನ್ನು ಒದಗಿಸುತ್ತವೆ. ಒಂದು ಮನೆ ಅಥವಾ ಕಚೇರಿಗೆ ಅವಶ್ಯಕವಾದ ಎಲ್ಲ ಸಮಸ್ಯೆಗಳಿಗೆ ಉತ್ತರ ಈ ಆನ್​​ಡಿಮ್ಯಾಂಡ್ ಸೇವಾ ಉದ್ಯಮಗಳು.

image


ಜನಸಾಮಾನ್ಯರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸ್ಟಾರ್ಟ್ಅಪ್ ಕಂಪನಿ ಫಿಕ್ಸ್​​ಮಾಸ್ಟರ್ಸ್ ಬಹುತೇಕ ಯಶಸ್ವಿಯಾಗಿದೆ. ಒಂದು ಕರೆಗೆ ಸ್ಪಂದಿಸುವ ಇವರು, ಮನೆ ಇರಲಿ, ಕಚೇರಿ ಇರಲಿ, ಅಲ್ಲಿ ಕಂಡುಬರುವ ಸಮಸ್ಯೆಗಳ ಎಲ್ಲದರ ರಿಪೇರಿ ಮತ್ತು ಮೆಂಟೆನನ್ಸ್ ನೋಡಿಕೊಳ್ತಾರೆ. ಇದು ಕೇವಲ ನಾಮಕವಾಸ್ತೇ ಸೇವೆ ನೀಡುವುದಿಲ್ಲ. ಉತ್ತಮ ಗುಣಮಟ್ಟದ, ಆಯಾ ಕ್ಷೇತ್ರದಲ್ಲಿ ಮಾನ್ಯತೆ ಪಡೆದಿರುವ ಅನುಭವಿಗಳಿಂದ ಮನೆ ಮತ್ತು ಕಚೇರಿಗೆ ಸೇವೆ ಒದಗಿಸುತ್ತಾರೆ. ಫಿಕ್ಸ್​​ಮಾಸ್ಟರ್ಸ್ ತಂಡದವರೇ ಹೇಳುವಂತೆ ಅವರು ಪರಿಣಿತ, ಪ್ರಮಾಣಿತ ವ್ಯಕ್ತಿಗಳಿಂದ ಪ್ರಾಮಾಣಿಕ ಸೇವೆ ನೀಡುವುದು ಅವರ ಗುರಿಯಾಗಿದೆಯಂತೆ. ಸೇವೆಯ ಪ್ರತೀಕವಾಗಿ ನಾವೀದ್ದೇವೆ. ಅದಕ್ಕಾಗಿ ಉತ್ತಮ ಸೇವೆ ನೀಡುವವರೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದೇವೆ. ಉತ್ತಮ ಕೆಲಸ ಗ್ರಾಹಕನ ನಂಬಿಕೆ ಕಾಯ್ದುಕೊಳ್ಳುವುದು ಫಿಕ್ಸ್​​ಮಾಸ್ಟರ್ಸ್ ಮುಖ್ಯ ಧ್ಯೇಯವಾಗಿದೆ ಎನ್ನುತ್ತೇ ಈ ತಂಡ. ಗ್ರಾಹಕನಿಗೆ ವಿನೂತನ ಸೇವೆಯ ಅನುಭವ ನೀಡುವುದು ಫಿಕ್ಸ್​​ಮಾಸ್ಟರ್ಸ್ ಗುರಿಯಾಗಿದೆ.

ಆ್ಯಪ್​​ನಲ್ಲೇ ಸೇವೆ ಲಭ್ಯ

ಗ್ರಾಹಕನನ್ನು ಮುಟ್ಟುವ ಸಲುವಾಗಿ ಫಿಕ್ಸ್​​ಮಾಸ್ಟರ್ಸ್ ಎಲ್ಲ ರೀತಿಯಿಂದಲೂ ಲಭ್ಯವಿದೆ. ಮೊಬೈಲ್ ಆ್ಯಪ್, ವೆಬ್​​​ಸೈಟ್ ಅಥವಾ ಫೋನ್​​ನಿಂದಲೂ ಗ್ರಾಹಕರ ಈ ಸೇವೆಯನ್ನು ಪಡೆಯಬಹುದು. ಗ್ರಾಹಕನ ಎಲ್ಲ ಸಮಸ್ಯೆಗಳಿಗೂ ಫಿಕ್ಸ್​​​ಮಾಸ್ಟರ್ಸ್ ಪರಿಹಾರ ಒದಗಿಸಲಿದೆ. ಕೆಲವೇ ಕ್ಷಣಗಳಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ನೀಡುವಂತಹ ವ್ಯವಸ್ಥೆಯನ್ನು ಇವರು ಮಾಡುತ್ತಾರೆ. ಗ್ರಾಹಕನ ಅನುಕೂಲಕ್ಕೆ ತಕ್ಕಂತೆ ಸೇವೆ ನೀಡಲಾಗುತ್ತದೆ. ಗ್ರಾಹಕನಿಗೂ ಹೆಚ್ಚು ಹೊರೆಯಾಗದಂತೆ ಈ ಕಂಪನಿ ಕೆಲಸಮಾಡುತ್ತದೆ. ಕಂಪನಿ ಪಡೆಯುವ ಹಣದಲ್ಲಿ 80 ಪ್ರತಿಶತ ಹಣವನ್ನು ಪರಿಣಿತ ಕೆಲಸಗಾರನಿಗೆ ನೀಡುತ್ತದೆ. ಉಳಿದ 20 ಪ್ರತಿಶತ ಹಣವನ್ನು ಫಿಕ್ಸ್​​ಮಾಸ್ಟರ್ಸ್ ಸೇವಾ ಕಂಪನಿ ತನಗಾಗಿ ಉಳಿಸಿಕೊಳ್ಳುತ್ತೆ.

ಫಿಕ್ಸ್​​​ಮಾಸ್ಟರ್ಸ್ ಯಶೋಗಾಥೆ

ಮ್ಯಾಸ್ಸಚುಸೆಟ್ಸ್ ಇನ್ಸ್​​​ಟ್ಯೂಟ್ ಆಫ್ ಟೆಕ್ನಾಲಾಜಿಯಿಂದ ಅರ್ಧಕ್ಕೆ ಹೊರನಡೆದ ವಿಕ್ಸಿತ್ ಅರೋರ ಮತ್ತು ನ್ಯೂಯಾರ್ಕ್​ನ ಹ್ಯಾಕರ್ ಶಾಲೆಯಿಂದ ಪದವಿ ಪಡೆದ ಭೂಷಣ್ ಲೋಧ ಇವರಿಬ್ಬರು ಕ್ಲಾಸಿಫೈಡ್ಸ್ ವಿಭಾಗದಲ್ಲಿ ಕೆಲಸ ಮಾಡುವಾಗ ಜೊತೆಗೂಡಿದ್ರು. ಭೂಷಣ್​ ಕ್ಲಾಸಿಫೈಡ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ರು. ಇಬ್ಬರಿಗೂ ಕಾಲೇಜು ದಿನಗಳಲ್ಲೇ ಇಂತಹ ಒಂದು ಯೋಚನೆ ತಲೆಯಲ್ಲಿ ಕೊರೆಯುತ್ತಿತ್ತು. ಕಾಲೇಜಿನಲ್ಲಿ ನೋಡಿದ ಜಾಹೀರಾತುಗಳ ಬಗ್ಗೆ ಇವರು ಹೆಚ್ಚು ಆಸಕ್ತಿ ತೋರಿಸಿದ್ರು. ಮೂರು ತಿಂಗಳಲ್ಲೇ ಒಂದು ಕಂಪನಿ ಆರಂಭಿಸುವ ವಿಚಾರ ಮಾಡಿದ್ರು. ಆದರೆ ಮಾರುಕಟ್ಟೆ ತುಂಬಾ ಸೀಮಿತವಾಗಿರುವುದರಿಂದ ಈ ಯೋಚನೆಯನ್ನು ಕೈ ಬಿಟ್ರು.

ಮತ್ತೊಂದೆಡೆ ವೈಭವ್ ದೊಮ್ಕುಂದ್ವಾರ್ ಫಿಕ್ಸ್​​ಮಾಸ್ಟರ್ಸ್ ಸಂಸ್ಥೆಯ ಹೆಸರನ್ನು ಎರಡು ವರ್ಷದ ಹಿಂದೆ ನೋಂದಾಯಿಸಿದ್ರು. ರಿಪೇರಿ ಮತ್ತು ಮೆಂಟೆನನ್ಸ್ ಮಾಡುವ ಕಂಪನಿ ತೆರೆದಿದ್ರು. 16 ವರ್ಷ ಕ್ಯಾಲಿಫೊರ್ನಿಯಾ ವಿಶ್ವವಿದ್ಯಾಲಯದಲ್ಲಿ ಸೇವೆಸಲ್ಲಿಸಿದ ವೈಭವ್, ಅಮೇರಿಕಾಗೆ ಹೋಲಿಸಿದ್ರೆ, ಭಾರತದಲ್ಲಿ ಕೈಗಾರಿಕ ಕ್ಷೇತ್ರ ಹರಿದು ಹಂಚಿಹೋಗಿರುವುದನ್ನು ಗಮನಿಸಿದ್ರು. ಹಾಗಾಗಿ ಇತ್ತ ತಮ್ಮ ಆಸಕ್ತಿಯನ್ನು ತೋರಿದ್ರು..

ಫಿಕ್ಸ್​​ಮಾಸ್ಟರ್ಸ್ ದಾಪುಗಾಲು

" 45 ದಿನಗಳ ಕಾಲ ಗ್ರಾಹಕರು, ಹಾರ್ಡವೇರ್ ಅಂಗಡಿ ಮತ್ತು ಸೇವೆ ಒದಗಿಸುವವರು ಮತ್ತು ಇನ್ನಿತರರನ್ನು ಸಂದರ್ಶನದ ನಂತರ ನಾವು ಈ ಕಂಪನಿಯನ್ನು ಆರಂಭಿಸುವ ನಿರ್ಧಾರಕ್ಕೆ ಬಂದ್ವು. ಕೇವಲ ಕಂಪನಿ ಆರಂಭಿಸುವುದು ಮಾತ್ರ ನಮ್ಮ ಉದ್ದೇಶವಾಗಿರಲಿಲ್ಲ. ಕಂಪನಿ ಆರಂಭದ ಜೊತೆ-ಜೊತೆಗೆ ಒಂದು ಕಡೆ ಗ್ರಾಹಕರ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡುವಂತ ಭರವಸೆಯ ಅನುಭವ ಗ್ರಾಹಕರಿಗೆ ಕೊಡಬೇಕು ಎಂಬುವುದು ನಮ್ಮ ಗುರಿಯಾಗಿತ್ತು. ." ಎಂತಾರೆ ವಿಕ್ಸಿತ್.

ಬಹುಬೇಗ ಅಪರೇಷನ್ ತಂಡವೊಂದನ್ನು ತಮ್ಮ ಕಂಪನಿಯಲ್ಲಿ ಸೇರಿಸಿಕೊಂಡ್ರು. ತಮಗೆ ಪರಿಚಯವಿದ್ದವರ ಸಹಾಯದ ಮೇರೆಗೆ ಎರಡು ಖಾಯಂ ಅಪರೇಷನ್ ತಂಡ ಮತ್ತೆರಡು ಪಾರ್ಟ್ ಟೈಮ್ ತಂಡವನ್ನು ಕಟ್ಟಿದ್ರು. ಗ್ರಾಹಕರ ಅಪ್ಪಣೆಯಂತೆ ಸಖತ್ ಸೇವೆ ಕೂಡ ಒದಗಿಸಿದ್ರು. ಆರಂಭದಲ್ಲಿ ಎಲ್ಲವೂ ಸಖತ್ ರೋಮಾಂಚನದಿಂದ ಕೂಡಿತ್ತಂತೆ.

"ಇಷ್ಟರಲ್ಲೇ ನಾವು ಹೊಸ ಫೋನ್ ನಂಬರ್ ತೆಗೆದುಕೊಂಡಿದ್ವಿ. 7030070400 ಆ ನಂಬರ್ . ಆಗಲೇ ಗೊತ್ತಾಗಿದ್ದು ಒಂದು ಕಂಪನಿ ನಡೆಸಬೇಕಾದ್ರೆ, ಫೋನ್ ನಂಬರ್ ಕೂಡ ಅತ್ಯಂತ ಮುಖ್ಯ ಎಂದು. ಜನ ನಮ್ಮೊಂದಿಗೆ ಮಾತನಾಡಲು ತವಕಿಸುತ್ತಿದ್ರು. ಆರಂಭದಲ್ಲಿ ನಾವು ಪಶ್ಚಿಮ ಪುಣೆಯಿಂದ ಕೆಲಸ ಆರಂಭಿಸಿದ್ವು. ಮೊದಲ ವಾರ 13 ಕಡೆ ನಾವು ಸೇವೆ ಒದಗಿಸಿದ್ವಿ" ಎಂತಾರೆ ವಿಕ್ಸಿತ್

ಫಿಕ್ಸ್​​ಮಾಸ್ಟರ್ಸ್ ಸದ್ಯ ಪುಣೆಯಲ್ಲಿ ಮಾತ್ರ ಲಭ್ಯವಿದೆ. ಶುರುವಾದ ಐದು ತಿಂಗಳಲ್ಲೇ 5 ಸಾವಿರ ಗ್ರಾಹಕರಿಗೆ ಸೇವೆ ಒದಗಿಸಿದೆ. ಹಲವು ರೀತಿಯ ಗ್ರಾಹಕರಿಗೆ ಸೇವೆಯನ್ನು ನೀಡಿದ ತೃಪ್ತಿ ಅವರಿಗಿದೆ.

ದಿನದಿಂದ ದಿನಕ್ಕೆ ಉತ್ತಮ ಸೇವೆ ನೀಡುವುದು ಸವಾಲಿನ ಕೆಲಸವಾಗಿತ್ತು. ಉತ್ತಮ ನಂಬಿಕಸ್ಥ ಕೆಲಸ ಮಾಡುವವರನ್ನು ಇಟ್ಟಿಕೊಳ್ಳುವುದು ಕೂಡ ¸ಸವಾಲಿನಿಂದ ಕೂಡಿತ್ತು. ಉತ್ತಮ ಕೆಲಸಗಾರರನ್ನು ಫಿಕ್ಸ್​​ಮಾಸ್ಟರ್ಸ್ ಹೊಂದಿದೆ. ಜನರ ಬೇಡಿಕೆಯಂತೆ ತಂಡವನ್ನು ಕಟ್ಟಿದ್ದು, ಕೆಲಸಗಾರರಿಗೂ ಕೈ ತುಂಬಾ ಕೆಲಸ ನೀಡುವ ಜೊತೆಗೆ ಗ್ರಾಹಕರಿಗೆ ಒಳ್ಳೆ ಸೇವೆ ಒದಗಿಸುತ್ತಿದೆ.

"ಬೇರೆ ಆನ್ ಡಿಮ್ಯಾಂಡ್ ಸೇವಾ ಕಂಪನಿಗಳಿಗೆ ಹೋಲಿಸಿದ್ರೆ, ನಾವು ತುಂಬಾ ವಿಭಿನ್ನ ಸೇವೆಯ ಪ್ರತೀಕ ಫಿಕ್ಸ್​​ಮಾಸ್ಟರ್ಸ್. ನಾವು ಕೇವಲ ರಿಪೇರಿ ಮಾಡುವುದಿಲ್ಲ. ಜೊತೆಗೆ ಮೆಂಟೆನನ್ಸ್ ಕೂಡ ಮಾಡ್ತಿವಿ. ಜನರ ನಂಬಿಕೆ ಉಳಿಸಿಕೊಳ್ಳುವುದು ನಮ್ಮ ಉದ್ದೇಶವಾಗಿದೆ. ಬೇರೆ ಆನ್ ಡಿಮ್ಯಾಂಡ್ ಕಂಪನಿಯ ಸೇವೆಯ ಅನುಭವ ಅನುಭವಿಸಿದವರಿಗೆ ಗೊತ್ತು. ಜಸ್ಟ್​​ಡಯಲ್ ಕೇವಲ ಸೇವೆ ನೀಡುವವರ ಸಂಪರ್ಕ ಒದಗಿಸುತ್ತೆ.. ಅವರ ಸೇವೆ ಹೇಗಿತ್ತು ಎಂಬ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ’.. ಎಂಬುವುದು ವಿಕ್ಸಿತ್ ಅವರ ಅನಿಸಿಕೆ

"ನಾವು ಕೇವಲ ಒಂದ್ಸಲ ಕೆಲಸ ಮಾಡಿ ಕೈ ತೊಳೆದುಕೊಳ್ಳುವುದಿಲ್ಲ. ಶಾಶ್ವತ ಪರಿಹಾರ ನೀಡುವುದು ನಮ್ಮ ಗುರಿ. ಕೇವಲ ರಿಪೇರಿ ಮಡಲು ನಾವು ಸೀಮಿತವಾಗಿಲ್ಲ. ಅದಕ್ಕೆ ಶಾಶ್ವತ ಪರಿಹಾರ ನೀಡುತ್ತೇವೆ. ಏನಾದ್ರು ತಪ್ಪಾದ್ರು, ಗ್ರಾಹಕನ ಇಷ್ಟದಂತೆ ನಾವು ಅದನ್ನು ಸರಿಪಡಿಸಿಕೊಡುತ್ತೇವೆ. ಹಾಗಾಗಿಯೇ ಈ ಉದ್ಯಮದಲ್ಲಿ ನಾವು ಉತ್ತಮ ಸೇವೆ ನೀಡುತ್ತಾ ಜನರಿಗೆ ಹತ್ತಿರವಾಗಿದ್ದೇವೆ ಎಂಬುವುದು ವಿಕ್ಸಿತ್ ಅವರ ನಂಬಿಕೆ. ಹಾಗಾಗಿಯೇ ಫಿಕ್ಸ್ ಮಾಸ್ಟರ್ ಬಹುಬೇಗ ಆನ್ ಡಿಮ್ಯಾಂಡ್ ಸೇವಾ ಕ್ಷೇತ್ರದಲ್ಲಿ ತನ್ನ ಛಾಪನ್ನು ಮೂಡಿಸಿದೆ.

ಲೇಖಕರು: ಸಿಂಧೂ ಕಶ್ಯಪ್​​​​

ಅನುವಾದಕರು: ಎನ್. ಎಸ್. ರವಿ

Add to
Shares
1
Comments
Share This
Add to
Shares
1
Comments
Share
Report an issue
Authors

Related Tags