ಕಾಲಿಲ್ಲದ ನಾಯಿಗಾಗಿ ವೀಲ್‌ಚೇರ್‌ ತಯಾರಿಸಿದ ಇಂಜಿನೀಯರ್‌

ಅಪಘಾತದಲ್ಲಿ ಹಿಂಗಾಲುಗಳನ್ನು ಕಳೆದುಕೊಂಡ 4 ವರ್ಷದ ವೀರಾ ನಾಯಿಯನ್ನು ದತ್ತುಪಡೆದು ಎ. ಕಾಶಿ ಮತ್ತು ಅವರ ಮಗಳು ಗಾಯತ್ರಿ ಅದಕ್ಕೊಂದು ವೀಲ್‌ಚೇರ್‌ ತಯಾರಿಸಿದ್ದಾರೆ.

ಕಾಲಿಲ್ಲದ ನಾಯಿಗಾಗಿ ವೀಲ್‌ಚೇರ್‌ ತಯಾರಿಸಿದ ಇಂಜಿನೀಯರ್‌

Thursday December 03, 2020,

1 min Read

ಪ್ರಾಣಿಗಳಿಗಾಗಿ ಕೃತಕ ಅಂಗಾಂಗಗಳನ್ನು (ಪ್ರಾಸ್ಥೆಟಿಕ್ಸ್‌) ನಿರ್ಮಿಸುವುದು ಭಾರತದಲ್ಲಿ ತೀರಾ ಅಪರೂಪ. ಆದರೆ ಇಲ್ಲೊಬ್ಬರು ತಮ್ಮ ಸಾಕಿದ ನಾಯಿಗೆ ನಡೆದಾಡಲು ಸಹಾಯವಾಗುವಂತೆ ವ್ಯವಸ್ಥೆ ಮಾಡಿಕೊಟ್ಟು ಗಮನ ಸೆಳೆದಿದ್ದಾರೆ.


ವೀರಾ ಎಂಬ ಹೆಸರಿನ ನಾಲ್ಕು ವರ್ಷದ ನಾಯಿಯ ಕಷ್ಟವನ್ನು ನೋಡಲಾಗದೆ ಎ. ಕಾಶಿ ಮತ್ತು ಅವರ ಮಗಳು ಗಾಯತ್ರಿ ವೀಲ್‌ಚೇರ್‌ ಒಂದನ್ನು ನಿರ್ಮಿಸಿಕೊಟ್ಟಿದ್ದಾರೆ. ಕೋವಿಡ್‌-19 ಲಾಕ್‌ಡೌನ್‌ಗೂ ಮುನ್ನ ಐಟಿ ಉದ್ಯೋಗಿ ಗಾಯತ್ರಿ ವೀರಾನನ್ನು ಮನೆಗೆ ತಂದಿದ್ದರು.


“ಚಿಕ್ಕವಳಿದ್ದಾಗಿನಿಂದ ನನಗೆ ನಾಯಿಗಳೆಂದರೆ ಪ್ರೀತಿ. ಆದರೆ ನನ್ನ ಅಭ್ಯಾಸದಲ್ಲಿ ಜಾಸ್ತಿ ಸಮಯ ಸಿಗುತ್ತಿರದಿದ್ದರಿಂದ ನಾಯಿಯನ್ನು ಸಾಕಲಾಗಲಿಲ್ಲ. ಕೋವಿಡ್‌-19 ಸಾಂಕ್ರಾಮಿಕದಿಂದಾಗಿ ಮನೆಯಿಂದಲೆ ಕೆಲಸ ಮಾಡುತ್ತಿರುವುದರಿಂದ ನನಗೆ ಈಗ ಸಾಕಷ್ಟು ಸಮಯವಿದೆ. ಇದೇ ನಾಯಿಯನ್ನು ಸಾಕಲು ಸೂಕ್ತ ಸಮಯವೆನಿಸಿತು. ಅಪಘಾತದಿಂದ ಎರಡು ಕಾಲುಗಳನ್ನು ತೆಗೆದಿದ್ದ ನಾಯಿಯನ್ನು ನಾನು ರಕ್ಷಣಾ ಮನೆಯಿಂದ ತಂದೆ,” ಎಂದು ಗಾಯತ್ರಿ ಎಎನ್‌ಐಗೆ ಹೇಳಿದರು.


“ಮೆಕ್ಯಾನಿಕಲ್‌ ಇಂಜಿನೀಯರ್‌ ಆಗಿರುವ ನಮ್ಮ ತಂದೆ ನಾಯಿಗೊಂದು ವೀಲ್‌ಚೇರ್‌ ತಯಾರಿಸಲು ನಿರ್ಧರಿಸಿದರು,” ಎಂದರು ಅವರು.


ಹಳದಿ ಬಣ್ಣದ ಚಕ್ರಗಳಿರುವ ವೀಲ್‌ಚೇರ್‌ ಅನ್ನು ನಾಯಿಯ ದೇಹಕ್ಕೆ ಜೋಡಿಸಲಾಗಿದ್ದು, ಇದು ನಾಯಿಗೆ ಮುಂಗಾಲುಗಳಿಂದ ನಡೆದಾಡಲು ಕೂರಲು ಸಹಾಯಮಾಡುತ್ತದೆ. ನಾಯಿಗೆ ನಡೆದಾಡಲು ಸುಲಭವಾಗಲು ಪಿವಿಸಿ ಪೈಪ್‌ನಿಂದಾದ ಕೃತಕ ಪ್ಲಾಸ್ಟಿಕ್‌ ಕಪ್‌ ಕಾಲುಗಳನ್ನು ಜತೆಗೆ ಬೂಟನ್ನು ಜೋಡಿಸಲಾಗಿದೆ.

ವೀಲ್‌ಚೇರ್‌ನಲ್ಲಿ ವೀರಾ (ಚಿತ್ರಕೃಪೆ: ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌)


ಗಾಯತ್ರಿ ಎಷ್ಟೋ ನಾಯಿಗಳನ್ನು ನೋಡಿದರೂ ವೀರಾನನ್ನೆ ತೆಗೆದುಕೊಂಡರು, ಏಕೆಂದರೆ ಅದಕ್ಕೆ ಕಾಲಿಲ್ಲದಿರುವುದರಿಂದ ಯಾರೂ ಅದನ್ನು ತೆಗೆದುಕೊಳ್ಳುತ್ತಿರಲಿಲ್ಲ.


“ನನ್ನ ಮಗಳಿಗೆ ನಾಯಿಗಳೆಂದರೆ ಪ್ರಾಣ, ಅವಳೆ ವೀರಾನನ್ನು ನೋಡಿಕೊಳ್ಳುತ್ತಾಳೆ. ಈಗ ಅವಳು ಮನೆಯಿಂದಲೆ ಕೆಲಸ ಮಾಡುತ್ತಿರುವುದರಿಂದ ನಾಯಿಯನ್ನು ನೋಡಿಕೊಳ್ಳಲು ಸಮಯ ಸಿಗುತ್ತಿದೆ,” ಎಂದು ಕಾಶಿಯವರು ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ಹೇಳುತ್ತಾರೆ.


ವೀಲ್‌ಚೇರ್‌ ತಯಾರಿಸಲು ಒಂದು ಸಾವಿರ ರೂಪಾಯಿ ಖರ್ಚಾಗಿದೆ.


“ದುಡ್ಡು ಮುಖ್ಯವಲ್ಲ. ನಾಯಿಯ ಕಷ್ಟವನ್ನು ಸ್ವಲ್ಪ ಕಡಿಮೆಮಾಡಿದ್ದೇವೆ ಎಂದು ನನಗೆ ಮತ್ತು ನನ್ನ ಕುಟುಂಬಕ್ಕೆ ಖುಷಿಯಿದೆ. ಮೊದಲು ಸ್ವಲ್ಪನಡೆದರು ವೀರಾ ನಿಂತುಕೊಳ್ಳುತ್ತಿದ್ದ. ಅವನ ಕಷ್ಟವೆ ವೀಲ್‌ಚೇರ್‌ ವಿನ್ಯಾಸಗೊಳಿಸುವಂತೆ ಮಾಡಿದೆ,” ಎನ್ನುತ್ತಾರೆ ಅವರು.