ಆವೃತ್ತಿಗಳು
Kannada

ವರ್ತಕರ ಸಮಸ್ಯೆಗೆ ಪರಿಹಾರ ಒದಗಿಸಿಲಿದೆ ರೋಡ್ ರನ್ನರ್

ಉಷಾ ಹರೀಶ್​

30th Mar 2016
Add to
Shares
2
Comments
Share This
Add to
Shares
2
Comments
Share

ಸಿಲಿಕಾನ್ ಸಿಟಿ ಬೆಂಗಳೂರಿಗರಿಗೆ ಮೊದಲು ಕಾಡುವ ಸಮಸ್ಯೆ ಎಂದರೆ ಟ್ರಾಫಿಕ್. ಅದರಲ್ಲೂ ಮಾರುಕಟ್ಟೆಗೆ ಹೋಗಿ ರೇಷನ್ ಮತ್ತಿತರ ಸಾಮಾನುಗಳನ್ನು ತರುವವರಿಗಂತೂ ಇದು ಬಹು ದೊಡ್ಡ ಸಮಸ್ಯೆಯಾಗಿ ಕಾಡುತ್ತದೆ. ಇವರೆಗೆಲ್ಲಾ ಪರಿಹಾರವೆಂಬಂತೆ ಆರಂಭವಾಗಿರುವುದೇ ರೋಡ್ ರನ್ನರ್ ಎಂಬ ಸ್ಟಾರ್ಟ್ ಅಪ್.

ಹೌದು ಇತ್ತೀಚಿನ ದಿನಗಳಲ್ಲಿ ಕೆಲ ದಿನಸಿ ಅಂಗಡಿಗಳಲ್ಲಿ ಫೋನ್ ಮಾಡಿ ಹೇಳಿದರೆ ಸಾಕು ದಿನಸಿಯನ್ನು ಮನೆಗೆ ತಂದು ಹಾಕುತ್ತೇವೆ ಎಂದು ಹೇಳುತ್ತಾರೆ. ನಾವು ಆರ್ಡರ್ ಮಾಡಿದ ನಂತರ ಅವರು ಸಂಚಾರ ವ್ಯವಸ್ಥೆಗಾಗಿ ಸಾಕಷ್ಟು ಬಾರಿ ಪರದಾಡುತ್ತಾರೆ. ಈಗೀಗ ಮೊಬೈಲ್ ಆ್ಯಪ್​ನಲ್ಲಿ ಸರಕು ಸರಂಜಾಮುಗಳನ್ನು ಕಳುಹಿಸಿಕೊಡಿ ಎಂದು ಆರ್ಡರ್ ಮಾಡುತ್ತಾರೆ. ಮಳಿಗೆಯವರಿಗೆ ಡೆಲಿವರಿ ಬಾಯ್​​ಗಳ ಸಮಸ್ಯೆ ಜೊತೆಗೆ ವಾಹನಗಳ ಸಮಸ್ಯೆಯು ಕಾಡುತ್ತದೆ. ಅಂತಹ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಫ್ಲಿಪ್ಕಾರ್ಟ್ನಲ್ಲಿ ಉನ್ನತ ಹುದ್ದೆಯಲ್ಲಿದ್ದ ಇಬ್ಬರು ಯುವಕರು ಸೇರಿಕೊಂಡು ಈ ರೋಡ್​​ರನ್ನರ್ ಎಂಬ ಸ್ಟಾರ್ಟ್ ಅಪ್ ಪ್ರಾರಂಭಿಸಿದ್ದಾರೆ.

image


ಕೆಲಸ ಹೇಗೆ..?

ಈ ರೋಡ್​ರನ್ನರ್ ಗ್ರಾಹಕರ ಮತ್ತು ವರ್ತಕರ ಸಮಸ್ಯೆಗೆ ಸೂಕ್ತ ಪರಿಹಾರ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ. ಇದು ಸಂಪೂರ್ಣ ತಂತ್ರಜ್ಞಾನ ಆಧಾರಿತವಾದ ಕಂಪನಿ ಎಲ್ಲವೂ ಆನ್​ಲೈನ್ ಮೂಲಕವೆ ಕಾರ್ಯ ನಿರ್ವಹಣೆ. ಇದಕ್ಕಾಗಿ ಒಂದು ಆ್ಯಪ್​ನ್ನು ಅಭಿವೃದ್ಧಿಪಡಿಸಲಾಗಿದೆ. ವರ್ತಕರು ಈ ಆ್ಯಪ್​ನ್ನು ಡೌನ್​ಲೋಡ್ ಮಾಡಿಕೊಂಡಿರುತ್ತಾರೆ. ಗ್ರಾಹಕರು ಬೇಕಾದ ಉತ್ಪನ್ನಗಳನ್ನು ಅದರ ಮೂಲಕಬುಕ್ ಮಾಡಿದರೆ. ವರ್ತಕರು ಆ್ಯಪ್ ಮೂಲಕ ರೋಡ್ ರನ್ನರ್ ವಾಹನಗಳನ್ನು ತರಿಸಿ ಗ್ರಾಹಕರ ವಿಳಾಸ ಕೊಟ್ಟು ಅದನ್ನು ತಲುಪಿಸುವಂತೆ ಸೂಚಿಸುತ್ತಾರೆ ಅವರು ಅದನ್ನು ಕೆಲ ನಿಮಿಷಗಳಲ್ಲೇಗ್ರಾಹಕರಿಗೆ ತಲಪಿಸುತ್ತಾರೆ.

ಸಾವಿರಾರು ಉದ್ಯೋಗ ಸೃಷ್ಟಿ

ರೋಡ್ ರನ್ನರ್ ಕಂಪನಿ ವರ್ತಕರಿಗೆ ಅನುಕೂಲ ಮಾಡುವುದರ ಜೊತೆಗೆ ಸಾವಿರಾರು ಉದ್ಯೋಗವನ್ನು ಸೃಷ್ಟಿ ಮಾಡಿದೆ. ಟಾಟಾ ಏಸ್, ಸೇರಿದಂತೆ ಮತ್ತಿತರ ಲಘು ಸರಕು ಸಾಗಾಣೆ ಮಾಲೀಕರು ಮತ್ತು ಚಾಲಕರು ಈ ರೋಡ್ ರನ್ನರ್​​ನಲ್ಲಿ ಲಾಗ್ ಇನ್ ಆದರೆ ಅವರಿಗೆ ಬಾಡಿಗೆ ಸಹ ನೀಡುತ್ತಾರೆ. ಪ್ರತಿ ದಿನ ಬೆಳಗ್ಗೆ ಲಾಗ್ ಇನ್ ಆಗಿ ಅವರು ಇರುವ ಸ್ಥಳವನ್ನು ಹೇಳಿದರೆ, ಅವರು ಇರುವ ಸ್ಥಳದಲ್ಲಿ ಯಾವುದಾದರೂ ಡೆಲಿವರಿ ಇದ್ದರೆ ಅವರಿಗೆ ತಿಳಿಸುತ್ತಾರೆ. ಒಂದು ಡೆಲಿವರಿಗೆ ಇಷ್ಟು ಎಂಬಂತೆ ಅವರಿಗೆ ಹಣ ಸಿಗುತ್ತದೆ.

image


ಗ್ರಾಹಕರಿಗೆ ಸರಕು ಸಾಗಿಸುವ ಸ್ಥಳ ಅಂಗಡಿಯಿಂದ ಐದಾರು ಕಿ ಮೀ ಸುತ್ತಳತೆಯಲ್ಲೆ ಇದ್ದರೆ ಒಳಿತು. ಬಲ್ಕ್ ಆಗಿ ಆರ್ಡರ್ ಮಾಡಿದರೆ ಎಷ್ಟೇ ದೂರವಿದ್ದರು ರೋಡ್​​ರನ್ನರ್ ಅವರಿಗೆ ತಲುಪಿಸುತ್ತಾರೆ. ಸರಕು ಸಾಗಣೆ ಚಾಲಕರು ಇದನ್ನು ಪಾರ್ಟ್ ಟೈಮ್ ಕೆಲಸವನ್ನಾಗಿ ಮಾಡಬಹುದು. ಅವರಿಗೆ ಸಮಯವಿದ್ದಾಗ ಲಾಗ್ ಇನ್ ಆಗಬಹುದು,ಬೇರೆ ಕೆಲಸ ಇದ್ದರೆ ಲಾಗ್ ಔಟ್ ಆಗಬಹುದು. ಇಲ್ಲಿ ದಿನಕ್ಕೆ ಇಷ್ಟು ಆರ್ಡರ್, ಇಷ್ಟು ಸಮಯ ಎಂಬ ಕಟ್ಟುಪಾಡು ಇಲ್ಲ. ಕೆಲವೊಮ್ಮೆ ಒಂದೇಮಾರ್ಗದಲ್ಲಿ ಎರಡು ಡೆಲಿವರಿ ಇದ್ದರೆ. ಅದನ್ನು ತಲುಪಿಸಿ ಡಬಲ್ ಬಾಡಿಗೆ ಪಡೆಯಬಹುದು. ಬಾಡಿಗೆ ಹಣ ಅವರ ಖಾತೆಗೆ ಜಮಾ ಆಗುತ್ತದೆ.

ಈ ಕೆಲಸಕ್ಕೆ ಗೆಳೆಯರ ಸಾಥ್

ಮೊಹಿತ್ ಮತ್ತು ಅರ್ಪಿತ್ ರೋಡ್​​ರನ್ನರ್ ಸಂಸ್ಥಪಾಕರು. ಫ್ಲಿಪ್ ಕಾರ್ಟ್​ನಲ್ಲಿ ಕೆಲಸದಲ್ಲಿದ್ದ ಇವರು ಸ್ವಂತವಾಗಿ ಏನಾದರೂ ಮಾಡಬೇಕು ಎಂದುಕೊಂಡು ನಗರ ಪ್ರದೇಶದಲ್ಲಿನ ಸಾರಿಗೆ ವ್ಯವಸ್ಥೆಯಲ್ಲಿನ ಸಮಸ್ಯೆಗಳನ್ನು ಗುರುತಿಸಿದಾಗ ಹುಟ್ಟಿಕೊಂಡಿದ್ದೇ ಈ ರೋಡ್​​ರನ್ನರ್.ಇವರ ಈ ಹೊಸ ಪ್ರಯತ್ನಕ್ಕೆ ಇವರ ಗೆಳೆಯರಾಧ ದಾವಣಗೆರೆಯ ಜ್ಞಾನೇಶ್, ಅಮೇಜಾನ್​ನಲ್ಲಿ ಕೆಲಸ ಮಾಡುತ್ತಿದ್ದ ಮುಕುಂದ್, ರಾಜಸ್ಥಾನ ವಸ್ತಲ್, ಹೈದರಾಬಾದ್​​ನಲ್ಲಿದ್ದ ಅರವಿಂದ್ ಕೈಜೋಡಿಸಿದರು. ಸುಮಾರು ೧೧ ಲಕ್ಷ ಡಾಲರ್ ಬಂಡವಾಳದೊಂದಿಗೆ ಈ ಸ್ಟಾರ್ಟ್ಅಪ್ ಪ್ರಾರಂಭಿಸಿದ್ದಾರೆ.

image


ರೋಡ್​ರನ್ನರ್ ಈಗ ಸಧ್ಯಕ್ಕೆ ಬೆಂಗಳೂರು, ದೆಹಲಿ, ಚೆನ್ನೈ, ಕೋಲ್ಕತ್ತಾ, ಹೈದರಾಬಾದ್, ಮುಂಬೈ, ಪುಣೆಗಳಲ್ಲಿ ಸದ್ಯ ಕಾರ್ಯಾಚರಣೆ ನಡೆಸುತ್ತಿದೆ. ಒಂದು ದಿನಕ್ಕೆ ಏನಿಲ್ಲ ಎಂದರೂ ೨೫ ರಿಂದ ೩೦ ಸಾವಿರ ಆರ್ಡರ್ಗಳನ್ನು ಪಡೆಯುತ್ತಿದೆ. ಬೆಂಗಳೂರು, ಮುಂಬೈ ಮತ್ತು ಹೆಚ್ಚು ಆರ್ಡರ್​​ಗಳು ಸಿಗುತ್ತಿವೆ.

ಚಾಲಕರ ಕಷ್ಟ ಕಾಲದಲ್ಲಿ ಸಹಾಯ

ರೋಡ್​​ರನ್ನರ್ ಕಂಪನಿಯಲ್ಲಿ ಒಳ್ಳೆಯ ಚಾಲಕರಿಗೆ ಹಲವು ರೀತಿಯ ಸೌಲಭ್ಯಗಳನ್ನು ಸಂಸ್ಥೆ ಒದಗಿಸುತ್ತದೆ. ವಾಹನವನ್ನು ಉಚಿತವಾಗಿ ಸರ್ವೀಸ್ ಮಾಡಿಸಿಕೊಡುವುದ, ಕಷ್ಟ ಬಂದಾಗ ತಮ್ಮಿಂದಾದಷ್ಟು ಸಹಾಯ ಮಾಡುವುದು ಉತ್ತಮ ಚಾಲಕರನ್ನು ಗುರುತಿಸಿ ಗೌರವಿಸುವ ಕೆಲಸವನ್ನೂ ಮಾಡಲಾಗುತ್ತದೆ.

ಹೀಗೆ ವರ್ತಕರು ಮತ್ತು ಗ್ರಾಹಕರ ಈ ಸಮಸ್ಯೆಯನ್ನು ಗುರುತಿಸಿ ಆರಂಭವಾದ ರೋಡ್ರನ್ನರ್ ಹೆಸರಿಗೆ ತಕ್ಕಂತೆಯೇ ಓಡುತ್ತದೆ. ಗ್ರಾಹಕರಿಗೆ ಕೂಡಲೇ ತಮಗೆ ಬೇಕಾದ ಉತ್ಪನ್ನಗಳು ಸಿಗುವ ಜೊತೆಗೆ ವರ್ತಕರು ಮತ್ತು ಗ್ರಾಹಕರ ಅಮೂಲ್ಯ ಸಮಯವನ್ನು ಉಳಿಸುತ್ತಿದೆ. 

ಇದನ್ನು ಓದಿ:

1. ಸಮಯ ಸಾಧಕನಿಗೆ ಈಗ ಲಕ್ಷ ಲಕ್ಷ ರೂಪಾಯಿ..!

2. ಸಕಲ ಕಲಾ ವಲ್ಲಭ - ಆಸಕ್ತಿಯೇ ಈಗ ಫುಲ್‍ ಟೈಂ ಜಾಬ್

3. ಓದಿದ್ದು ಎಂಬಿಎ, ಆಗಿದ್ದು ಕೋಳಿ ಫಾರ್ಮ್ ಮಾಲೀಕ..!

Add to
Shares
2
Comments
Share This
Add to
Shares
2
Comments
Share
Report an issue
Authors

Related Tags