ಫರ್ನಿಚರ್​ ಕೊಳ್ಳುವ ಕನಸು ಬಿಟ್ಟುಬಿಡಿ- ಬಾಡಿಗೆ ವಸ್ತುಗಳನ್ನು ಎಂಜಾಯ್​ ಮಾಡಿ..!

ಟೀಮ್​ ವೈ.ಎಸ್​. ಕನ್ನಡ

ಫರ್ನಿಚರ್​ ಕೊಳ್ಳುವ ಕನಸು ಬಿಟ್ಟುಬಿಡಿ- ಬಾಡಿಗೆ ವಸ್ತುಗಳನ್ನು ಎಂಜಾಯ್​ ಮಾಡಿ..!

Tuesday January 10, 2017,

2 min Read

ಸಿಲಿಕಾನ್ ಸಿಟಿ ಬೆಂಗಳೂರಿನಂತಹ ನಗರಗಳಲ್ಲಿ ಸ್ವಂತ ಮನೆ ಹೊಂದಿರುವವರು ಬಹಳಷ್ಟು ಕಡಿಮೆ. ನೂರರಲ್ಲಿ ಶೇಕಡಾ 50ರಷ್ಟು ಮಂದಿ ಬಾಡಿಗೆ ಮನೆಯಲ್ಲಿದ್ದಾರೆ. ಎಲ್ಲಿಂದಲೋ ಬಂದವರು ಇಲ್ಲಿ ಬಾಡಿಗೆ ಗೂಡು ಕಟ್ಟಿಕೊಂಡು ಇರುತ್ತಾರೆ. ವರ್ಷಕ್ಕೊಮ್ಮೆಯೋ ಅಥವಾ ಓನರ್​ಗಳು ಬಾಡಿಗೆಯನ್ನು ಹೆಚ್ಚು ಮಾಡಿದಾಗ ಮನೆಯನ್ನು ಖಾಲಿ ಮಾಡಬೇಕಾಗಿರುತ್ತದೆ. ಹಾಗಾಗಿ ಬಾಡಿಗೆ ಮನೆಗಳಿಗೆ ಅಗತ್ಯವಾದ ಪೀಠೋಪರಕರಣಗಳನ್ನು ಹೊಂದಲು ಕಷ್ಟವಾಗುತ್ತದೆ. ಆದರೂ ಚೆಂದದ ಸೋಫಾ, ಸೂಪರ್ ಆಗಿರುವ ಟಿವಿ ಟೇಬಲ್, ಚೆನ್ನಾಗಿ ಕಾಣುವ ಸೋಫಾ, ಖುಷಿ ಕೊಡುವ ಡೈನಿಂಗ್​ ಟೇಬಲ್​ , ಸುಖ ನಿದ್ದೆ ಬರಿಸುವ ಬೆಟ್ ಇರಬೇಕು ಅನ್ನೋ ಆಸೆಯಂತೂ ಇದ್ದೇ ಇರುತ್ತದೆ. ಈ ಆಸೆಯನ್ನು ಈಡೇರಿಸಿಕೊಳ್ಳಲು ಬೆಂಗಳೂರಿಲ್ಲಿ ಒಂದು ವೇದಿಕೆ ಸಿದ್ಧವಾಗಿದೆ. ಅದರ ಹೆಸರು "ರೆಂಟೊಮೋಜೋ".

image


ಏನಿದು "ರೆಂಟೊಮೋಜೋ "ಎಂದರೆ ಇಲ್ಲಿ ಫರ್ನಿಚರ್​ಗಳನ್ನು ಬಾಡಿಗೆಗೆ ನೀಡಲಾಗುತ್ತದೆ. ಇದೊಂದು ವೆಬ್​ಸೈಟ್ ಆಗಿದ್ದು, ಇಲ್ಲಿಗೆ ನೀವು ಲಾಗ್ ಇನ್ ಆದರೆ, ನಿಮಗೆ ಬೇಕಾದ ಪೀಠೊಪಕರಣಗಳನ್ನೆಲ್ಲಾ ಈ ವೆಬ್​ತಾಣದಲ್ಲಿ ಬಾಡಿಗೆಗೆ ಪಡೆಯಬಹುದು. ನಿಮಗೆ ಲಿವಿಂಗ್ ರೂಮ್​ನಲ್ಲಿ ಒಂದು ಸೋಫಾ, ಒಂದು ಬೀನ್ ಬ್ಯಾಗ್, ಮತ್ತೊಂದು ಟೇಬಲ್ ಬೇಕು ಅಂತ ಅನ್ನಿಸಿದ್ರೆ "ರೆಂಟೊಮೋಜೋ" ವೆಬ್​ಸೈಟ್​ಗೆ ಹೋಗಿ ನಿಮ್ಮಿಷ್ಟದ ವಸ್ತುಗಳನ್ನು ಬಾಡಿಗೆಗೆ ಪಡೆದುಕೊಳ್ಳಬಹುದು.

ಇದನ್ನು ಓದಿ: ಪ್ರಧಾನಿಯ ಕನಸಿಗೆ ಮತ್ತಷ್ಟು ಬಣ್ಣ- ಬನಾರಸ್​ ವೈದ್ಯೆಯ ಬೇಟಿ ಬಚಾವೋ, ಬೇಟಿ ಪಡವೋಗೆ ವಿಶಿಷ್ಟ ಸೇವೆ..!

ಪ್ಯಾಕೇಜ್​ನಲ್ಲಿ ಲಭ್ಯ

"ರೆಂಟೊಮೋಜೋ"ದಲ್ಲಿ ನಿಮಗೆ ಪ್ಯಾಕೇಜ್​ನಲ್ಲಿ ಫರ್ನಿಚರ್​ಗಳು ಬಾಡಿಗೆಗೆ ಸಿಗುತ್ತವೆ. ತಿಂಗಳ ಪ್ಯಾಕೇಜ್​ನಲ್ಲಿ, ವರ್ಷದ ಪ್ಯಾಕೇಜ್​ನಲ್ಲಿ ಲಭ್ಯವಿರುತ್ತವೆ. ತಿಂಗಳಿಗೆ 587 ರೂಪಾಯಿ ಬಾಡಿಗೆ ನಿಗದಿಯಾಗಿದ್ದು, ಒಂದು ವರ್ಷಕ್ಕೆ ನಿಮಗೆ ಬಾಡಿಗೆಗೆ ವಸ್ತುಗಳನ್ನು ಪಡೆಯಬೇಕು ಎಂದರೆ ನೀವು ಮೊದಲು ಅಡ್ವಾನ್ಸ್ ಅಮೌಂಟ್ ಕಟ್ಟಬೇಕು. ಈ ಹಣ ನಿಮಗೆ ಪಿಠೋಪಕರಣಗಳನ್ನು ವಾಪಾಸ್ ತಂದು ಕೊಟ್ಟಾಗ ವಾಪಾಸ್ ನೀಡುತ್ತಾರೆ. ಆದರೆ ವರ್ಷಕ್ಕೆ ಇಂತಿಷ್ಟು ಎಂದು ಬಾಡಿಗೆ ನೀಡಬೇಕು.

image


ಆರ್ಡರ್ ಮಾಡಿದರೆ ಮನಗೆ ಬಂದು ಬೀಳುವ ಫರ್ನೀಚರ್

"ರೆಂಟೊಮೋಜೋ"  ವೆಬ್​ಸೈಟ್​ಗೆ ಹೋಗಿ ನೀವು ಫರ್ನಿಚರ್​ಗಳನ್ನು ಬೇಕೆಂದು ಆರ್ಡರ್ ಮಾಡಿದರೆ ಸಾಕು ಅದು ನಿಮ್ಮ ಮನಗೆ ಬಂದು ಬೀಳುತ್ತದೆ. ನಿಮ್ಮ ಅವಧಿ ಮುಗಿದ ನಂತರ ನೀವು ಬೇಡ ಎಂದರೆ ಅವರೇ ಬಂದು ವಾಪಾಸ್ ಬಂದು ತೆಗೆದುಕೊಂಡು ಹೋಗುತ್ತಾರೆ. ಒಂದು ವೇಳೆ ಪೀಠೊಪಕರಣಗಳಿಗೇನಾದರೂ ಸಮಸ್ಯೆ ಆದರೆ ಆ ಸಮಸ್ಯೆಯ ಬಗ್ಗೆ ಅವರಿಗೆ ಕರೆ ಮಾಡಿ ತಿಳಿಸಿದರೆ ಸಾಕು ಅವರೇ ಬಂದು ತೆಗೆದುಕೊಂಡು ಹೋಗುತ್ತಾರೆ. ಹಾಗಾಗಿ ನೀವು ಏನಾದರೂ ಸಮಸ್ಯೆ ಬಂದರೆ ತಲೆ ಕೆಡಿಸಿಕೊಳ್ಳುವ ಹಾಗಿಲ್ಲ. ಒಟ್ಟಿನಲ್ಲಿ ಈ "ರೆಂಟೊಮೋಜೋ" ವೆಬ್​ಸೈಟ್​ಗೆ ಹೋದರೆ ನಿಮಗೆ ಬೇಕಾದ ಫರ್ನಿಚರ್​ಗಳನ್ನು ಬಾಡಿಗೆಗೆ ಪಡೆದು ನೆಮ್ಮದಿಯಾಗಿರಬಹುದು.

ಇದನ್ನು ಓದಿ:

1. ದೆಹಲಿಯ ಇಬ್ಬರು ಸಹೋದರರ ವಿಭಿನ್ನ ಕಥೆ- ಹೊಸ ಉದ್ಯಮ, ಹೊಸ ಕನಸು..!

2. ಇಲ್ಲಿ ನಮಗೆ ನಾವೇ ಬಾಸ್​..!ಉದ್ಯಮಿ ಆಗುವುದರ ಹಿಂದಿದೆ ನೂರಾರು ಕನಸು..!

3. ಫಿಜ್ಝಾ ಡೆಲಿವರಿಯಿಂದ ಕೇಬಲ್ ನ್ಯೂಸ್ ಚಾನೆಲ್ ಕಟ್ಟುವ ತನಕ…