ಆವೃತ್ತಿಗಳು
Kannada

ಆಕ್ರಮಣಕಾರಿಯಾಗಿ ಗುರಿ ಮುಟ್ಟು- ವೃತ್ತಿ ಬದುಕಲ್ಲಿ ಸಾಧನೆಗೈದ ಪ್ರಸನ್ನ ಆನಿರೆಡ್ಡಿ , ಪ್ರೊಗ್ರೆಸ್ ಸಾಫ್ಟ್​​​ವೇರ್ ನಿರ್ದೇಶಕಿ

ಟೀಮ್​​ ವೈ.ಎಸ್​​. ಕನ್ನಡ

YourStory Kannada
2nd Dec 2015
3+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

ಪ್ರಸನ್ನ ಆನಿರೆಡ್ಡಿ ಸರಳ ವ್ಯಕ್ತಿತ್ವದ, ನೇರನುಡಿಯ ಟೆಕ್ನಾಲಜಿ ಬಗ್ಗೆ ಪ್ರೀತಿ ಹೊಂದಿರುವ ಮಹಿಳೆ. ಪ್ರಸನ್ನ ಅವರೊಂದಿಗೆ ಪ್ರಾಮಾಣಿಕವಾಗಿ ಮಾಡಿರುವ ಈ ನೇರ ಸಂದರ್ಶನದಲ್ಲಿ, ಆಕೆಯ ಬಾಲ್ಯ, ಶಾಲಾ ದಿನಗಳು, ವೃತ್ತಿ ಬದುಕಿನ ಆರಂಭದ ದಿನಗಳು, ಯಶಸ್ಸಿನೆಡೆ ಆಕೆ ನಡೆದ ದಾರಿಯನ್ನ ಬಿಚ್ಚಿಟ್ಟಿದ್ದಾರೆ. ಇನ್ನಷ್ಟು ಆಳವಾಗಿ ತಿಳಿದುಕೊಳ್ಳುವ ಪ್ರಯತ್ನ ಇಲ್ಲಿದೆ.

image


"ನನ್ನ ತಂದೆ ನನಗೆ ಹೆಚ್ಚು ಮಹತ್ವಕಾಂಕ್ಷೆಯಾಗಿರು ಎಂದು ಹೇಳುತ್ತಿದ್ದರು"

ನಾನು ಪಿಯುಸಿ ಮುಗಿಸಿದ್ದು, ಹೈದ್ರಾಬಾದ್‍ನ ಸ್ಟ್ಯಾನ್ಲಿ ಜೂನಿಯರ್ ಕಾಲೇಜಿನಲ್ಲಿ. ಪಿಯುಸಿಯಲ್ಲಿ ನನಗೆ ಶ್ರೇಯಾಂಕ ಕೂಡ ಲಭಿಸಿತ್ತು. ನಂತ್ರ ಪಿಲಾನಿಯ ಬಿಐಟಿಎಸ್ ಗೆ ಅಡ್ಮಿಷನ್ ಪಡೆದುಕೊಂಡೆ. ಕಾಲೇಜು ದಿನಗಳನ್ನ ಹಿಂತಿರುಗಿ ನೋಡಿದಾಗ ನಾನು ನನ್ನ ವೃತ್ತಿ ಬದುಕಿನ ಬಗ್ಗೆ ಅಷ್ಟು ಮಹತ್ವಾಕಾಂಕ್ಷಿಯಾಗಿರಲಿಲ್ಲ ಅನಿಸತ್ತೆ. ಯಾವಾಗಲೂ ಆತುರದ ನಿರ್ಧಾರಗಳು ನನ್ನದಾಗಿರುತ್ತಿದ್ದವು. ಯಾವುದೇ ಕೆಲಸವನ್ನೂ ಪ್ರೀತಿಯಿಂದ ಮಾಡ್ತಾ ಇದ್ದೆ. ಪಿಲಾನಿಯ ಬಿಐಟಿಎಸ್ ನಲ್ಲಿ ಅಡ್ಮಿಷನ್ ದೊರೆತ್ರೂ ನನಗೆ ಅಷ್ಟು ದೂರ ಹೋಗುವುದು ಇಷ್ಟವಿರಲಿಲ್ಲ. ಹೈದ್ರಾಬಾದ್‍ನಲ್ಲೇ ಇರುವ ಉಸ್ಮಾನಿಯಾ ಯೂನಿವರ್ಸಿಟಿಗೆ ಸೇರಿ, ಮನೆಯಿಂದಲೇ ಕಾಲೇಜಿಗೆ ಹೋಗಬಯಸಿದ್ದೆ. ಆದ್ರೆ, ನನ್ನ ತಂದೆಯ ಅಭಿಪ್ರಾಯವೇ ಬೇರೆಯಾಗಿತ್ತು. ಅವರ ಆಲೋಚನೆ ಪ್ರಕಾರ ಕುಟುಂಬದಿಂದ ದೂರ ಉಳಿದು, ಉತ್ತಮ ಸಂಸ್ಥೆಯಲ್ಲಿ ಕಲಿತ್ರೆ, ಹೆಚ್ಚಿನ ಜ್ಞಾನ ಪಡೆಯಬಹುದು ಅನ್ನೋದು ಅವರ ಯೋಚನೆಯಾಗಿತ್ತು. ಬಿಐಟಿಎಸ್ ಗೆ ಪ್ರವೇಶ ಪಡೆಯಲು ನನ್ನ ತಂದೆಯೇ ಮುಖ್ಯ ಕಾರಣ. ಈ ನಿರ್ಧಾರ ನಿಜವಾಗಿಯೂ ನನ್ನ ಜೀವನದಲ್ಲಿ ಒಳ್ಳೆಯ ಬದಲಾವಣೆ ತಂದಿತ್ತು. ಪಿಲಾನಿಯ ನಂತ್ರ ನಾನು ಯುಎಸ್‍ಎಯಲ್ಲಿರುವ ಮಿಷಿಗನ್ ಟೆಕ್ನಾಲಜಿ ಯೂನಿವರ್ಸಿಟಿಗೆ ಪ್ರವೇಶ ಪಡೆದುಕೊಂಡಿದ್ದೆ.

ಪಿಲಾನಿಗೆ ಹೋದ ನಂತ್ರ, ಆರಾಮದಾಯಕ ಜೀವನಕ್ಕೆ ಫುಲ್‍ಸ್ಟಾಪ್ ಬಿದ್ದಿತ್ತು. ನನಗೆ ಹೊಸ ಸಂಸ್ಕೃತಿಯ ಮತ್ತು ಸ್ನೇಹಿತರ ಪರಿಚಯವಾಗಿತ್ತು. ಮಿಷಿಗನ್‍ನಲ್ಲಿ ನಾನು ವಿದ್ಯಾಭ್ಯಾಸದ ಜೊತೆಗೆ ಸಹ ಪ್ರಾದ್ಯಾಪಕಿಯಾಗಿ ಕಾರ್ಯ ನಿರ್ವಹಿಸ್ತಾ ಇದ್ದೆ. ನನ್ನ ಪ್ರಾದ್ಯಾಪಕರು ನನ್ನಲ್ಲಿನ ಸಾಮರ್ಥ್ಯ ವನ್ನು ಗುರುತಿಸಿ ನನ್ನನ್ನು ಪ್ರೋತ್ಸಾಹಿಸಿ ಈ ಕ್ಷೇತ್ರದಲ್ಲೇ ಮುಂದುವರೆಯುವಂತೆ ಸೂಚಿಸಿದ್ದರು. ಇದು ನನ್ನ ಆತ್ಮ ವಿಶ್ವಾಸವನ್ನು ಹೆಚ್ಚಿಸಿತ್ತು.

ಆಟೊಮೇಷನ್ ಟೆಕ್ನಾಲಜಿಯ ಸೇರ್ಪಡೆ

ನಾನು ಪದವಿ ಪಡೆದ ನಂತ್ರ ಅಮೇರಿಕಾದಲ್ಲಿ ಆರ್ಥಿಕ ಸಂಕಷ್ಟ ಎದುರಾಗಿತ್ತು. ಉನ್ನತ ಶಿಕ್ಷಣ ಮಾಡುವಾಗಲೇ ನಾನು ವೈವಾಹಿಕ ಜೀವನಕ್ಕೆ ಕಾಲಿಡಬೇಕಾಯ್ತು. ನನ್ನ ಪತಿ ಕೆಲಸ ಮಾಡುತ್ತಿದ್ದ ನಗರದಲ್ಲೇ ನಾನು ಆಗತಾನೇ ಆರಂಭವಾಗಿದ್ದ ಆಟೋಮೇಷನ್ ಟೆಕ್ನಾಲಜಿಯನ್ನ ಸೇರಿಕೊಂಡೆ. ಹದಿನೈದು ವರ್ಷಗಳ ದೀರ್ಘ ಕಾಲ ಅದೇ ಕಂಪನಿಯಲ್ಲಿ ದುಡಿದೆ. 2000ನೇ ಇಸವಿಯಲ್ಲಿ ನಾವು ಭಾರತಕ್ಕೆ ಹಿಂದಿರುಗಲು ನಿರ್ಧರಿಸಿ, ಮಕ್ಕಳನ್ನು ಭಾರತದಲ್ಲೇ ಬೆಳೆಸ ಬೇಕೆಂದಿದ್ದೆವು. ನನ್ನ ಪತಿ ಎಲೆಕ್ಟ್ರಾನಿಕ್ಸ್ ವಲಯದಲ್ಲಿ ಪರಿಣಿತರಾಗಿದ್ದರು. ನಾವು ವಾಪಸ್ಸಾದ ನಂತ್ರ, ನನ್ನ ಪತಿ ನ್ಯಾನೋ ಬ್ರೈಟ್ಸ್ ಸೋಲಾರ್ ಟೆಕ್ನಾಲಜೀಸ್ ಎನ್ನುವ ಕಂಪನಿಯೊಂದನ್ನ, ಹೈದ್ರಾಬಾದ್‍ನಲ್ಲಿ ಸ್ಫಾಪಿಸಿದರು. ಇಂದು ಅವರೊಬ್ಬ ಯಶಸ್ವಿ ಸಂಸ್ಥೆಯ ಮಾಲೀಕ.

ಹದಿನೈದು ವರ್ಷಗಳ ಕಾಲ ಆಟೋಮೇಷನ್‍ನಲ್ಲಿದ್ದಾಗಲೇ ಇತರೆ ಸಂಸ್ಥೆಗಳ ಹಲವು ಆಫರ್‍ಗಳು ನನಗೆ ಬಂದಿದ್ದವು. ಆದ್ರೆ, ನಾನು ಆಟೋಮೇಷನ್ ತೊರೆಯಲಿಲ್ಲ ಕಾರಣ, ಹೊಸ ಕಂಪನಿಯಲ್ಲಿ ಕೆಲಸ ಮಾಡಲು ಇಷ್ಟ ಪಡುತ್ತಿದ್ದೆ. ಹಾಗೂ ಆ ಕಂಪನಿಯ ಸ್ಥಾಪಕರು ನನನ್ನ ಬಹಳವಾಗಿ ನಂಬಿದ್ದರು. ಉತ್ತಮ ಅವಕಾಶಗಳೊಂದಿಗೆ ನನ್ನನ್ನು ಪ್ರೋತ್ಸಾಹಿಸುತ್ತಿದ್ದರು.

ಇಂಜಿನಿಯರಿಂಗ್ ನಿದೇರ್ಶಕಿಯಾಗಿ ಬಡ್ತಿ

ಆಟೋಮೇಷನ್‍ನಲ್ಲಿ ಮುಂದುವರೆದ ಭಾಗದಂತೆ, ನಾನು ಪ್ರೋಗ್ರೆಸ್ ವಿಭಾಗಕ್ಕೆ ಸೇರಿದೆನು. ಪ್ರೊಗ್ರೆಸ್‍ನಲ್ಲಿ ಆಡಳಿತ ನಿರ್ವಹಣೆಯ ಜವಾಬ್ದಾರಿ ನನ್ನದಾಗಿತ್ತು. ಇಂದು ನಾನು ಇದೇ ಕಂಪನಿಯಲ್ಲಿ ಇಂಜಿನಿಯರಿಂಗ್ ಡೈರೆಕ್ಟರ್. ಟೀಮ್ ಲೀಡರ್, ಮತ್ತು ಇಂಜಿನಿಯರಿಂಗ್ ಮ್ಯಾನೇಜ್ ಸೇರಿದಂತೆ ಮೂವತ್ತು ಜನರ ತಂಡದ ಜವಬ್ದಾರಿ ನನಗಿದೆ. ಟೆಕ್ನಾಲಜಿಯಲ್ಲಿ ನನಗೆ ಅತೀವ ಆಸಕ್ತಿ ಇದೆ. ಮಾರ್ಕೆಟಿಂಗ್ ಹಾಗು ಸೇಲ್ಸ್ ವಿಭಾಗದವರೊಂದಿಗೂ ಕೆಲಸ ಮಾಡಿದ್ದೇನೆ. ಆದ್ರೆ, ಟೆಕ್ನಾಲಜಿ ನನ್ನ ಹೃದಯಕ್ಕೆ ಹತ್ತಿರವಾಗಿದೆ. ನನಗೆ ವಹಿಸಿದ ಕೆಲಸಗಳನ್ನ ನಾನು ಅಚ್ಚುಕಟ್ಟಾಗಿ ನಿಭಾಯಿಸಿದ್ದೇನೆ. ಸಮಯಕ್ಕೆ ಸರಿಯಾಗಿ ಕರ್ತವ್ಯವನ್ನ ಮಾಡಿ ಮುಗಿಸಿದ್ದೇನೆ, ಇದೇ ಶಿಸ್ತು ನನಗೆ ಇನ್ನೂ ಹೆಚ್ಚಿನ ಅವಕಾಶಗಳನ್ನ ತಂದುಕೊಟ್ಟಿತ್ತು.

ನನ್ನ ಶಕ್ತಿ ಹಾಗೂ ನ್ಯೂನ್ಯತೆಗಳು

ಉತ್ತಮ ಕೆಲಸ ಮಾಡಲು ನನ್ನಲ್ಲಿದ್ದ ಉತ್ಸಾಹ, ಬಲಿಷ್ಠ ಸಂಬಂಧಗಳನ್ನ ಬೆಳೆಸಲು ನನ್ನಲಿದ್ದ ಸಾಮರ್ಥ್ಯ, ತಮ್ಮ ಕರ್ತವ್ಯ ನಿಭಾಯಿಸಲು ನಾನು ನನ್ನ ತಂಡಕ್ಕೆ ಕೊಡುತ್ತಿದ್ದ ಪ್ರೋತ್ಸಾಹ ಇವುಗಳೇ ನನ್ನ ಯಶಸ್ಸಿಗೆ ಕಾರಣವಾದವು. ನಾನು ನೇರ ನುಡಿಯವಳಾಗಿರಲಿಲ್ಲ, ಆದ್ರೆ ಇದನ್ನ ಬಹಳವಾಗಿ ಮಾಡಬೇಕಾಯ್ತು. ನಾನು ಟೆಕ್ನಾಲಜಿ ಬಗ್ಗೆ ಆಸಕ್ತಿಯುಳ್ಳ ಗುಂಪಿನ ಭಾಗವಾಗಿದ್ದೆನು. ನನ್ನ ಸಂಪರ್ಕದಲ್ಲಿರುವವರ ಜೊತೆ ಹೆಚ್ಚು ಕ್ರಿಯಾತ್ಮಕವಾಗಿರುತ್ತಿದ್ದೆನು.

ಪೋಷಕರು ಹಾಗೂ ಪತಿ ನನ್ನ ಯಶಸ್ಸಿನ ರೂವಾರಿಗಳು

ಅತ್ಯಂತ ಬೆಂಬಲ ನೀಡುವ ಕುಟುಂಬ ನನ್ನದು. ನನಗೆ ಸಹಾಯ ಬೇಕೆನಿಸಿದಾಗಲೆಲ್ಲಾ, ನನ್ನ ಪೋಷಕರು ನನ್ನ ಸಹಾಯಕ್ಕೆ ಬರುತ್ತಿದ್ದರು. ನನ್ನ ಮಕ್ಕಳು ಚಿಕ್ಕವರಾಗಿದ್ದಾಗಲೂ ನನ್ನ ತಂದೆ ತಾಯಿಯೇ ನನ್ನ ಮಕ್ಕಳನ್ನೂ ನೋಡಿಕೊಳ್ಳುತ್ತಿದ್ದರು. ಮಕ್ಕಳ ಆರೋಗ್ಯ ಸರಿಯಿಲ್ಲದ ಸಮಯದಲ್ಲಿ ಅಥವಾ ಮಕ್ಕಳಿಗೆ ರಜೆ ಕೊಟ್ಟ ಸಂದರ್ಭದಲ್ಲಿ ಅಂದ್ರೆ, ಅಗತ್ಯವಿದ್ದಾಗ ಮಾತ್ರ ನಮ್ಮನ್ನು ಕರೆಸಿಕೊಳ್ಳುತ್ತಿದ್ದರು. ಕೆಲವೊಂದು ಜವಬ್ದಾರಿಯನ್ನು ಕೂದ ನನ್ನ ಮನೆಯವರೆ ತೆಗೆದುಕೊಳ್ಳುತ್ತಿದ್ದರು, ಹಾಗಾಗಿ ನನ್ನ ವೃತ್ತಿ ಬದುಕಿನಲ್ಲಿ ಸಂಪೂರ್ಣ ಗಮನ ಹರಿಸಲು ಸಾಧ್ಯವಾಯಿತು. ಬೆಂಬಲ ನೀಡುವ ಕುಟುಂಬವಿದ್ದುದ್ದರಿಂದ, ಎಲ್ಲವೂ ವಿಭಿನ್ನವಾಗಿತ್ತು. ನಾನು ನನ್ನ ಪತಿ ಇದ್ದ ಸಮಯವನ್ನು ಹಂಚಿಕೊಂಡು ನಮ್ಮ ಮಕ್ಕಳನ್ನು ಬೆಳೆಸಿದೆವು.

ದುಡಿಯುವ ತಾಯಿಯಾಗಿ ಇರುವ ಪ್ರಯೋಜನಗಳು

ನನಗೆ ಇಬ್ಬರು ಹೆಣ್ಣುಮಕ್ಕಳು. ಮೊದಲನೆಯವಳ ಹೆಸರು ಅಪೂರ್ವ ಅವಳಿಗೀಗ 19 ವರ್ಷ. ಅವಳು ಎರಡನೇ ವರ್ಷದ ಎಮ್‍ಬಿಬಿಎಸ್ ಓದುತ್ತಿದ್ದಾಳೆ. ಎರಡನೇ ಮಗಳು ಅಲ್ಪನ,16 ವರ್ಷದ ಅವಳಿಗೆ ಕಾನೂನು ಅಥವಾ ವಾಸ್ತುಶಿಲ್ಪ ಓದಬೇಕೆನ್ನುವ ಹಂಬಲವಿದೆ. ನನ್ನಿಬ್ಬರು ಮಕ್ಕಳು ತಕ್ಕಮಟ್ಟಿಗೆ ಸ್ವತಂತ್ರ ನಿರ್ಧಾರಗಳನ್ನ ತೆಗೆದುಕೊಳ್ಳಬಲ್ಲರು. ನಾನು ದುಡಿಯುವ ತಾಯಿಯಾಗಿರುವುದರಿಂದ, ನನ್ನ ಮಕ್ಕಳು ಇನ್ನೊಬ್ಬರನ್ನ ಅವಲಂಭಿಸುವುದಿಲ್ಲ. ನನ್ನ ಮಕ್ಕಳು ಕೂಡ ನಾನು ನನ್ನ ವೃತ್ತಿಬದುಕಿನಲ್ಲಿ ಉನ್ನತ ಮಟಟ್ಕ್ಕೇರಸಲು ಸಹಕರಿಸಿದರು. ನಾನು ಮನೆಯಲ್ಲೇ ಇದ್ದಿದ್ರೆ, ನನ್ನ ಮಕ್ಕಳೊಂದಿಗೆ ಹೆಚ್ಚು ಬೆರೆಯುವ ಅವಕಾಶವಿರುತ್ತಿತ್ತು., ಆದ್ರೆ, ನಾನು ದುಡಿಯುವ ಕಾರಣ, ಅವರ ಸ್ವಂತ ನಿರ್ಧಾರವನ್ನ ಅವರೇ ತೆಗೆದುಕೊಳ್ಳುವಂತಾಗಿದೆ. ಈ ನಿರ್ಧಾರವು ಅವರು ಹೆಚ್ಚು ಪರಿಪಕ್ವವಾಗಲು ಕಾರಣವಾಗಿದೆ.

ಮಹಿಳೆಯರನ್ನು ವಿಭಿನ್ನವಾಗಿಸುವ ಕೆಲವು ಸರಳ ವಿಚಾರಗಳು

ಯುಎಸ್‍ನಲ್ಲಿ ಭಾರತಕ್ಕೆ ಹೋಲಿಸಿದ್ರೆ, ಯಾವುದೇ ಕ್ಷೇತ್ರದಲ್ಲಿ ದುಡಿಯುವ ಮತ್ತು ಯಶಸ್ಸು ಕಂಡ ಮಹಿಳೆಯರ ವರ್ಗ ಹೆಚ್ಚು. ಕಛೇರಿಯಲ್ಲಿ ತಡರಾತ್ರ್ರಿಯವರೆಗೂ ಕೆಲಸ ಮಾಡುವುದು ಸರಿಯಲ್ಲ. ಇಲ್ಲಿ, ತಡರಾತ್ರಿ ಟ್ರಾವೆಲ್ ಮಾಡೋದು ಸೇಫ್ ಅಲ್ಲ ಅಂತಾ ಭಾವಿಸುವ ಸರಳ ಕಾರಣಗಳಿರಬಹುದು. ಆದ್ರೆ, ಈ ಎಲ್ಲಾ ಸರಳ ಕಾರಣಗಳು ನನ್ನನ್ನು ವಿಭಿನ್ನವಾಘಿಸಲು ಸಾಧ್ಯವಾಯಿತು.

ಯುವತಿಯರಿಗೆ ನನ್ನದೊಂದು ಸಲಹೆ

ನಿಮಗೆ ವರತ್ತಿಜೀವನದ ಗುರಿ ಇದ್ದರೆ, ಆಕ್ರಮಣಕಾರಿಯಾಗಿ ಮುನ್ನಡೆಯಿರಿ. ವಾಸ್ತವವಾಗಿ ನಾನು ಈ ದಿನಗಳಿಗಿಂತಲೂ ವೃತ್ತಿ ಬದುಕನ್ನು ಆರಮಭಿಸಿದ ಸಮಯದಲ್ಲಿ ಹೆಚ್ಚು ಆಕ್ರಮಣಕಾರಿಯಾಗಿದ್ದೆನು.

ಲೇಖಕರು: ವರ್ಷಾ ಅಡುಸುಮಿಲ್ಲಿ

ಅನುವಾದಕರು: ಪಿ.ಅಭಿನಾಷ್​​​​

3+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags