ಆವೃತ್ತಿಗಳು
Kannada

ಭೂಮಿ ಮೇಲಿನ ಸ್ವರ್ಗವಿದು ..!

ಪೂರ್ವಿಕಾ

3rd Nov 2015
Add to
Shares
4
Comments
Share This
Add to
Shares
4
Comments
Share
image


ಮೇಘಾಲಯ ಸರ್ವ ಸೌಂದರ್ಯವನ್ನೂ ತುಂಬಿಕೊಂಡಿರೋ ಪ್ರಕೃತಿಯ ಮಡಿಲು..ಇದರ ತಪ್ಪಲಿನಲ್ಲಿರೋ ಪುಟ್ಟ ಹಳ್ಳಿ ಏಷ್ಯಾವನ್ನ ನಾಚಿಸುವಂತಿದೆ..ಕಾರಣ ಇದು ಏಷ್ಯಾ ಖಂಡದಲ್ಲೇ ಸ್ವಚ್ಚ ಗ್ರಾಮ ಅನ್ನೋ ಪ್ರಖ್ಯಾತಿ ಪಡೆದಿದೆ..ಸುಂದರ ಬೆಟ್ಟಗಳು,ಅದರ ಮಧ್ಯೆ ಓಡೋ ಮೋಡಗಳು. ನೀಳವಾಗಿ ಝುಳು ಝುಳು ಸದ್ದು ಮಾಡುತ್ತಾ ಹರಿಯೋ ಝರಿಗಳು ಇವುಗಳ ಮಧ್ಯೆ ಇರೋ ದೇವರಿಗಾಗಿ ಮಾಡಿರೋ ಉದ್ಯಾನವನ ಅಂತಾನೇ ಹೆಸರು ವಪಡೆದುಕೊಂಡಿರೋ ಗ್ರಾಮ Mawlynnong.

image


ಶಿಲೋಂಗ್​ನಿಂದ 90 ಕಿಲೋಮೀಟರ್ ದೂರ ಇರೋ ಈ ಹಳ್ಳಿ ಗಾಡ್ಸ್ ಓನ್ ಗಾರ್ಡನ್ ಅನ್ನೋ ಹೆಸರುಗಳಿಸಿದೆ. 2003 ಹಾಗೂ 2005ರಲ್ಲಿ ಡಿಸ್ಕವರ್ ಇಂಡಿಯಾ ಮತ್ತು ಟ್ರೈಬಲ್ ಇಂಡಿಯಾ ಅನ್ನೋ ಮ್ಯಾಗಜೀನ್ ಏಷ್ಯಾದ ಸ್ವಚ್ಚ ಗ್ರಾಮ ಅಂತ ಘೋಷಣೆ ಮಾಡಿದೆ…ಹಾಗಂತ Mawlynnong ಹೈಟೆಕ್ ಗ್ರಾಮವಲ್ಲ. ಮಾಲಿನೌಂಗ್ ಮೇಘಾಲಯದ ಸಣ್ಣ ಬುಡಕಟ್ಟು ಜನಾಂಗದವರು ವಾಸಿಸುವಂತಹ ಹಳ್ಳಿ. ಇಕೋ ಟೂರಿಸಂನಲ್ಲಿ ಪ್ರಸಿದ್ಧಿಗಳಿಸಿರೋ ಈ ಸ್ಥಳ ಪ್ರಪಂಚದ ಸಾಕಷ್ಟು ಪ್ರವಾಸಿಗಳನ್ನ ತನ್ನತ್ತ ಸೆಳೆಯುತ್ತಿದೆ. ಇಲ್ಲಿರೋ ಬುಡಕಟ್ಟು ಜನರು ಎಷ್ಟು ವಿಶೇಷ ಅಂದ್ರೆ ಈ ಗ್ರಾಮ ಏಷ್ಯಾದಲ್ಲಿ ಪ್ರಖ್ಯಾತಿ ಪಡೆಯೋದಕ್ಕೆ ಇಲ್ಲಿನ ಬುಡುಕಟ್ಟು ಜನಾಂಗದವರೇ ಕಾರಣ..ಪ್ರತಿಯೊಬ್ಬರು ತಮ್ಮ ಮನೆಯ ಮುಂದೆಯ ಅಂಗಳವನ್ನ ಸ್ವಚ್ಚವಾಗಿರಿಸಿಕೊಳ್ತಾರೆ. ಆದ್ರೆ ಇಲ್ಲಿಯ ಜನರು ತಮ್ಮ ಮನೆಯ ಜೊತೆಗೆ ರಸ್ತೆ, ನದಿಯ ಸುತ್ತಾ ಮುತ್ತಾ ಇರೋ ಕಸವನ್ನೂ ಕ್ಲೀನ್ ಮಾಡ್ತಾರೆ…ಅಷ್ಟೇ ಅಲ್ಲದೆ ಎಲ್ಲರು ಕಸದ ಬುಟ್ಟಿಗಳನ್ನ ಬಳಸುತ್ತಾರೆ . ಸ್ವಚ್ಚತೆಯನ್ನ ಹವ್ಯಾಸ ಮಾಡಿಕೊಂಡಿರೋ ಇವರುಗಳು ಪ್ರತಿನಿತ್ಯದ ಕೆಲಸದ ಜೊತೆಗೆ ಸ್ವಚ್ಚತೆಯನ್ನು ಕೆಲಸವನ್ನಾಗಿ ಮಾಡಿಕೊಂಡೊದ್ದಾರೆ. ಅಷ್ಟೇ ಅಲ್ಲದೆ ಇಲ್ಲಿ ಬಳಸೋ ವಸ್ತುಗಳು ಕೂಡ ಪರಿಸರ ಸ್ನೇಹಿಯಾಗಿದ್ದು ಕಸದ ಬುಟ್ಟಿಗಳನ್ನು ಬಿದಿರಿನಿಂದ ಮಾಡಿಕೊಳ್ತಾರೆ.

image


ಸ್ವಚ್ಚತೆ ಅನ್ನೋದು ಇಲ್ಲಿಯ ಜಂಯತೀಯಾಸ್ ಬುಡಕಟ್ಟು ಪಂಗಡದವರಿಗೆ ವಂಶಸ್ಥರಿಂದ ಬಳುವಳಿಯಾಗಿ ಬಂದಿರೋ ಕೆಲಸ. ತಮ್ಮ ಹಿಂದಿನ ತಲೆಮಾರಿನವರು ಇದೇ ರೀತಿ ಸ್ವಚ್ಚತೆಯನ್ನ ಕಾಪಾಡಿಕೊಂಡು ಬಂದಿದ್ದರು. ಈಗ ನಾವು ಆ ಕೆಲಸವನ್ನ ಮಾಡುತ್ತಿದ್ದೇವೆ ಈಗಾಗಲೇ ನಮ್ಮ ಮಕ್ಕಳು ಇದೇ ಕೆಲಸವನ್ನ ದಿನನಿತ್ಯ ರೂಡಿಸಿಕೊಂಡಿರೋದ್ರಿಂದ ಅವರು ಮುಂದಿನದಿನಗಳಲ್ಲಿ ಗ್ರಾಮವನ್ಮ ಸ್ವಚ್ಚವಾಗಿಟ್ಟುಕೊಳ್ತಾರೆ ಅನ್ನೋದು ಅಲ್ಲಿನ ಜನರ ಅಭಿಪ್ರಾಯ.

image


ಮೇಲು ಕೀಳು ಅನ್ನದೆ ವಾರದಲ್ಲಿ ಒಂದು ದಿನ ಪ್ರತಿಯೊಬ್ಬರು ಬೀದಿಗಿಳಿದು ಗ್ರಾಮವನ್ನ ಸ್ವಚ್ಚಗೊಳಿಸ್ತಾರೆ. ಎಲ್ಲರೂ ಒಂದೊಂದು ಕೆಲಸವನ್ನ ಹಂಚಿಕೊಂಡು ಕೆಲಸ ಮಾಡ್ತಾರೆ. ಎಷ್ಟೇ ಹೇಳಿದ್ರು ಇಲ್ಲಿ ಬರೋ ಪ್ರವಾಸಿಗಳು ಪ್ಲಾಸ್ಟಿಕ್ ಹಾಗೂ ತ್ಯಾಜ್ಯ ವಸ್ತುಗಳನ್ನ ರಸ್ತೆಯಲ್ಲಿ ಗಿಡಗಳ ಮಧ್ಯೆ ಬಿಸಾಡಿ ಹೋಗುತ್ತಾರೆ. ಆದ್ರಿಂದ ಆಗಾಗ ಗ್ರಾಮವನ್ನ ಸ್ವಚ್ಚ ಮಾಡೋ ಕೆಲಸ ಮಾಡಲೇ ಬೇಕಾಗುತ್ತೆ.. ಇವ್ರ ನಡುವಿನ ಒಗ್ಗಟ್ಟೇ ಈ ಪುಟ್ಟ ಹಳ್ಳಿಯನ್ನ ಏಷ್ಯಾ ಖಂಡದಲ್ಲೇ ಪ್ರಸಿದ್ದಿ ಪಡೆಯುವಂತೆ ಮಾಡಿದೆ.

image


93 ಮನೆಯಿರುವ ಮಾಲಿನೌಂಗ್ ಗ್ರಾಮದ ಜನರು ಜೀವನಕ್ಕಾಗಿ ವ್ಯವಸಾಯವನ್ನೇ ಆಧಾರವಾಗಿಟ್ಟುಕೊಂಡಿದ್ದಾರೆ. ಅಡಿಕೆ,ಎಲೆ, ಮೆಣಸು,ಕಿತ್ತಳೆ,ಬಾಳೆ ಹಾಗೂ ಸಿಹಿ ಹಣ್ಣುಗಳನ್ನ ಇಲ್ಲಿಯ ಜನರು ಬೆಳೆಯುತ್ತಾರೆ. ಇನ್ನೂ ವಿಶೇಷ ಅಂದ್ರೆ ಇಲ್ಲಿಯ ಜನರು ಗಾರ್ಡನಿಂಗ್ ಮಾಡೋದ್ರಲ್ಲಿ ಪ್ರಸಿದ್ದಿ ಪಡೆದಿದ್ದಾರೆ. ಪ್ರತಿ ಮನೆಯ ಮುಂದೆ ತಮ್ಮದೆಯಾದ ಉದ್ಯಾನವನವನ್ನು ಹೊಂದಿದ್ದು ಎಲ್ಲೂ ಕಾಣದಂತ ವಿಶೇಷವಾದ ಹೂ-ಗಿಡಗಳು ಹಾಗೂ ಸಸಿಗಳನ್ನ ಇಲ್ಲಿ ನೋಡಬಹುದು. ಕಾಸಿಕ್ ಬುಡಕಟ್ಟು ಜನಾಂಗದವರು ಪರಿಸರಕ್ಕೆ ತುಂಬಾನೆ ಹತ್ತಿರದವರು ಆಗಿರೋದ್ರಿಂದ ಪ್ರಕೃತಿಯನ್ನ ಇವರುಗಳು ತಾಯಿಯಂತೆ ಪ್ರೀತಿ ಮಾಡ್ತಾರೆ.

image


ಇಲ್ಲಿಯ ಸ್ವಚ್ಚತೆ ,ಸಹಜ ಸೌಂದರ್ಯ ಸಾಕಷ್ಟು ಪ್ರವಾಸಿಗರನ್ನ ಆಕರ್ಷಣೆ ಮಾಡುತ್ತಿದೆ. ಅದಷ್ಟೇ ಅಲ್ಲದೆ ವಿಶ್ವದ ಪ್ರವಾಸಿ ತಾಣದಲ್ಲಿ ಮಾಲಿನೌಂಗ್‍ ಹೆಸರು ಕೂಡ ಇದೆ. ಮಾಲಿನೌಂಗ್‍ನಲ್ಲಿ ಪ್ರವಾಸಿಗರಿಗೆ ಸಾಕಷ್ಟು ವಿಶೇಷತೆಗಳಿದ್ದು ಸ್ಕೈವ್ಯೂವ್ ನಲ್ಲಿ ಮಾಲಿನೌಂಗ್ ನಲ್ಲಿ ನಿಂತು ಬಾಂಗ್ಲಾ ದೇಶದ ಸೌಂದರ್ಯವನ್ನ ಸವಿಯಬಹುದು. ಬಿದಿರಿನಿಂದ ಮಾಡಿರೋ 85 ಅಡಿ ಎತ್ತರದಿಂದ ನಿಂತು ನಿಸರ್ಗದ ಸಹಜ ಸೌಂದರ್ಯವನ್ನ ಕಣ್ತುಂಬಿ ಕೊಳ್ಳಬಹುದು. ಅದರ ಜೊತೆಗೆ ಅಪರೂಪದ ಕಲ್ಲು ಬಂಡೆಗಳನ್ನ ಕಾಣಬಹುದು. ಇನ್ನೂ ವಿಜ್ಞಾನಕ್ಕೆ ಸವಾಲೆಸಿಸೋ ಸಾಕಷ್ಟು ವಿಶೇಷಗಳು ಇಲ್ಲಿದ್ದು ಬರುವಂತ ಪ್ರವಾಸಿಗರನ್ನ ಆಕರ್ಷಣೆ ಮಾಡುತ್ತವೆ. ಇಲ್ಲಿ ಎಲ್ಲವೂ ಸಹಜ ಸೌಂದರ್ಯ ಹಾಗೂ ಮಾನವ ನಿರ್ಮಿತ ವಸ್ತುಗಳೇ ಇಲ್ಲಿ ಕಾಣೋದು.

ಇನ್ನು ಪ್ರತೀ ಮನೆಗಳಲ್ಲೂ ಶೌಚಾಯಲ ಇದ್ದು ಇಲ್ಲಿಯ ಮಕ್ಕಳಿಗಾಗಿ ಮೂರು ಶಾಲೆಗಳಿವೆ. ವಂಶಪಾರಂಪರಿಕವಾಗಿ ಬಂದಿರೋ ಸ್ವಚ್ಚತೆಯನ್ನ ದಿನನಿತ್ಯದ ಹವ್ಯಾಸವಾಗಿಸಿಕೊಂಡಿರೋ ಇಲ್ಲಿಯ ಜನರು ಪ್ರಧಾನ ಮಂತ್ರಿ ಮೋದಿಯವರನ್ನ ತಮ್ಮ ಗ್ರಾಮಕ್ಕೆ ಆಹ್ವಾನಿಸಿದ್ದಾರೆ. ಪ್ರಧಾನಿಯವರು ಕೂಡ ಆದಷ್ಟು ಬೇಗ ಗ್ರಾಮ ಬೇಟಿ ಮಾಡುವುದಾಗಿ ತಿಳಿಸಿದ್ದು ಪ್ರಧಾನಿಯವರ ಬರುವಿಕೆಗಾಗಿ ಗ್ರಾಮದ ಜನತೆ ಕಾದಿದ್ದಾರೆ. ಒಗ್ಗಟ್ಟಿನಲ್ಲಿ ಬಲವಿದೆ. ನಾವು ಸ್ವಚ್ಚವಾಗಿದ್ರೆ ಅದು ನಮ್ಮನ್ನ ಎತ್ತರಕ್ಕೆ ಕರೆದೊಯ್ಯುತ್ತೆ ಅನ್ನೋದಕ್ಕೆ ಈ ಗ್ರಾಮವೇ ಸಾಕ್ಷಿ.

Add to
Shares
4
Comments
Share This
Add to
Shares
4
Comments
Share
Report an issue
Authors

Related Tags