ಆವೃತ್ತಿಗಳು
Kannada

ಅಂಕಿಅಂಶದ ಕಡೆಗೆ ಗಮನ- ಪಕ್ಕಾ ಲೆಕ್ಕ ಕೊಡ್ತಾರೆ ರೇಣುಕಾ ಮತ್ತು ಅರ್ಚನಾ..!

ಟೀಮ್​ ವೈ.ಎಸ್​. ಕನ್ನಡ

14th Apr 2017
Add to
Shares
12
Comments
Share This
Add to
Shares
12
Comments
Share

ನಾವು ಮಾಡುತ್ತಿರುವ ಕೆಲಸ ಯಾಕೆ ಮಾಡುತ್ತಿದ್ದೇವೆ ಅನ್ನುವುದನ್ನು ಮೊದಲು ಅರಿತುಕೊಳ್ಳಬೇಕು. ನಾವು ಮಾಡು ಕೆಲಸದ ಗುರಿ ಗೊತ್ತಿಲ್ಲದಿದ್ದರೆ, ಮಾಡುವ ಕೆಲಸವೂ ವೇಸ್ಟ್, ಸಮಯವೂ ವ್ಯರ್ಥ ಆಗುವುದು ಗ್ಯಾರೆಂಟಿ. ಭಾರತದಲ್ಲಿ ಅಂಕಿಅಂಶಗಳ ಸ್ಥಿತಿ ಕೂಡ ಹೀಗೆಯೇ ಆಗಿದೆ. ಭಾರತದಲ್ಲಿ ಅಂಕಿ ಸಂಖ್ಯೆಗಳನ್ನು ಸಂಗ್ರಹ ಮಾಡುವವರ ಕೊರತೆ, ಇಲ್ಲವೇ ಅಂಕಿ ಅಂಶಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ಬಗೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಹೀಗಾಗಿ ಭಾರತದಲ್ಲಿನ ಹಲವಾರು ಅಂಕಿಸಂಖ್ಯೆಗಳಿಗೆ ಬೆಲೆಯೇ ಇದ್ದಂತಾಗಿದೆ.

image


ನಿಜವಾದ ಅಂಕಿಸಂಖ್ಯೆ ಮತ್ತು ಅಧಿಕೃತ ಅಂಕಿಸಂಖ್ಯೆಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಶ್ರಮಪಡಲಾಗುತ್ತಿದೆ. ಆದ್ರೆ ಅದಕ್ಕಾಗಿ ಅರ್ಚನಾ ಶಿವಾಲೆ ಮತ್ತು ರೇಣುಕಾ ಧನಕರಂತಹವರ ಶ್ರಮ ಎಲ್ಲಾ ಕಡೆಯೂ ಬೇಕಾಗುತ್ತದೆ. ಅರ್ಚನಾ ಮತ್ತು ರೇಣುಕಾ ಪುಣೆ ಹತ್ತಿರದ ವಡುನಲ್ಲಿರುವ "ಹೆಲ್ತ್ ಅಂಡ್ ಡೆಮೊಗ್ರಫಿಕ್ ಸರ್ವಿಲೆನ್ಸ್ ಸಿಸ್ಟಮ್ಸ್" ಅಥವಾ ಹೆಚ್​ಡಿಎಸ್ಎಸ್ ಸೆಂಟರ್​ನಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರು 22 ಹಳ್ಳಿಗಳಲ್ಲಿನ ಜನನ, ಮರಣದ ಅಂಕಿ ಸಂಖ್ಯೆಗಳ ಜೊತೆಗೆ ಗ್ರಾಮಗಳಿಂದ ಗುಳೆ ಹೋದವರ, ಗ್ರಾಮಕ್ಕೆ ಗುಳೆ ಬರುತ್ತಿರುವವರ, ಮದುವೆಯಾಗಿ ಗ್ರಾಮಕ್ಕೆ ಬರುತ್ತಿರುವವರು ಸೇರಿದಂತೆ ಎಲ್ಲಾ ದಾಖಲಾತಿಗಳನ್ನು, ಅಂಕಿ ಸಂಖ್ಯೆಗಳನ್ನು ಸಂಗ್ರಹಿಸುತ್ತಾರೆ. ಈ ಮೂಲಕ ಸರಕಾರದ ಅಧಿಕೃತ ಅಂಕಿ ಸಂಖ್ಯೆಯನ್ನು ಸಾಧ್ಯವಾದಷ್ಟರ ಮಟ್ಟಿಗೆ ಸರಿಯಾಗಿರುವಂತೆ ನೋಡಿಕೊಳ್ಳುತ್ತಾರೆ.

ಇದನ್ನು ಓದಿ: ಡಾಕ್ಯುಮೆಂಟರಿಯಲ್ಲಿ ಕಾಣಿಸಿಕೊಂಡ ಏಳು ಬೆಟ್ಟಗಳ ಒಡೆಯ- ಹೊಸ ಇತಿಹಾಸ ಬರೆದ ನ್ಯಾಷನಲ್ ಜಿಯೋಗ್ರಫಿ..!

ಅರ್ಚನಾ ಮತ್ತು ರೇಣುಕಾ 22 ಹಳ್ಳಿಗಳಿಂದ ಸಂಗ್ರಹವಾದ ಅಂಕಿ ಸಂಖ್ಯೆಯನ್ನು ಸಿಸ್ಟಮ್​ಗಳಲ್ಲಿ 6 ತಿಂಗಳಿಗೊಮ್ಮೆ ಅಪ್​ಡೇಟ್ ಮಾಡುತ್ತಿದ್ದಾರೆ. 2002ರಿಂದ ಹೆಚ್​ಡಿಎಸ್ಎಸ್ ಸೆಂಟರ್​ಗಳು ಈ ಕೆಲವನ್ನು ಮಾಡುತ್ತಿವೆ. ಈ ಸೆಂಟರ್​ಗಳಲ್ಲಿ ಹೆಚ್ಚಾಗಿ ಮಹಿಳಾ ಉದ್ಯೋಗಿಳೇ ಇದ್ದಾರೆ. ಗ್ರಾಮೀಣ ಭಾರತದಲ್ಲಿ ಮಹಿಳೆಯರು ಮನೆಯೊಳಗೇ ಇರಬೇಕು ಅನ್ನುವ ನಿಯಮ ದೂರವಾಗುತ್ತಿದೆ. ಮಹಿಳೆಯರು ಕೂಡ ಕೆಲಸ ಮಾಡಿ, ಸರಕಾರದ ಯೋಜನೆಗಳಿಗೆ ಸಹಾಯ ಮಾಡಬಹುದು ಅನ್ನುವುದನ್ನು ತೋರಿಸಿಕೊಡುತ್ತಿದ್ದಾರೆ. ಅಷ್ಟೇ ಅಲ್ಲ ಮಹಿಳೆಯರೂ ಕೆಲಸ ಮಾಡುವ ಮೂಲಕ ಪುರುಷರ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡುತ್ತಿದ್ದಾರೆ.

“ ಅಂಕಿಸಂಖ್ಯೆಗಳು ಹೆಚ್ಚು ನಿಖರವಾಗಿರಬೇಕು. ಯಾವುದೇ ಉದ್ದೇಶಕ್ಕೆ ಬಳಸುವಾಗಲೂ ಸರಿಯಾದ ಮಾಹಿತಿ ಸಿಗಬೇಕು. ಹೀಗಾಗಿ ನಮ್ಮ ಅಂಕಿ ಸಂಖ್ಯೆಗಳನ್ನು ಶೇಕಡಾ 100ರಷ್ಟು ನಿಖರವನ್ನಾಗಿ ಮಾಡುವ ಗುರಿ ಹೊಂದಿದ್ದೇವೆ.”

ಅಂಕಿಸಂಖ್ಯೆಗಳ ಸಂಗ್ರಹದ ಕೆಲಸದಲ್ಲಿ ಎನ್ಎಸ್ಎಸ್ಒ, ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ ಸೇರಿದಂತೆ ಹಲವು ಸಂಸ್ಥೆಗಳು ಹೆಚ್​​ಡಿಎಸ್ಎಸ್ ಜೊತೆ ಕೆಲಸ ಮಾಡುತ್ತಿವೆ. ಆದ್ರೆ ಈ ಸಂಸ್ಥೆಗಳಿಗೆ ನೀಡುವ ಅನುದಾನ ಕಡಿಮೆ ಆಗಿರುವುದರಿಂದ ಇಲ್ಲಿನ ಕೆಲಸಗಾರರ ವೇತನ ತುಂಬಾ ಕಡಿಮೆ ಇದೆ.

ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ನಿಖರವಾದ ಅಂಕಿಸಂಖ್ಯೆಗಳನ್ನು ಪಡೆಯುವ ಬಗ್ಗೆ ಜಾಗೃತಿ ಹೆಚ್ಚುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಸರಕಾರ ಇತ್ತ ಕಡೆ ಹೆಚ್ಚು ಗಮನ ಹರಿಸುವುದು ಗ್ಯಾರೆಂಟಿ.

ಇದನ್ನು ಓದಿ:

1. 3 ಗಂಟೆ ಮುಂಚಿತವಾಗಿ ಬುಕ್ ಮಾಡಿ- ಮನೆ ಬಾಗಿಲಿಗೆ ಬರಲಿದೆ ಫ್ರೆಶ್​ ಹಣ್ಣು ತರಕಾರಿ..! 

2. ಹಳೆಯ ಬಟ್ಟೆಗಳನ್ನು ಸ್ಟೈಲಿಷ್ ಆಗಿ ಪರಿವರ್ತಿಸುವ ಯುವಕ- ವಸ್ತ್ರಗಳ ಮರುಬಳಕೆ ಪಾಠ ಮಾಡುತ್ತಿರುವ ಯಾಕೂಬ್

3. ಸ್ವೈಪಿಂಗ್​ ಮಷಿನ್​ಗಳಿಗೆ ಸಿಗಲಿದೆ ಬಹುಭಾಷೆಯ ಟಚ್​- ಡಿಜಿಟಲ್​ ಪಾವತಿ ವ್ಯವಸ್ಥೆಗೆ ಹೊಸ ​ಕಿಕ್

Add to
Shares
12
Comments
Share This
Add to
Shares
12
Comments
Share
Report an issue
Authors

Related Tags