ಆವೃತ್ತಿಗಳು
Kannada

ದೊಡ್ಡದಾಗಿ ಬೆಳೆಯುತ್ತಿದೆ ಸಿಲಿಕಾನ್​ ಸಿಟಿ-ಪ್ರಯಾಣಿಕರಿಗೆ ತಪ್ಪಲ್ಲ ಟ್ರಾಫಿಕ್​ ಕಿರಿಕಿರಿ

ಟೀಮ್​ ವೈ.ಎಸ್​. ಕನ್ನಡ

12th May 2017
Add to
Shares
7
Comments
Share This
Add to
Shares
7
Comments
Share

ಬೆಂಗಳೂರಿನಲ್ಲಿ ನೀವೇನು ಅನುಭವಿಸುತ್ತಿರೋ, ಬಿಡುತ್ತಿರೋ ಗೊತ್ತಿಲ್ಲ. ಆದ್ರೆ ಸಿಲಿಕಾನ್​ ಸಿಟಿಯ ಟ್ರಾಫಿಕ್​ ಗೋಳು ಮಾತ್ರ ಯಾವತ್ತು ತಪ್ಪುವುದಿಲ್ಲ. ಭಾರತದ ಎಲ್ಲಾ ಮಹಾನಗರಗಳಂತೆ ಬೆಂಗಳೂರು ಕೂಡ ಟ್ರಾಫಿಕ್​ ಜಾಮ್​ ಪ್ರಾಬ್ಲಂನಿಂದ ನರಳುತ್ತಿದೆ. ಫ್ಲೈ ಓವರ್​, ಅಂಡರ್​ಪಾಸ್​, ಎಲವೇಟೆಡ್​ ಹೈವೇ, ಹೀಗೇ ಅದೇನು ಮಾಡಿದ್ರೂ ಟ್ರಾಫಿಕ್​ ಕಂಟ್ರೋಲ್​ ಮಾಡಲು ಸಾಧ್ಯವಾಗುತ್ತಿಲ್ಲ. ಆಫೀಸ್​ ಕೆಲಸ ದಿನಕ್ಕೆ ಸರಾಸರಿಯಾಗಿ ಎಂಟು ಗಂಟೆ ಮಾತ್ರ ಇದ್ರೂ, ಟ್ರಾಫಿಕ್​ನಲ್ಲಿ ಸರಿಸುಮಾರು ಎರಡು ಗಂಟೆ ವೇಸ್ಟ್​ ಮಾಡಬೇಕಾದ ಸ್ಥಿತಿ ಬೆಂಗಳೂರಿನ ಜನಕ್ಕೆ ಎದುರಾಗಿದೆ. ಟ್ರಾಫಿಕ್ ಪ್ರಾಬ್ಲಂಗೆ ಮಂಗಳ ಹಾಡಲು ಅದೆಷ್ಟೋ ಪ್ಲಾನ್​ಗಳನ್ನು ಮಾಡಿದ್ರೂ ಅದು ಪ್ರಯೋಜನಕ್ಕೆ ಬಂದಿಲ್ಲ. ಕೋಟಿಗಟ್ಟಲೆ ದುಡ್ಡು ಸುರಿದು ಮಾಡಿದ ಪ್ರಾಜೆಕ್ಟ್​ಗಳೆಲ್ಲಾ ವೇಸ್ಟ್ ಪ್ಲಾನ್​ಗಳ ಪಟ್ಟಿಗೆ ಬಿದ್ದಿವೆ. ಹಾಗಾದ್ರೆ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಪರಿಹಾರವೇ ಇಲ್ವಾ.. ಇಲ್ಲ ಅನ್ನೋ ಉತ್ತರ ನೆಗೆಟಿವ್ ಆ್ಯಂಗಲ್ ಕ್ರಿಯೇಟ್ ಮಾಡುತ್ತದೆ. ಇದೆ ಅಂದ್ರೆ ತಪ್ಪಾಗುತ್ತದೆ. ಆದ್ರೆ ಈಗಿರುವ ಟ್ರಾಫಿಕ್ ಸಮಸ್ಯೆಯನ್ನು ನಿವಾರಿಸೋದಿಕ್ಕೆ ಹಲವು ರೀತಿಯ ಚಿಂತನೆಗಳು ನಡೆಯುತ್ತಿದೆ.

image


ಜಾರಿಯಾಗುತ್ತಾ ಸಮ-ಬೆಸ ಮಂತ್ರ..?

ಈಗಾಗಲೇ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ವಾಹನಗಳಿಂದ ಉಂಟಾಗುವ ವಾಯುಮಾಲಿನ್ಯವನ್ನು ತಡೆಯಲು ಸಮ-ಬೆಸ ತಂತ್ರವನ್ನು ಜಾರಿಗೆ ತರಲಾಗಿದೆ. ಇದರಿಂದ ಮಾಲಿನ್ಯ ತಡೆಯುವ ಜೊತೆಗೆ ಟ್ರಾಫಿಕ್ ಸಮಸ್ಯೆಗೂ ಕಡಿವಾಣ ಹಾಕುವ ಕೆಲಸ ನಡೆಯುತ್ತಿದೆ. ಬೆಂಗಳೂರಿನ ವಾತಾವರಣವೂ ಕಲುಷಿತಗೊಳ್ಳುತ್ತಾ ಇರೋದು ಸುಳ್ಳಲ್ಲ. ಹೀಗಾಗಿ Odd-even ಮಂತ್ರ ಬೆಂಗಳೂರಿಗೂ ಅಪ್ಲೈ ಆದ್ರೆ ಟ್ರಾಫಿಕ್ ಸಮಸ್ಯೆ ಜೊತೆಗೆ ವಾಯುಮಾಲಿನ್ಯವನ್ನು ಕೂಡ ತಡೆಗಟ್ಟಬಹುದು ಅನ್ನೋದು ಪರಿಸರ ತಜ್ಞರ ಅಭಿಮತ.

ಇದನ್ನು ಓದಿ: ಬೆಂಗಳೂರಲ್ಲಿ ಸಾವಯವ ಮತ್ತು ರಾಷ್ಟ್ರೀಯ ಸಿರಿಧಾನ್ಯ ಮೇಳ… 

ಕಾರ್​ ಪೂಲಿಂಗ್​ನಿಂದ ಲಾಭ ಏನಿದೆ..?

ನಮ್ಮ ಬೆಂಗಳೂರಿನಲ್ಲಿ ಈಗಾಗಲೇ ಕಾರ್ ಪೂಲಿಂಗ್ ವ್ಯವಸ್ಥೆ ಜಾರಿಯಲ್ಲಿದೆ. ಆದ್ರೆ ಇದು ಎಷ್ಟು ಪರಿಣಾಮಕಾರಿ ಆಗಿದೆ ಅನ್ನುವುದರ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಿದೆ. ಕಾರ್ ಪೂಲಿಂಗ್​ನಲ್ಲಿ ಲಾಭಕ್ಕಿಂತ ವೈಯಕ್ತಿಕ ಹತಾಶೆಗಳೇ ಹೆಚ್ಚಿವೆ ಅನ್ನೋದು ಸರ್ವೇ ಒಂದು ಬಿಚ್ಚಿಟ್ಟ ಸತ್ಯ. ಅಷ್ಟಕ್ಕೂ ಸಿಲಿಕಾನ್ ಸಿಟಿಯಲ್ಲಿ ಕಾರ್ ಪೂಲಿಂಗ್ ಅನ್ನೋದು ಕಟ್ಟುನಿಟ್ಟಾಗಿ ಇಲ್ಲದೇ ಇರುವುದರಿಂದ ಇದರ ಬಳಕೆ ಕಡಿಮೆ ಆಗಿದೆ. ಒಂದು ವೇಳೆ ಸರ್ಕಾರ ಕಾರ್ ಪೂಲಿಂಗ್ ಕಾನ್ಸೆಪ್ಟ್​ ಅನ್ನು ಕಡ್ಡಾಯಗೊಳಿಸಿದ್ರೆ ಟ್ರಾಫಿಕ್ ಸಮಸ್ಯೆಯನ್ನು ಕಡಿಮೆಗೊಳಿಸುವುದಕ್ಕೆ ಚಿಕ್ಕ ಸಹಾಯವಾದ್ರೂ ಆಗಬಹುದು.

ಸಮಸ್ಯೆಗೆ ಪರಿಹಾರ ಇಲ್ವಾ..?

ಬೆಂಗಳೂರು ದಿನನಿತ್ಯ ಬೆಳೆಯುತ್ತಿದೆ ಅನ್ನೋದು ಜನಪ್ರಿಯ ಆರೋಪ. ಫ್ಲೈ, ಓವರುಗಳು, ಅಂಡರ್​ಪಾಸ್​ಗಳು ಇದ್ದರೂ ಸಂಚಾರ ದಟ್ಟಣೆ ಕಡಿಮೆ ಆಗಿದೆ ಅನ್ನೋದಿಕ್ಕೆ ಚಿಕ್ಕ ಉದಾಹಣೆಯೂ ಸಿಗುತ್ತಿಲ್ಲ. ಬಿಎಂಟಿಸಿ ಬಸ್​ನಲ್ಲಂತೂ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಹೋಗಬೇಕು ಅಂದ್ರೆ ಸಾಕಷ್ಟು ಮೊದಲೇ ಹೊರಡಬೇಕು. ಸದ್ಯ ಚಾಲ್ತಿಯಲ್ಲಿರುವ ಮೆಟ್ರೋ ರೈಲಿನಲ್ಲಿ ಜನ ಪ್ರಯಾಣ ಮಾಡ್ತಾ ಇದ್ರೂ, ಅದು ಬೆಂಗಳೂರಿನ ಪ್ರಯಾಣಿಕರ ಸಂಖ್ಯೆಯ ಶೆಕಡಾ 10ರಷ್ಟನ್ನು ಕೂಡ ಮುಟ್ಟುತ್ತಿಲ್ಲ. ಹೀಗಾಗಿ ಬೆಂಗಳೂರಿನ ಸಮಸ್ಯೆಗೆ ಹೇಗೆ ಪರಿಹಾರ ಹುಡುಕುಬೇಕು ಅನ್ನೋದೇ ಬಹುದೊಡ್ಡ ಚರ್ಚೆ.

ಪರಿಹಾರ ಏನಿದೆ..?

ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯನ್ನು ಬಗೆ ಹರಿಸುವುದಕ್ಕೆ ಒಂದೆರಡು ವರ್ಷಗಳ ಯೋಜನೆಗಳು ಸಾಕಾಗುವುದಿಲ್ಲ. ಅದೇನಿದ್ರೂ ಅತ್ಯಂತ ದೊಡ್ಡ ಪ್ರಾಜೆಕ್ಟ್​ಗಳನ್ನೇ ಮಾಡಬೇಕಿದೆ. ಅದಕ್ಕೂ ಮೊದಲು ಬೆಂಗಳೂರಿನಲ್ಲಿರುವ ಸಮೂಹ ಸಾರಿಗೆಗಳಾದ ಬಿಎಂಟಿಸಿ ಮತ್ತು ಮೆಟ್ರೋ ರೈಲಿನಲ್ಲಿ ಪ್ರಯಾಣಿಕರು ಓಡಾಡುವಂತೆ ಮಾಡಬೇಕಿದೆ. ಸರ್ಕಾರ ಖಾಸಗಿ ವಾಹನಗಳ ಬಳಕೆಯ ಬಗ್ಗೆ ಕಟ್ಟುನಿಟ್ಟಾದ ಕಾನೂನು ಜಾರಿ ಮಾಡಿದ್ರೆ ಬೆಂಗಳೂರಿಗೆ ಉಳಿಗಾಲವಿದೆ. ಇಲ್ಲದೇ ಇದ್ರೆ ಬೆಂಗಳೂರಿ ಜನರ ಬದುಕನ್ನು ಆ ದೇವರೇ ಕಾಪಾಡಬೇಕಾಗಬಹುದು.

ಇದನ್ನು ಓದಿ:

1. 'ಗೂಗ್ಲಿ' ಸೂರ್ತಿಯಿಂದ 11 ಚಿನ್ನದ ಪದಕ ಗೆದ್ದ ಯುವಕ 

2. ಮೆಕ್ ಡೊನಾಲ್ಡ್ಸ್​​, ಕೆಎಫ್​ಸಿಗೂ ಭಯ ಹುಟ್ಟಿಸಿದೆ 'ಪತಂಜಲಿ'..! 

3. ವೈಜ್ಞಾನಿಕ ಸಂಶೋಧನೆಗೆ ಆಸ್ತಿ ದಾನ ಮಾಡಿದ IAS ಅಧಿಕಾರಿ – ಸಾವಿನಲ್ಲೂ ಸಾರ್ಥಕತೆ ಮೆರೆದ ಶಾರ್ವರಿ 

Add to
Shares
7
Comments
Share This
Add to
Shares
7
Comments
Share
Report an issue
Authors

Related Tags