ಭಾರತದಲ್ಲಿ ಹಿಂದುಳಿದವರಿಗೆ ಉಚಿತ ಮಾನಸಿಕ ಆರೋಗ್ಯ ಸೇವೆ ನೀಡುತ್ತಿರುವ ಕೇರಳದ ವೈದ್ಯ

ಡಾ. ಮನೋಜ್ ಕುಮಾರ್ ಅವರು ಸಮಾಜದಲ್ಲಿ ಅತ್ಯಂತ ಆರ್ಥಿಕವಾಗಿ ಹಿಂದುಳಿದ ಗುಂಪುಗಳಿಗೆ ಉಚಿತ, ಸಮಗ್ರ, ಸಮುದಾಯ ಆಧಾರಿತ ಹಾಗೂ ಸ್ವಯಂಸೇವಕರ ನೇತೃತ್ವದ ಮಾನಸಿಕ ಆರೋಗ್ಯ ಸೇವಾ ವ್ಯವಸ್ಥೆಯೊಂದನ್ನು ರಚಿಸಿದ್ದಾರೆ. ಈ ಮೂಲಕ‌ ಹಿಂದುಳಿದವರ ಹೊಸ ಜೀವನಕ್ಕೆ ಅರ್ಥಪೂರ್ಣ ಮತ್ತು ಉತ್ಪಾದಕ ದಾರಿ ಮಾಡಿಕೊಟ್ಟಿದ್ದಾರೆ.

ಭಾರತದಲ್ಲಿ ಹಿಂದುಳಿದವರಿಗೆ ಉಚಿತ ಮಾನಸಿಕ ಆರೋಗ್ಯ ಸೇವೆ ನೀಡುತ್ತಿರುವ ಕೇರಳದ ವೈದ್ಯ

Tuesday November 19, 2019,

5 min Read

ಕಳೆದ ಒಂದು ದಶಕದ ಅವಧಿಯಲ್ಲಿ ಯೋಜಕರು, ವೈದ್ಯಕೀಯ ವೃತ್ತಿಪರರು, ನಿರ್ವಾಹಕರು ಮತ್ತು ಸಾರ್ವಜನಿಕರಲ್ಲಿ ಮಾನಸಿಕ ಆರೋಗ್ಯವೆಂಬುದು ಕೇಂದ್ರಬಿಂದುವಾಗಿದೆ. ದೇಶದಲ್ಲಿ 2014 ರ ರಾಷ್ಟ್ರೀಯ ಮಾನಸಿಕ ಆರೋಗ್ಯ ನೀತಿ‌ ಹಾಗೂ 2016 ರಿಂದ ಜಾರಿಯಲ್ಲಿರುವ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ (ಡಿಎಂಹೆಚ್‌ಪಿ) ಯೊಂದಿಗೆ ಬಲವಾದ ಮತ್ತು ಅಂತರ್ಗತ ಆರೈಕೆಯ ವ್ಯವಸ್ಥೆಗೆ ಭರವಸೆಯನ್ನು ನೀಡಿದೆ.


ದೇಶದಾದ್ಯಂತ ಈ ನೀತಿಯ ಮೂಲಸೌಕರ್ಯವನ್ನು ಪರಿಚಯಿಸಿದ್ದರೂ, ವಾಸ್ತವವಾಗಿ ಸೇವೆಗಳ ದೊರೆಯುವಿಕೆ, ಗುಣಮಟ್ಟ ಮತ್ತು ಸೇವೆಗಳ ಕೈಗೆಟುಕುವಿಕೆಯ ಮಟ್ಟವು ಅತ್ಯಂತ ಕೆಳಮಟ್ಟದಲ್ಲಿದೆ. ಭಾರತದಾದ್ಯಂತ ಅರ್ಧದಷ್ಟು ಜಿಲ್ಲೆಗಳಲ್ಲಿ ಮಾನಸಿಕ ಆರೋಗ್ಯ ಕಾರ್ಯಕ್ರಮ ನಿರ್ವಹಿಸುತ್ತಿದ್ದರೂ ಹಾಗೂ ಹೆಚ್ಚಿನ ವೈದ್ಯಕೀಯ ಕಾಲೇಜುಗಳು ಮತ್ತು ಜಿಲ್ಲಾ ಆಸ್ಪತ್ರೆಗಳು ಈಗ ಮನೋವೈದ್ಯಕೀಯ ವಾರ್ಡ್‌ಗಳನ್ನು ಹೊಂದಿದ್ದರೂ ಸಹ, ಚಿಕಿತ್ಸೆಯಲ್ಲಿ ಶೇಕಡಾ 70 ರಷ್ಟು ಅಂತರವಿದೆ.


ಡಾ. ಮನೋಜ್ ಕುಮಾರ್


ಈ ಅಂತರದ ಹಿಂದಿನ ಪ್ರಮುಖ ಅಂಶವೆಂದರೆ ಅಸ್ತಿತ್ವದಲ್ಲಿರುವ ವ್ಯವಸ್ಥಾಪನಾ ಮತ್ತು ಭೌಗೋಳಿಕ ಅಡೆತಡೆಗಳಾಗಿವೆ. ರೋಗಿಗಳು 43 ದೊಡ್ಡ ಜಿಲ್ಲಾ ಮಾನಸಿಕ ಆರೋಗ್ಯ ಆಸ್ಪತ್ರೆಗಳಲ್ಲಿ ಯಾವುದಾದರೂ ಮನೋವೈದ್ಯಕೀಯ ಚಿಕಿತ್ಸೆಯನ್ನು ಪಡೆಯಲು ಬಹಳ ದೂರ ಪ್ರಯಾಣಿಸಬೇಕಾಗುತ್ತದೆ. ನುರಿತ ತರಬೇತಿ ಪಡೆದ ಬಹುಪಾಲು ವೈದ್ಯಕೀಯ ವೃತ್ತಿಪರರು ನಗರ ಪ್ರದೇಶಗಳಲ್ಲಿ ಮಾತ್ರ ಸಿಗುತ್ತಾರೆ. ಈ ಅಡೆತಡೆಗಳನ್ನು ನಿವಾರಿಸಿದರೂ ಸಹ, ಹೆಚ್ಚಿನ ರೋಗಿಗಳಿಗೆ ಗೌಪ್ಯತೆ ಮತ್ತು ಗುಣಮಟ್ಟದ ಆರೈಕೆಯಿಲ್ಲದ ಕಿಕ್ಕಿರಿದ ಹೊರರೋಗಿ ಸೌಲಭ್ಯಗಳಲ್ಲಿ ಚಿಕಿತ್ಸೆ ನೀಡಲಾಗುತ್ತದೆ.


ಯುನೈಟೆಡ್ ಕಿಂಗ್‌ಡಮ್‌ನಲ್ಲಿ ರಾಷ್ಟ್ರೀಯ ಆರೋಗ್ಯ ಸೇವೆ (ಎನ್ಎಚ್ಎಸ್)ಯೊಂದಿಗೆ 15 ವರ್ಷಗಳ ಕಾಲ ಕೆಲಸ ನಿರ್ವಹಿಸಿ ಹಾಗೂ ಲಾಭದಾಯಕ ವೃತ್ತಿಜೀವನದ ಪಟ್ಟಿಯಲ್ಲಿ ಪ್ರಶಸ್ತಿ ವಿಜೇತರಾದ ಮನೋವೈದ್ಯ (2016 ರ ಫೆಲೋಶಿಪ್ ಆಫ್ ದಿ ರಾಯಲ್ ಕಾಲೇಜ್ ಆಫ್ ಸೈಕಿಯಾಟ್ರಿಸ್ಟ್ಸ್ ಮತ್ತು 2014 ರಲ್ಲಿ ಆರ್ಸಿ ಸೈಕ್ ವಾಲಂಟೀರ್ ಸೈಕಿಯಾಟ್ರಿಸ್ಟ್ ಆಫ್ ದಿ ಇಯರ್ ಪ್ರಶಸ್ತಿ ಪುರಸ್ಕೃತರು) ಡಾ. ಮನೋಜ್ ಕುಮಾರ್ ತಮ್ಮ ತವರು ರಾಜ್ಯವಾದ ಕೇರಳಕ್ಕೆ ಮರಳಲು ನಿರ್ಧರಿಸಿದರು.


ಅನುಭವಗಳ ಆಧಾರಿತ ವಿಚಾರಗಳನ್ನು ಅಭಿವೃದ್ಧಿಪಡಿಸುವಿಕೆ

ಡಾ. ಮನೋಜ್, ತಮ್ಮ ತಂದೆಯನ್ನು ತಮ್ಮ ಜೀವನದಲ್ಲಿ ಅತಿದೊಡ್ಡ ಪ್ರಭಾವ ಬೀರಿದವರೆಂದು ನೆನಪಿಸಿಕೊಳ್ಳುತ್ತಾರೆ. ನ್ಯಾಯಾಧೀಶರಾಗಿದ್ದ ತಂದೆಯವರ ವೃತ್ತಿಯು, ಮನೋಜ್ ಅಭಿವೃದ್ಧಿಪಡಿಸಿದ ಮೌಲ್ಯಗಳ ಮೇಲೆ ಪ್ರಭಾವ ಬೀರುತ್ತದೆ.


"ಚಿಕ್ಕ ವಯಸ್ಸಿನಲ್ಲಿಯೇ, ನ್ಯಾಯವು ಅಸ್ಥಿರವಲ್ಲ ಆದರೆ, ವಾಸ್ತವವಾಗಿ ಜನರು ಅದನ್ನೇ ಬಯಸುತ್ತಾರೆ ಎಂದು ಅರಿತುಕೊಂಡೆ. ಈ ಅನುಭವಗಳು ನನ್ನನ್ನು ಸ್ವಾಭಾವಿಕವಾಗಿ ಜಿಜ್ಞಾಸೆಯ ವಿದ್ಯಾರ್ಥಿ ಮತ್ತು ವೀಕ್ಷಕನನ್ನಾಗಿ ಮಾಡಲು ಕಾರಣವಾಯಿತು. ಅಲ್ಲಿ ನಾನು ಯಾವಾಗಲೂ ಇದ್ದದ್ದನ್ನು ನೇರವಾಗಿ ಪ್ರಶ್ನಿಸುತ್ತಿದ್ದೆ ಹಾಗೂ ವಿಷಯ ವಸ್ತುಗಳು ಏಕೆ ಹೀಗೆ ಎಂದು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ” ಎಂದು ಡಾ ಮನೋಜ್ ಹೇಳುತ್ತಾರೆ.


ಈ ಬೆಳವಣಿಗೆಯು ವೈದ್ಯಕೀಯ ಕಾಲೇಜು (ರಾಂಚಿಯ ಎಮ್‌ಡಿ, ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಸೈಕಿಯಾಟ್ರಿ) ಮೂಲಕ ಪ್ರಯಾಣ ಆರಂಭವಾಯಿತು, ಅಲ್ಲಿ ಅವರು ಭ್ರಷ್ಟಚಾರ, ಮುರಿದ ವ್ಯವಸ್ಥೆಗಳನ್ನು ಪ್ರಶ್ನಿಸಲು ಪ್ರಾರಂಭಿಸಿದರು. ಇದರಲ್ಲಿ ವಾಣಿಜ್ಯ ಪರಿಗಣನೆಗಳಿಗೆ ವಿಶೇಷವಾಗಿ ಮನೋವೈದ್ಯಶಾಸ್ತ್ರದಲ್ಲಿ ನೈತಿಕತೆಗಿಂತ ಹೆಚ್ಚಾಗಿ ಆದ್ಯತೆ ನೀಡಲಾಯಿತು. ಇವರ ಈ ಕಾಳಜಿಗಳು, ಮಾನಸಿಕ ಅಸ್ವಸ್ಥರನ್ನು ಆಸ್ಪತ್ರೆಗಳಲ್ಲಿ ಬಂಧಿಸಿ, ಅವರಿಗೆ ಅತಿಯಾಗಿ ಔಷಧಿ‌ ನೀಡುವ ಮೂಲಕ ಚಿಕಿತ್ಸೆ ನೀಡುವ ಸಾಂಪ್ರದಾಯಿಕ ವಿಧಾನಗಳನ್ನು ಬದಲಾಯಿಸಬೇಕಾಗಿದೆ ಎಂಬ ಆಳವಾದ ನಂಬಿಕೆಯೊಂದಿಗೆ ತೊಡಗಿಸಿಕೊಳ್ಳುವ ಸಂಕಲ್ಪವನ್ನು ಬಲಪಡಿಸಿದವು.


ವೆಲ್ಲೂರಿನ ಸಿಎಮ್‌ಸಿಯಲ್ಲಿ ಸೈಕಲಾಜಿಕಲ್ ಮೆಡಿಸಿನ್ ನಲ್ಲಿ ಡಿಪ್ಲೊಮ(ಡಿಪಿಎಂ) ಮಾಡುತ್ತಿರುವಾಗ ಡಾ. ಮನೋಜ್ ಅವರು ಕ್ಯಾನ್ಸರ್ ರೋಗಿಗಳೊಂದಿಗೆ ಕೆಲಸ ಮಾಡುತ್ತಾ, ಅವರ ಮಾನಸಿಕ ಆರೋಗ್ಯದ ಮೂಲಕ ಪಡೆದ ಅನುಭವಗಳಿಂದ ಮನೋವಿಜ್ಞಾನದ ಬಗ್ಗೆ ವಿಶಾಲವಾದ ತಿಳುವಳಿಕೆಯನ್ನು ಪಡೆಯಲು ಪ್ರಾರಂಭಿಸಿದರು. ಈ ರೋಗಿಗಳನ್ನು ನೋಡಿಕೊಳ್ಳುವ ಸ್ಥಾಪಿತ ಸಂಸ್ಥೆಗಳಲ್ಲಿ ಡಾ. ಮನೋಜ್ ಮಾನಸಿಕ ಆರೋಗ್ಯ ರಕ್ಷಣೆಗೆ ಬಂದಾಗ ಅಸಮರ್ಥ, ಅಮಾನವೀಯ ಆಚರಣೆಗಳು ಹಾಗೂ ದುಬಾರಿ ಚಿಕಿತ್ಸೆಗಳಂತಹ ಅನಾನುಕೂಲ ಮಾದರಿಯನ್ನು ಕಂಡರು.


ಸಮಾಜದ ಅತ್ಯಂತ ಕೆಳಮಟ್ಟದ ಕುಟುಂಬಗಳ ಚಿಕಿತ್ಸೆಗೆ ಬಂದಾಗ ಈ ಅಡೆತಡೆಗಳು ವಿಶೇಷವಾಗಿ ಸ್ಪಷ್ಟವಾಗಿ ಕಂಡುಬಂದವು ಹಾಗೂ ಭಾರತದ ಬಡ ಕುಟುಂಬಗಳ ಮಾನಸಿಕ ಅಸ್ವಸ್ಥರಿಗೆ ಬೇಕಾದ ಆರೈಕೆಗೆ ಯಾವುದೇ ಪ್ರವೇಶವನ್ನು ಹೊಂದಿಲ್ಲದಿರುವುದು ಕಂಡುಬಂದಿತು.




ಡಾ ಮನೋಜ್ ರವರ ತಾಯಿ ಕ್ಯಾನ್ಸರ್ ನಿಂದ ನಿಧನರಾದಾಗ ಇವರ ಜೀವನದಲ್ಲಿ ಒಂದು ಮಹತ್ವದ ತಿರುವು ಸಿಕ್ಕಿತು. ತನ್ನ ತಾಯಿ ಸಾಧ್ಯವಾದಷ್ಟು ಉತ್ತಮವಾದ ವೈದ್ಯಕೀಯ ಆರೈಕೆಯನ್ನು ಪಡೆದಿದ್ದರೂ ಸಹ, ಅವರ ಮಾನಸಿಕ ಸ್ಥಿತಿಯನ್ನು ಸರಿಯಾಗಿ ನೋಡಿಕೊಳ್ಳಲಾಗಿಲ್ಲ ಎಂಬ ಅರಿವು ಮೂಡಿಸಿತು.


ಈ ಅನುಭವಗಳು ಮತ್ತು ಸಾಮಾಜಿಕ ನ್ಯಾಯದಲ್ಲಿ ರಾಜಿಯಾಗದ ನಂಬಿಕೆಯು ಡಾ ಮನೋಜ್ ಅವರನ್ನು ಜೀವನದುದ್ದಕ್ಕು ಅಳವಡಿಸಿಕೊಳ್ಳಬೇಕಾದ ಬದ್ಧತೆಗೆ ಕಾರಣವಾಯಿತು. ಈಗಾಗಲೇ ಅಸಮರ್ಥ ವ್ಯವಸ್ಥೆಯಲ್ಲಿ ಸಂಪೂರ್ಣವಾಗಿ ಮರೆತುಹೋದವರಿಗೆ ಅಗತ್ಯವಿದ್ದಾಗ ಗುಣಮಟ್ಟದ ಮತ್ತು ಸಮಗ್ರ ಮಾನಸಿಕ ಆರೋಗ್ಯ ಸೇವೆಗೆ ಪ್ರವೇಶ ಪಡೆಯಲು ಸಹಾಯ ಮಾಡುವತ್ತ ಪರಿಹಾರವನ್ನು ಕಂಡುಹಿಡಿಯುವುದು ಅವರ ಗುರಿಯಾಗಿತ್ತು.


"ತೀವ್ರವಾದ ಮಾನಸಿಕ ಅಸ್ವಸ್ಥತೆ ಹೊಂದಿರುವ ಜನರನ್ನು ಬೆಂಬಲಿಸಲು ಸರ್ಕಾರಗಳು ಸಾಕಷ್ಟು ಕೆಲಸ ಮಾಡುತ್ತಿರಲಿಲ್ಲ. ಈ ಸಮುದಾಯಗಳು ಮುಂಚೂಣಿಯಲ್ಲಿರಬೇಕು ಆಗ ಮಾತ್ರ ಬೆಳೆಯುತ್ತಿರುವ ಈ ಸಮಸ್ಯೆಗೆ ಪ್ರಬಲ ಪರಿಹಾರ ಸಾಧ್ಯ ಎಂದು ನನಗೆ ತಿಳಿದಿತ್ತು. ನಾನು ಯುಕೆ ಯಲ್ಲಿ ನನ್ನ ಕೆಲಸವನ್ನು ಬಿಟ್ಟು ಮನೆಗೆ ಮರಳಿದನಂತರದಲ್ಲಿ, ಈ ನಿಟ್ಟಿನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದೆ,” ಎಂದು ಡಾ ಮನೋಜ್ ಹೇಳುತ್ತಾರೆ.


ಸಮುದಾಯ-ಚಾಲಿತ ಮಾದರಿಯನ್ನು ನಿರ್ಮಿಸುವುದು

2008 ರಲ್ಲಿ ಸ್ಥಾಪನೆಯಾದ, ಕೇರಳದ ಕೋಝಿಕೋಡ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಮೆಂಟಲ್ ಹೆಲ್ತ್ ಆಕ್ಷನ್ ಟ್ರಸ್ಟ್ (ಎಂಹೆಚ್ಎಟಿ) ಸಂಸ್ಥೆಯ ಮೂಲಕ, ಡಾ. ಮನೋಜ್ ಅವರು ಸಮುದಾಯ ಮಾಲೀಕತ್ವದ ಹಾಗೂ ಸಮುದಾಯ ನೇತೃತ್ವದ ಆರೈಕೆಯ ಮಾದರಿಯೊಂದನ್ನು ನಿರ್ಮಿಸಿದ್ದಾರೆ. ಸಾಂಪ್ರದಾಯಿಕ ಮನೋವೈದ್ಯರು ವಹಿಸುವ ಪದ್ಧತಿಯನ್ನು ಮುರಿಯಲು ಹಾಗೂ ತರಬೇತಿ ಪಡೆದ ಮತ್ತು ಉತ್ತಮವಾಗಿ ಬೆಂಬಲಿತ ಸ್ವಯಂಸೇವಕರು ನಿರ್ವಹಿಸಬಹುದಾದ ಸಾಧ್ಯತೆಯನ್ನು ಗುರುತಿಸಲು ‘ಟಾಸ್ಕ್ ಶಿಫ್ಟಿಂಗ್’ ಅನ್ನು ಬಳಸುವುದು ಡಾ. ಮನೋಜ್ ಅವರ ಮಾದರಿಯ ಮುಖ್ಯ ಭಾಗವಾಗಿದೆ.


ಔಷಧಿಗಳು ಹಾಗೂ ಆರಂಭಿಕ ರೋಗನಿರ್ಣಯಗಳನ್ನು ಹೊರತುಪಡಿಸಿ ಪುನರ್ವಸತಿ, ಮನೆಯ ಆರೈಕೆ ಹಾಗೂ ಚೇತರಿಕೆ ಕ್ರಮಗಳು ಆರೋಗ್ಯ ರಕ್ಷಣೆಯ ಪ್ರಮುಖ ಅಂಶಗಳಾಗಿದ್ದು, ಇವುಗಳನ್ನು ಡಾ. ಮನೋಜ್ ಅವರು ಸಮುದಾಯದ ಬದ್ಧ ಸದಸ್ಯರಿಂದ ಸಾಧಿಸಬಹುದೆಂದು ಗುರುತಿಸಿದ್ದಾರೆ.


ಉಪಶಮನ ಆರೈಕೆ ಅಥವಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಂತಹ ಸಮುದಾಯಗಳಿಗೆ ಸಂಪನ್ಮೂಲಗಳು ದೊರೆಯುವಂತೆ ಮೆಂಟಲ್ ಹೆಲ್ತ್ ಆಕ್ಷನ್ ಟ್ರಸ್ಟ್ ನೋಡಿಕೊಳ್ಳುತ್ತದೆ. ಅಲ್ಲಿ ವೃತ್ತಿಪರರಲ್ಲದ ಕಾರ್ಮಿಕ ಕಾರ್ಯಕರ್ತರುಗಳಿದ್ದಾರೆ, ಉದಾಹರಣೆಗೆ ಆಶಾ ಕಾರ್ಯಕರ್ತರು (ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತರು) ಭಾರತ ಸರ್ಕಾರದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಾದ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್‌ನ (ಎನ್‌ಆರ್‌ಎಚ್‌ಎಂ) ಭಾಗವಾಗಿ ಸಮುದಾಯದ ನಡುವೆ ಸೇತುವೆಯಾಗಿ ಕೆಲಸ ಮಾಡಲು ತರಬೇತಿ ಪಡೆದಿರುವ ದಾದಿಯರು.


ಕೇರಳದಾದ್ಯಂತದ ಈ ಕೇಂದ್ರಗಳಲ್ಲಿರುವ ಸ್ವಾತಂತ್ರ್ಯವು ಟ್ರಸ್ಟ್‌ನ‌ ಪರಿಗಣನೆಗೆ ಎರಡು ಮುಖ್ಯ ಕಾರಣಗಳಾಗಿವೆ. ಮೊದಲನೆಯದಾಗಿ, ಅವರು ಒದಗಿಸುವ ಆರೈಕೆಯು ಸ್ಥಳೀಕರಿಸಲ್ಪಟ್ಟಿದ್ದು ರೋಗಿಗಳಿಗೆ ದೊರೆಯುವಂತಿದೆ. ಎರಡನೆಯದಾಗಿ, ವೃತ್ತಿಪರತೆಯಿಲ್ಲದ ಆರೈಕೆಯ ಕಾರಣವಾಗಿ ಬೆಂಬಲವನ್ನು ಹುಡುಕುವುದರೊಂದಿಗೆ ಮಾನಸಿಕ ಅಸ್ವಸ್ಥತೆಯನ್ನು ಹೆಚ್ಚಾಗಿ ನಿವಾರಿಸಲಾಗುತ್ತದೆ.


ಕೇರಳದ ಎಂ‌ಹೆಚ್‌ಎಟಿ ಯ 54 ಸಮುದಾಯ ಕೇಂದ್ರಗಳಲ್ಲಿ ಆರೈಕೆ ಸೇವೆ ಒದಗಿಸಲು ಮಾಲೀಕತ್ವವನ್ನು ವಹಿಸಿಕೊಳ್ಳುವ ಸಮುದಾಯದ ಸದಸ್ಯರು ವಿವಿಧ ಹಂತಗಳಿಂದ ಬಂದವರಾಗಿದ್ದು, ಸಣ್ಣ ಉದ್ಯಮಿಗಳು, ಶಿಕ್ಷಕರು ಮತ್ತು ಆಟೋರಿಕ್ಷಾ ಚಾಲಕರು ಒಗ್ಗೂಡುತ್ತಾರೆ. ರೋಸ್ಟರ್‌ಗಳನ್ನು ಆಯೋಜಿಸುತ್ತಾರೆ, ಹಣವನ್ನು ಸಂಗ್ರಹಿಸುತ್ತಾರೆ ಮತ್ತು ಕೇಂದ್ರಗಳನ್ನು ಸಾಮಾನ್ಯ ಉದ್ದೇಶದಿಂದ ನಡೆಸಲು ಬೆಂಬಲಿಸುತ್ತಾರೆ. ರೋಗನಿರ್ಣಯ ಮಾಡಿದ ಮಾನಸಿಕ ಕಾಯಿಲೆಗಳಿಂದ ಬಳಲುತ್ತಿರುವ ಜನರ ಜೀವನಕ್ಕೆ ಸಾಮಾನ್ಯತೆಯನ್ನು ತಂದುಕೊಡುತ್ತಾರೆ.


ಸಮುದಾಯ ಕೇಂದ್ರಗಳು ಮತ್ತು ಅವರ ಸ್ವಯಂಸೇವಕರು ತಮ್ಮ ಸಮುದಾಯದ ಜನರನ್ನು ಬೆಂಬಲಿಸಲು ಅಗತ್ಯವಿರುವ ಜನರನ್ನು ಗುರುತಿಸುವ ಆರಂಭಿಕ ಕಾರ್ಯವನ್ನು ನಿರ್ವಹಿಸಿ, ನಂತರ ಅವರನ್ನು ಸಂಪರ್ಕಿಸುತ್ತಾರೆ. ರೋಗಿಗಳಿಗೆ ಸ್ವಯಂಸೇವಕರನ್ನು ನಿಯೋಜಿಸಿದ ನಂತರ, ಆರಂಭಿಕ ರೋಗನಿರ್ಣಯಗಳನ್ನು ನಡೆಸಲು ಹೊರರೋಗಿ ಶಿಬಿರವನ್ನು ಆಯೋಜಿಸಲಾಗಿದೆ. ಈಗ ಇದನ್ನು ಹೆಚ್ಚಾಗಿ ಟೆಲಿ ಸೈಕಿಯಾಟ್ರಿ ಮೂಲಕ ಮಾಡಲಾಗುತ್ತದೆ. ಇದರಲ್ಲಿ, ವೈದ್ಯಕೀಯ ವೃತ್ತಿಪರರು ಔಷಧಿಗಳನ್ನು ಶಿಫಾರಸು ಮಾಡಲು ಕಾನೂನುಬದ್ಧವಾಗಿ ಅನುಮತಿಸಲಾಗಿದ್ದು, ರೋಗಿಗಳ ಆರಂಭಿಕ ಮೌಲ್ಯಮಾಪನಗಳನ್ನು ವೀಡಿಯೊ ಕಾನ್ಫರೆನ್ಸಿಂಗ್ ಅಥವಾ ದೂರವಾಣಿ ಮೂಲಕ ನಡೆಸಬಹುದು.


ಇಲ್ಲಿ‌ ಮೂಲಭೂತವಾಗಿ ಆರೈಕೆಯ ಚಲನಶೀಲತೆಯನ್ನು ಬದಲಾಯಿಸುತ್ತದೆ. ಹೆಚ್ಚಾಗಿ ಗ್ರಾಮೀಣ ಪ್ರದೇಶದ ರೋಗಿಗಳು ಅಗತ್ಯವಾದ ಬೆಂಬಲವನ್ನು ಪಡೆಯುವ ಪರಿಣಾಮಕಾರಿ ಪ್ರಕ್ರಿಯೆಯನ್ನು ರಚಿಸುತ್ತದೆ. ಸ್ಥಳೀಯ ಸ್ವಯಂಸೇವಕರು ನಂತರದಲ್ಲಿ ಸಂಪರ್ಕ ಕೇಂದ್ರ ಹಾಗೂ ಪ್ರಕರಣದ ಪ್ರಮುಖ ಮಾಲೀಕರಾಗುವುದರಿಂದ ಚಿಕಿತ್ಸೆಯ ಯೋಜನೆಗಳು ಸೂಕ್ತವಾಗಿ ಸಾಗುತ್ತವೆ ಮತ್ತು ರೋಗಿಯ ಅಗತ್ಯಗಳನ್ನು ಪೂರೈಸಲಾಗುತ್ತದೆ ಎಂದು ಖಚಿತಪಡಿಸುತ್ತದೆ.


ಬಲವಾದ ಕಾನೂನುಗಳು ಮತ್ತು ನಿಯಮಗಳು ಜಾರಿಯಲ್ಲಿರುವುದರಿಂದ, ಸ್ವಯಂಸೇವಕರು ಎಂ‌ಹೆಚ್ಎಟಿ ಸಿಬ್ಬಂದಿಯ ನಿರಂತರ ಬೆಂಬಲವನ್ನು ಹೊಂದಿದ್ದು, ಸ್ಥಳೀಯ ಸಮುದಾಯ ಕೇಂದ್ರಗಳ ಮೂಲಕ ಇತರ ವೈದ್ಯಕೀಯೇತರ ವೃತ್ತಿಪರರಿಗೆ ಪ್ರವೇಶವನ್ನು ಹೊಂದಿರುತ್ತಾರೆ.


ಸಮಗ್ರ ಆರೈಕೆ ಪೂರೈಕೆಯ ಆಧಾರವಾಗಿರುವ ಈ ಸಮುದಾಯ ಕೇಂದ್ರಗಳು ರೋಗಿಗಳ ಕೌಶಲ್ಯ ಮತ್ತು ನಡವಳಿಕೆಗಳನ್ನು ಅಭಿವೃದ್ಧಿಪಡಿಸಲು ಸುರಕ್ಷಿತ ಸ್ಥಳಗಳನ್ನು ಒದಗಿಸುವ ದೈನಿಕ ಆರೈಕೆ ಕೇಂದ್ರಗಳನ್ನು ಸಹ ನಡೆಸುತ್ತವೆ. ಕುಟುಂಬ ಗುಂಪು ಚಿಕಿತ್ಸೆ ಮತ್ತು ರೋಗಿಗಳ ಕುಟುಂಬಗಳಲ್ಲಿ ಸ್ವಯಂ-ಸಬಲೀಕರಣ ಗುಂಪುಗಳ ರಚನೆಯನ್ನು ಈ ಆರೈಕೆ ವಿಸ್ತರಿಸುತ್ತದೆ. ಸಮುದಾಯ ಸ್ವಯಂಸೇವಕರಿಂದ ನಿರ್ವಹಿಸಿದ ಈ ಸ್ಥಳಗಳು ಸ್ಥಳೀಯ ಸಮುದಾಯಗಳಾದ್ಯಂತ ಬೆಂಬಲ ವ್ಯವಸ್ಥೆಗಳನ್ನು ಬಲಪಡಿಸಲು ಪ್ರಮುಖವಾಗುತ್ತಿವೆ. ಕೆಲವು ಕೇಂದ್ರಗಳನ್ನು ಈಗ ಹಿಂದಿನ ರೋಗಿಗಳು ಮತ್ತು ಅವರ ಕುಟುಂಬ ಸದಸ್ಯರು ನೋಡಿಕೊಳ್ಳುತ್ತಿದ್ದಾರೆ.


ಕೇರಳದ ಎಂಟು ಜಿಲ್ಲೆಗಳಲ್ಲಿ ಈವರೆಗೆ ಸುಮಾರು 4,500 ಕ್ಕೂ ಹೆಚ್ಚು ರೋಗಿಗಳ ಕಾಲ್ಗುಣದಿಂದಾಗಿ, ಎಂಎಚ್‌ಎಟಿ ಈಗ ತನ್ನ ಮಾದರಿಯನ್ನು ಹೊರದೇಶ ಒಮಾನ್, ಮಸ್ಕತ್ ಮತ್ತು ದೊಡ್ಡ ಕೊಲ್ಲಿ ಪ್ರದೇಶದ ವಲಸೆ ಕಾರ್ಮಿಕರಿಗೆ ವಿಸ್ತರಿಸಲು ಮುಂದಾಗಿದೆ ಹಾಗೂ ಇದನ್ನು ಸಕ್ರಿಯಗೊಳಿಸಲು, ಮಾದರಿಯನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ವಿಕೇಂದ್ರೀಕರಿಸಲು ಸಾಧ್ಯವಾಗಲು ಡಾ. ಮನೋಜ್ ಸ್ವಯಂಸೇವಕರ ಪ್ರಮಾಣೀಕರಣ ಮತ್ತು ತರಬೇತಿ ಪ್ರಕ್ರಿಯೆಯನ್ನು ತ್ವರಿತವಾಗಿ ಡಿಜಿಟಲೀಕರಣಗೊಳಿಸುತ್ತಿದ್ದಾರೆ.


ಡಾ. ಮನೋಜ್‌ರವರಿಗೆ, ಬುಡಕಟ್ಟು ಸಮುದಾಯಗಳು ತಮ್ಮ ತಾಯ್ನಾಡಿನಂತಹ ದೂರದ ಮೂಲೆಗಳಿಂದ ಆರೈಕೆಗಾಗಿ ಪ್ರವೇಶವನ್ನು ಪಡೆಯುವುದನ್ನು ನೋಡುವುದರಿಂದ ಸಮುದಾಯ ಆಧಾರಿತ ಮಾನಸಿಕ ಆರೋಗ್ಯ ವ್ಯವಸ್ಥೆಯು ಅಸಂಖ್ಯಾತ ರೋಗಿಗಳನ್ನು ಬೆಂಬಲಿಸುತ್ತದೆ ಎಂಬ ಭರವಸೆ ಮತ್ತು ಪ್ರೇರಣೆಯನ್ನು ನೀಡುತ್ತದೆ.