ಆವೃತ್ತಿಗಳು
Kannada

13ನೇ ವರ್ಷಕ್ಕೆ ಶಾಲೆ ಬಿಟ್ರೂ ಹಠ ಬಿಡಲಿಲ್ಲ- ಎಲ್ಲಾ ಹೆಣ್ಣುಮಕ್ಕಳಿಗೂ ಮಾದರಿ ಆಶಾ ಕೆಮ್ಕಾ

ಟೀಮ್​ ವೈ.ಎಸ್​. ಕನ್ನಡ

YourStory Kannada
13th Apr 2017
Add to
Shares
10
Comments
Share This
Add to
Shares
10
Comments
Share

ಭಾರತದಲ್ಲಿ ಹೆಣ್ಣುಮಕ್ಕಳಿಗೆ ಮೂಲಭೂತವಾಗಿರುವ ಶಿಕ್ಷಣ ಕೂಡ ಸಿಗುತ್ತಿಲ್ಲ. ಅವಕಾಶಗಳು ಸಿಗುವುದಂತೂ ಅಪರೂಪವೇ. ಕೆಲವೊಮ್ಮೆ ಯಾರೋ ಪುಣ್ಯಾತ್ಮ ಅವಕಾಶ ಕೊಟ್ಟಗಲೇ ಅವರಲ್ಲಿರುವ ಪ್ರತಿಭೆ ಹೊರಬರುವುದು. ಇನ್ನು ಕೆಲವೊಮ್ಮೆ ಅವಕಾಶಗಳು ಸಿಕ್ಕಾಗ ಬಳಸಿಕೊಳ್ಳದೇ ಇರುವ ಭಯ ಕೂಡ ಕಾಡುತ್ತದೆ. ಯಾರಲ್ಲಿ ಯಾವ ಪ್ರತಿಭೆ ಇದೆ ಅನ್ನುವುದು ಯಾರಿಗೂ ಗೊತ್ತಿರುವುದಿಲ್ಲ. ಇದಕ್ಕೊಂದು ಉದಾಹರಣೆ ಆಶಾ ಕೆಮ್ಕಾ ಅವರ ಬದುಕಿನ ಕಥೆ. ಆಶಾ ಈಗ ವೆಸ್ಟ್ ನಾಟಿಂಗ್ ಹಂಶೈರ್ ಕಾಲೇಜಿನ ಸಿಇಒ ಹಾಗೂ ಪ್ರಾಂಶುಪಾಲರು. ಆಶಾ ಈಗ ವರ್ಷದ ಏಷ್ಯನ್ ಬ್ಯುಸಿನೆಸ್ ವುಮನ್ ಅನ್ನುವ ಹಿರಿಮೆಗೂ ಪಾತ್ರರಾಗಿದ್ದಾರೆ.

ಶಿಕ್ಷಣ ತಜ್ಞೆ ಆಶಾ ಕಳೆದ 30 ವರ್ಷಗಳಿಂದ ಇಂಗ್ಲೆಂಡ್​ನಲ್ಲಿ ಕೆಲಸ ಮಾಡುತ್ತಿದ್ದಾರೆ. ಹಲವರ ಬದುಕಿಗೆ ಸ್ಫೂರ್ತಿಯಾಗಿದ್ದಾರೆ. 1978ರಲ್ಲಿ ಆಶಾ ಇಂಗ್ಲೆಂಡ್​ಗೆ ತನ್ನ ಗಂಡನ ಜೊತೆಯಲ್ಲಿ ಕಾಲಿಟ್ಟಿದ್ದರು. ಶಾಲಾ ಶಿಕ್ಷಣವನ್ನು ಕೂಡ ಸರಿಯಾಗಿ ಪೂರೈಸುವ ಮೊದಲೇ ಆಶಾ 3 ಮಕ್ಕಳ ತಾಯಗಿದ್ದರು. ಇಂಗ್ಲೆಂಡ್​ಗೆ ಕಾಲಿಟ್ಟಾಗ ಆಶಾಗೆ ಸರಿಯಾಗಿ ಇಂಗ್ಲೀಷ್ ಮಾತನಾಡಲು ಕೂಡ ಬರುತ್ತಿರಲಿಲ್ಲ ಅನ್ನುವುದು ಇವತ್ತು ಅಚ್ಚರಿ ಮೂಡಿಸುತ್ತಿದೆ.

image


ಬಿಹಾರದ ಸಿತಾಮರ್ಹಿ ಜಿಲ್ಲೆ ಆಶಾ ಹುಟ್ಟೂರು. 13ನೇ ವಯಸ್ಸಿನ ತನಕ ಆಶಾಗೆ ಶಾಲೆಗೆ ಹೋಗುವ ಅವಕಾಶ ಸಿಕ್ಕಿತ್ತು. ಹದಿಯರೆಯದ ಹೆಣ್ಣುಮಕ್ಕಳನ್ನು ಶಾಲೆ ಬಿಡಿಸುವುದು ಭಾರತದಲ್ಲಿ ಮಾಮೂಲಿ. ಅದರಲ್ಲೂ ವಯಸ್ಸಿಗೆ ಬಂದ ಮೇಲೆ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸುವುದು ಭಾರತದಲ್ಲಿ ಅತೀ ಕಡಿಮೆ ಆಗಿತ್ತು. ಆಶಾ ಕೂಡ ಇಂತಹ ಕರ್ಮಟ ಯೋಚನೆಗಳಿಗೆ ಬಲಿಯಾಗಿದ್ದರು. 25 ವರ್ಷ ವಯಸ್ಸಾಗುವ ಹೊತ್ತಿಗೆ ಆಶಾ ಮದುವೆಯಾಗಿ, 3 ಮಕ್ಕಳ ತಾಯಿ ಕೂಡ ಆಗಿದ್ದರು.

ಇದನ್ನು ಓದಿ: ಅಮೆರಿಕ ಆಯ್ತು.. ಈಗ ಸಿಂಗಪೂರದ ಸರದಿ- ಭಾರತೀಯ ಐಟಿ ಉದ್ಯೋಗಿಗಳ ವೀಸಾಕ್ಕೆ ಬ್ರೇಕ್

40 ವರ್ಷದ ಹಿಂದ ಇಂಗ್ಲೆಂಡ್​ಗೆ ಕಾಲಿಟ್ಟಿದ್ದ ಆಶಾಗೆ ಅಲ್ಲಿನ ಪರಿಸರ ಹಾಗೂ ಸ್ಥಳಗಳ ಬಗ್ಗೆ ಒಂದು ಚಿಕ್ಕ ಐಡಿಯಾ ಕೂಡ ಇರಲಿಲ್ಲ. ಆದ್ರೆ ಕಠಿಣ ಪರಿಶ್ರಮ ಮತ್ತು ಹೊಸತನ್ನು ಕಲಿಯುವ ಬಗ್ಗೆ ಆಶಾಗೆ ಆಸಕ್ತಿ ಮಾತ್ರ ಕಡಿಮೆ ಆಗಿರಲಿಲ್ಲ. ಆರಂಭದ ದಿನಗಳಲ್ಲಿ ಟಿವಿ ಶೋಗಳ ಮೂಲಕ ಇಂಗ್ಲೀಷ್ ಕಲಿಯುವ ಪ್ರಯತ್ನ ಮಾಡಿದ್ದರು. ಕಲಿಕೆಯ ಮೇಲಿನ ಆಸಕ್ತಿ ಆಶಾಗೆ ಕಾರ್ಡಿಫ್ ಯೂನಿವರ್ಸಿಟಿಯಿಂದ ಬ್ಯುಸಿನೆಸ್ ಡಿಗ್ರಿ ಪಡೆಯುವಂತೆ ಮಾಡಿತ್ತು. ಇದು ಆಶಾ ಹೊಸ ಬದುಕಿನ ಆರಂಭವಾಗಿತ್ತು.

ಆಶಾ ಯು.ಕೆ.ಯ ವೆಸ್ಟ್ ನಾಟಿಂಗ್ ಹಾಂ ಶೈರ್​ನ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ವೃತ್ತಿ ಆರಂಭೀಸಿದ್ರು. 2006ರಲ್ಲಿ ಸಿಇಒ ಹಾಗೂ ಪ್ರಾಂಶುಪಾಲರಾಗಿ ಅಧಿಕಾರ ಸ್ವೀಕರಿಸಿಕೊಂಡ್ರು. ಇಂಗ್ಲೆಂಡ್​ನ ಉನ್ನತ ನಾಗರೀಕ ಪ್ರಶಸ್ತಿಯಾದ " ಡೇಮ್ ಕಮಾಂಡರ್ ಆಫ್ ದ ಆರ್ಡರ್ ಆಫ್ ಬ್ರಿಟಿಷ್ ಎಂಪೈರ್" ಪ್ರಶಸ್ತಿಯನ್ನು 2013ರಲ್ಲಿ ಪಡೆದುಕೊಂಡ್ರು. ಇದು ನೈಟ್​ಹುಡ್ ಪ್ರಶಸ್ತಿಗೆ ಸಮನಾದ ಪ್ರಶಸ್ತಿ ಅನ್ನುವುದು ಮತ್ತೊಂದು ಹೆಮ್ಮೆಯ ವಿಚಾರ. ಈ ಪ್ರಶಸ್ತಿ ಪಡೆದ 2ನೇ ಭಾರತೀಯ ಮೂಲದ ಮಹಿಳೆ ಅನ್ನುವ ಖ್ಯಾತಿ ಕೂಡ ಆಶಾ ಪಾಲಿಗಿದೆ.

“ ಇಂತಹ ಅತ್ಯುನ್ನತ ಪ್ರಶಸ್ತಿ ಪಡೆದಿರುವುದು ನನಗೆ ಹೆಮ್ಮೆ ಎನಿಸುತ್ತಿದೆ. ನನ್ನ ಜೊತೆಯಲ್ಲಿ ಕೆಲಸ ಮಾಡಿದ ಎಲ್ಲರಿಗೂ ಈ ಪ್ರಶಸ್ತಿ ಸಲ್ಲುತ್ತದೆ. ಪ್ರತಿದಿನವೂ ನಾನು ಕಲಿಯಲು ಇಷ್ಟಪಡುತ್ತೇನೆ. ಇವತ್ತಿಗೂ ಕಲಿಕೆ ಬಗ್ಗೆ ಆಸಕ್ತಿ ಕಳೆದುಕೊಂಡಿಲ್ಲ. ನಾನು ನನ್ನ ವೃತ್ತಿಯ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುವಷ್ಟು ದೊಡ್ಡ ಸಾಧನೆ ಮಾಡಿದ್ದೇನೆ ”
- ಆಶಾ ಕೆಮ್ಕಾ, ಸಾಧಕಿ

ಆಶಾ ಈಗ ಬ್ರಿಟಿಷ್ ಪೌರತ್ವ ಪಡೆದುಕೊಂಡಿದ್ದಾರೆ. ಆದ್ರೆ ಭಾರತಕ್ಕೆ ಮತ್ತು ಭಾರತದಲ್ಲಿ ಸೇವೆ ಮಾಡಲು ಸದಾ ಸಿದ್ಧರಿದ್ದಾರೆ. ಭಾರತದಲ್ಲಿ ಶೈಕ್ಷಣಿಕ ಅಭಿವೃದ್ಧಿ ಮಾಡಬೇಕು ಅನ್ನುವ ಯೋಜನೆ ಮಾಡಿಕೊಂಡಿದ್ದಾರೆ. ಅದರಲ್ಲೂ ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ಅಪಾರಾ ಕಾಳಜಿಯೂ ಇದೆ. ಒಟ್ಟಿನಲ್ಲಿ ಆಶಾ ಭಾರತದ ಪಾಲಿಗೆ ನಿಜವಾಗಿಯೂ ಆಶಾಕಿರಣವಾಗಿದ್ದಾರೆ. 

ಇದನ್ನು ಓದಿ:

1. ವಿಮಾನದಲ್ಲಿ ಪ್ರಯಾಣಿಲು 'ಆಧಾರ್' ಆಧಾರ..!

2. 1 ಉತ್ಪನ್ನ ಮಾರಾಟವಾದ್ರೆ 10 ಗಿಡ ನೆಡುವ ಕಂಪನಿ- ಪರಿಸರ ಜಾಗೃತಿ ಮೂಡಿಸುವ ಚಿಕ್ಕ ಪ್ರಯತ್ನ

3. ಡಾಕ್ಯುಮೆಂಟರಿಯಲ್ಲಿ ಕಾಣಿಸಿಕೊಂಡ ಏಳು ಬೆಟ್ಟಗಳ ಒಡೆಯ- ಹೊಸ ಇತಿಹಾಸ ಬರೆದ ನ್ಯಾಷನಲ್ ಜಿಯೋಗ್ರಫಿ..!

Add to
Shares
10
Comments
Share This
Add to
Shares
10
Comments
Share
Report an issue
Authors

Related Tags