ಆವೃತ್ತಿಗಳು
Kannada

ಹರಳುಗಳಿಗೂ ಆತ್ಮವಿದೆ, ಸೌಂದರ್ಯವಿದೆ; ಗುರುತಿಸುವ ಕಂಗಳಿದ್ದಾಗ ಮಾರುಕಟ್ಟೆಗೇನು ಕೊರತೆ-ಭಾರತಿ ರವಿಪ್ರಕಾಶ್:

ವಿಶ್ವಾಸ್​ ಭಾರಧ್ವಾಜ್​​​​

21st Feb 2016
Add to
Shares
5
Comments
Share This
Add to
Shares
5
Comments
Share


ಭೂಮಿಯಲ್ಲಿ ಪ್ರತಿಯೊಂದು ವಸ್ತುಗಳೂ ಅಮೂಲ್ಯವೇ. ಆದರೆ ಆ ವಸ್ತುಗಳ ಮೌಲ್ಯವನ್ನು ಅಳೆಯುವ ಸೃಜನಶೀಲತೆ ಅರ್ಥವಾಗಿರಬೇಕು. ಈ ಮಾತು ಅಕ್ಷರಶಃ ಆಚರಣೆಗೆ ತಂದ ಸೃಜನಶೀಲ ಕಲಾತ್ಮಕ ಹರಳುಗಳ ಮಹಿಳಾ ಉದ್ಯಮಿಯೇ ಭಾರತೀ ರವಿಪ್ರಕಾಶ್. ಮನುಷ್ಯನ ಜೀವನದಲ್ಲಿ ಹರಳುಗಳ ಮಹತ್ವ, ಅದರಲ್ಲೂ ಮುಖ್ಯವಾಗಿ ಮಹಿಳೆಯರಿಗೆ ಹರಳಿನ ಆಭರಣಗಳ ಮೇಲಿರುವ ಮೋಹವನ್ನೇ ತಮ್ಮ ವ್ಯವಹಾರದ ಮಾನದಂಡವನ್ನಾಗಿಸಿ ಯಶಸ್ಸು ದೊರಕಿಸಿಕೊಂಡವರು ಭಾರತಿ. ಭೌತಿಕ ದೇಹಸೌಂದರ್ಯವನ್ನು ಇಮ್ಮಡಿಗೊಳಿಸುವ ಹರಳಿನ ಆಭರಣಗಳಿಗೆ ನವಿರಾದ ಕುಸುರಿತನ ಮೂಡಿಸಿ ಕಲಾತ್ಮಕತೆಯ ಮೆರುಗು ತಂದುಕೊಟ್ಟಿದ್ದೇ ಭಾರತೀ ರವಿಪ್ರಕಾಶ್ ಉದ್ಯಮ ಯಶ ಹೊಂದಲು ಪ್ರಮುಖ ಕಾರಣ. ಪರಿಣಾಮ ಚೆನ್ನೈನ ಆಳ್ವಾರ್ ಪೇಟ್ ನಲ್ಲಿರುವ ಕಸ್ತೂರಿ ರಂಗ ರಸ್ತೆಯ ಸ್ಟುಡಿಯೋತಾರಾ ಈಗ ಹೆಂಗಳೆಯರ ಅತಿ ಮೆಚ್ಚಿನ ಶಾಪಿಂಗ್ ಸೆಂಟರ್ ಆಗಿ ಬದಲಾಗಿದೆ.

ಸ್ಟುಡಿಯೋ ತಾರಾದಲ್ಲಿ ಹರಳುಗಳಿಗೆ ವೈವಿದ್ಯಮಯ ರೂಪ ಕೊಟ್ಟು ವಿಭಿನ್ನ ಸ್ವರೂಪದಲ್ಲಿ ಕೆತ್ತನೆ ಮಾಡಿ, ವಿವಿಧ ಬಗೆಯ ಆಭರಣಗಳಿಗೆ ಮೆರುಗು ನೀಡಲಾಗುತ್ತದೆ. ರಾಶಿಗಳಿಗನುಗುಣವಾಗಿ ಹರಳುಗಳನ್ನು ಧರಿಸುವುದು ಶ್ರೇಯಸ್ಕರ ಅನ್ನುವ ಮಾತಿರುವ ಹಿನ್ನೆಲೆಯಲ್ಲಿ, ಈ ಹರಳುಗಳ ಆಭರಣಗಳಿಗೆ ಆಧ್ಯಾತ್ಮಿಕತೆ ಟಚ್ ಕೂಡ ದೊರಕಿದೆ. ಹೀಗಾಗಿ ಭಾರತಿಯವರ ಸ್ಟುಡಿಯೋ ತಾರಾದ ಹರಳಿನ ಒಡವೆಗಳಿಗೆ ಸಾಕಷ್ಟು ಡಿಮ್ಯಾಂಡ್ ಸೃಷ್ಟಿಯಾಗಿದೆ.

image


ಸ್ವಾಭಾವಿಕ ಹರಳುಗಳ ಬಗ್ಗೆ ವ್ಯಾಮೋಹ ಬೆಳೆಸಿಕೊಂಡಿದ್ದ ಭಾರತಿ ರವಿಪ್ರಕಾಶ್, ನಿಧಾನವಾಗಿ ಈ ಹರಳುಗಳ ಮೋಹ ರೂಡಿಸಿಕೊಂಡರು. ತಾವೇ ತೊಡುವ ಬದಲಿಗೆ ಗ್ರಾಹಕರಿಗೆ ತೊಡಿಸಿದರೇ ಆರ್ಥಿಕವಾಗಿ ಮಹತ್ತರ ಸಾಧನೆಯೊಂದನ್ನು ಮಾಡಿಸದಂತಾಗುತ್ತದೆ ಎಂದು ಮನಗಂಡವರೇ ಹರಳುಗಳ ವಿನ್ಯಾಸವನ್ನು ಕಲಿತು, ಆಭರಣ ಸಿದ್ಧಪಡಿಸಲು ಮುಂದಾದರು. ವಿದೇಶಿ ವಿನಿಮಯಕ್ಕೆ ಸಂಬಂಧಿಸಿದಂತೆ ಮಹಿಳಾ ಉದ್ಯಮಿಯಾಗಿ ತೊಡಗಿಸಿಕೊಂಡಿದ್ದ ಭಾರತಿ ರವಿಪ್ರಕಾಶ್, ಅವರು ಲಂಡನ್​ನ ಜೆಮಾಲಜಿಕಲ್ ಸಂಸ್ಥೆಯಲ್ಲಿ ಆಭರಣ ವಿನ್ಯಾಸದ ವಿಶೇಷ ಪದವಿ ಪಡೆದಿದ್ದಾರೆ. ಕಳೆದ 12 ವರ್ಷ ಹರಳಿನ ಆಭರಣ ವಿನ್ಯಾಸ ಕ್ಷೇತ್ರದಲ್ಲಿರುವ ಅವರು, ಜಗತ್ತಿನ ಬೇರೆ ಬೇರೆ ದೇಶಗಳಿಂದ ದುಬಾರಿ ಹರಳುಗಳನ್ನು ತರಿಸಿ, ಆಕಾರ ಹಾಗೂ ಮತ್ತಷ್ಟು ಹೊಳಪು ನೀಡಿ ಆಭರಣ ವಿನ್ಯಾಸ ಮಾಡುತ್ತಾರೆ.

ಆಧುನಿಕ ಟ್ರೆಂಡ್ ಹಾಗೂ ಸಾಂಪ್ರದಾಯಿಕ ಆಭರಣಗಳು ಎರಡೂ ಬಗೆಯ ವಿನ್ಯಾಸರಲ್ಲಿ ಭಾರತಿ ಸಿದ್ಧಹಸ್ತರು. ಆದರೂ ಸಮಕಾಲೀನ ಆಭರಣಗಳಿಗೆ ವಿನ್ಯಾಸ ನೀಡಿ ಹೆಚ್ಚಿಸುವುದು ಪ್ರಿಯವಾದ ಕೆಲಸವಂತೆ. ಹರಳುಗಳ ಸೌಂದರ್ಯಕ್ಕನುಗುಣವಾಗಿ ವಿಶೇಷತೆ ರೂಪಿಸುವುದು ಅವರ ಇನ್ನೊಂದು ಪ್ರಿಯವಾದ ಹವ್ಯಾಸ.

image


ಇದೇ ಕೆಲಸಕ್ಕಾಗಿ ಊಟಿ, ಪ್ಯಾರಿಸ್, ಸ್ವಿಟ್ಜರ್ಲೆಂಡ್ ಹೀಗೆ ದೇಶದ ವಿವಿಧ ಭಾಗಗಳಿಗೆ ಹೋಗುವ ಅವರು ಪ್ರಕೃತಿಯ ಮಡಿಲಿನಲ್ಲಿ ಕುಳಿತು ನವೀನ ಶೈಲಿಯ ಆಭರಣಗಳನ್ನು ವಿನ್ಯಾಸಗೊಳಿಸುತ್ತಾರೆ. ಹೀಗಾಗಿ ಪ್ರತಿಬಾರಿಯೂ ವಿನ್ಯಾಸ ಮಾಡುವಲ್ಲಿಯೂ ಹೊಸತನ ಎದ್ದು ಕಾಣಿಸುತ್ತದೆ. ಗ್ರಾಹಕರು ಮೆಚ್ಚುಗೆಯಿಂದ ಸ್ವೀಕರಿಸಿ ಶ್ಲಾಘಿಸಿದ ಕಸಬರಕೆ ಕಿವಿಯೋಲೆ ಅವರ ವಿಭಿನ್ನತೆಯ ವಿನ್ಯಾಸಕ್ಕೆ ಪ್ರತ್ಯಕ್ಷ ಸಾಕ್ಷಿ.

image


ಮೂಲತಃ ಚೆನ್ನೈನವರಾದ ಭಾರತಿ ತಮ್ಮ ತಾರಾ ಸ್ಟುಡಿಯೋದ ಹರಳಿನ ಆಭರಣಗಳಿಗೆ ಹರಳುಗಳನ್ನು ಕತ್ತರಿಸಲು ಬೇರೆ ಕಂಪೆನಿಯನ್ನು ಅವಲಂಬಿಸಿದ್ದಾರೆ. ಪ್ರಪಂಚದ ನಾನಾ ಭಾಗಗಳಲ್ಲಿ ಹಾಗೂ ಭಾರತದ ಹಲವೆಡೆ ನಿರಂತರ ಪ್ರದರ್ಶನಗಳಲ್ಲಿ ಭಾಗವಹಿಸುವ ಅವರು ಈಗಾಗಲೇ ಸಿಂಗಪುರ, ಲಂಡನ್, ನ್ಯೂಯಾರ್ಕ್, ವಾಷಿಂಗ್ಟನ್ ಮೊದಲೆಡೆ ಗ್ರಾಹಕರನ್ನು ಹೊಂದಿದ್ದಾರೆ. ಅತ್ಯುತ್ತಮವಾದ ಹರಳುಗಳ ಪ್ರದರ್ಶನ ಎಲ್ಲಿಯೇ ಇದ್ದರೂ ಅವುಗಳನ್ನು ಖರೀದಿಸುತ್ತಾರೆ. ಸ್ಟೋನ್ ಮೈನಿಂಗ್ ಹಾಗೂ ಕಟ್ಟಿಂಗ್ ಕೇಂದ್ರಗಳಾಗಿ ಗುರುತಿಸಿಕೊಂಡಿರುವ ಬ್ಯಾಂಕಾಕ್, ಶ್ರೀಲಂಕಾ ಹಾಗೂ ಬರ್ಮಾಗಳಿಂದಲೂ ಅವರು ಹರಳುಗಳನ್ನು ಆಮದು ಮಾಡಿಕೊಳ್ಳುತ್ತಾರೆ.

ತುಸು ದೊಡ್ಡದೆನಿಸುವ ಆಭರಣಗಳನ್ನೇ ಹೆಚ್ಚಾಗಿ ತಯಾರಿಸುವ ಅವರು, ಸಾಂಪ್ರದಾಯಿಕ ಇಲ್ಲವೇ ಪಾಶ್ಚಾತ್ಯ ಇಲ್ಲವೇ ಪಾರ್ಟಿ ವೇರ್ ಧಿರಿಸುಗಳಲ್ಲಿಯೂ ಬಳಸಬಹುದಾಗಿದೆ. ಕಿವಿಯೋಲೆ, ನೆಕ್ಲೆಸ್, ಬಳೆಗಳು, ಬ್ರೇಸ್ಲೆಟ್ ಮುಂತಾದ ಆಭರಣಗಳು ಈಗಾಗಲೇ ಸಾಕಷ್ಟು ಬೇಡಿಕೆ ಪಡೆದುಕೊಂಡಿವೆ.

ಇತ್ತೀಚಿನ ಮಹಿಳೆಯರು ಸಾಂಪ್ರದಾಯಿಕ, ಸಮಕಾಲೀನ ಎರಡು ಬಗೆಯ ಆಭರಣಗಳನ್ನು ಧರಿಸಲು ಇಷ್ಟಪಡುತ್ತಾರೆ. ಆಯಾ ಸಂದರ್ಭಕ್ಕೆ ಅನುಗುಣವಾಗಿ ಆಯ್ಕೆಯಲ್ಲೂ ಜಾಣ್ಮೆ ತೋರುತ್ತಿದ್ದಾರೆ. ಹಾಗಾಗಿ ಅವರ ಆಯ್ಕೆ ಹಾಗೂ ಇಚ್ಛೆಯನ್ನು ಅರಿತು ಆಭರಣ ವಿನ್ಯಾಸ ಪಡಿಸುವುದು ಅತಿ ಮುಖ್ಯ ಅನ್ನುವುದು ಅವರ ಅಭಿಪ್ರಾಯ.

ನಮ್ಮ ವ್ಯಕ್ತಿತ್ವ ಏನು ಎನ್ನುವುದರ ಮೇಲೆ ನಮ್ಮ ಆಭರಣಗಳು ಇರಬೇಕು ಎಂದು ಬಯಸುತ್ತಾರೆ ಅನ್ನುವ ಭಾರತಿ ರವಿಪ್ರಕಾಶ್, ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಆಭರಣಗಳ ವಿನ್ಯಾಸ ಮಾಡಿ ಕೊಡುತ್ತಾರೆ. ಸುಮಾರು ₹50 ಸಾವಿರದಿಂದ ₹15ಲಕ್ಷಕ್ಕೂ ದುಬಾರಿ ಬೆಲೆಯ ಆಭರಣಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ. ನೋಡಲು ಫಳಫಳನೇ ಹೊಳೆಯವ, ಕಣ್ಣು ಕೋರೈಸುವ ಅದ್ಭುತ ಬಣ್ಣಗಳ ಹರಳುಗಳಿಗೆ ಜಾಗತಿಕವಾಗಿ ಬೇಡಿಕೆ ಇರುವ ಹಿನ್ನೆಲೆಯಲ್ಲಿ ಸ್ಟುಡಿಯೋ ತಾರಾದ ಹರಳಿನ ಆಭರಣಗಳು ವಿದೇಶಗಳಿಗೂ ರಫ್ತಾಗುತ್ತಿವೆ. ಪ್ರತಿಯೊಂದು ಹೊಸ ವಿನ್ಯಾಸ ನಿರ್ಮಿಸುವಾಗಲೂ ಭಾರತೀ, ಅಷ್ಟೇ ಶ್ರದ್ಧೇ ಹಾಗೂ ಆಸ್ಥೆಯಿಂದ ಕಾರ್ಯನಿರ್ವಹಿಸುತ್ತಾರೆ. ಯಾವುದೇ ಬಗೆಯ ಆಭರಣಗಳಾದರೂ ಸ್ಟುಡಿಯೋತಾರಾದಲ್ಲಿ ವಿಭಿನ್ನತೆ ಪಡೆದುಕೊಳ್ಳುವ ಹಿನ್ನೆಲೆಯಲ್ಲಿ ಭಾರತಿಯವರ ಕಾರ್ಯಶ್ರದ್ಧೆಯ ಪರಿಶ್ರಮವಿದೆ. ಒರಟು ಹರಳುಗಳಿಗೆ ನಿಖರವಾದ ರೂಪ ನೀಡಿ, ಹೊಳಪು ನೀಡಿ ಅಂತಿಮವಾಗಿ ಪಾಲೀಶು ಮಾಡುವ ತನಕ ಎಲ್ಲವನ್ನೂ ಕರಾರುವಕ್ಕಾಗಿ ನಿರ್ವಹಿಸುವುದು ಭಾರತಿ ರವಿಪ್ರಕಾಶ್ ರವರ ಸ್ಟುಡಿಯೋ ತಾರಾದ ವಿಶೇಷತೆ.

ಇದನ್ನು ಓದಿ...

1. ವಾಣಿಜ್ಯ ನಗರಿಯಲ್ಲಿ ಮತ್ತೊಂದು ಐಟಿ ಹಬ್ಬ 'ಐಂಡಿಯಾ ಐಟಿ ಶೋ'ಗೆ ಬೆಂಗಳೂರಲ್ಲಿ ತಾಲೀಮು

2. ಆತ್ಮ ವಿಶ್ವಾಸವೇ ಈ ಕುಸುಮಗಳ ಬಂಡವಾಳ..

3. ಹೆಲ್ತಿ ಆರೋಗ್ಯಕ್ಕೆ ಟೆಸ್ಟಿ ಜ್ಯೂಸ್.. ಜ್ಯೂಸ್​​​ಗೆ ಸಾಥ್ ನೀಡೋಕೆ ಹೆಲ್ತಿ ಬೀಡಾ

Add to
Shares
5
Comments
Share This
Add to
Shares
5
Comments
Share
Report an issue
Authors

Related Tags