ಕರಕುಶಲ ಕಲೆಗಳನ್ನು ಜೀವಂತವಾಗಿರಿಸಲು ಶ್ರಮಿಸುತ್ತಿರುವ ಐವರು ಮಹಿಳಾ ಉದ್ಯಮಿಗಳ ಕಥೆ

ಟೀಮ್​​ ವೈ.ಎಸ್​​.

6th Nov 2015
  • +0
Share on
close
  • +0
Share on
close
Share on
close

ಚರಕದಿಂದ ನೂಲುವ ಉದ್ಯಮ ಪುನಶ್ಚೇತನಗೊಳ್ಳುವ ಅವಶ್ಯಕತೆ ಇದೆ ಎಂದು ಹೇಳಿದರೆ ಸಾಕಾಗುವುದಿಲ್ಲ. ಇದೊಂದು ಕೇಂದ್ರ ಉದ್ಯಮವಾಗಿ ಗುರುತಿಸಿಕೊಳ್ಳುವ, ಗ್ರಾಮಗಳ ಮನೆಮನೆಯಲ್ಲೂ ನೂಲುವುದರತ್ತ ತೊಡಗಬೇಕು ಎಂಬುದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಪ್ರಖ್ಯಾತ ಮಾತುಗಳು.

ಪೇಂಟಿಂಗ್, ಕಿಟ್ಟಿಂಗ್, ಕೆತ್ತನೆ, ಮರಗೆಲಸದ ಚಾತುರ್ಯಗಳು ಹೀಗೆ ಜನರು ತಮ್ಮ ಸ್ವಹಸ್ತದಿಂದ ಏನನ್ನೇ ಮಾಡಿದರೂ ಅದರಲ್ಲಿ ಆತ್ಮತೃಪ್ತಿ ದೊರಕುತ್ತದೆ. ಕರಕುಶಲ ಕಲೆಗಳು ವಿಸ್ತಾರವಾದ ವ್ಯಾಪ್ತಿಯನ್ನು ಒಳಗೊಂಡಿದೆ. ಹಣವುಳಿಸಲು ನಿಮ್ಮದೇ ಮನೆಯ ರಿಪೇರಿ ನೀವು ಮಾಡುವುದಕ್ಕೂ, ನಿಮ್ಮ ಮನೆಯನ್ನು ಅಲಂಕಾರಿಕವಾಗಿ ವಿನ್ಯಾಸಗೊಳಿಸಲು ಶ್ರಮಿಸುವುದಕ್ಕೂ ತುಂಬಾ ವ್ಯತ್ಯಾಸವಿದೆ. ಕರಕುಶಲ ಕಲೆಗಳಲ್ಲಿ ಮಹಿಳೆಯರು ಇಂದಿಗೂ ತಮ್ಮದೇ ಆದ ಆಸಕ್ತಿಯನ್ನು ಹೊಂದಿದ್ದಾರೆ. ಅದನ್ನೇ ಉದ್ಯಮವಾಗಿಸಿಕೊಂಡು ಮುಂದುವರೆಯುತ್ತಿರುವವರೂ ಇದ್ದಾರೆ. ಅಂಥಾ ಕೆಲ ಮಹಿಳೆಯರ ಪರಿಚಯ ಇಲ್ಲಿದೆ.

image


ಅರ್ಬನ್ ಕಲಾ ಸಂಸ್ಥೆಯ ಸವಿತಾ ಐಯ್ಯರ್

ಕರಕುಶಲ ಕಲೆಗಳಲ್ಲಿ ಆಸಕ್ತಿ ಮತ್ತು ಸೃಜನಶೀಲತೆ ಹೊಂದಿದ್ದ ಸವಿತಾ ಐಯ್ಯರ್ 2012ರಲ್ಲಿ ಅರ್ಬನ್ ಕಲಾ ಸಂಸ್ಥೆಯನ್ನು ಆರಂಭಿಸಿದರು. ಪೇಂಟ್ ಮಾಡಲ್ಪಟ್ಟ ಸೆಣಬಿನ ಬ್ಯಾಗ್‌ಗಳು, ಕ್ಯಾನ್ವಾಸ್‌ ಬ್ಯಾಗ್‌ಗಳು, ಆಭರಣಗಳು, ಬಿತ್ತಿಚಿತ್ರಗಳು, ಕೀ ಹೋಲ್ಡರ್‌ಗಳು ಮತ್ತು ಟ್ರೇಗಳ ವಿಸ್ತಾರವಾದ ಸಂಗ್ರಹ ಇಲ್ಲಿ ಲಭ್ಯವಿದೆ. ಮರದ ತುಂಡುಗಳು, ತೆಂಗಿನಕಾಯಿ ಚಿಪ್ಪುಗಳು, ಹಳೆಯ ಸೆಣಬಿನ ತುಂಡುಗಳು ಇತ್ಯಾದಿಗಳನ್ನು ಬಳಸಿಕೊಂಡು ಅವುಗಳಲ್ಲಿ ವಿವಿಧ, ಸೃಜನಶೀಲ ವಿನ್ಯಾಸಗಳನ್ನು ರಚಿಸುತ್ತಾರೆ.

ಎಥ್ನಿಕ್ ಶಾಕ್‌ನ ಶ್ರೀಜಾತಾ ಭಟ್ನಾಗರ್

ತಮ್ಮ ಆಸಕ್ತಿಯನ್ನೇ ವೃತ್ತಿಯಾಗಿ ತೆಗೆದುಕೊಂಡ ಶ್ರೀಜಾತಾ ಭಟ್ನಾಗರ್ 2014ರಲ್ಲಿ ಎಥ್ನಿಕ್ ಶಾಕ್‌ ಎಂಬ ಕರಕುಶಲ ಉತ್ಪನ್ನಗಳ ಸಂಸ್ಥೆಯನ್ನು ಆರಂಭಿಸಿದರು. ಸಾಂಪ್ರದಾಯಿಕ ಹಾಗೂ ಆಧುನಿಕ ಟ್ರೆಂಡ್‌ಗಳನ್ನು ಬಳಸಿಕೊಂಡು ಉಡುಪುಗಳು, ಆಭರಣಗಳು, ದುಪ್ಪಟ್ಟಾಗಳು, ಶಾಲುಗಳು, ಸೆಲ್ವಾರ್ ಕಮೀಜ್‌ಗಳು, ಕೈಚೀಲಗಳು, ಪ್ರತಿಮೆಗಳು, ಗೃಹಾಲಂಕಾರಿಕ ವಸ್ತುಗಳು, ಗೋಡೆಯಲ್ಲಿ ನೇತು ಹಾಕುವಂತಹ ವಸ್ತುಗಳು ಮತ್ತು ಬ್ಲಾಂಕೆಟ್‌ಗಳು ಎಥ್ನಿಕ್ ಶಾಕ್ ಸಂಸ್ಥೆ ಉತ್ಪಾದಿಸುತ್ತಿದೆ. ಕಲಾವಿದರು ಮತ್ತು ಕುಶಲಕರ್ಮಿಗಳು ನೇರವಾಗಿ ಉದ್ಯಮದಲ್ಲಿ ಪಾಲ್ಗೊಳ್ಳುತ್ತಾರೆ. ಹೀಗಾಗಿ ಉದ್ಯಮದಲ್ಲಿ ತೊಡಗಿರುವ ಕಲಾವಿದರು ಮತ್ತು ಕುಶಲಕರ್ಮಿಗಳು ತಮ್ಮ ಕೆಲಸಕ್ಕೆ ತಕ್ಕಂತೆ ಮೌಲ್ಯವನ್ನು ಪಡೆಯುತ್ತಾರೆ. ಇದರಿಂದ ಅವರ ಆರ್ಥಿಕ ಸಮಸ್ಯೆಗಳೂ ಸಹ ಪರಿಹಾರವಾಗುತ್ತದೆ. ಹೀಗಾಗಿ ಎಥ್ನಿಕ್‌ ಶಾಕ್‌ ಸಂಸ್ಥೆಯ ಗ್ರಾಹಕರೂ ಸಹ ಹೆಚ್ಚುತ್ತಿದ್ದಾರೆ.

ಸಾಧ್ನಾ ಸಂಸ್ಥೆಯ ಲೀಲಾ ವಿಜಯ್ ವರ್ಜಿಯಾ

1988ರಲ್ಲಿ ಲೀಲಾ ವಿಜಯ್ ವರ್ಜಿಯಾರಿಂದ ಆರಂಭವಾದ ಸಾಧ್ನಾ ಸಂಸ್ಥೆ ಮೊದಲಿಗೆ 15 ಮಹಿಳೆಯರೊಂದಿಗೆ ಶುರುವಾಗಿ ಈಗ ಉದ್ಯಮದಲ್ಲಿ 625 ಮಂದಿ ಕುಶಲಕರ್ಮಿ ಮಹಿಳೆಯರು ತೊಡಗಿಕೊಂಡಿದ್ದಾರೆ. ಉದಯ್‌ ಪುರದಲ್ಲಿ ನೆಲೆಗೊಂಡಿರುವ ಸಂಸ್ಥೆ, ಮಹಿಳೆಯರನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಬಲಗೊಳಿಸುವ ಗುರಿಹೊಂದಿದೆ. ಕುಶಲಕರ್ಮಿಗಳ ಮೇಲೆ ಆಧಾರಿತವಾಗಿರುವ ಈ ಸಂಸ್ಥೆ ಕುಶಲಕರ್ಮಿಗಳು ಗಳಿಸಿದ ಅಷ್ಟೂ ಆದಾಯವನ್ನು ಅವರಿಗೇ ನೀಡುತ್ತಿದೆ. ಆದ್ದರಿಂದ ಈ ಸಂಸ್ಥೆ ಆದಾಯದ ಮತ್ತೊಂದು ಮೂಲವನ್ನು ಕುಶಲಕರ್ಮಿಗಳಿಗೆ ಒದಗಿಸಿದೆ ಎಂದೇ ಹೇಳಬಹುದು. ಸಾಧ್ನಾ ಸಂಸ್ಥೆ ಮಹಿಳೆಯರ ಕುರ್ತಾಗಳು, ಗೃಹಾಲಂಕಾರಿಕ ವಸ್ತುಗಳು, ಆಭರಣಗಳು ಮತ್ತು ಪುರುಷರ ಉಡುಪುಗಳನ್ನು ಮಾರಾಟ ಮಾಡುತ್ತಿದೆ.

ಸಬಲ ಹ್ಯಾಂಡಿಕ್ರಾಫ್ಟ್ಸ್ ನ ಮಲ್ಲಮ್ಮ ಯಲವಾರ್

ಮಲ್ಲಮ್ಮ ಯಲವಾರ್ 1986ರಲ್ಲಿ ಸಬಲ ಹ್ಯಾಂಡಿಕ್ರಾಫ್ಟ್ಸ್ ಸಂಘಟನೆಯನ್ನು ಆರಂಭಿಸಿದರು. ಬಿಜಾಪುರದಲ್ಲಿರುವ ಈ ಸಂಘಟನೆ ಮಹಿಳೆಯರ ಕುರಿತು ಕಾಳಜಿ ವಹಿಸಲೆಂದೇ ನಿರ್ಮಾಣವಾಗಿದೆ. ಮಹಿಳೆಯರು ತಮ್ಮ ಕೌಶಲ್ಯವನ್ನು ಅಭಿವೃದ್ಧಿಪಡಿಸಿಕೊಳ್ಳಲು ಮತ್ತು ಉತ್ಪಾದಕ ಚಟುವಟಿಕೆಗಳಲ್ಲಿ ಅವರು ತೊಡಗಿಕೊಳ್ಳುವಂತೆ ಮಾಡುವ ಮೂಲಕ ಆದಾಯವನ್ನು ಹುಟ್ಟುಹಾಕುವ ಅವಕಾಶಗಳನ್ನು ಈ ಸಂಘಟನೆ ನೀಡುತ್ತಿದೆ. ಸಬಲ ಸಂಸ್ಥೆ ಸಾಂಪ್ರದಾಯಿಕ ಲಂಬಾಣಿ ಮತ್ತು ಕಸೂತಿ ಕಲೆಗಳಿಗೆ ಪುನಶ್ಚೇತನ ನೀಡುವತ್ತ ಶ್ರಮಿಸುತ್ತಿದೆ.

ಕ್ರಿಯೇಟಿವ್ ಹ್ಯಾಂಡಿಕ್ರಾಫ್ಟ್​​​ನ ಇಸಾಬೆಲ್ ಮಾರ್ತಿ

25 ವರ್ಷಗಳ ಹಿಂದೆ ಇಸಾಬೆಲ್ ಮಾರ್ಟಿನ್ ಎಂಬ ಸ್ಪಾನಿಶ್ ಮಿಶನರಿ ಅಂಧೇರಿಯಲ್ಲಿತ್ತು. ಆಗ ಅಲ್ಲೇ ಹತ್ತಿರದಲ್ಲಿದ್ದ ಸ್ಲಂನ ಮಹಿಳೆಯರು ಇಸಾಬೆಲ್ ಮಾರ್ಟಿನ್ ಅವರ ಬಳಿ ಆರ್ಥಿಕವಾಗಿ ಸ್ವತಂತ್ರವಾಗಿರಲು ದಾರಿತೋರಿಸುವಂತೆ ಕೇಳಿಕೊಂಡರು. ಹೀಗಾಗಿ ಇಸಾಬೆಲ್ ಮಾರ್ಟಿನ್ ಅವರು ಸ್ಥಳೀಯ ಸಮುದಾಯಗಳೊಂದಿಗೆ ಸೇರಿ ಸಂಘಟನೆ ಆರಂಭಿಸಿ ಮಹಿಳೆಯರಿಗೆ ಉಪಯೋಗವಾಗುವಂತಹ ಕೆಲಸಗಳನ್ನು ಮಾಡಲಾರಂಭಿಸಿದರು.

ಈ ಸ್ಲಂಗಳ ಕೆಲ ಮಹಿಳೆಯರು ಮೊದಲು ಹೊಲಿಗೆ ತರಗತಿಗಳನ್ನು ಆರಂಭಿಸಿದರು. ಅಲ್ಲದೇ ಸಾಫ್ಟ್‌ ಟಾಯ್‌ಗಳನ್ನು ನಿರ್ಮಿಸಲು, ವಸ್ತ್ರಗಳ ಮೇಲೆ ಕಸೂತಿ ಮತ್ತಿತರ ಸಾಂಪ್ರದಾಯಿಕ ಕರಕುಶಲ ಕಲೆಗಳನ್ನು ಬೋಧಿಸಲಾರಂಭಿಸಿದರು. ಹೀಗೆ ತಯಾರಾದ ಉತ್ಪನ್ನಗಳಿಗೆ ಇಸಾಬೆಲ್ ಮಾರ್ಟಿನ್ ತಮ್ಮ ಸಂಪರ್ಕಗಳನ್ನು ಬಳಸಿಕೊಂಡು ಸ್ಥಳೀಯವಾಗಿ ಮತ್ತು ಸ್ಪೇನ್, ಫ್ರಾನ್ಸ್ ಮತ್ತು ಜರ್ಮನಿಗಳಲ್ಲಿ ಇವುಗಳಿಗೆ ಮಾರುಕಟ್ಟೆ ಒದಗಿಸಿದರು. ಪ್ರಸ್ತುತ ಈ ಸಂಸ್ಥೆಗೆ 2 ದಶಕಗಳ ಇತಿಹಾಸವಿದ್ದು 300 ರಿಂದ 400 ಮಂದಿ ಕುಶಲಕರ್ಮಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಮಹಿಳೆಯರಿಂದ ತಯಾರಿಸಲ್ಪಟ್ಟ ಕರಕುಶಲ ವಸ್ತುಗಳು ಮುಂಬೈನ ಅಂಧೇರಿ, ಕಾಂಡಿವಲಿ ಮತ್ತು ಬಾಂದ್ರಾದ ಮಳಿಗೆಗಳಲ್ಲಿ ಮಾರಾಟವಾಗುತ್ತಿವೆ.

ಹೇಗೆ ವಸ್ತುಗಳು ಮಾಡಲ್ಪಡುತ್ತವೆ, ಏಕೆ ಆ ವಸ್ತುಗಳು ಅದೇ ರೀತಿಯಲ್ಲಿ ರೂಪಿಸಲ್ಪಟ್ಟಿವೆ ಎಂಬುದು ಆಧುನಿಕ ಜೀವನಶೈಲಿಗೆ ಅತ್ಯಂತ ಮುಖ್ಯವಾದ ಅಂಶವಾಗಿದೆ. ಕರಕುಶಲ ಕಲೆಗಳು ವಸ್ತು, ಮೂಲ ಮತ್ತು ತಯಾರಿಕೆಯ ಭಾಷೆಯೆಂದೇ ಗುರುತಿಸಲ್ಪಡುತ್ತಿವೆ. ಕಲಿಯುವಿಕೆಯ ಮೌಲ್ಯವನ್ನು ಇದು ತಿಳಿಸಿಕೊಡುತ್ತದೆ. ಕರಕುಶಲ ವಸ್ತುಗಳು ಆರ್ಥಿಕವಾಗಿ ತುಂಬಾ ಆದಾಯವನ್ನು ಗಳಿಸಿಕೊಡುತ್ತವೆ ಎಂದು ಹೇಳಲಾಗುವುದಿಲ್ಲ. ಆದರೆ ಆ ವಸ್ತುಗಳ ಮೌಲ್ಯ ಮಾತ್ರ ಅಪರಿಮಿತ. ಎಲ್ಲಿ ಮತ್ತು ಹೇಗೆ ಹೆಚ್ಚು ಹೂಡಿಕೆ ಮಾಡಿದರೆ ಎಷ್ಟು ಪ್ರಮಾಣದ ಆದಾಯ ಹಿಂತಿರುಗಿ ಬರುತ್ತದೆ ಎಂಬುದನ್ನು ರಾಜಕೀಯ ಹಾಗೂ ಸಾಮಾಜಿಕವಾಗಿ ತಿಳಿಯಪಡಿಸುವುದು ಗ್ರಾಹಕರ ಕರ್ತವ್ಯ. ಕರಕುಶಲ ವಸ್ತುಗಳಿಗೆ ವಿಶಿಷ್ಟ ಸೌಂದರ್ಯವಿದೆ. ಅಲ್ಲದೇ ಮೌಲ್ಯಗಳಿಂದ ಆ ಕರಕುಶಲ ವಸ್ತುಗಳು ಅಲಂಕಾರಗೊಂಡಿರುತ್ತವೆ. ಅದು ಸ್ಥಳೀಯ ಕಲೆ, ಆಧುನಿಕ ಕಲೆ ಅಥವಾ ಹಳೆಯ ಕಲೆ ಏನೇ ಆಗಿರಬಹುದು ಕರಕುಶಲ ವಸ್ತುಗಳಿಗೆ ಅದರದ್ದೇ ಆದ ಬೆಲೆಯಂತೂ ಇದ್ದೇ ಇದೆ.

  • +0
Share on
close
  • +0
Share on
close
Share on
close
Report an issue
Authors

Related Tags

Our Partner Events

Hustle across India