ಆವೃತ್ತಿಗಳು
Kannada

ಫ್ಯಾನ್ ಟೆಕ್ನಾಲಜಿಯಲ್ಲಿದೆ ಆತ್ಮಹತ್ಯೆ ತಡೆಯುವ ಪ್ರಯತ್ನ..!

ಟೀಮ್​ ವೈ.ಎಸ್​. ಕನ್ನಡ

11th Jun 2017
Add to
Shares
2
Comments
Share This
Add to
Shares
2
Comments
Share

ಸೆಕೆಗಾಲದಲ್ಲಿ ಫ್ಯಾನ್ ಬೇಕೇ ಬೇಕು. ಹೀಗಾಗಿ ಎಲ್ಲಾ ಕಡೆ ಫ್ಯಾನ್​​ಗಳು ಇದ್ದೇ ಇರುತ್ತವೆ. ಆದ್ರೆ ಈ ಫ್ಯಾನ್​ಗಳಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದರಲ್ಲೂ ಕೋಟಾದ ಹಾಸ್ಟೆಲ್ ಒಂದರಲ್ಲಿ ಫ್ಯಾನ್​ಗೆ ನೇಣುಬಿಗಿದುಕೊಂಡು ಜೀವ ಕಳೆದುಕೊಂಡವರ ಸಂಖ್ಯೆ ಸಾಕಷ್ಟಿದೆ. ಕೋಟಾದ ಆ ಹಾಸ್ಟೆಲ್ ಗೋಡೆ ಗೋಡೆಗಳು ಕೂಡ ಒಂದೊಂದು ಆತ್ಮಹತ್ಯೆಯ ಕಥೆಗಳನ್ನು ಹೇಳುವಷ್ಟು ಜೀವ ಕಳೆದುಕೊಂಡವರ ಸಂಖ್ಯೆಗಳಿವೆ. ಕಳೆದ 6 ವರ್ಷಗಳಲ್ಲಿ ಕೋಟಾ ಹಾಸ್ಟೆಲ್​ನಲ್ಲಿದ್ದ ಸುಮಾರು 60 ವಿದ್ಯಾರ್ಥಿಗಳು ಫ್ಯಾನ್ ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂದಾಜು ಪ್ರತೀ ತಿಂಗಳಿಗೆ ಒಬ್ಬರಂತೆ ಜೀವ ಕಳೆದುಕೊಂಡಿದ್ದಾರೆ.

image


ಹಾಸ್ಟೆಲ್​ಗಳಲ್ಲಿ ಸಾಮಾನ್ಯವಾಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆಯೇ ಹೆಚ್ಚು. ಹೀಗಾಗಿ ಇದನ್ನು ತಡೆಯಲು ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಎಲೆಕ್ಟ್ರಾನಿಕ್ ಎಂಜಿನಿಯರ್ ಒಬ್ಬರು ಈ ಸಾಹಸಕ್ಕೆ ಕೈ ಹಾಕಿದ್ದಾರೆ. ಆ್ಯಂಟಿ ಸುಸೈಡ್ ಫ್ಯಾನ್ ರಾಡ್ ಒಂದನ್ನು ಕ್ರಾಂಪ್ಟನ್ ಅಂಡ್ ಗ್ರೀವ್ಸ್ ಸಂಸ್ಥೆಯಲ್ಲಿ ಜನರಲ್ ಮ್ಯಾನೇಜರ್ ಆಗಿದ್ದ ಶರದ್ ಅಶಾನಿ ಕಂಡುಹಿಡಿದಿದ್ದಾರೆ. ಇದು ಫ್ಯಾನ್​ಗೆ ನೇಣುಹಾಕಿಕೊಂಡು ಸಾಯುವವರ ಸಂಖ್ಯೆಯನ್ನು ತಡೆಯಲಿದೆ.

ಇದನ್ನು ಓದಿ: ಸ್ಟಾರ್ಟ್​ಅಪ್​ ಯಶಸ್ಸಿಗೆ ಏನೇನು ಮುಖ್ಯ..?

ಮಹಾರಾಷ್ಟ್ರ ಮುಲುಂಡ್ ನಿವಾಸಿಯಾಗಿರುವ 61ರ ಹರೆಯದ ಶರದ್ ಅಶಾನಿ ಹೊಸ ತಂತ್ರಜ್ಞಾನವನ್ನು ಕಂಡುಹಿಡಿದಿದ್ದಾರೆ. ಈ ತಂತ್ರಜ್ಞಾನದಲ್ಲಿ ಆತ್ಮಹತ್ಯೆ ಅಸಾಧ್ಯವಾಗಿದೆ. ಯಾಕಂದ್ರೆ ಫ್ಯಾನ್​ ಸೀಲಿಂಗ್​ಗಳು ರಾಡ್​ಗೆ ನೇಣು ಬಿಗಿಯುವುದನ್ನು ತಡೆಯುತ್ತದೆ. ಇದರ ಮೊದಲ ಪ್ರಯೋಗವಾಗಿ ಕೋಟಾದ ಹಾಸ್ಟೆಲ್ ಒಂದಕ್ಕೆ ಕಳುಹಿಸಿಕೊಡಲಾಗಿದೆ. ಅಷ್ಟೇ ಅಲ್ಲ ಅದು ಅಲ್ಲಿ ಬದಲಾವಣೆಯನ್ನು ತಂದಿದೆ.

“ ಫ್ಯಾನ್​ಗೆ ನೇಣು ಬಿಗಿದುಕೊಳ್ಳುವಾಗ ಅದು ಭಾರವನ್ನು ತಡೆಯುವುದಿಲ್ಲ. ಅಷ್ಟೇ ಅಲ್ಲ ಅದು ಕಳಚಿಕೊಳ್ಳುತ್ತದೆ. ರಾಡ್ ಕಳಚಿದರೆ ಆತ್ಮಹತ್ಯೆ ಪ್ರಯತ್ನ ವಿಫಲವಾಗುತ್ತದೆ. ಆದ್ರೆ ಕಳಚಿಬಿದ್ದ ರಾಡ್​ನಿಂದ ಆತ್ಮಹತ್ಯೆ ಪ್ರಯತ್ನ ಪಟ್ಟವರಿಗೆ ಗಾಯಗಳಾಗುವುದಿಲ್ಲ. ಯಾಕಂದ್ರೆ ಆ ರಾಡ್ ಲೈಟ್ ವೇಯ್ಟ್​ನಿಂದ ಕೂಡಿರುತ್ತದೆ. ”

ಅಂದಹಾಗೇ ಈ ಹೊಸ ತಂತ್ರಜ್ಞಾನದ ಫ್ಯಾನ್ ರಾಡ್​​ಗೆ ಹೆಚ್ಚು ಖರ್ಚು ಬೀಳುವುದಿಲ್ಲ. ಕೇವಲ 250 ರೂಪಾಯಿಗೆ ರಾಡ್ ಖರೀದಿ ಮಾಡಿ, ಹೊಸ ಮತ್ತು ಹಳೆಯ ಫ್ಯಾನ್​ಗಳಿಗೆ ಫಿಟ್ ಮಾಡಬಹುದು. ಈ ಬಗ್ಗೆ ಕೋಟಾ ಹಾಸ್ಟೆಲ್ಸ್ ಅಸೋಸಿಯೇಶನ್​ಗೆ ಈ ಬಗ್ಗೆ ತಿಳಿಸಿದಾಗ ಅದು ಪ್ರಯೋಗಕ್ಕೆ ಮನಸ್ಸು ಮಾಡಿತ್ತು. ಈಗ ಸುಮಾರು 5000 ರಾಡ್​ಗಳಿಗೆ ಆರ್ಡರ್​ಗಳು ಬಂದಿವೆ. ಈಗಾಗಲೇ 500 ಆರ್ಡರ್​ಗಳನ್ನು ಪೂರೈಕೆ ಮಾಡಲಾಗಿದೆ.

ಶರದ್ ಕಂಡುಹಿಡಿದ ತಂತ್ರಜ್ಞಾನದಿಂದ ಕೋಟಾ ಹಾಸ್ಟೆಲ್​ನಲ್ಲಿನ ಆತ್ಮಹತ್ಯೆಯ ತಲೆನೋವು ಕಡಿಮೆ ಆಗಿದೆ. ಮುಂದಿನ ದಿನಗಳಲ್ಲಿ ಇದು ಎಲ್ಲಾ ಹಾಸ್ಟೆಲ್, ಮನೆ ಮತ್ತು ಫ್ಯಾನ್ ಬಳಕೆ ಮಾಡುವ ಕಡೆಗಳಲ್ಲಿ ಕಂಡುಬಂದರೂ ಅಚ್ಚರಿಯಿಲ್ಲ.

ಇದನ್ನು ಓದಿ:

1. ಅಪ್ರಾಪ್ತ ಮಕ್ಕಳಿಗಾಗಿ ಹೊಸ ಆ್ಯಪ್- ಪೋಷಕರ ಚಿಂತೆ ದೂರ ಮಾಡಲಿದೆ ಫೇಸ್​ಬುಕ್..! 

2. ಆನ್​ಲೈನ್​ನಲ್ಲಿ ಕನ್ನಡ ಅಭಿವೃದ್ಧಿಗಾಗಿ ಪಣ ತೊಟ್ಟ ಟೆಕ್ಕಿಗಳು

3. ಗಾಯಗೊಂಡ ಪ್ರಾಣಿಗಳಿಗೆ ಆಶ್ರಯ ತಾಣ- ವಿರಾಟ್​ ಕೊಹ್ಲಿ ಭೇಟಿ ಬಳಿಕ ಬದಲಾಗಿದೆ ಅದೃಷ್ಟ

Add to
Shares
2
Comments
Share This
Add to
Shares
2
Comments
Share
Report an issue
Authors

Related Tags