ಆವೃತ್ತಿಗಳು
Kannada

ತಾಯ್ತನದ ಹೊಸ್ತಿಲಲ್ಲಿದ್ದೀರಾ? ನಿಮಗಿದೆ ವರ್ಕ್ ಫ್ರಮ್ ಹೋಂ ಅವಕಾಶ..

ಟೀಮ್ ವೈ.ಎಸ್.ಕನ್ನಡ 

12th Aug 2016
Add to
Shares
5
Comments
Share This
Add to
Shares
5
Comments
Share

ತಾಯ್ತನ ಜೋಕ್ ಅಲ್ಲ, ಗರ್ಭಿಣಿಯಾಗಿದ್ದಾಗ ಇನ್ನೂ ಕಷ್ಟ. ಒಂಭತ್ತು ತಿಂಗಳು ಹೊಟ್ಟೆಯಲ್ಲಿ ಭ್ರೂಣವನ್ನಿಟ್ಟುಕೊಂಡು ಒಂದು ರೀತಿಯ ಕಳವಳ, ಭಯದಲ್ಲೇ ಬದುಕಬೇಕಾಗುತ್ತದೆ. ಆದ್ರೆ ನಮ್ಮ ಅಮ್ಮಂದಿರೆಲ್ಲ ಆ ದಿನಗಳನ್ನು ಹೇಗೆ ನಿಭಾಯಿಸಿದ್ರು? ಸುಲಭವಾಗಿ ಆ ಸಂದರ್ಭಗಳನ್ನು ಹೇಗೆ ಎದುರಿಸಿದ್ರು? ಇದಕ್ಕಾಗಿ ಅವರು ಕಳೆದುಕೊಂಡಿದ್ದೇನು?

image


ಹಾಗಂತ ಪಶ್ಚಾತ್ತಾಪದ ಭರದಲ್ಲಿ ನಿಮ್ಮ ತಾಯಿಗೆ ಕರೆ ಮಾಡಿ ಕಣ್ಣೀರು ಹಾಕಬೇಡಿ. ನೀವು ಹೊಟ್ಟೆಯಲ್ಲಿದ್ದೀರಿ ಅನ್ನೋದು ಗೊತ್ತಾಗುತ್ತಿದ್ದಂತೆ ನಿಮ್ಮ ತಾಯಿ ಕೆಲಸ ಬಿಟ್ಟಿದ್ರೆ ಪರಿಸ್ಥಿತಿ ಭಿನ್ನವಾಗಿರುತ್ತೆ. ಆಕೆ ನಿಮ್ಮ ಬಗ್ಗೆ ಸಂಪೂರ್ಣ ಗಮನಹರಿಸಬೇಕು ಎಂದುಕೊಂಡಿರಬಹುದು. ಆದ್ರೆ ಎಲ್ಲರೂ ಮಾತೃತ್ವಕ್ಕಾಗಿ ಕೆಲಸ ಬಿಟ್ಟು ಮನೆಯಲ್ಲಿ ಕೂರಬೇಕೆಂದೇನಿಲ್ಲ. ಕೆಲಸ ಬಿಟ್ಟಿದ್ದರೆ ಮಾತ್ರ ಆಕೆ ಒಳ್ಳೆಯ ತಾಯಿ ಎನಿಸಿಕೊಳ್ತಾಳೆ ಅನ್ನೋದು ಕೂಡ ಕೇವಲ ಭ್ರಮೆ ಅಷ್ಟೆ. ಮನೆ ಹಾಗೂ ಉದ್ಯೋಗದ ಮಧ್ಯೆ ಸಮತೋಲನ ಕಾಯ್ದುಕೊಳ್ಳಬೇಕಷ್ಟೆ. ಆಗಾಗ ವೈದ್ಯರ ಸಲಹೆ ಪಡೆಯುತ್ತ, ಆರೋಗ್ಯದ ಬಗ್ಗೆ ಗಮನ ಕೊಟ್ಟು ಚಟುವಟಿಕೆಯಿಂದ ಇರಬೇಕಾದುದು ಬಹುಮುಖ್ಯ.

ಇದು ಕಪ್ಪು-ಬಿಳುಪು ದುನಿಯಾ ಅಲ್ಲ, ಕಂಪ್ಯೂಟರ್ ಯುಗ. ಅವಕಾಶಗಳು ನೂರಾರಿವೆ. ಮನೆಯವರ ಆತಂಕ ದೂರ ಮಾಡಲು ನೀವು ಮನೆಯಲ್ಲಿ ಕುಳಿತೇ ಕೆಲಸ ಮಾಡಬಹುದು. ಮನೆ ಮತ್ತು ಕಚೇರಿ ಎಂಬ ನಿಮ್ಮ ಎರಡೂ ಜಗತ್ತನ್ನು, ಎರಡೂ ಕರ್ತವ್ಯವನ್ನು ಒಟ್ಟಿಗೆ ನಿಭಾಯಿಸಬಹುದು. ಅದರರ್ಥ ಗರ್ಭಿಣಿಯಾಗಿದ್ದ 9 ತಿಂಗಳು ಕೂಡ ನೀವು ಮಗುವಿನ ಲಾಲನೆ ಪಾಲನೆಗೆ ಸಂಬಂಧಿಸಿದ ಪುಸ್ತಕ ಓದುತ್ತ, ಆಸೆಯಾಗಿದ್ದನ್ನೆಲ್ಲ ತಿನ್ನುತ್ತ ಕಳೆಯಬೇಕೆಂದೇನಿಲ್ಲ. ಕೆಲಸ ಮಾಡುವ ಅವಕಾಶವೂ ನಿಮಗಿದೆ. ಪ್ರತಿದಿನ ಕಚೇರಿಗೆ ಹೋಗುವುದು, ಉಸಿರುಗಟ್ಟಿಸುವಂತಹ ಚಿಕ್ಕ ಕೋಣೆಯಲ್ಲಿ ಕುಳಿತು ಕೆಲಸ ಮಾಡಲು ಅಸಾಧ್ಯ ಎಂದಾದಲ್ಲಿ ನೀವು ಮನೆಯಿಂದ್ಲೇ ಕೆಲಸ ಮಾಡಬಹುದು. ವರ್ಕ್ ಫ್ರಮ್ ಹೋಮ್ ಮದರ್ಸ್​ಗಾಗಿ ಸಾಕಷ್ಟು ಅವಕಾಶಗಳಿವೆ.

ವೃತ್ತಿಪರ ಬ್ಲಾಗಿಂಗ್

ಪ್ರತಿಯೊಂದು ವೈಯಕ್ತಿಕ ಬ್ಲಾಗ್ ಎಲ್ಲಿಂದಲಾದ್ರೂ ಆರಂಭವಾಗಬೇಕಲ್ಲವೇ? ಈಗ ಬ್ಲಾಗಿಂಗ್ ಅನ್ನೋದು ಅತ್ಯಧಿಕ ಆದಾಯ ಗಳಿಕೆಯ ಪ್ರಮುಖ ವೇದಿಕೆ. ಇದರಲ್ಲಿರೋ ಅನುಕೂಲ ಏನಂದ್ರೆ ಮನೆಯಿಂದ್ಲೇ ನೀವು ಕೆಲಸ ಮಾಡಬಹುದು. ಬ್ಲಾಗಿಂಗ್ ಅನ್ನೋದು ಸೃಜನಾತ್ಮಕ ಹವ್ಯಾಸ. ನಿಮ್ಮ ಬಾಲ್ಯದ ದಿನಗಳು, ಹಳೆ ನೆನಪುಗಳು, ಶಾಲಾ ದಿನದ ಅನುಭವಗಳನ್ನು ಹಂಚಿಕೊಳ್ಳಲು ಇರುವ ಅತ್ಯುತ್ತಮ ಮಾರ್ಗ ಬ್ಲಾಗ್. ಆದ್ರೆ ಬ್ಲಾಗಿಂಗ ಕೂಡ ಈಗ ಉದ್ಯಮವಾಗಿ ಬದಲಾಗಿದೆ. ನಿಮ್ಮ ವೈಯಕ್ತಿಕ ಬ್ಲಾಗ್ ನಿರ್ವಹಣೆ ಬಗ್ಗೆ ಟ್ಯುಟೋರಿಯಲ್ಸ್ ಕೂಡ ಇದೆ. ತಂತ್ರಜ್ಞಾನ, ಸಾಹಿತ್ಯ, ರಾಜಕೀಯ, ಕ್ರೀಡೆ, ಮಕ್ಕಳ ಪೋಷಣೆಗೆ ಸಲಹೆ ಈ ಎಲ್ಲ ವಿಭಾಗಗಳಿಗೂ ಸಂಬಂಧಿಸಿದ ನಿಮ್ಮ ಪ್ರಶ್ನೆಗಳಿಗೆ ವರ್ಡ್​ಪ್ರೆಸ್ ಮತ್ತು ಬ್ಲಾಗರ್ ಉತ್ತರ ನೀಡಲಿವೆ. ಇನ್ಯಾಕೆ ತಡ ಬ್ಲಾಗ್ ಬರೆಯಲು ಆರಂಭಿಸಿ.

ಲಿಪ್ಯಂತರ

ಇದು ನಮ್ಮನ್ನು ಕೆರಳಿಸುವಂತಹ ಕೆಲಸ, ಇದಕ್ಕೆ ಬಹಳಷ್ಟು ತಾಳ್ಮೆ ಬೇಕು ಅನ್ನೋ ಮಾತಿದೆ. ಆದ್ರೆ ತಾಯ್ತನದ ಹೊಸ್ತಿಲಲ್ಲಿರುವವರಿಗೆ ಇದು ಹೇಳಿ ಮಾಡಿಸಿದಂತಹ ಕೆಲಸ. ನಿಮ್ಮ ತಾಳ್ಮೆಯ ಹಂತವನ್ನು ಕೂಡ ಹೆಚ್ಚಿಸಿಕೊಳ್ಳಬಹುದು. ನಿಮ್ಮ ಮಗುವಿನ ಆಗಮನಕ್ಕೂ ಮುನ್ನ ತಾಳ್ಮೆ ಸಂಪಾದಿಸೋದು ಒಳ್ಳೆಯ ಬೆಳವಣಿಗೆ. ಪ್ರೊಡಕ್ಷನ್ ಹೌಸ್, ನ್ಯೂಸ್, ಫೈನಾನ್ಷಿಯಲ್ ಮೀಡಿಯಾ ಕಂಪನಿಗಳು ಸೇರಿದಂತೆ ಹಲವು ಕಂಪನಿಗಳಲ್ಲಿ ಲಿಪ್ಯಂತರದ ಕೆಲಸವಿರುತ್ತದೆ. ಇದು ಕಷ್ಟದ ಕೆಲಸವೇನೂ ಅಲ್ಲ. ಹಾಗಿದ್ರೆ ಹೆಡ್ಫೋನ್ ಹಾಕಿಕೊಂಡು ರೆಡಿಯಾಗಿ, ಒಳ್ಳೆ ವಿಶುವಲ್ ನೋಡಿ ಕ್ಲಿಕ್ ಶುರು ಮಾಡಿ.

ಫ್ರೀಲಾನ್ಸ್ ಬರವಣಿಗೆ

ಫ್ರೀಲಾನ್ಸ್ ಬರಹಗಾರರಿಗೆ ಅಪಾರ ಉದ್ಯೋಗಾವಕಾಶಗಳಿವೆ. ಫ್ರೀಲಾನ್ಸರ್, ಮೀಡಿಯಾ ಜಾಬ್ಸ್ ಡೈಲಿ ಅಥವಾ ಇಲಾನ್ಸ್ನಂತಹ ನೂರಾರು ವೆಬ್​ಸೈಟ್​ಗಳಿಗೆ ನೀವು ಲಾಗಿನ್ ಆಗ್ಬಹುದು. ಈ ವೆಬ್​ಸೈಟ್​ಗಳು ಪ್ರತಿಭಾವಂತ ಬರಹಗಾರರ ಹುಡುಕಾಟದಲ್ಲಿರುತ್ತವೆ. ಮುಂದೊಂದು ದಿನ ನೀವು ಬರೆದ `ಸರ್ವೈವಲ್ ಸ್ಟ್ರಾಟಜೀಸ್ ಫಾರ್ ಆ್ಯನ್ ಎಕ್ಸ್​ಪೆಕ್ಟಿಂಗ್ ಮದರ್' ಅನ್ನೋ ಪುಸ್ತಕವನ್ನು ಓದುವ ಭಾಗ್ಯ ನಮ್ಮದಾಗಬಹುದು. ಘಂಟೆಗಳ ಲೆಕ್ಕದಲ್ಲಿ, ಶಬ್ಧಗಳ ಲೆಕ್ಕದಲ್ಲಿ ಅಥವಾ ಲೇಖನಕ್ಕೆ ತಕ್ಕಂತೆ ಹಣ ಪಾವತಿಸಬಲ್ಲ ವ್ಯಕ್ತಿ ಅಥವಾ ಸಂಸ್ಥೆಗಳು ನಿಮಗೆ ಸಿಗುತ್ತವೆ. ಆರಾಮಾಗಿ ಮನೆಯಲ್ಲಿ ಕುಳಿತೇ ನೀವು ಕೈತುಂಬಾ ದುಡಿಯಬಹುದು.

ಶಿಕ್ಷಣ ಬೋಧನೆ

ನಮ್ಮ ಸಂಕೀರ್ಣ ಶಿಕ್ಷಣ ವ್ಯವಸ್ಥೆಯಿಂದ ಹೊರಬರಲು, ನಿಮ್ಮ ಜ್ಞಾನವನ್ನು ಇತರರಿಗೆ ಧಾರೆಯೆರಲು ಇದೊಂದು ಬೆಸ್ಟ್ ಚಾನ್ಸ್. ಯಾವ ವಯಸ್ಸಿನವರಿಗೆ ಪಾಠ ಹೇಳಿಕೊಡಲು ಇಚ್ಛಿಸುತ್ತೀರಾ ಎಂಬುದನ್ನು ನಿರ್ಧರಿಸಿ, ಘಂಟೆಗಳ ಲೆಕ್ಕದಲ್ಲಿ ನೀವು ಚಾರ್ಜ್ ಮಾಡ್ಬಹುದು. ಅದನ್ನು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಮಾಡಿ. ಇದನ್ನು ನಿಮ್ಮ ಸ್ನೇಹಿತರು, ಸಂಬಂಧಿಕರ ಜೊತೆ ಹಂಚಿಕೊಂಡ್ರೆ ಅವರಿಗೂ ಉದ್ಯೋಗ ಕೊಡಿಸಿದಂತಾಗುತ್ತೆ. ತಾಯ್ತನ ಹಾಗೂ ಬೋಧನಾ ವೃತ್ತಿ ಸಮಾನವಾದದ್ದು, ಟ್ಯೂಷನ್ ಮಾಡ್ತಾ ಮಾಡ್ತಾ ಮಕ್ಕಳ ಜೊತೆ ಕಾಲಕಳೆದಂತಾಗುತ್ತೆ.

ಟೆಕ್ ವರ್ಕರ್

ನೀವು ಒಬ್ಬ ವೆಬ್ ಡಿಸೈನರ್ ಆಗ್ಬಹುದು, ಸಾಫ್ಟ್​ವೇರ್ ಕ್ರಿಯೇಟರ್ ಅಥವಾ ಕೋಡರ್ ಕೂಡ ಆಗಬಹುದು. ಇದನ್ನು ಕೂಡ ಫ್ರೀಲಾನ್ಸರ್ ಆಗಿ ಮಾಡುವ ಅವಕಾಶವಿದೆ. LinkedInಗೆ ಸೈನ್ ಅಪ್ ಮಾಡಿ, ಟ್ವೀಟ್ ಮಾಡಲು ಆರಂಭಿಸಿ, ಫೇಸ್ಬುಕ್ ಸ್ಟೇಟಸ್ ಕೂಡ ಎಲ್ಲೆಡೆ ಪರಿಚಿತವಾಗುವಂತೆ ನೋಡಿಕೊಳ್ಳಿ. ನಿಮಗೆ ಕೈತುಂಬಾ ಪ್ರಾಜೆಕ್ಟ್​ಗಳು ಸಿಗೋದ್ರಲ್ಲಿ ಅನುಮಾನವೇ ಇಲ್ಲ.

ಯಾವುದಕ್ಕೂ ಹಿಂದೇಟು ಹಾಕುವ ಅಗತ್ಯವಿಲ್ಲ. ನಿಮಗೆ ಯಾವ ಕೆಲಸದಲ್ಲಿ ಆಸಕ್ತಿ ಇದೆಯೋ ಅದನ್ನೇ ಆಯ್ದುಕೊಂಡು ಮನೆಯಿಂದ್ಲೇ ಕೆಲಸ ಶುರು ಮಾಡಿ. ತಾಯ್ತನದ ಹೊಸ್ತಿಲಲ್ಲಿ ಲವಲವಿಕೆಯಿಂದ ಇರಬಹುದು.

ಇದನ್ನೂ ಓದಿ... 

ಪೂಜೆ ಮಾಡೋದು ಮಾತ್ರ ನಿಮ್ಮ ಕೆಲಸ- ವಸ್ತು ತಂದುಕೊಡುವುದು ನಮ್ಮ ಕೆಲಸ..! 

ನಮ್ಮಲ್ಲಿ ಇಲ್ಲದೇ ಇರೋದು ಮೈಕಲ್​ ಫೆಲ್ಫ್ಸ್​ರಲ್ಲಿ ಏನಿದೆ..?

Add to
Shares
5
Comments
Share This
Add to
Shares
5
Comments
Share
Report an issue
Authors

Related Tags