ಆವೃತ್ತಿಗಳು
Kannada

ರಂಗೋಲಿಯಲ್ಲಿದೆ Business ರಂಗು..!

ನೀಲಾ

20th Oct 2015
Add to
Shares
9
Comments
Share This
Add to
Shares
9
Comments
Share

ದಿನ ಬೆಳಗಾದ್ರೆ ಸಾಕು.. ಮನೆಮುಂದೆ ರಂಗೋಲಿ ಹಾಕುವ ಹೆಣ್ಣುಮಕ್ಕಳನ್ನು ನೋಡ್ತಾ ಇರ್ತೇವೆ. ಬೆಂಗಳೂರಿನಲ್ಲಂತೂ ಮನೆ ಮುಂದೆ ಇರೋ ರಸ್ತೆ ಮೇಲೂ ರಂಗೋಲಿಯ ಚಿತ್ತಾರವನ್ನು ಕಾಣಬಹುದು. ಈ ರಂಗೋಲಿ ಹಾಕೋ ಹೆಣ್ಣು ಮಕ್ಕಳ ಬಗ್ಗೆ ಕೆಲವರು ಕಾಮೆಂಟ್​​ ಮಾಡ್ತಾ ಹೋದ್ರೆ, ಇನ್ನು ಕೆಲವರು ಇದ್ರಿಂದ ಏನಪ್ಪಾ ಲಾಭ ಅಂತ ಗೊಣಗಿಗೊಳ್ತಾರೆ. ಆದ್ರೆ ಈ ರಂಗೋಲಿಯಲ್ಲೂ ಉದ್ಯಮದ ಕನಸಿದೆ. ಹೊಸ ಬದುಕಿಗೆ ದಾರಿ ಹೇಳಿಕೊಡುವ ತಾಕತ್ತಿದೆ.

image


ಸಾಮಾನ್ಯವಾಗಿ ರಂಗೋಲಿ ಅಂದ್ರೆ ಬರೀ ಹೆಣ್ಣು ಮಕ್ಕಳು ಮನೆಮುಂದೆ ಹಾಕುವ ಚುಕ್ಕಿ ರಂಗೋಲಿ, ಎಳ್ಳೆ ರಂಗೋಲಿ ಅಷ್ಟೇ ಅಂತ ಬಹುತೇಕರು ತಿಳಿದಿರ್ತಾರೆ.. ಆದ್ರೆ ಈ ರಂಗೋಲಿಯನ್ನ ಉಪಯೋಗಿಸಿಕೊಂಡು ಯುವಕನೊಬ್ಬ ಅದ್ಭುತ ಕಲೆಯನ್ನ ಪರಿಚಯಿಸಿದ್ದಾನೆ..

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ನಾಗರಾಜ್ ಮಾಲಗತ್ತೆ ಸುಶಿಕ್ಷಿತ ಯುವಕ. ಎಂ.ಟೆಕ್. ಪದವಿಯನ್ನು ಪಡೆದಿರುವ ನಾಗಾರಾಜ್​​ಗೆ ಕೈ ತುಂಬಾ ಸಂಬಳ ಬರೋ ಕೆಲಸವಿದೆ. ಆದ್ರೆ ಆ ಕೆಲಸಕ್ಕಿಂತ ನಾಗಾರಾಜ್​​ಗೆ ಕಲೆಯ ಬಗ್ಗೆ ಅಪಾರ ಆಸಕ್ತಿ... ಚಿಕ್ಕೋಡಿಯಲ್ಲೇ ಪಿಯುಸಿ ತನಕ ಶಿಕ್ಷಣ ಮುಗಿಸಿದ ನಾಗಾರಾಜ್​​ ಭವಿಷ್ಯದ ಕನಸು ಕಟ್ಟಿಕೊಂಡು ಬೆಂಗಳೂರು ಸೇರಿಕೊಂಡ. ಖಾಸಗಿ ಕಾಲೇಜ್​ ಒಂದರಲ್ಲಿ ಬಿಎ ಹಾಗೂ ಎಂ.ಟೆಕ್​​ ಪದವಿಯನ್ನು ಪಡೆದ. ಅಷ್ಟೇ ಅಲ್ಲ ಖಾಸಗಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡ. ಆದ್ರೆ ನಾಗಾರಾಜ್​​​ ತಂದೆ ಅನಿಲ್ ಮಾಲಗತ್ತೆ, ಮತ್ತು ತಾಯಿ ವಿಜಯಾ ಮಾಲಗತ್ತೆ ಶಿಕ್ಷಕರು. ಹೀಗಾಗಿ ನಾಗಾರಾಜ್ ಗೆ ಕಲೆಯ ಬಗ್ಗೆ ಹೆಚ್ಚು ಒಲವು. ಚಿಕ್ಕವಯಸ್ಸಿನಿಂದಲೂ ಕಲೆಯ ಮೇಲೆಯೇ ಆಸಕ್ತಿ. ಅದರಲ್ಲೂ ರಂಗೋಲಿ ಬಗ್ಗೆ ಅತೀವ ಪ್ರೀತಿ. "ನನಗೆ ಚಿಕ್ಕವನಿದ್ದಾಗಲೇ ಪಾಠಕ್ಕಿಂತ ಕಲೆಯ ಬಗ್ಗೆ ಹೆಚ್ಚು ಪ್ರೀತಿ ಇತ್ತು. ಹೀಗಾಗಿ ಇದನ್ನು ನಾನು ಅಭ್ಯಾಸ ಮಾಡತೊಡಗಿದೆ. ಇವತ್ತು ನನಗೆ ಈ ಕಲೆ ಹೆಸರು ತಂದುಕೊಡುತ್ತಿದೆ. ಭವಿಷ್ಯದಲ್ಲಿ ದೊಡ್ಡ ಕಲಾವಿದನಾಗುವ ಕನಸು ಹುಟ್ಟಿದೆ." ಅಂತ ವಿಶ್ವಾಸದಿಂದ ಹೇಳುತ್ತಾರೆ ನಾಗಾರಾಜ್​​.

image


ತನ್ನ 14ನೇ ವರ್ಷದಿಂದ ಈ ಕಲೆಯನ್ನ ರೂಢಿಸಿಕೊಂಡ ನಾಗರಾಜ್ ಈ ವರೆಗೂ ಸಾಕಷ್ಟು ಕಾರ್ಯಕ್ರಮದಲ್ಲಿ ಜನರಿಗೆ ಈ ಕಲೆಯ ಬಗ್ಗೆ ಪರಿಚಯ ನೀಡಿದ್ದಾರೆ.. ರಾಷ್ಟ್ರಪಿತ ಮಹಾತ್ಮ ಗಾಂಧಿ, ವರನಟ ಡಾ ರಾಜ್ ಕುಮಾರ್, ಕ್ರಿಕೆಟ್ ದೇವರು ಸಚಿನ್, ದ.ರಾ ಬೇಂದ್ರ, ಪುನೀತ್ ರಾಜ್ ಕುಮಾರ್ ಹೀಗೆ ಬಹಳಷ್ಟು ಗಣ್ಯರ ಛಾಯಚಿತ್ರವನ್ನು ನೋಡಿ, ರಂಗೋಲಿ ಪುಡಿ ಹಾಗೂ ಬಣ್ಣದ ಪುಡಿಯನ್ನ ಉಪಯೋಗಿಸಿ ಅದ್ಭುತವಾಗಿ ಚಿತ್ರಗಳನ್ನ ಬಿಡಿಸಿದ್ದಾನೆ ನಾಗರಾಜ್ . ನೋಡೊದಕ್ಕೆ ಪೈಂಟಿಗ್ ರೀತಿಯೇ ಕಾಣುವ ಈ ಕಲೆಯ ಹಿಂದಿನ ಶ್ರಮ ಬಹಳಷ್ಟು ಇದೆ.. ಕಲೆಯ ಬಗ್ಗೆ ಅಪಾರ ಆಸಕ್ತಿಯನ್ನ ಹೊಂದಿರುವ ಈ ಹುಡುಗ ರಂಗೋಲಿಯನ್ನ ಉಪಯೋಗಿಸಿ ಬೇಕಾದ ಭಾವಚಿತ್ರವನ್ನ ಬಿಡಿಸ್ತಾನೆ.. ತನ್ನ ಅಕ್ಕ, ಸ್ನೇಹಿತೆಯರ ಸ್ಪೂರ್ತಿಯಿಂದ ಈ ಕಲೆಯನ್ನ ರೂಢಿಸಿಕೊಂಡ ನಾಗಾರಾಜ್​​​, ಬಹಳಷ್ಟು ಕಾರ್ಯಕ್ರಮದಲ್ಲಿ ಈ ಕಲೆಯನ್ನ ತೋರಿಸಿ ಜನರ ಮೆಚ್ಚುಗೆಯನ್ನ ಪಡೆದಿದ್ದಾನೆ.

ಇನ್ನು ಈ ರಂಗೋಲಿ ಕಲೆ ನೋಡೊಕ್ಕೆ ಎಷ್ಟು ಸುಂದರವಾಗಿದ್ಯೋ, ಇದನ್ನ ಬಿಡಿಸೋದಕ್ಕೆ ಅಷ್ಟೇ ತಾಳ್ಮೆ ಹಾಗೂ ಶ್ರಮವಹಿಸಬೇಕು.. ಮೊದಲು ಫೋಟೋ ನೋಡಿ ಅದೇ ರೀತಿಯಲ್ಲಿ ರಂಗೋಲಿ ಪುಡಿಯಲ್ಲಿ ಸ್ಕೇಚ್ ಮಾಡಿ, ಆನಂತರ ಅದಕ್ಕೆ ರೂಪವನ್ನು ಕೊಟ್ಟು, ಬೇಕಾದ ಬಣ್ಣಗಳಿಂದ ಅಲಂಕಾರ ಮಾಡಬೇಕು.. ಏನ್ನಿಲ್ಲ ಅಂದ್ರು, ಒಂದು ಛಾಯಚಿತ್ರ ಸಂಪೂರ್ಣ ಮಾಡೋಕ್ಕೆ ಸರಿಸುಮಾರು 8 ಗಂಟೆಗಳಿಗೂ ಹೆಚ್ಚು ಕಾಲಬೇಕು.. ಇನ್ನು ಶಾಲೆಯಿಂದಲೇ ಈ ಅವ್ಯಾಸವನ್ನು ರೂಢಿಸಿಕೊಂಡಿರುವ ನಾಗರಾಜ್ ಪ್ರತಿಭೆಯನ್ನ ಅವರ ಸ್ನೇಹಿತರು, ಕುಟುಂಬದವರು ಕೊಂಡಾಡುತ್ತಾರೆ..

image


ರಾಜ್ಯ ಮಟ್ಟದ ವರೆಗೂ ಎಲ್ಲಾ ಸ್ಪರ್ಧೆಗಳಲ್ಲಿ ಭಾಗವಹಿಸಿರುವ ನಾಗರಾಜ್ ಗೆ ಈ ವರೆಗೂ ಸಾಕಷ್ಟು ಪುರಸ್ಕಾರಗಳು, ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಶಾಲಾ ಕಾಲೇಜಿನ ದಿನಗಳಲ್ಲಿ ಸತತ 8ವರ್ಷಗಳ ಕಾಲ ಪ್ರಥಮ ಸ್ಥಾನವನ್ನು ಪಡೆದಿದ್ದ ನಾಗಾರಾಜ್​​ಗೆ ಇನ್ನೂ ಒಂದು ಕನಸಿದೆ.

ಈ ವ್ಯಕ್ತಿ ಚಿತ್ರ ರಂಗೋಲಿಯನ್ನ ಗಿನ್ನಿಸ್ ದಾಖಲೆಗೆ ಸೇರಿಸಬೇಕು ಎನ್ನುವುದು ಈತನ ಹೆಬ್ಬಯಕೆ.. ಆದ್ರೆ ಅದಕ್ಕೆ ಸಾಕಷ್ಟು ಶ್ರಮವಹಿಸಬೇಕು ಹಾಗೂ ತಾಳ್ಮೆ ಹೆಚ್ಚಾಗಿರಬೇಕು, ಈ ನಿಟ್ಟಿನಲ್ಲಿ ಅಭ್ಯಾಸದಲ್ಲಿ ನಿರತನಾಗಿದ್ದಾನೆ ನಾಗರಾಜ್ .. ಇನ್ನು ಬಹಳಷ್ಟು ಖಾಸಗಿ ಕಾರ್ಯಕ್ರಮಗಳಲ್ಲಿ ಹಾಗೂ ಸರ್ಕಾರಿ ಕಾರ್ಯಕ್ರಮಗಳಲ್ಲಿ ಈ ವ್ಯಕ್ತಿ ಚಿತ್ರ ರಂಗೋಲಿಯನ್ನ ಬಿಡಿಸಿ ಬಹಳಷ್ಟು ಗಣ್ಯರಿಂದ ಶಹಭಾಸ್ ಗಿರಿ ಪಡೆದಿದ್ದಾನೆ ಈ ಉತ್ತರ ಕರ್ನಾಟಕದ ಹುಡುಗ..

image


ಕಲೆಯಲ್ಲಿ ಸಾಕಷ್ಟು ಆಸಕ್ತಿಯೊಂದಿರುವ ನಾಗರಾಜ್ ಪೈಂಟಿಗ್, ಸ್ಕೇಚ್, ಮೌತ್ ಪೈಂಟಿಗ್, ಮರಳು ಕಲೆ ಹೀಗೆ ಸಾಕಷ್ಟು ವಿಭ್ನಿನ ಕಲೆಗಳನ್ನ ರೂಢಿಸಿಕೊಂಡಿದ್ದಾನೆ.. ಏನ್ನೇ ಆಗ್ಲೀ ಈ ಅದ್ಭುತ ಕಲೆಯನ್ನ ರೂಢಿಸಿಕೊಂಡಿರುವ ನಾಗರಾಜ್ ಗೆ ನಾವು ಹ್ಯಾಟ್ಸಾಫ್ ಹೇಳಲೇಬೇಕು...

Add to
Shares
9
Comments
Share This
Add to
Shares
9
Comments
Share
Report an issue
Authors

Related Tags