ವಿಶ್ವದ ಅತಿ ಶ್ರೀಮಂತ ವ್ಯಕ್ತಿಯಾದ ಎಲಾನ್‌ ಮಸ್ಕ್‌

By Team YS Kannada|8th Jan 2021
ಕಳೆದ ಒಂದು ವರ್ಷದಲ್ಲಿ ಟೆಸ್ಲಾ ಸಂಸ್ಥಾಪಕ ಎಲಾನ್‌ ಮಸ್ಕ್‌ 160 ಬಿಲಿಯನ್‌ ಡಾಲರ್‌ ಆಸ್ತಿ ಗಳಿಸಿದ್ದು, ವಿಶ್ವದ ಶ್ರೀಮಂತ ವ್ಯಕ್ತಿ ಜೆಫ್‌ ಬೆಜೋಸ್‌ ಅವರನ್ನು ಹಿಂದಿಕ್ಕಿದ್ದಾರೆ.
Clap Icon0 claps
 • +0
  Clap Icon
Share on
close
Clap Icon0 claps
 • +0
  Clap Icon
Share on
close
Share on
close

“ಶ್ರೀಮಂತರು ಶ್ರೀಮಂತರಾಗುತ್ತಾರೆ, ಬಡವರು ಬಡವರಾಗುತ್ತಾರೆ,” ಎಂದು ಇಂಗ್ಲೀಷ್‌ ಕವಿ ಪಿಬಿ ಶೆಲ್ಲಿ 1821ರಲ್ಲಿ ಬರೆದಿದ್ದ. 200 ವರ್ಷಗಳ ನಂತರವು ಈ ವಾಕ್ಯ ಪ್ರಸ್ತುತವೆನಿಸುತ್ತದೆ.


ಕೊರೊನಾ ಕಾರಣದಿಂದ ಜಗತ್ತು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ, ಷೇರುಮಾರುಕಟ್ಟೆಗಳು ಕುಸಿತ ಕಂಡು, ಜನರ ಮನಶಾಂತಿ ಕದಡಿದರು ಶ್ರೀಮಂತರು ಎಂದಿನಂತೆ ಶ್ರೀಮಂತರಾಗುತ್ತಿದ್ದಾರೆ.


ಟೆಸ್ಲಾ ಸಂಸ್ಥಾಪಕ ಎಲಾನ್‌ ಮಸ್ಕ್‌ ಕಳೆದ 12 ತಿಂಗಳಲ್ಲಿ ತಮ್ಮ ಒಟ್ಟಾರೆ ಆಸ್ತಿಗೆ 160 ಬಿಲಿಯನ್‌ ಡಾಲರ್‌ ಸೇರಿಸುವ ಮೂಲಕ ಅಮೇಜಾನ್‌ ಸಿಇಒ ಜೆಫ್‌ ಬೇಜೊಸ್‌ ಅವರ ವಿಶ್ವದ ಅತೀ ಶ್ರೀಮಂತ ವ್ಯಕ್ತಿ ಎಂಬ ಪಟ್ಟವನ್ನು ಪಡೆದಿದ್ದಾರೆ. 2017ರ ಅಕ್ಟೋಬರ್‌ನಿಂದ ಜೆಫ್‌ಗೆ ಈ ಪಟ್ಟ ಸಿಕ್ಕಿತ್ತು.


ಬ್ಲೂಮ್‌ಬರ್ಗ್‌ ಬಿಲಿಯನೇರ್‌ ಸೂಚ್ಯಂಕದ ಪ್ರಕಾರ ಪ್ರಸ್ತುತ ಎಲಾನ್‌ ಮಸ್ಕ್‌ ಅವರ ಸಂಪತ್ತು 195 ಬಿಲಿಯನ್‌ ಡಾಲರ್‌ ಆದರೆ ಬೆಜೋಸ್‌ ಅವರದ್ದು 185 ಬಿಲಿಯನ್‌ ಡಾಲರ್‌ ಆಗಿದೆ.


ಟೆಸ್ಲಾ ಷೇರು ಗುರುವಾರ 5 ಪ್ರತಿಶತ ವೃದ್ಧಿಗೊಂಡ ಬೆನ್ನಲ್ಲೆ ಮಸ್ಕ್‌ ಅವರ ಸಂಪತ್ತು ವೃದ್ಧಿಯಾಗಿದೆ.

ಎಲಾನ್‌ ಮಸ್ಕ್‌


ಕಳೆದ ಒಂದು ವರ್ಷದಲ್ಲಿ ಟೆಸ್ಲಾ ಷೇರುಗಳು 473 ಪ್ರತಿಶತ ಏರಿಕೆಕಂಡಿದ್ದರ ಪರಿಣಾಮ ಮಸ್ಕ್‌ ಅವರ ಸಂಪತ್ತು ಭಾರೀ ಪ್ರಮಾಣದಲ್ಲಿ ವೃದ್ಧಿಗೊಂಡಿದೆ.


ನವೆಂಬರ್‌ನಲ್ಲಿ ಮಸ್ಕ್‌ ಶ್ರೀಮಂತರ ಪಟ್ಟಿಯಲ್ಲಿದ್ದ ಮೈಕ್ರೋಸಾಫ್ಟ್‌ನ ಬಿಲ್‌ಗೇಟ್ಸ್‌ ಅವರನ್ನು ಹಿಂದಕ್ಕಿ ಎರಡನೇ ಸ್ಥಾನದಲ್ಲಿದ್ದರು.


ಕೂತುಹಲಕಾರಿ ವಿಷಯವೆಂದರೆ ಮಸ್ಕ್‌ ಮತ್ತು ಬೆಜೋಸ್‌ ಬಾಹ್ಯಾಕಾಶ ಪರಿಶೋಧನೆ ಕ್ಷೇತ್ರದಲ್ಲಿ ಕ್ರಮವಾಗಿ ತಮ್ಮ ಸ್ಪೇಸೆಕ್ಸ್‌ ಮತ್ತು ಬ್ಲೂ ಓರಿಜಿನ್‌ ಕಂಪನಿಗಳ ಮೂಲಕ ನೇರ ಸ್ಪರ್ಧಿಗಳಾಗಿದ್ದಾರೆ.


ಟೆಸ್ಲಾದ ಅದ್ಭುತ ಬೆಳವಣಿಗೆಯಿಂದ ಮುಂಬರುವ ದಿನಗಳಲ್ಲಿ ಮಸ್ಕ್‌ ಅವರ ಸಂಪತ್ತು ಹೆಚ್ಚಿಗೆಯಾಗಲಿದೆ. ಕಳೆದ ವರ್ಷ ಟೆಸ್ಲಾ 5 ಲಕ್ಷ ಘಟಕಗಳನ್ನು ಉತ್ಪಾದಿಸಿದೆ.


2021 ರ ಮೊದಲ ತ್ರೈಮಾಸಿಕದಲ್ಲಿ ಟೆಸ್ಲಾಅ ಭಾರತಕ್ಕೆ ಬರಬಹುದು. ಸಾರಿಗೆ ಸಚಿವ ನಿತಿನ್‌ ಗಡ್ಕರಿ ಮಾಧ್ಯಮಗಳೊಂದಿಗೆ ಡಿಸೆಂಬರ್‌ನಲ್ಲಿ ಈ ವಿಷಯವನ್ನು ಖಚಿತಪಡಿಸಿದ್ದಾರೆ.

Clap Icon0 Shares
 • +0
  Clap Icon
Share on
close
Clap Icon0 Shares
 • +0
  Clap Icon
Share on
close
Share on
close