ಭಾರತ ಡಿಜಿಟಲ್‌ ಆಗುವುದಕ್ಕೆ ಸಾಮಾನ್ಯ ಮನುಷ್ಯನ ಭಾಗವಹಿಸುವಿಕೆ ತುಂಬಾ ಮುಖ್ಯ: ರವಿ ಶಂಕರ ಪ್ರಸಾದ (ಯುವರ್‌ಸ್ಟೋರಿ ಡಿಜಿಟಲ್‌ ಇಂಡಿಯಾ ಟೌನ್‌ಹಾಲ್‌)

ಭಾರತ ಡಿಜಿಟಲ್‌ ಆಗುವುದಕ್ಕೆ ಸರ್ಕಾರದ ಉಪಕ್ರಮಗಳಲ್ಲಿ ಸಾಮಾನ್ಯ ಮನುಷ್ಯನ ಭಾಗವಹಿಸುವಿಕೆ ತುಂಬಾ ಮುಖ್ಯವಾಗುತ್ತದೆ ಎಂದರು ಯುವರ್‌ಸ್ಟೋರಿಯ ಡಿಜಿಟಲ್‌ ಇಂಡಿಯಾ ಟೌನ್‌ಹಾಲ್‌ನಲ್ಲಿ ಐಟಿ ಸಚಿವ ರವಿ ಶಂಕರ ಪ್ರಸಾದ.

ಭಾರತ ಡಿಜಿಟಲ್‌ ಆಗುವುದಕ್ಕೆ ಸಾಮಾನ್ಯ ಮನುಷ್ಯನ ಭಾಗವಹಿಸುವಿಕೆ ತುಂಬಾ ಮುಖ್ಯ: ರವಿ ಶಂಕರ ಪ್ರಸಾದ (ಯುವರ್‌ಸ್ಟೋರಿ ಡಿಜಿಟಲ್‌ ಇಂಡಿಯಾ ಟೌನ್‌ಹಾಲ್‌)

Wednesday July 01, 2020,

2 min Read

ಕೇಂದ್ರ ಐಟಿ ಸಚಿವ ರವಿ ಶಂಕರ ಪ್ರಸಾದ

ನರೇಂದ್ರ ಮೋದಿ ನೇತ್ರತ್ವದ ಸರ್ಕಾರ ಡಿಜಿಟಲ್‌ ಇಂಡಿಯಾ ಉಪಕ್ರಮವನ್ನು ಪ್ರಾರಂಭಿಸಿ ಇಂದಿಗೆ, ಅಂದರೆ ಜುಲೈ 1, 2020 ಕ್ಕೆ 5 ವರ್ಷವಾಯಿತು. ಸ್ವ-ಸಬಲೀಕರಣ, ಮೂಲಸೌಕರ್ಯ ಅಭಿವೃದ್ಧಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹೂಡಿಕೆಯನ್ನು ಹೆಚ್ಚಿಸುವ ಸಲುವಾಗಿ ಜನರಿಗೆ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಉತ್ತೇಜನ ನೀಡುವುದೆ ಈ ಉಪಕ್ರಮದ ಉದ್ದೇಶ.


ಕೇಂದ್ರ ಐಟಿ ಸಚಿವ ರವಿ ಶಂಕರ ಪ್ರಸಾದ ಅವರ ಮುಂದಾಳತ್ವದಲ್ಲಿ ಈ ಕಾರ್ಯಕ್ರಮವು ಬರೀ ನಗರ ಪ್ರದೇಶಗಳ ಅಭಿವೃದ್ಧಿಗೆ ಮಾತ್ರವಲ್ಲದೆ ಗ್ರಾಮೀಣ ಪ್ರದೇಶಗಳ ಮೇಲೂ ಗಮನ ಹರಿಸಿ ವೇಗವಾದ ಅಂತರ್ಜಾಲ ಸೇವೆ, ಡಿಜಿಟಲ್‌ ಕೌಶಲ್ಯಕ್ಕೆ ಉತ್ತೇಜನ ನೀಡಿ ಮತ್ತು ತಂತ್ರಜ್ಞಾನದ ಬಳಕೆಯಿಂದ ಮೂಲ ಸಮಸ್ಯೆಗಳನ್ನು ಪರಿಹರಿಸಲು ಕಳೆದ 5 ವರ್ಷಗಳಿಂದ ಕೆಲಸ ಮಾಡುತ್ತಿದೆ.


ತಂತ್ರಜ್ಞಾನ ಕ್ಷೇತ್ರದ ಉದ್ಯಮಿಗಳಿಗಾಗಿ ಯುವರ್‌ಸ್ಟೋರಿ ಆಯೋಜಿಸಿದ್ದ ಡಿಜಿಟಲ್‌ ಟೌನ್‌ಹಾಲ್‌ ಇಂಡಿಯಾ ಎಂಬ ವಿಶೇಷ ಕಾರ್ಯಕ್ರಮದಲ್ಲಿ ಐಟಿ ಸಚಿವ ರವಿ ಶಂಕರ ಪ್ರಸಾದ ಅವರು ಭಾರತ ಡಿಜಿಟಲ್‌ ಆಗುವುದರ ಮಹತ್ವ ಮತ್ತು ಅದಕ್ಕಾಗಿ ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಮಾತನಾಡಿದರು.


“ಡಿಜಿಟಲ್‌ ಇಂಡಿಯಾ ಉಪಕ್ರಮದ ಯಶಸ್ಸು ಸಾಮಾನ್ಯ ಮುನುಷ್ಯನ ಪಾಲ್ಗೊಳ್ಳುವಿಕೆಯ ಮೇಲೆ ಅವಲಂಬಿತವಾಗಿದೆ,” ಎಂದರು ರವಿ ಶಂಕರ ಪ್ರಸಾದ.




ಡಿಜಿಟಲ್‌ ಇಂಡಿಯಾ ಟೌನ್‌ಹಾಲ್‌ನಲ್ಲಿ ಸಚಿವರು ಡಿಜಿಟಲ್‌ ಇಂಡಿಯಾ ಕಾರ್ಯಕ್ರಮವು ತಂತ್ರಜ್ಞಾನದ ಕಂದಕವನ್ನು ಮುಚ್ಚಿ, ಎಲ್ಲ ಭಾರತೀಯರು ತಂತ್ರಜ್ಞಾನದ ಬಳಸುವಂತೆ ಉತ್ತೇಜನ ನೀಡುವ ಗುರಿ ಹೊಂದಿದೆ ಎಂದರು.


ಗ್ರಾಮೀಣ ಭಾರತದಲ್ಲಿ ಡಿಜಿಟಲ್‌ ಉದ್ಯಮಗಳನ್ನು ಗಮನದಲ್ಲಿರಿಸಿಕೊಂಡು ರೂಪಿಸಲಾದ ಸಾಮಾನ್ಯ ಸೇವಾ ಕೇಂದ್ರಗಳು (ಸಿಎಸ್‌ಸಿ) ಮತ್ತು ಒಂದು ದೇಶ, ಒಂದು ಪಡಿತರ ಚೀಟಿಯಂತಹ ಯೋಜನೆಗಳು ತಂತ್ರಜ್ಞಾನವನ್ನು ಬಳಸಿಕೊಂಡು ಸೇವೆಗಳನ್ನು ಸುಲಭಗೊಳಿಸಿವೆ ಎಂದರು ಅವರು.


ಮೈಗವ್‌.ಇನ್ (MyGov.in)- ನಾಗರಿಕರು ಕಾರ್ಯನೀತಿಗಳನ್ನು ಚರ್ಚಿಸಲು ಅನುವು ಮಾಡಿಕೊಡುವ ಜಾಲತಾಣ ಮತ್ತು ಡಿಜಿಲಾಕರ್‌ - ಇ-ಕಾಗದ ಪತ್ರಗಳನ್ನು ಸುರಕ್ಷಿತವಾಗಿರಸಲು ಮಾಡಿರುವ ಜಾಲತಾಣ ಮತ್ತು ಇ-ಆಸ್ಪತ್ರೆ, ರಾಷ್ಟ್ರೀಯ ವಿದ್ಯಾರ್ಥಿ ವೇತನದ ಪೋರ್ಟಲ್‌ ಮತ್ತು ಆನ್‌ಲೈನ್‌-ಶಿಕ್ಷಣದಂತಹ ಸೌಲಭ್ಯಗಳು ಡಿಜಿಟಲ್‌ ಇಂಡಿಯಾ ಉಪಕ್ರಮದಡಿ ರೂಪಗೊಂಡಿವೆ.


ಡಿಜಿಟಲ್‌ ಇಂಡಿಯಾ ಉಪಕ್ರಮದಡಿ ಯಶಸ್ವಿಯಾಗಿರುವ ಇತರ ಉಪಕ್ರಮಗಳಲ್ಲಿ ಜನ್‌ಧನ್‌-ಆಧಾರ್‌-ಮೊಬೈಲ್‌(ಜ್ಯಾಮ್)‌ ಮುಖ್ಯವಾದದ್ದು, ಇದು ಶತಕೋಟಿ ಭಾರತೀಯರಿಗೆ ಡಿಜಿಟಲ್‌ ಗುರುತನ್ನು ನೀಡಿರುದಲ್ಲದೆ, ಅಧಿಕೃತ ದಾಖಲೆಗಳಿಲ್ಲದಿರುವವರಿಗೆ ಆರ್ಥಿಕ ಸೇವೆ ಪಡೆಯಲು ಅನುವು ಮಾಡಿಕೊಟ್ಟಿದೆ.


ಸರ್ಕಾರದ ಪ್ರಕಾರ ಜೂನ್‌ 30 ವರೆಗೆ, ಸುಮಾರು 125.84 ಕೋಟಿ ಜನರಿಗೆ ಆಧಾರ್‌ ವಿತರಿಸಲಾಗಿದೆ.


ಭಾರತದಲ್ಲಿ ಎಲ್ಲರೂ ತಂತ್ರಜ್ಞಾನ ಬಳಸುವಂತೆ ಮಾಡುವಲ್ಲಿ ವಿಶೇಷವಾಗಿ ರೈತರು ತಂತ್ರಜ್ಞಾನ ಬಳಸಿಕೊಳ್ಳುವಂತೆ ಮಾಡುವಲ್ಲಿ ಭಾರತೀಯ ನವೋದ್ಯಮಗಳ ಪಾತ್ರ ತುಂಬಾ ಮುಖ್ಯವಾಗಿದೆ ಎಂದರು ಅವರು.