ಆವೃತ್ತಿಗಳು
Kannada

ಬನ್ನಿ ಹೋಗೋಣ… ಶೈಲ್ಜಾ ಸೂದ್ ದಾಸ್‍ಗುಪ್ತ ಜೊತೆ…

ಟೀಮ್ ವೈ.ಎಸ್.

7th Oct 2015
Add to
Shares
6
Comments
Share This
Add to
Shares
6
Comments
Share

“ಏಕಾಂಗಿ ಉದ್ಯೋಗಸ್ಥ ಮಹಿಳೆಯರು, ನಿವೃತ್ತರು, ತಮ್ಮ ಬಾಳಸಂಗಾತಿ, ಮಕ್ಕಳನ್ನು ಕಳೆದುಕೊಂಡವರು, ಇನ್ಯಾವುದೋ ಕಾರಣಕ್ಕೆ ಒಬ್ಬಂಟಿಯಾದವರು, ತಾವು ಒಬ್ಬರೇ ಯಾವ ಪ್ರವಾಸಕ್ಕೂ ಹೋಗಲು ಸಾಧ್ಯವಾಗದವರು, ಚಿಂತೆ ಮಾಡಬೇಕಿಲ್ಲ. ನಾವು ನಿಮ್ಮನ್ನು ಅತ್ಯುತ್ತಮ, ಆನಂದದಾಯಕ ಸ್ಥಳಗಳಿಗೆ ಕರೆದೊಯ್ಯುತ್ತೇವೆ. ನೀವು ಅಲ್ಲಿ ಪ್ರತಿ ನಿಮಿಷವೂ ಖುಷಿಯಾಗಿರಬಹುದು.” ಇದು ಚಲೋ ಲೆಟ್ಸ್ ಗೋ ಎಂಬ ಟ್ರಾವೆಲ್ ನವ್ಯೋದ್ಯಮದ ಮೋಟೋ.

image


5 ವರ್ಷಗಳ ಹಿಂದೆ ಶೈಲ್ಜಾ ಸೂದ್ ದಾಸ್‍ಗುಪ್ತಾ ಚಲೋ ಲೆಟ್ಸ್ ಗೋ ಉದ್ಯಮ ಸ್ಥಾಪಿಸಿದರು. “ ನಾವು ಜೀವನವೆಂಬ ಕಾರ್ಯಕ್ರಮದ ಸಂಭ್ರಮಾಚರಿಸಲು ಜನರಿಗೆ ನೆರವಾಗುತ್ತಿದ್ದೇವೆ. ನೆನಪುಗಳನ್ನು ಸೃಷ್ಟಿಸಲು, ಸಂತೋಷವನ್ನು ಹಂಚಲು ಸಹಾಯ ಮಾಡುತ್ತೇವೆ,” ಎನ್ನುತ್ತಾರೆ ಶೈಲ್ಜಾ.

ಹಿಮಾಚಲ ಪ್ರದೇಶ ಮೂಲದ ಶೈಲ್ಜಾ ಉನ್ನತ ಶಿಕ್ಷಣಕ್ಕಾಗಿ ದೆಹಲಿಗೆ ಬಂದಿದ್ದರು. ದೆಹಲಿ ನಿವಾಸಿಯೊಬ್ಬರನ್ನು ಮದುವೆಯಾದ ಹಿನ್ನೆಲೆಯಲ್ಲಿ, ದೆಹಲಿಯಲ್ಲೇ ಉಳಿದುಕೊಂಡರು. ಗೂಗಲ್, ಮೆಕ್‍ಕಿನ್ಸೇ ಮೊದಲಾದ ಸಂಸ್ಥೆಗಳಲ್ಲಿ ಮಾನವಸಂಪನ್ಮೂಲ ತರಬೇತಿ ವಿಭಾಗದಲ್ಲಿ ಯಶಸ್ವಿ ಉದ್ಯೋಗಿಯಾಗಿ ವೃತ್ತಿ ಜೀವನವನ್ನೂ ನಡೆಸಿದ್ದರು.

7 ವರ್ಷಗಳ ಕಾಲ ಕಾರ್ಪೋರೇಟ್ ಸಂಸ್ಥೆಗಳಲ್ಲಿ ದುಡಿದಿದ್ದೆ. ಆದರೆ, ನನಗೆ ಖುಷಿ ಕೊಡುವ ಪ್ರವಾಸ, ಬರವಣಿಗೆ ಮತ್ತು ಛಾಯಾಗ್ರಹಣ ಕ್ಷೇತ್ರದತ್ತ ಇವತ್ತಲ್ಲ ನಾಳೆ ಹೋಗಲೇಬೇಕು ಎಂದು ತೀರ್ಮಾನಿಸಿಬಿಟ್ಟಿದ್ದೆ.” ಎನ್ನುತ್ತಾರೆ ಶೈಲ್ಜಾ. ಅವರು ಗೂಗಲ್‍ನಲ್ಲಿದ್ದಾಗಲೇ, ವಾರಾಂತ್ಯಕ್ಕೆ ಸಣ್ಣಪುಟ್ಟ ವೀಕೆಂಟ್ ಪ್ರವಾಸಗಳನ್ನು ಆಯೋಜಿಸುತ್ತಿದ್ದರು.

ಹೆಸರೇ ಹೇಳುವಂತೆ, ಅವರು ಜನರನ್ನು ಒಗ್ಗೂಡಿಸಿ ಪ್ರವಾಸ ಆಯೋಜಿಸಬೇಕಾಗಿಲ್ಲ. ಪ್ರವಾಸ ಹೋಗುವ ಸ್ಥಳ ಮತ್ತು ದಿನಾಂಕ ಗೊತ್ತಾದರೆ ಸಾಕು, ಪ್ರವಾಸಿಗರು ಬ್ಯಾಗ್ ಪ್ಯಾಕ್ ಮಾಡಿ ಹೊರಟೇ ಬಿಡುತ್ತಾರೆ.

“ನಾವು ಸಾಮಾನ್ಯವಾಗಿ ಸಮಾನ ಆಸಕ್ತಿ ಉಳ್ಳ, ಸಮಾನ ಮನಸ್ಸುಗಳನ್ನು ಹಂಚಿಕೊಳ್ಳಬಳ್ಳ 10-12 ಜನರ ಗುಂಪನ್ನು ಒಟ್ಟಾಗಿ ಪ್ರವಾಸಕ್ಕೆ ಕಳುಹಿಸುತ್ತೇವೆ,”ಎನ್ನುತ್ತಾರೆ ಶೈಲ್ಜಾ.

ಆದರೆ ಇವರು ಕಾರ್ಯಾಚರಿಸುವ ವಿಧಾನ ಕೊಂಚ ಡಿಫರೆಂಟಾಗಿದೆ. ಇವರ ತಂಡವು, ಇಲ್ಲಿಯವರೆಗೆ ಹೆಚ್ಚು ಜನರು ಕಾಲಿಡದ, ದೆಹಲಿಯಿಂದ 500-600 ಕಿಲೋಮೀಟರ್ ವ್ಯಾಪ್ತಿಯಲ್ಲಿನ ಪ್ರದೇಶಗಳಿಗೆ ಹೆಚ್ಚಾಗಿ ಪ್ರವಾಸ ಆಯೋಜಿಸುತ್ತದೆ. ಅವರ ವಾಸ್ತವ್ಯದ ವೇಳೆಯಲ್ಲಿ ಸ್ಥಳೀಯ ಪ್ರವಾಸೋದ್ಯಕ್ಕೂ ಪ್ರಚಾರ ಮಾಡುತ್ತಾರೆ. “ನಾವು ಸ್ಥಳೀಯ ಜನರ ಜೊತೆ ಸಹಭಾಗಿತ್ವ ಹೊಂದಿದ್ದೇವೆ. ಅವರು ಅಲ್ಲಿ ಹೋಂಸ್ಟೇಗಳನ್ನು ವ್ಯವಸ್ಥೆ ಮಾಡುತ್ತಾರೆ. ಅವರ ಕಲೆ, ಸಂಸ್ಕೃತಿ ಮತ್ತು ಕರಕುಶಲತೆ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ತೋರುತ್ತಾರೆ. ಇದರಿಂದಾಗಿ ನಮ್ಮ ಸ್ಮರಣಾರ್ಹ ವಾಸ್ತವ್ಯದ ವೇಳೆ ಅವರ ಆರ್ಥಿಕ ಸ್ಥಿತಿಯೂ ಉತ್ತಮವಾಗುತ್ತದೆ,” ಎನ್ನುತ್ತಾರೆ ಶೈಲ್ಜಾ. ಜೀವನದಲ್ಲಿ ಪ್ರವಾಸೋದ್ಯಮಕ್ಕಾಗಿ ಏನಾದರೂ ಮಾಡಲೇಬೇಕು ಎನ್ನುವ ಮಹದಾಸೆಯೇ ಇದಕ್ಕೆಲ್ಲಾ ಕಾರಣ.

ಆರಂಭವಾಗಿದ್ದು ಹೇಗೆ?

ಒಂದು ವರ್ಷಗಳ ಕಾಲ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಆಳವಾದ ಅಧ್ಯಯನ ನಡೆಸಿದ ಬಳಿಕ, 2010ರಲ್ಲಿ ಶೈಲ್ಜಾ ಈ ಪ್ರವಾಸೋದ್ಯಮ ಆರಂಭಿಸಿದರು. ಆರಂಭದಲ್ಲಿ ಜನರನ್ನು ಸಂಘಟಿಸುವುದು ಕಷ್ಟವಾಗಿತ್ತು. ಪ್ರವಾಸಿಗರನ್ನು ಪಡೆಯುವುದೇ ದುಸ್ತರವಾಗಿತ್ತು. ಆದರೆ, ದಿನಗಳು ಕಳೆಯುತ್ತಿದ್ದಂತೆಯೇ ಉದ್ಯಮ ಯಶಸ್ಸು ಕಾಣಲಾರಂಭಿಸಿತು. ಬಲು ಅಪರೂಪದ ತಾಣಗಳಿಗೆ ಪ್ರವಾಸ ಆಯೋಜಿಸಿದ್ದರಿಂದ, ಜನರ ಗಮನ ಸೆಳೆಯಲು ಕಾರಣವಾಯಿತು. ಇದೇ ಉದ್ಯಮವನ್ನು ವಿಭಿನ್ನವಾಗಿ ಬೆಳೆಸಲಾರಂಭಿಸಿದರು.

ಪ್ರವಾಸಿಗರು ಸಾಮಾನ್ಯವಾಗಿ, ಜನಪ್ರಿಯ ತಾಣಗಳಿಗೆ ಪ್ರವಾಸ ಹೋಗುತ್ತಾರೆ. ಪ್ರಕೃತಿ ಸೆರಗಿನಲ್ಲಿ ಅಡಗಿರುವ ಅದೆಷ್ಟೋ ಅದ್ಭುತ ತಾಣಗಳನ್ನು ಮಿಸ್ ಮಾಡಿಕೊಳ್ಳುತ್ತಾರೆ. ಚಲೋ ಲೆಟ್ಸ್ ಗೊ ಹಿಮಾಚಲಪ್ರದೇಶ, ಉತ್ತರಾಂಚಲ, ರಾಜಸ್ಥಾನದ ಪುಷ್ಕರ್ ಪ್ರದೇಶಗಳ ಅತಿ ಸುಂದರ ಚಿಕ್ಕ ಚಿಕ್ಕ ಹಳ್ಳಿಗಳಿಗೆ ಪ್ರವಾಸ ಆಯೋಜಿಸುತ್ತದೆ. ಖುದ್ದಾಗಿ ಆ ಸ್ಥಳಗಳಲ್ಲಿ ದಿನಗಳನ್ನು ಕಳೆಯುವ ಶೈಲ್ಜಾ ತಾವು ಖುಷಿ ಪಟ್ಟ ಬಳಿಕವಷ್ಟೇ ಅಲ್ಲಿಗೆ ಬೇರೆಯವರನ್ನು ಕರೆದೊಯ್ಯುತ್ತಾರೆ. ಅಷ್ಟೊತ್ತಿಗಾಗಲೇ ಅಲ್ಲಿನ ಜನರ ಜೊತೆ ಸಂಪರ್ಕ ಬೆಳೆದು ಎಲ್ಲಾ ವ್ಯವಸ್ಥೆಗಳನ್ನು ಮಾಡಿಬಿಟ್ಟಿರುತ್ತಾರೆ.

ಪ್ರವಾಸವೊಂದೇ ಅವರಲ್ಲಿ ಸ್ಪೂರ್ತಿ ತುಂಬುತ್ತದೆ. ಪ್ರತಿ ಅನುಭವಕ್ಕೂ ವಿಶೇಷ ಬೆಲೆ ಕೊಡುವ ಶೈಲ್ಜಾ, ತಂಡ ಸದಸ್ಯರಿಗೂ ಅದೇ ಖುಷಿ ಕೊಡುತ್ತಾರೆ. .

“ನಾನು ಒಂದು ಸುಂದರ ಸಂಜೆಯಲ್ಲಿ 12,073 ಅಡಿ ಎತ್ತರದ ತುಂಗನಾಥದಲ್ಲಿದ್ದೆ. ಅಷ್ಟೊತ್ತಿಗಾಗಲೇ, ಆ ವಾತಾವರಣವೆಲ್ಲಾ ಮಂಜಿನಿಂದ ಆವೃತ್ತವಾಗಿತ್ತು. ಆಗ ದೇಗುಲದ ಘಂಟೆಯ ನಾದ ಕೇಳಿತು. ಏನಾಶ್ಚರ್ಯ. ಘಂಟೆಯ ನಾದ ಹೆಚ್ಚಾಗುತ್ತಿದ್ದಂತೆಯೇ, ಮಂಜು ಪಸರಿಸಲು ಆರಂಭಿಸಿತು. ಸ್ವಲ್ಪ ಹೊತ್ತಿನಲ್ಲಿ ಮೋಡಗಳ ಮರೆಯಲ್ಲಿ ನೀಲ ಆಕಾಶ ಕಾಣಿಸಲಾರಾಂಭಿಸಿತು. ಸೂರ್ಯ ಇನ್ನೇನು ಮುಳುಗಡೆಗೆ ಸಿದ್ಧನಾಗಿದ್ದ. ಕೇಸರಿ ಬಣ್ಣದ ಬೆಳಕು ಆಕಾಶವನ್ನೆಲ್ಲಾ ಹಬ್ಬಿಕೊಳ್ಳಲಾರಂಭಿಸಿತು. ನಾನು ದೇವರು ಇದ್ದಾನೆ ಎನ್ನುವುದಿಲ್ಲ. ಅಥವಾ ಇದು ಬರೀ ಜನರ ನಂಬಿಕೆ ಎನ್ನುವುದೂ ಇಲ್ಲ. ಆದರೆ, ಇಂತಹ ಅದ್ಭುತ ಪ್ರಕೃತಿ, ಬ್ರಹ್ಮಾಂಡವನ್ನು ಸೃಷ್ಟಿಸಿದ ದೊಡ್ಡ ಶಕ್ತಿಯೊಂದು ಇದೆ ಎನ್ನುವುದು ಸತ್ಯ. ಘಂಟೆಯ ನಾದ ನಿಲ್ಲುತ್ತಿದ್ದಂತೆಯೇ, ಕತ್ತಲು ಆವರಿಸಿ, ಇಡೀ ಕಣಿಗೆ ಸ್ತಬ್ಧವಾಯಿತು. ಅಲ್ಲಿನ ಸ್ಥಳೀಯ ರಾಜು ಎಂಬವರು ಈ ಕಥೆ ಹೇಳಿದ್ದರು. ಅವರು ಕೇದಾರನಾಥ ಪ್ರವಾಹದಲ್ಲಿ ಬದುಕುಳಿದಿದ್ದರು. ಆದರೆ, ಕೋಣೆ ತುಂಬಾ ತುಂಬಿಕೊಂಡಿದ್ದ ನಮ್ಮಂತಹ ಅಪರಿಚಿತರಿಗೆ ಈ ಕಥೆಯನ್ನು ಆಸಕ್ತಿಯಿಂದಲೇ ಹೇಳಿದ್ದರು. ಜೀವನಕ್ಕೆ ಗೌರವ ಕೊಡುವುದನ್ನು ಅವರಿಗೆ ಪ್ರಕೃತಿಯೇ ಕಲಿಸಿರಬೇಕು.”ಎನ್ನುತ್ತಾರೆ ಶೈಲ್ಜಾ.

ಬೆಳವಣಿಗೆಯ ಹಾದಿ..

ತಮ್ಮ ಪ್ರವಾಸದ ಅನುಭವಗಳ ಮೂಲಕ ಚಿಕ್ಕ ಮಕ್ಕಳನ್ನು ಪ್ರಕೃತಿಯ ರಾಯಭಾರಿಯಾಗಿ ಪರಿವರ್ತಿಸಲು ಬಳಸಿಕೊಳ್ಳಬೇಕು ಎನ್ನುವ ಉದ್ದೇಶ ಇಟ್ಟುಕೊಂಡಿದ್ದಾರೆ ಶೈಲ್ಜಾ. ಬಹಳಷ್ಟು ಪ್ರವಾಸಿಗರನ್ನು ವಿವಿಧ ತಾಣಗಳಿಗೆ ಕರೆದೊಯ್ದಿರುವ ಶೈಲ್ಜಾ ಅವರು, ಈಗ ಬೃಹತ್ ಪ್ರವಾಸಿ ಜಾಲವೊಂದನ್ನು ಸ್ಥಾಪಿಸಿದ್ದಾರೆ. ಅವರಲ್ಲಿ ಬಹುತೇಕರು, ತಮ್ಮ ಸಮಾಜಕ್ಕಾಗಿ ಏನಾದರೂ ಮಾಡಬೇಕು ಎಂಬ ತುಡಿತ ಹೊಂದಿದ್ದಾರೆ. ಅಂತಹವರ ಸಹಕಾರ ಪಡೆದು, ಶಾಲಾಮಕ್ಕಳಿಗೆ ಶೈಕ್ಷಣಿಕ ಅನುಭವಗಳನ್ನು ಸೃಷ್ಟಿಸುವ ಚಿಂತನೆಯಲ್ಲಿದ್ದಾರೆ ಶೈಲ್ಜಾ.

“ಮಕ್ಕಳೇ ನಮ್ಮ ಭವಿಷ್ಯ. ನಾವು ಅವರ ಮೇಲೆ ಸರಿಯಾಗಿ ಹೂಡಿಕೆ ಮಾಡಿದರೆ, ಮುಂದೊಂದು ದಿನ ಒಳ್ಳೆಯ ಅನುಕೂಲ ಸಿಗಲಿದೆ.”ಎನ್ನುತ್ತಾರೆ ಶೈಲ್ಜಾ. ಮಕ್ಕಳಿಗಾಗಿ ಪ್ರಕೃತಿ ಪ್ರವಾಸಗಳನ್ನು ಆಯೋಜಿಸಿ, ಅವರಲ್ಲಿ ವಿಶೇಷ ಅನುಭವ ತುಂಬಲು, ತಮ್ಮ ಸುತ್ತಲಿನ ಪ್ರಕೃತಿಯನ್ನು ಅರಿತುಕೊಳ್ಳಲು, ಇದು ನೆರವಾಗಲಿದೆ ಎನ್ನುವ ಆಸೆಯೂ ಅವರಿಗೆ ಇದೆ.

Add to
Shares
6
Comments
Share This
Add to
Shares
6
Comments
Share
Report an issue
Authors

Related Tags