ಆವೃತ್ತಿಗಳು
Kannada

ಕ್ಯಾನ್ಸರ್​ ಪತ್ತೆ ಹಚ್ಚಲು ಹೊಸ ಉಪಕರಣ- ಮಹಾಮಾರಿಯನ್ನು ಓಡಿಸಲು ವೈದ್ಯಲೋಕದ ಪಣ

ಟೀಮ್​​ ವೈ.ಎಸ್​.ಕನ್ನಡ

17th Apr 2017
Add to
Shares
11
Comments
Share This
Add to
Shares
11
Comments
Share

ಮೆಡಿಕಲ್​ ಕ್ಷೇತ್ರದಲ್ಲಿ ಭಾರತದ ಆವಿಷ್ಕಾರ ನಿಜಕ್ಕೂ ಹುಬ್ಬೇರಿಸುವಂತೆ ಮಾಡಿದೆ. ಭಾರತದಲ್ಲಿ ನಡೆಯುತ್ತಿರುವ ಸಂಶೋಧನೆಗಳು ಮಾರಕ ಕಾಯಿಲೆಗಳನ್ನು ಬಡಿದೋಡಿಸಲು ಸಹಾಯ ಮಾಡುತ್ತಿವೆ. ಆರೋಗ್ಯ ಕ್ಷೇತ್ರದಲ್ಲಿನ ಈ ಕ್ಷಿಪ್ರ ಬೆಳವಣಿಗೆ ಸ್ಟಾರ್ಟ್​ ಅಪ್​ ಲೋಕಕ್ಕೂ ಅವಕಾಶಗಳನ್ನು ಒದಗಿಸಿಕೊಡುತ್ತಿದೆ. ಹೊಸ ಹೊಸ ಅವಕಾಶಗಳು ತೆರೆದುಕೊಳ್ಳುತ್ತಿವೆ. ಡಿಜಿಟಲ್​ ಯುಗದಲ್ಲಿ ಮುನ್ನುಗ್ಗುತ್ತಿರುವ ಭಾರತಕ್ಕೆ ಆರೋಗ್ಯ ಮತ್ತು ಮೆಡಿಕಲ್​ ಸೈನ್ಸ್​ ಕ್ಷೇತ್ರದಲ್ಲಿ ಬೆಳವಣಿಗೆ ಹೊಸ ಇಮೇಜ್​​ ತಂದುಕೊಟ್ಟಿದೆ. 

image


ಭಾರತ ಪೊಲಿಯೋವನ್ನು ದೇಶದಿಂದಲೇ ಹೊಡೆದೋಡಿಸಲು ಮಾಡಿದ್ದ ಯೋಜನೆಗಳು ಯಶಸ್ವಿ ಕಂಡಿವೆ. ಕಳೆದ 10 ವರ್ಷಗಳಲ್ಲಿ ಭಾರತದಲ್ಲಿ ಒಂದೇ ಒಂದು ಪೊಲಿಯೋ ಕೇಸ್​ ದಾಖಲಾಗಿಲ್ಲ. ಮಾರಕ ಕಾಯಿಲೆಯನ್ನು ತನ್ನ ಯೋಜನೆಗಳು ಮತ್ತು ವರ್ಲ್ಡ್​ ಹೆಲ್ತ್​ ಆರ್ಗನೈಸೇಷನ್​ ಮೂಲಕ ಮಟ್ಟ ಹಾಕುವಲ್ಲಿ ಯಶಸ್ವಿ ಆಗಿತ್ತು. ಹೆಚ್​ಐವಿ, ಕ್ಯಾನ್ಸರ್​ ಮತ್ತು ಇತರೆ ಮಾರಕ ಕಾಯಿಲೆಗಳನ್ನು ವಿಶ್ವದಿಂದಲೇ ಓಡಿಸುವ ಕಾರ್ಯಕ್ಕೆ ಭಾರತ ಚಾಲನೆ ಕೊಟ್ಟಿದೆ. ಎಲ್ಲರಿಗೂ ಆರೋಗ್ಯ, ಎಲ್ಲರಿಗೂ ಸೌಲಭ್ಯ ಅನ್ನುವ ಸರಕಾರದ ಯೋಜನೆಗಳು ಸಾಕಷ್ಟು ಜನರಿಗೆ ಸಹಾಯ ನೀಡುತ್ತಿವೆ. 

ಇತ್ತೀಚಿನ ವರ್ಷಗಳಲ್ಲಿ ಕ್ಯಾನ್ಸರ್​ ಮನುಕುಲಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ. ವರ್ಷದಿಂದ ವರ್ಷಕ್ಕೆ ಕ್ಯಾನ್ಸರ್​ ರೋಗಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಕ್ಯಾನ್ಸರ್​ ಮಹಾಮಾರಿಗೆ ಸರಿಯಾದ ಔಷಧಿಗಳು ಕೂಡ ಇಲ್ಲ ಎನ್ನಲಾಗುತ್ತಿದೆ. ಔಷಧಿಗಳ ಬಗ್ಗೆ ಸಂಶೋಧನೆಗಳು ನಡೆಯುತ್ತಿದ್ರೂ ಅವೆಲ್ಲವೂ ಪ್ರಾಯೋಗಿಕ ಪರೀಕ್ಷೆ ಅನ್ನುವುದನ್ನು ಖ್ಯಾತ ವೈದ್ಯರೇ ದೃಢಪಡಿಸುತ್ತಾರೆ. ಆದ್ರೆ ಈ ಮಹಾಮಾರಿಯನ್ನು ವಿಶ್ವದಿಂದಲೇ ಓಡಿಸಲು ಬೆಂಗಳೂರು ಕೂಡ ಶ್ರಮಪಡುತ್ತಿದೆ. ಕ್ಯಾನ್ಸರ್​ನಿಂದ ಹೇಗೆ ಬಚಾವಾಗಬೇಕು ಅನ್ನುವ ಬಗ್ಗೆ ಸಂಶೋಧನೆಗಳು ಜೋರಾಗುತ್ತಿವೆ. 

ಇದನ್ನು ಓದಿ: ಕನ್ನಡ ಬೆಳಸಲು ಆರಂಭವಾಯ್ತು "ಡಿಂಡಿಮ" 

ಕ್ಯಾನ್ಸರ್ ಖಾಯಿಲೆ ಮನುಷ್ಯನಿಗೆ ಮಹಾಮಾರಕವಾಗಿದೆ. ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಮಂದಿ ಕ್ಯಾನ್ಸರ್‍ಗೆ ತುತ್ತಾಗುತ್ತಿದ್ದಾರೆ. ಈ ಕಾಯಿಲೆಗೆ ವಯಸ್ಸಿನ ಅಂತರವೂ ಇಲ್ಲ. ವಾತಾವರಣದಲ್ಲಿನ ಏರುಪೇರು, ದುರ್ನಡತೆ ಮತ್ತು ಇತರೆ ಕಾರಣಗಳು ಕ್ಯಾನ್ಸರ್​ ಆರಂಭಕ್ಕೆ ಕೇವಲ ಕಾರಣಗಳಷ್ಟೇ. ಕೆಲವರಿಗೆ ಕ್ಯಾನ್ಸರ್ ಪತ್ತೆ ಮಾಡಲು ಸಾಧ್ಯವಾಗದೆ ಅವರು ಮರಣ ಹೊಂದಿದ್ದಾರೆ. ಈಗ ಅಂತಹ ನಾನಾ ಬಗೆಯ ಕ್ಯಾನ್ಸರ್ ರೋಗವನ್ನು ಸುಲಭವಾಗಿ ಪತ್ತೆ ಹಚ್ಚುವ ಸಲುವಾಗಿ "ಸ್ಟ್ರಾಂಡ್ ಲೈಫ್ ಸೈನ್ಸಸ್" ಸಂಸ್ಥೆಯು ಬಯೋಟೆಕ್​ ಸಂಸ್ಥಾಪಕಿ ಕಿರಣ್​ ಮಜುಂದಾರ್‍ಷಾ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ `ಸ್ಟ್ರಾಂಡ್ ಎಲ್‍ಬಿ' ಸಂಶೋಧಿಸಿದೆ. ಈ ಉಪಕರಣ ವಿವಿಧ ರೀತಿಯ ಕ್ಯಾನ್ಸರ್ ರೋಗವನ್ನು ಪತ್ತೆ ಹಚ್ಚಲು ನೆರವು ನೀಡುತ್ತದೆ.

image


ಇತ್ತೀಚೆಗೆ ಬೆಂಗಳೂರಿನಲ್ಲಿ ಈ `ಸ್ಟ್ರಾಂಡ್ ಎಲ್‍ಬಿ' ಉಪಕರಣವನ್ನು ಬಿಡುಗಡೆಗೊಳಿಸಲಾಗಿದೆ . ದೇಶದಲ್ಲಿ ಇದೇ ಮೊದಲ ಬಾರಿಗೆ ಇಂತಹದೊಂದು ಅತ್ಯಾಧುನಿಕ ಉಪಕರಣವನ್ನು ತಯಾರಿಸಲಾಗಿದೆ. ಈ ಉಪಕರಣವನ್ನು ಸಾಕಷ್ಟು ನೆರವು ನೀಡುವ ಉದ್ದೇಶದಿಂದ ತಯಾರಿಸಲಾಗಿದ್ದು, ಸಾಕಷ್ಟು ಅನುಕೂಲಕರವಾಗಿದೆ. ಅಲ್ಲದೆ ಇದು ಭಾರತೀಯ ವೈದ್ಯಕೀಯ ಜಗತ್ತಿನಲ್ಲೇ ಒಂದು ದೊಡ್ಡ ಸಂಶೋಧನೆಯಾಗಿದೆ. ಸಮಾಜಕ್ಕೆ ಅನುಕೂಲವಾಗುವಂತಹ "ಸ್ಟ್ರಾಂಡ್ ಎಲ್‍.ಬಿ." ಉಪಕರಣವೂ ಕ್ಯಾನ್ಸರ್​ ಅನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಲು ನೆರವು ನೀಡುವ ಸಾಮರ್ಥ್ಯ ಹೊಂದಿದೆ.

ಕ್ಯಾನ್ಸರ್​ ಕಂಡು ಹಿಡಿಯುವುದು ಹೇಗೆ..?

ಈ ಉಪಕರಣದಿಂದ ಶಂಕಿತ ಕ್ಯಾನ್ಸರ್ ಪೀಡಿತ ವ್ಯಕ್ತಿಯ ರಕ್ತವನ್ನು ಪರೀಕ್ಷೆ ನಡೆಸಿ ಐದು ದಿನದಲ್ಲಿ ಯಾವ ಕ್ಯಾನ್ಸರ್ ವೈರಸ್​, ಆ ಶಂಕಿತ ವ್ಯಕ್ತಿಗೆ ಅಟ್ಯಾಕ್​ ಆಗಿದೆ ಎಂಬುದನ್ನು ನಿಖರವಾಗಿ ಪತ್ತೆ ಹಚ್ಚಬಹುದಾಗಿದೆ. ಕ್ಯಾನ್ಸರ್​ ಅನ್ನು ಆರಂಭದಲ್ಲೇ ಪತ್ತೆ ಹೆಚ್ಚಲು ಇದು ನೆರವಾಗುವ ಕಾರಣ ಆದಷ್ಟು ಬೇಗನೆ ವೈದ್ಯರ ಸಲಹೆ ಮತ್ತು ಔಷಧಿಗಳನ್ನು ಪಡೆಯಬಹುದು. ಈ ಮೂಲಕ ಹಲವು ಜೀವಗಳನ್ನು ಉಳಿಸಲು ಇದು ನೆರವು ನೀಡುತ್ತದೆ. ಸಂಶೋಧನಾ ಕೇಂದ್ರಕ್ಕೆ ಚಿಕಿತ್ಸೆಗಾಗಿ ಆಗಮಿಸುವ ರೋಗಿಗಳ ರಕ್ತದ ಮಾದರಿಯನ್ನು ಪಡೆದು "ಸ್ಟ್ರಾಂಡ್ ಲೈಫ್ ಸೈನ್ಸಸ್" ಸಂಸ್ಥೆಗೆ ಕಳುಹಿಸಿಕೊಡಲಾಗುತ್ತದೆ. ಅಲ್ಲಿ ಪರೀಕ್ಷಿಸಿ ಕ್ಯಾನ್ಸರ್ ಕಾಯಿಲೆ ಬಗ್ಗೆ ವಿವರ ನೀಡುವುದರ ಜತೆಗೆ ಗಡ್ಡೆಯ ಇರುವಿಕೆ ಕುರಿತು ನಿಖರವಾಗಿ ಮಾಹಿತಿ ಒದಗಿಸಲಿದೆ.

" ದೇಶದ ಉತ್ಪನ್ನಗಳನ್ನು ಬಳಸಿಕೊಂಡು `ಸ್ಟ್ರಾಂಡ್ ಎಲ್‍ಬಿ' ಉಪಕರಣವನ್ನು ಸಂಶೋಧಿಸಲಾಗಿದೆ. ಇದು ಸಾಕಷ್ಟು ಕ್ಯಾನ್ಸರ್ ರೋಗಿಗಳಿಗೆ ಅನುಕೂಲವಾಗುತ್ತದೆ. ಸುಲಭವಾಗಿ ಕ್ಯಾನ್ಸರ್‍ರೋಗವನ್ನು ಪತ್ತೆ ಹಚ್ಚಿ ಅದರಿಂದ ಸಾಕಷ್ಟು ಜನರ ಪ್ರಾಣವನ್ನು ಉಳಿಸಬಹುದು."
ಕಿರಣ್ ಮಜುಂದಾರ್ ಷಾ, ಬಯೋಕಾನ್​ ಮುಖ್ಯಸ್ಥೆ

ದೇಶಿಯ ಉತ್ಪನ್ನಗಳ ಬಳಕೆ

ಈ "ಸ್ಟ್ರಾಂಡ್ ಎಲ್‍ಬಿ" ಉಪಕರಣವನ್ನು ಸಂಶೋಧಿಸಲು ಭಾರತೀಯ ಉತ್ಪನ್ನಗಳನ್ನೇ ಬಳಸಿಕೊಳ್ಳಲಾಗಿದೆ. ಯಾವುದೇ ವಿದೇಶಿ ಉತ್ಪನ್ನಗಳನ್ನು ಇದಕ್ಕೆ ಬಳಸಿಕೊಂಡಿಲ್ಲ ಎಂಬುದೇ ವಿಶೇಷ. ಇದರಿಂದ ಶ್ವಾಸಕೋಶದ ಕ್ಯಾನ್ಸರ್​, ಸ್ತನ ಕ್ಯಾನ್ಸರ್, ಕರುಳು ಕ್ಯಾನ್ಸರ್, ಗುದನಾಳ ಕ್ಯಾನ್ಸರ್, ರಕ್ತ ಕ್ಯಾನ್ಸರ್ ಸೇರಿದಂತೆ ಸಾಕಷ್ಟು ಕ್ಯಾನ್ಸರ್‍ಗಳನ್ನು ಕಂಡು ಹಿಡಿಯಬಹುದು.

17.3 ಲಕ್ಷ ನೂತನ ಕ್ಯಾನ್ಸರ್ ಪ್ರಕರಣಗಳು

ಒಂದು ಸಮೀಕ್ಷೆ ಒಂದರ ಪ್ರಕಾರ 2020ರ ವೇಳೆಗೆ ಭಾರತದಲ್ಲಿ 17.3 ಲಕ್ಷ ನೂತನ ಕ್ಯಾನ್ಸರ್ ಪ್ರಕರಣಗಳು ಕಾಣಿಸಿಕೊಳ್ಳಲಿದ್ದು, 8.8ಲಕ್ಷಕ್ಕೂ ಹೆಚ್ಚು ಸಂಖ್ಯೆಯ ರೋಗಿಗಳು ಮೃತಪಡುವ ನಿರೀಕ್ಷೆ ಇದೆ ಎಂಬ ವಿಷಯ ಹೊರಬಂದಿದೆ. ಇದನ್ನು ವೈದ್ಯಕೀಯ ಸಂಶೋಧನೆಯ ಭಾರತೀಯ ಮಂಡಳಿ ತಿಳಿಸಿದೆ. ಹೀಗಾಗಿ ಕ್ಯಾನ್ಸರ್ ಕಾಯಿಲೆಗಳನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಈ ಉಪಕರಣ ಸಹಾಯ ಮಾಡುತ್ತದೆ. ಕ್ಯಾನ್ಸರ್​ ಮಹಾಮಾರಿಯನ್ನು ಬಡಿದೋಡಿಸಲು ಸಾಕಷ್ಟು ಶ್ರಮ ಪಡುತ್ತಿರುವುದಂತೂ ನಿಜ. ವೈದ್ಯಲೋಕ ಇದರಲ್ಲೂ ಯಶಸ್ಸು ಸಾಧಿಸಿದರೆ ಮನುಕುಲಕ್ಕೆ ತುಂಬಾ ಒಳ್ಳೆಯದು.

ಇದನ್ನು ಓದಿ:

1. ಹೊಟ್ಟೆ ಹುಣ್ಣಾಗಿಸುವಂತೆ ನಗಿಸುವ"ಕಲರ್​ಕಾಗೆ" 

2. ಬಿಹಾರದ "ವಿದ್ಯುತ್ ಭವನ"ದಲ್ಲಿದೆ ವಿಭಿನ್ನ ಕೆಫೆ- ತ್ಯಾಜ್ಯಗಳಿಂದಲೇ ತಯಾರಾಗಿದೆ ಕುರ್ಚಿ, ಟೇಬಲ್..!

3. ಸಿಂಪಾಡಿಪುರದಲ್ಲಿ "ಆಕಾರ"..! ಬೆಂಗಳೂರಿನಲ್ಲಿ "ಶ್ರುತಿ ಸಿಂಗಾರ"..!


 

Add to
Shares
11
Comments
Share This
Add to
Shares
11
Comments
Share
Report an issue
Authors

Related Tags