ಆವೃತ್ತಿಗಳು
Kannada

ಕೌಮುಥಿ ಸೋಲಾರ್​ ಪವರ್​ ಪ್ರಾಜೆಕ್ಟ್​ನ ವಿಶ್ವದಾಖಲೆ- ನನಸಾಗುತ್ತಿದೆ ಗ್ರೀನ್​ ಇಂಡಿಯಾ ಕಾನ್ಸೆಪ್ಟ್​

ಟೀಮ್​ ವೈ.ಎಸ್​. ಕನ್ನಡ

1st Dec 2016
Add to
Shares
10
Comments
Share This
Add to
Shares
10
Comments
Share

ವಿಶ್ವದೆಲ್ಲೆಡೆ ಈಗ ಮಾಲಿನ್ಯದ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ವಾತಾವರಣದಲ್ಲಿನ ಬದಲಾವಣೆಯ ಕುರಿತು ಕೂಡ ದೊಡ್ಡ ಚರ್ಚೆಯಾಗುತ್ತಿದೆ. ಭಾರತದಲ್ಲೂ ಬದಲಾಗುತ್ತಿರುವ ವಾತಾವರಣದ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿದೆ. ಈ ಮಧ್ಯೆ ತಮಿಳುನಾಡಿನ ಕೌಮುಥಿ ಸೋಲಾರ್ ಪವರ್ ಪ್ರಾಜೆಕ್ಟ್ ಕಾರ್ಯ ಆರಂಭಿಸಿದೆ. ಕೌಮುಥಿ ಸೋಲಾರ್ ಪವರ್ ಪ್ರಾಜೆಕ್ಟ್ ವಿಶ್ವದ ಅತೀ ದೊಡ್ಡ ಸೋಲಾರ್ ಪವರ್ ಪ್ರಾಜೆಕ್ಟ್ ಅನ್ನೋ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ.

image


ಕೌಮುಥಿ ಸೋಲಾರ್ ಪವರ್ ಪ್ರಾಜೆಕ್ಟ್ ಸುಮಾರು 2500 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿದೆ. ಸೋಲಾರ್ ಪ್ರಾಜೆಕ್ಟ್ ವಿಸ್ತೀರ್ಣದಲ್ಲಿ ಒಂದೇ ಸಲ 476 ಫುಟ್ಬಾಲ್ ಪಂದ್ಯಗಳನ್ನು ನಡೆಸಬಹುದು ಅಂದ್ರೆ, ನೀವೇ ಯೊಚನೆ ಮಾಡಿ, ಇದೆಷ್ಟು ದೊಡ್ಡ ಪ್ರಾಜೆಕ್ಟ್ ಎಂದು. 648 ಮೆಗಾವ್ಯಾಟ್ ಸಾಮರ್ಥ್ಯದ ಈ ಸೋಲಾರ್ ಪವರ್ ಪ್ರಾಜೆಕ್ಟ್ ಸುಮಾರು 1.5 ಲಕ್ಷ ಮನೆಗಳಿಗೆ ಬೆಳಕು ನೀಡಲಿದೆ. ಈ ಬೃಹತ್ ಯೋಜನೆಗೆ ಸುಮಾರು 4500 ಕೋಟಿ ರೂಪಾಯಿ ವೆಚ್ಚವಾಗಿದೆ.

ಕೌಮುಥಿ ಸೋಲಾರ್ ಪವರ್ ಪ್ಲಾಂಟ್​ನಲ್ಲಿ ಸುಮಾರು 25 ಲಕ್ಷ ಸೊಲಾರ್ ಪ್ಯಾನಲ್​ಗಳಿವೆ. ಈ ಪ್ಯಾನಲ್​ಗಳನ್ನು ರೋಬೋಟ್ ಮೂಲಕ ಪ್ರತಿದಿನವೂ ಸ್ವಚ್ಛಗೊಳಿಸಲಾಗುತ್ತದೆ. ಅಚ್ಚರಿ ಅಂದ್ರೆ ಸ್ವಚ್ಛತೆಗೆ ಬಳಸುವ ರೋಬೋಟ್​ಗಳಿಗೂ ಇದೇ ಸೋಲಾರ್ ಪ್ಯಾನಲ್​ಗಳ ಮೂಲಕ ಪವರ್ ಸಪ್ಲೈ ಮಾಡಲಾಗುತ್ತದೆ.

ಕೌಮುಥಿ ಸೋಲಾರ್ ಪವರ್ ಪ್ಲಾಂಟ್​ನ್ನು ಅದಾನಿ ಪವರ್ ಗ್ರೂಪ್ ನಿರ್ಮಾಣ ಮಾಡಿದೆ. ಈ ಯೋಜನೆಯನ್ನು 8 ತಿಂಗಳಿನಲ್ಲಿ ಮುಗಿಸಿರುವುದು ಮತ್ತೊಂದು ದೊಡ್ಡ ಸಾಧನೆ. ತಮಿಳುನಾಡಿನಲ್ಲಿರುವ ಈ ಸೋಲಾರ್ ಪವರ್ ಪ್ಲಾಂಟ್ ವಿಶ್ವದಲ್ಲೇ ಅತೀ ದೊಡ್ಡ ಪವರ್ ಪ್ಲಾಂಟ್ ಎನ್ನುವ ಗೌರವವನ್ನು ಪಡೆದುಕೊಂಡಿದೆ. ಈ ಹಿಂದೆ ಕ್ಯಾಲಿಫೋರ್ನಿಯಾದ ಟೊಪಾಝ್ ಸೋಲಾರ್ ಫಾರ್ಮ್ ವಿಶ್ವದ ಅತೀ ದೊಡ್ಡ ಸೋಲಾರ್ ಒವರ್ ಪ್ಲಾಂಟ್ ಅನ್ನೋ ಹೆಗ್ಗಳಿಕೆ ಪಡೆದುಕೊಂಡಿತ್ತು. ಅದು 550 ಮೆಗಾವ್ಯಾಟ್ ಸೋಲಾರ್ ಪವರ್ ಅನ್ನು ಉತ್ಪತ್ತಿ ಮಾಡುತ್ತಿತ್ತು.

ಭಾರತದಲ್ಲಿ ವಿದ್ಯುತ್​ನ ಅವಶ್ಯಕತೆ ಅದ್ರ ಉತ್ಪತ್ತಿಗಿಂತ ಹೆಚ್ಚೇ ಇದೆ. ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಉತ್ಪಾದನೆ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕರೆಂಟ್​ನ ಅಭಾವ ಎಲ್ಲಾ ಕಡೆಯೂ ಸಾಮಾನ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ನೈಸರ್ಗಿಕವಾಗಿ ಸಿಗುವ ವಿದ್ಯತ್​ನ ಲಾಭ ಪಡೆಯುವ ಯೋಚನೆ ನಡೆಯುತ್ತಿದೆ. ಸೋಲಾರ್ ಮೂಲಕ ವಿದ್ಯುತ್ ಉತ್ಪತ್ತಿ ಮಾಡಿ, ಅದನ್ನು ಸಾರ್ವಜನಿಕರ ಬಳಕೆಗೆ ಸಿಗುವಂತೆ ಮಾಡುವ ಕನಸು ನನಸಾಗುವ ಬಂದಾಗಿದೆ.

ಇದನ್ನು ಓದಿ: ಆನ್​ಲೈನ್​ನಲ್ಲಿ "ಭಕ್ತಿ"ಗೆ ಟಚ್​- ಗ್ರಾಹಕರನ್ನು ಸೆಳೆಯುತ್ತಿದೆ ಸತೀಶ್​ ಸ್ಟೋರ್ಸ್​

ಕ್ಲೀನ್ ಟೆಕ್ಕೀಸ್ ವರದಿ ಪ್ರಕಾರ 648 ಮೆಗಾವ್ಯಾಟ್ ಕ್ಯಾಪಾಸಿಟಿಯಲ್ಲಿ ಈಗಾಗಲೇ 360 ಮೆಗಾವ್ಯಾಟ್ ಸಾಮರ್ಥ್ಯವನ್ನು ಈಗಾಗಲೇ ಪವರ್ ಗ್ರಿಡ್​ಗೆ ಕನೆಕ್ಟ್ ಮಾಡಲಾಗಿದೆ. ಈ ಬೃಹತ್ ಸೋಲಾರ್ ವಿದ್ಯುತ್ ಉತ್ಪನ್ನ ಘಟಕ ಅನೇಕ ಚಿಕ್ಕ ರಾಜ್ಯಗಳ ವಿದ್ಯುತ್ ಘಟಕಗಳೊಂದಿಗೆ ನೇರ ಸಂಪರ್ಕವನ್ನು ಪಡೆದಿದೆ. ಗುಜರಾತ್ ರಾಜ್ಯದ ಚರಂಕಾ ಜಿಲ್ಲೆಯ 345 ಮೆಗಾವ್ಯಾಟ್ ವಿದ್ಯುತ್ ಉತ್ಪತ್ತಿ ಕೇಂದ್ರವೂ ತಮಿಳುನಾಡಿನ ಈ ಬೃಹತ್ ಸೋಲಾರ್ ಪಾರ್ಕ್ ಜೊತೆ ಕೆಲಸ ನಿರ್ವಹಸಿಲಿದೆ.

ತಮಿಳುನಾಡಿನ ಕಮುಥಿ ಸೋಲಾರ್ ಪವರ್ ಪ್ಲಾಂಟ್ 5 ವಿವಿಧ ಸೋಲಾರ್ ಪವರ್ ಪ್ಲಾಂಟ್​ಗಳೊಂದಿಗೆ ಸಂಪರ್ಕ ಹೊಂದಿದೆ. ಇಲ್ಲಿ ಉತ್ಪತ್ತಿಯಾದ ವಿದ್ಯುತ್​ನ್ನು 25 ವರ್ಷಗಳ ವರೆಗೆ ತಮಿಳುನಾಡು ಜನರೇಷನ್ ಮತ್ತು ಡಿಸ್ಟ್ರಿಬ್ಯುಷನ್​ಗೆ ಮಾರಾಟಮಾಡಲಾಗುತ್ತದೆ. ಈ ಬಗ್ಗೆ 2015ರಲ್ಲೇ ಅದಾನಿ ಗ್ರೂಪ್ ತಮಿಳುನಾಡು ಸರ್ಕಾರದ ಜೊತೆಗೆ ಒಪ್ಪಂದ ಮಾಡಿಕೊಂಡಿದೆ.

ಕಮುಥಿ ಸೋಲಾರ್ ಪವರ್ ಪ್ಲಾಂಟ್​ನಲ್ಲಿ ಉತ್ಪತ್ತಿಯಾಗುವ ವಿದ್ಯುತ್​ನ್ನು ಪ್ರತೀ ಯೂನಿಟ್​ಗೆ 7.01 ರೂಪಾಯಿಯಂತೆ ಮಾರಾಟ ಮಾಡಲಾಗುತ್ತದೆ. ಅದಾನಿ ಗ್ರೂಪ್ ದೇಶದಲ್ಲಿ ಇಂತಹ ಕೆಲವು ಪ್ರಾಜೆಕ್ಟ್​ಗಳನ್ನು ನಿರ್ಮಿಸುವ ಗುರಿ ಹೊಂದಿದೆ. ರಾಜಸ್ಥಾನ ಸರ್ಕಾರದ ಜೊತೆ 10 ಗಿಗಾ ವ್ಯಾಟ್ ಸೋಲಾರ್ ಪವರ್ ಪ್ಲಾಂಟ್ ನಿರ್ಮಾಣದ ಬಗ್ಗೆಯೂ ಮಾತುಕತೆ ನಡೆಸಿದೆ. ಒಟ್ಟಿನಲ್ಲಿ ಗ್ರಿನ್ ಇಂಡಿಯಾ ಕಾನ್ಸೆಪ್ಟ್ ಭಾರತವನ್ನು ಕೆಲ ವರ್ಷಗಳಲ್ಲೇ ಮೇರುಸ್ಥಾನಕ್ಕೆ ಕೊಂಡೊಯ್ಯುವ ಬಗ್ಗೆ ಎರಡು ಮಾತಿಲ್ಲ.

ಇದನ್ನು ಓದಿ:

1. ಒತ್ತಡವಿಲ್ಲದ ಕೆಲಸ- ಕೈ ತುಂಬಾ ಸಂಬಳ- ನೆಮ್ಮದಿಯಾಗಿ ಸಮಯ ಕಳೆಯುವ ಬಗ್ಗೆ ಯೋಚನೆ ಮಾಡಿ

2. ನೀವಿದ್ದಲ್ಲಿಗೆ ಅಮ್ಮನ ಕೈತುತ್ತು, ಇದು ಮೈಸೂರಿನ ಟೆಕ್ಕಿಗಳ ಕರಾಮತ್ತು

3. ನೀವಿದ್ದಲ್ಲಿಗೆ ಅಮ್ಮನ ಕೈತುತ್ತು, ಇದು ಮೈಸೂರಿನ ಟೆಕ್ಕಿಗಳ ಕರಾಮತ್ತು

Add to
Shares
10
Comments
Share This
Add to
Shares
10
Comments
Share
Report an issue
Authors

Related Tags