ಆವೃತ್ತಿಗಳು
Kannada

9ನೇ ತರಗತಿಗೆ ಶಾಲೆ ಬಿಟ್ಟ ಪೋರ : 13 ವರ್ಷಕ್ಕೆ ಉದ್ಯಮಿಯಾದ ಧೀರ

ಟೀಮ್ ವೈ.ಎಸ್.ಕನ್ನಡ 

14th Mar 2017
Add to
Shares
13
Comments
Share This
Add to
Shares
13
Comments
Share

ಇದು ಬದಲಾವಣೆಯ ಪರ್ವ. ಈಗ ಎಲ್ಲಾಕಡೆ ಸ್ಟಾರ್ಟಪ್ ಜ್ವರ ಶುರುವಾಗಿದೆ. ಶಾಲೆ ಅಥವಾ ಕಾಲೇಜನ್ನು ಅರ್ಧಕ್ಕೆ ಬಿಟ್ಟು ವಿದ್ಯಾರ್ಥಿಗಳು ಸ್ವಂತ ಉದ್ಯಮ ಆರಂಭಿಸ್ತಿದ್ದಾರೆ. ಅಂಥದ್ರಲ್ಲಿ ಅಯಾನ್ ಚಾವ್ಲಾ ಅವರ ಸಾಹಸಗಾಥೆ ಎಲ್ಲರನ್ನೂ ಬೆರಗುಗೊಳಿಸುತ್ತದೆ. ಅಯಾನ್ ತಮ್ಮ ಉದ್ಯಮ ಪಯಣವನ್ನು ಆರಂಭಿಸಿದ್ದು 13 ವರ್ಷದವರಿದ್ದಾಗ. ಭಾರತದ ಅತ್ಯಂತ ಕಿರಿಯ ಸಿಇಓ ಇವರು.

image


8 ವರ್ಷದವರಿದ್ದಾಗ್ಲೇ ಅಯಾನ್ ಸ್ವಂತಕ್ಕೊಂದು ಕಂಪ್ಯೂಟರ್ ಕೊಂಡುಕೊಂಡಿದ್ರು. ಹೊಸದೇನಾದ್ರೂ ಕಂಡಾಕ್ಷಣ ಅದರಲ್ಲಿ ಪ್ರಯೋಗ ಮಾಡುವ ಹವ್ಯಾಸ ಅವರಿಗಿತ್ತು. ವಿಡಿಯೋ ಗೇಮ್ಸ್ ಆಡೋದ್ರಿಂದ ಹಿಡಿದು ವಿಡಿಯೋ ಹಾಗೂ ಸಿನಿಮಾ ಎಡಿಟ್ ಮಾಡೋದ್ರಲ್ಲಿ ಕೂಡ ಅಯಾನ್ ಹಿಂದೆ ಬೀಳಲಿಲ್ಲ. ತಂತ್ರಜ್ಞಾನದಲ್ಲಿ ನುರಿತಿದ್ದ ಅಯಾನ್ ಅದರಲ್ಲಿ ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸ್ತಾ ಇದ್ರು. ಶಿಕ್ಷಣ ಅನ್ನೋದು ಪ್ರತಿಯೊಬ್ಬರ ಜೀವದಲ್ಲೂ ಎಷ್ಟು ಮಹತ್ವ ಪಡೆದಿದದೆ ಅನ್ನೋದನ್ನು ಎಲ್ಲರೂ ಅವರಿಗೆ ತಿಳಿಸಿ ಹೇಳ್ತಾ ಇದ್ರು. ಆದ್ರೆ ಅಯಾನ್ 9ನೇ ತರಗತಿಗೆ ಶಾಲೆ ಬಿಟ್ಟುಬಿಟ್ರು. ಅದು ಅವರ ಬದುಕನ್ನೇ ಬದಲಾಯಿಸಿದ ನಿರ್ಧಾರ.

ಅಯಾನ್ 1997ರಲ್ಲಿ ದೆಹಲಿಯಲ್ಲಿ ಜನಿಸಿದ್ರು. ತಂದೆ ಕುಂಜಮ್ ಚಾವ್ಲಾ ಒಬ್ಬ ಫ್ಯಾಷನ್ ಡಿಸೈನರ್. ಅಕ್ಕ ಜ್ಯೋಲ್ಷಾ ಚಾವ್ಲಾ ಸಿವಿಲ್ ಎಂಜಿನಿಯರ್. ''8 ವರ್ಷದವನಿದ್ದಾಗ್ಲೇ ಹೆತ್ತವರು ನನಗೆ ಒಂದು ಕಂಪ್ಯೂಟರ್ ಕೊಡಿಸಿದ್ರು. ಅಡೋಬ್ ಸಾಫ್ಟ್ ವೇರ್ ನಂತಹ ಎಡಿಟಿಂಗ್ ಟೂಲ್ ಗಳನ್ನು ಬಳಸಿ ನಾನು ವಿಡಿಯೋ ಎಡಿಟಿಂಗ್ ಮಾಡಲು ಆರಂಭಿಸಿದೆ. ವೆಬ್ ಸೈಟ್, ಆ್ಯಪ್, ಸಾಫ್ಟ್ ವೇರ್ ಅಭಿವೃದ್ಧಿಪಡಿಸೋದನ್ನೆಲ್ಲ ಕಲಿತರೆ ಉತ್ತಮ ಅಂತಾ ನನಗನಿಸಿತ್ತು. ಜನರ ನಡುವೆ ಪರಸ್ಪರ ಸಂಪರ್ಕ ಕಲ್ಪಿಸಲು ಸಾಮಾಜಿಕ ಸೌಲಭ್ಯವೊಂದನ್ನು ಸ್ಥಾಪಿಸಬೇಕೆಂದು 13 ವರ್ಷದವನಿದ್ದಾಗ ಐಡಿಯಾ ಹೊಳೆದಿತ್ತು. ಒಂದು ವರ್ಷ ಆ ಬಗ್ಗೆ ಅಧ್ಯಯನ ಮಾಡಿ 2011ರಲ್ಲಿ ಅದನ್ನು ಲಾಂಚ್ ಮಾಡಿದೆ'' ಅಂತಾ ಹಳೆ ನೆನಪುಗಳನ್ನು ಅಯಾನ್ ಮೆಲುಕು ಹಾಕಿದ್ದಾರೆ.

ಸಲಹೆ, ಸೂಚನೆಗಳಿಗಾಗಿ ಅಯಾನ್ ಯಾರನ್ನೂ ಸಂಪರ್ಕಿಸಲಿಲ್ಲ. ಕಂಪ್ಯೂಟರ್ ಜೊತೆಗೆ ಸದಾ ಕೋಣೆಯಲ್ಲಿ ಬಂಧಿಯಾಗಿರ್ತಾ ಇದ್ದ ಅಯಾನ್, ಎಲ್ಲವನ್ನೂ ಸ್ವಂತವಾಗಿ ಕಲಿತರು. ಅನೇಕ ಪುಸ್ತಕಗಳನ್ನು ಓದಿದ್ರು. ಎಲ್ಲದಕ್ಕೂ ಇಂಟರ್ನೆಟ್ ಅನ್ನೇ ಅವಲಂಬಿಸಿದ್ದರು. ''ಕಂಪನಿಯ ಲೀಗಲ್ ಹಾಗೂ ಫೈನಾನ್ಷಿಯಲ್ ಸಂಗತಿಗಳನ್ನೆಲ್ಲ ಅಮ್ಮನೇ ನೋಡಿಕೊಳ್ಳುತ್ತಿದ್ರು. ಅವರೇ ನನ್ನ ಕಂಪನಿಯ ಮುಖ್ಯಸ್ಥೆ. ಆಕೆ ಐಟಿ ಕ್ಷೇತ್ರದಿಂದ ಬಂದವರಲ್ಲ. ನನ್ನ ಕೆಲಸದಲ್ಲಿ ಯಾವತ್ತೂ ಮಧ್ಯಪ್ರವೇಶಿಸುವುದಿಲ್ಲ. ಮನೆ ತುಂಬಾ ಕೆಲಸದವರಿದ್ರೂ ನನ್ನ ಬಗ್ಗೆ ಕಾಳಜಿ ವಹಿಸುವ ಸೂಪರ್ ಅಮ್ಮ. ಕೆಲಸದ ಸಮಯದಲ್ಲಿ ಅವರ ಜೊತೆ ಮಾತನಾಡಲು ನನಗೆ ಸಮಯವೇ ಸಿಗುವುದಿಲ್ಲ'' ಎನ್ನುತ್ತಾರೆ ಅಯಾನ್.

2011ರ ಮಾರ್ಚ್ 11ರಂದು ಅಯಾನ್ 'ಏಷ್ಯನ್ ಫಾಕ್ಸ್ ಡೆವಲಪ್ಮೆಂಟ್ಸ್' ಕಂಪನಿ ಸ್ಥಾಪಿಸಿದ್ರು. ಈ ಕಂಪನಿ ಐಟಿ, ವೆಬ್, ಮತ್ತು ಮಾರ್ಕೆಟಿಂಗ್ ಉತ್ಪನ್ನ ಹಾಗೂ ಸೇವೆಯನ್ನು ಒದಗಿಸುತ್ತದೆ. ನಂತರ ಕೇವಲ ಎರಡೇ ವರ್ಷಗಳಲ್ಲಿ ಗ್ರೂಪ್ ಫಾರ್ ಬಡ್ಡೀಸ್, ಗ್ಲೋಬಲ್ ವೆಬ್ ಮೌಂಟ್ ಹಾಗೂ ಮೈಂಡ್ ಇನ್ ಅಡ್ವರ್ಟೈಸಿಂಗ್ ಎಂಬ ಮೂರು ಕಂಪನಿಗಳನ್ನು ಆರಂಭಿಸಿದ್ರು. ಆರಂಭದಲ್ಲಿ ಅಯಾನ್ ತಾಯಿ ಕಂಪನಿಗಾಗಿ 10,000 ರೂಪಾಯಿ ಹೂಡಿಕೆ ಮಾಡಿದ್ದರು.

''ಎಷ್ಟೋ ಬಾರಿ ನನ್ನ ಕಂಪನಿಯ ಸೇಲ್ಸ್ ಮನ್ ಗಳನ್ನೇ ಎಲ್ಲರೂ ಗಂಭೀರವಾಗಿ ಪರಿಗಣಿಸ್ತಾ ಇದ್ರು. ನನ್ನನ್ನು ಲೆಕ್ಕಕ್ಕೇ ತೆಗೆದುಕೊಳ್ತಿರಲಿಲ್ಲ. ನಾನು ತುಂಬಾನೇ ಚಿಕ್ಕವನಾಗಿದ್ದರಿಂದ ಮೊದಲ ವರ್ಷ ಕಷ್ಟವಾಯ್ತು, ನಂತರ ನನ್ನ ಸಾಮರ್ಥ್ಯದಲ್ಲಿ ನಾನು ನಂಬಿಕೆ ಬೆಳೆಸಿಕೊಂಡೆ'' ಅಂತಾ ತಮ್ಮ ಅನುಭವವನ್ನು ಅಯಾನ್ ಹಂಚಿಕೊಂಡಿದ್ದಾರೆ. ಈಗಲೂ ಸಮಯ ಸಿಕ್ಕಾಗಲೆಲ್ಲ ಅಯಾನ್ ಇಂಟರ್ನೆಟ್ ಸರ್ಫ್ ಮಾಡ್ತಾರೆ, ಐಟಿ ಹಾಗೂ ಮಾರ್ಕೆಟ್ ಬಗ್ಗೆ ತಿಳಿದುಕೊಳ್ತಾರೆ.

''ಈಗ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಸೆಮಿನಾರ್, ಕಾನ್ಫರೆನ್ಸ್ ಗಳಲ್ಲಿ ಮಾತನಾಡಲು ನನ್ನನ್ನು ಆಹ್ವಾನಿಸ್ತಾರೆ. ಒಮ್ಮೆ ದ್ರೋಣಾಚಾರ್ಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ದೊಡ್ಡ ದೊಡ್ಡ ಉದ್ಯಮಿಗಳೆದುರು ಮಾತನಾಡಲು ನಾನು ಹಿಂಜರಿದಿದ್ದೆ. ಅದಾದಮೇಲೆ ಒರ್ಲೆಂಡೋ ಮತ್ತು ಫ್ಲೋರಿಡಾದಿಂದ್ಲೂ ಆಹ್ವಾನ ಬಂದಿತ್ತು. ಇತ್ತೀಚೆಗಷ್ಟೆ ಏಷ್ಯನ್ ಫಾಕ್ಸ್ ಡೆವಲಪ್ಮೆಂಟ್ಸ್ ನಿರ್ದೇಶಕ ಇಕ್ರಂ ಅಖ್ತರ್ ಹಾಗೂ ನಿರ್ಮಾಪಕ ರಾಜೇಶ್.ಆರ್.ತ್ರಿಪಾಠಿ ಅವರ ಇಂಡಿಯಾ ಮೆ ಲಾಹೋರ್ ಚಿತ್ರಕ್ಕಾಗಿ ಐಟಿ ಮತ್ತು ಮೀಡಿಯಾ ಪಾಲುದಾರನಾಗಿ ಒಪ್ಪಂದ ಮಾಡಿಕೊಂಡಿದೆ. ನಾನು ಆಗಾಗ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡುತ್ತೇನೆ. ಐಟಿ ಬಗ್ಗೆ ನನಗೆ ಗೊತ್ತಿರೋದನ್ನು ಮಕ್ಕಳಿಗೆ ತಿಳಿಹೇಳ್ತೇನೆ, ಅವರನ್ನು ಪ್ರೋತ್ಸಾಹಿಸುತ್ತೇನೆ'' ಅಂತಾ ಅಯಾನ್ ತಿಳಿಸಿದ್ದಾರೆ.

18 ವರ್ಷದವರಾಗುವಷ್ಟರಲ್ಲಿ ಅಯಾನ್ 1 ಲಕ್ಷ ಗ್ರಾಹಕರನ್ನು ಸಂಪಾದಿಸಿದ್ದರು. ಅಮೆರಿಕ, ಬ್ರಿಟನ್, ಟರ್ಕಿ ಮತ್ತು ಹಾಂಗ್ ಕಾಂಗ್ ನಲ್ಲೂ ಅಯಾನ್ ಕಂಪನಿಯ ಶಾಖೆಗಳಿವೆ. ಈಗಾಗ್ಲೇ 2 ಬಾರಿ ಅಯಾನ್ ಗೆ 'ಯಂಗ್ ಎಂಟರ್ ಪ್ರೆನ್ಯೂರ್ ಆಫ್ ದಿ ಇಯರ್' ಪ್ರಶಸ್ತಿ ಲಭಿಸಿದೆ. ಪ್ರಧಾನಿ ಕಾರ್ಯಾಲಯದಿಂದ್ಲೂ ಅವರಿಗೆ ಮೆಚ್ಚುಗೆ ಪತ್ರ ಲಭಿಸಿದೆ. ಅಪರೂಪದಲ್ಲೊಬ್ಬ ಅಪರೂಪದ ಉದ್ಯಮಿ ಅಯಾನ್. ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ವಿ ಉದ್ಯಮಿಯಾಗಲು ಬಯಸುವ ಯುವಕರಿಗೆಲ್ಲ ಮಾದರಿ. 

ಇದನ್ನೂ ಓದಿ.. 

ಮಹಿಳೆಯರ ಎಚ್ಚರ..! ಸ್ತನ ಕ್ಯಾನ್ಸರ್​ ಮಹಾಮಾರಿಯಾಗುತ್ತಿದೆ..!

ಕೆನಾಡ ಬಿಟ್ಟು ಬಂದ ಆ ಹುಡುಗ ಮನೆ ಮನೆಯಲ್ಲೂ ಹಸಿರು ತಂದ! 

Add to
Shares
13
Comments
Share This
Add to
Shares
13
Comments
Share
Report an issue
Authors

Related Tags