ಆವೃತ್ತಿಗಳು
Kannada

ಜೇಸುದಾಸ್​​ರಿಂದ ಪ್ರಶಂಸೆ ಪಡೆದ ಸಂಗೀತ ನಿರ್ದೇಶಕಿ

ಆರಾಭಿ

8th Mar 2016
Add to
Shares
13
Comments
Share This
Add to
Shares
13
Comments
Share

ಈ ಜಮಾನದಲ್ಲಿ ಹೆಣ್ಣುಮಕ್ಕಳು ಎಲ್ಲಾ ಕ್ಷೇತ್ರದಲ್ಲೂ ಗುರುತಿಸಿಕೊಳ್ಳೊದು ಹೊಸತೇನಲ್ಲಾ. ಇನ್ನೂ ಸಿನಿಮಾ ಕ್ಷೇತ್ರಕ್ಕೆ ಹೋಲಿಕೆ ಮಾಡಿಕೊಂಡರೆ ಕಳೆದ ಹತ್ತು ವರ್ಷದಿಂದ ಸಿನಿಮಾ ಕ್ಷೇತ್ರದಲ್ಲೂ ಹೆಣ್ಣು ಮಕ್ಕಳು ತಮ್ಮದೇ ಆದ ಸ್ಟೈಲಿನಲ್ಲಿ ಗುರುತಿಸಿಕೊಂಡಿದ್ದಾರೆ. ಅದ್ರಲ್ಲೂ ಟೆಕ್ನಿಷಿಯನ್ ಡಿಪಾರ್ಟ್ ಮೆಂಟ್ ನಲ್ಲೂ ಹೆಣ್ಣುಮಕ್ಕಳು ಸಾಧನೆ ಮಾಡಿರೋದು ಇಲ್ಲಿ ವಿಶೇಷ. ಬಾಬಿ ಸದ್ಯ ಸ್ಯಾಂಡಲ್​ವುಡ್​ನ ಸಂಗೀತ ಕ್ಷೇತ್ರದಲ್ಲಿ ಚಾಲ್ತಿಯಲ್ಲಿರೋ ಹೆಸರು. ಕನ್ನಡ ಸಿನಿಮಾರಂಗದಲ್ಲಿ ಸಂಗೀತ ನಿರ್ದೇಶಕಿಯರ ಪಟ್ಟಿಯಲ್ಲಿ ಮೊದಲಿರೋ ಹೆಸರು ಬಾಬಿ. ತಮ್ಮ 17 ವರ್ಷ ವಯಸ್ಸಿನಲ್ಲಿ ಸಂಗೀತ ಲೋಕದ ದಿಗ್ಗಜ ಜೇಸುದಾಸ್ ಅವ್ರಿಂದಲೇ ಶಹಭಾಷ್ ಗಿರಿ ಪಡೆದವರು.

image


17ನೇ ವಯಸ್ಸಿನಲ್ಲಿ ಹಾಡು ಕಟ್ಟಿದ ಬಾಬಿ

ಬಾಬಿ ತನ್ನ ಹದಿನೇಳನೆ ವಯಸ್ಸಿನಲ್ಲೇ ಜೇಸುದಾಸ್ ಅವ್ರ ಮುಂದೆ ಹಾಡಿ ಸೈ ಅನ್ನಿಸಿಕೊಂಡಿದ್ರು…ಮ್ಯೂಸಿಕ್ ಕಾಂಟೆಸ್ಟ್ ನಲ್ಲಿ ತಾನೇ ಕಂಪೋಸ್ ಮಾಡಿದ ಹಾಡನ್ನ ಹಾಡಿ ಜೇಸುದಾಸ್ ಅವ್ರ ಗಮನ ಸೆಳೆದಿದ್ರು..ಅಂದೇ ಜೇಸುದಾಸ್ ತಮ್ಮ ಆಟೋಗ್ರಾಪ್ ಜೊತೆಯಲ್ಲಿ ಮುಂದೊಂದು ದಿನ ನೀನು ಸಂಗೀತ ನಿರ್ದೇಶಕಿ ಆಗಿಯೇ ಆಗುತ್ತೀಯ ಅನ್ನೋ ಭವಿಷ್ಯ ನುಡಿದಿದ್ರು…ಅವ್ರ ಒಂದು ಮಾತಿನಿಂದ ಇಂದು ಬಾಬಿ ಸ್ಯಾಂಡಲ್​ವುಡ್​ನಲ್ಲಿ ಯಶಸ್ವಿ ಮೆಟ್ಟಿಲುಗಳನ್ನೇರುತ್ತಿರೋ ಮ್ಯೂಸಿಕ್ ಡೈರೆಕ್ಟರ್ ಆಗಿ ಹೊರಹೊಮ್ಮುತ್ತಿದ್ದಾರೆ…

ಡೈರೆಕ್ಟರ್ ಕಮ್ ಸಿಂಗರ್

ಬ್ಲಾಕ್ ಸಿನಿಮಾದ ಮೂಲಕ ತನ್ನ ಕೆರಿಯರ್ ಅನ್ನ ಸ್ಟಾರ್ಟ್ ಮಾಡಿದ ಬಾಬಿ ಸದ್ಯ 11 ಸಿನಿಮಾಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ...ನೆನಪಿನಂಗಳ ಅನ್ನೋ ಸಿನಿಮಾದಿಂದ ಚಿತ್ರರಂಗದಲ್ಲಿ ತನ್ನನ್ನ ತಾನು ಗುರುತಿಸಿಕೊಂಡಿರೋ ಬಾಬಿ ತನ್ನ ಕಂಪೋಸಿಂಗ್ ನಲ್ಲಿ ಮಾತ್ರವಲ್ಲದೆ ಬೇರೆ ಮ್ಯೂಸಿಕ್ ಡೈರೆಕ್ಟರ್ಸ್ ಕಂಪೋಸಿಂಗ್ ನಲ್ಲಿ ಹಾಡನ್ನೂ ಹಾಡುತ್ತಾರೆ..ಸುಮಾರು 16 ವರ್ಷಗಳಿಂದ ಸಂಗೀತ ನಿರ್ದೇಶಕಿ ಆಗಿರೋ ಬಾಬಿ ಶ್ರಮ ಪಟ್ಟರೆ ಸಾಕು ನಮ್ಮನ್ನ ನಾವು ನಮ್ಮ ಕೆಲಸದಿಂದಲೇ ಗುರುತಿಸಿಕೊಳ್ಳಬಹುದು ಅಂತಾರೆ. 

image


ಹೆಣ್ಣು-ಗಂಡು ಅನ್ನೋ ವ್ಯತ್ಯಾಸವೇನಿಲ್ಲಾ

ಸಂಗೀತ ಕ್ಷೇತ್ರದಲ್ಲಿ ಈಗ ಹೆಣ್ಣು –ಗಂಡು ಅನ್ನೋ ಅಂತ ವ್ಯತ್ಯಾಸವೇನಿಲ್ಲ ನಮಗೆ ಕೊಟ್ಟಿರೋ ಕೆಲಸವನ್ನ ಚೆನ್ನಾಗಿ ಮಾಡಿಕೊಟ್ಟರೆ ಆಯ್ತು ನಮ್ಮನ್ನ ನಾವು ಗುರುತಿಸಿಕೊಳ್ಳಬಹುದು…ಹೆಣ್ಣುಮಕ್ಕಳು ಮನೆ ಹಾಗೂ ಕೆಲಸ ಎರಡು ಕಡೆಯಲ್ಲೂ ಮ್ಯಾನೆಜ್ ಮಾಡಬೇಕಾಗುತ್ತೆ..ಆದ್ರಿಂದ ಕೆಲವೊಂದು ಕಡೆ ನಾವೇ ಕಾಂಪ್ರಮೈಸ್ ಆಗಬೇಕು ಅನ್ನೋದು ಬಾಬಿ ಅವ್ರ ಮಾತು..ಇಂಡಷ್ಟ್ರಿಗೆ ಬಂದು 16 ವರ್ಷ ಪೂರೈಸಿರೋ ಬಾಬಿ ಜೇಸುದಾಸ್ ಅವ್ರು ಕೊಟ್ಟಿದ್ದ ಆಟೋಗ್ರಾಫ್ ಅನ್ನ ತೋರಿಸಿ ತೋರಿಸಿ ತಾವು ಸಂಗೀತ ನಿರ್ದೇಶಕಿ ಆಗಿರೋ ವಿಚಾರವನ್ನ ತಿಳಿಸಿದ್ದಾರೆ..ಜೇಸುದಾಸ್ ಅವ್ರು ಕೂಡ ಖುಷಿಯನ್ನ ವ್ಯಕ್ತ ಪಡಿಸಿದ್ದಾರೆ..ಸದ್ಯ ಸಿನಿಮಾರಂಗದಲ್ಲಿ ಒಂದೊಂದೆ ಸಕ್ಸಸ್ ಮೆಟ್ಟಿಲನ್ನ ಏರುತ್ತಿರೋ ಬಾಬಿ ಮುಂದಿನ ದಿನಗಳಲ್ಲಿ ಸಂಗೀತ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡಲಿ ಅನ್ನೋದು ನಮ್ಮ ಆಶಯ…

Add to
Shares
13
Comments
Share This
Add to
Shares
13
Comments
Share
Report an issue
Authors

Related Tags