ಮಹಿಳಾ ವಿಜ್ಞಾನಿಗಳ ಹೆಸರಿನಲ್ಲಿ 11 ಗೌರವಾರ್ಥ ಸ್ಥಾನಗಳ ಸ್ಥಾಪನೆ

ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆಯರ ಕೊಡುಗೆಯನ್ನು ಗೌರವಿಸಲು ಅವರ ಹೆಸರಿನಲ್ಲಿ ಹನ್ನೊಂದು ಗೌರವ ಸಂಕೇತಿಕ ಸ್ಥಾನಗಳನ್ನು ದೇಶಾದ್ಯಂತದ ಸಂಸ್ಥೆಗಳಲ್ಲಿ ಸ್ಥಾಪಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಶುಕ್ರವಾರ ತಿಳಿಸಿದ್ದಾರೆ.

ಮಹಿಳಾ ವಿಜ್ಞಾನಿಗಳ ಹೆಸರಿನಲ್ಲಿ 11 ಗೌರವಾರ್ಥ ಸ್ಥಾನಗಳ ಸ್ಥಾಪನೆ

Saturday February 29, 2020,

2 min Read

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ

ಇರಾನಿ, ಸರಣಿ ಟ್ವೀಟ್ಗಳಲ್ಲಿ, ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಸಂದರ್ಭದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.


ಈ 11 ಸ್ಥಾನಗಳು ವಿಜ್ಞಾನ ಕ್ಷೇತ್ರಕ್ಕೆ ಮಹಿಳಾ ವಿಜ್ಞಾನಿಗಳು ನೀಡಿದ ಕೊಡುಗೆಗಳನ್ನು ಗೌರವಿಸುತ್ತದೆ ಮತ್ತು ಗುರುತಿಸುತ್ತದೆ, ಮಾತ್ರವಲ್ಲದೆ ಮಹಿಳೆಯರಿಗೆ ಸ್ಫೂರ್ತಿದಾಯಕವಾಗಿವೆ ಮತ್ತು ಸ್ಟೆಮ್ (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ) ದಲ್ಲಿ ಯುವತಿಯರ ಅಧಿಕವಾಗಿ ಭಾಗವಹಿಸುವಿಕೆಯನ್ನು ಉತ್ತೇಜಿಸುತ್ತದೆ ಎಂದು ಅವರು ಹೇಳಿದರು.


"ರಾಷ್ಟ್ರೀಯ ವಿಜ್ಞಾನ ದಿನದಂದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ದೇಶಾದ್ಯಂತದ ಸಂಸ್ಥೆಗಳಲ್ಲಿ ಭಾರತೀಯ ಮಹಿಳಾ ವಿಜ್ಞಾನಿಗಳ ಹೆಸರಿನಲ್ಲಿ ೧೧ ಗೌರವಾರ್ಥ ಸ್ಥಾನಗಳ ಸ್ಥಾಪನೆಯನ್ನು ಘೋಷಿಸಲು ಸಂತೋಷವಾಗಿದೆ," ಎಂದು ಇರಾನಿ ಟ್ವೀಟ್ ಮಾಡಿದ್ದಾರೆ.


"ಹರ್ಷ್ ವರ್ಧನ್ (ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ) ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಪ್ರತಿಯೊಬ್ಬರಿಗೂ ಅವರ ಬೆಂಬಲ ಮತ್ತು ಕಾರಣಕ್ಕಾಗಿ ಸಕ್ರಿಯವಾದ ವಿಧಾನಕ್ಕಾಗಿ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಈ ವರ್ಷದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ನಮ್ಮ ಮಹಿಳಾ ವಿಜ್ಞಾನಿಗಳ ಸಾಧನೆಗಳನ್ನು ಸ್ಮರಿಸಿದ್ದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ," ಎಂದು ಅವರು ಅವರು ಮತ್ತೊಂದು ಟ್ವೀಟ್ನಲ್ಲಿ ಹೇಳಿದರು.


11 ಪ್ರಖ್ಯಾತ ಮಹಿಳಾ ವಿಜ್ಞಾನಿಗಳಲ್ಲಿ ಸೈಟೊಜೆನೆಟಿಸ್ಟ್ ಅರ್ಚನಾ ಶರ್ಮಾ, ಸಸ್ಯವಿಜ್ಞಾನಿ ಜಾನಕಿ ಅಮ್ಮಲ್, ಸಾವಯವ ವಿಜ್ಞಾನಿ ದರ್ಶನ್ ರಂಗನಾಥಮ್, ರಸಾಯನಶಾಸ್ತ್ರಜ್ಞೆ ಅಸಿಮಾ ಚಟರ್ಜಿ, ವೈದ್ಯೆ ಕದಂಬಿನಿ ಗಂಗೂಲಿ, ಮಾನವಶಾಸ್ತ್ರಜ್ಞೆ ಐರಾವತಿ ಕಾರ್ವೆ, ಹವಾಮಾನಶಾಸ್ತ್ರಜ್ಞೆ ಅನ್ನಾ ಮಣಿ, ಎಂಜಿನಿಯರ್ ರಾಜೇಶ್ವರಿ, ಭೌತಶಾಸ್ತ್ರಜ್ಞೆ ಭಿಭಾ ಚೌಧರಿ ಮತ್ತು ಬಯೋಮೇಡಿಕಲ್ ಸಂಶೋಧಕಿ ಕಮಲ್ ರಣದಿವೆ ಸೇರಿದ್ದಾರೆ.


ಸಚಿವಾಲಯವು ಗೌರವಾರ್ಥ ಸ್ಥಾನಗಳನ್ನು ಸ್ಥಾಪಿಸಲು ಯೋಜಿಸಿರುವ ಸಂಸ್ಥೆಗಳ ವಿವರಗಳನ್ನು ಇರಾನಿ ನೀಡಿದರು.


ಈ ಪ್ರದೇಶದಲ್ಲಿ ಸಂಶೋಧನಾ ಚಟುವಟಿಕೆಯನ್ನು ಉತ್ತೇಜಿಸಲು ಸೈಟೊಜೆನೆಟಿಸ್ಟ್ ಅರ್ಚನಾ ಶರ್ಮಾ ಅವರ ಹೆಸರಿನಲ್ಲಿರುವ ಗೌರವಾರ್ಥ ಸ್ಥಾನವನ್ನು ಅನ್ನು ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ಐಸಿಎಆರ್) ಯಾವುದಾದರೂ ಒಂದು ಸಂಸ್ಥೆಯಲ್ಲಿ ಸ್ಥಾಪಿಸಲಾಗುವುದು ಎಂದು ಅವರು ಹೇಳಿದರು.


ಅವರ ಕೊಡುಗೆಗೆ ಗೌರವವಾಗಿ ಜಾನಕಿ ಅಮ್ಮಲ್ ಅವರ ಹೆಸರಿನಲ್ಲಿ ಒಂದು ಗೌರವಾರ್ಥ ಸ್ಥಾನವನ್ನು ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಸ್ಥಾಪಿಸಲಾಗುವುದು ಎಂದು ಇರಾನಿ ಹೇಳಿದರು.


ನೈಸರ್ಗಿಕ ಜೀವರಾಸಾಯನಿಕ ಪ್ರಕ್ರಿಯೆಗಳನ್ನು ಪುನರುತ್ಪಾದಿಸುವ ವಿಜ್ಞಾನಿ ದರ್ಶನ್ ರಂಗನಾಥಮ್ ಅವರ ಕಾರ್ಯವನ್ನು ಗೌರವಿಸಲು ಸಾವಯವ ಗೌರವಾರ್ಥ ಸ್ಥಾನವನ್ನು ಹಲವಾರು ಸಂಸ್ಥೆಗಳಲ್ಲಿ ರೋಗನಿರೋಧಕ ಕ್ಷೇತ್ರದಲ್ಲಿ ಸ್ಥಾಪಿಸಲಾಗುವುದು ಎಂದು ಅವರು ಹೇಳಿದರು.


"ಯುವತಿಯರು ಅವರಿಂದ ಸ್ಫೂರ್ತಿ ಪಡೆದು ನಮ್ಮ ರಾಷ್ಟ್ರಕ್ಕೆ ಕೀರ್ತಿ ತರುವಂತಹ ಸಾಧನೆ ಮಾಡುತ್ತಾರೆ ಎಂದು ನಾನು ಭಾವಿಸುತ್ತೇನೆ," ಎಂದು ಇರಾನಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.


ಅಸಿಮಾ ಚಟರ್ಜಿ ಅವರ ಗೌರವಾರ್ಥ ಸ್ಥಾನವನ್ನು ಫೈಟೊಮೆಡಿಸಿನ್ ಪ್ರದೇಶದಲ್ಲಿ ಅವರ ಹೆಸರಿನಲ್ಲಿ ಸ್ಥಾಪಿಸಲಾಗುವುದು ಮತ್ತು ಐರಾವತಿ ಕಾರ್ವೆ ಅವರ ಗೌರವಾರ್ಥ ಸ್ಥಾನವನ್ನು ಸಾಮಾಜಿಕ ವಿಜ್ಞಾನ ಸಂಸ್ಥೆಗಳಲ್ಲಿ ಅವರ ಹೆಸರಿನಲ್ಲಿ ಸ್ಥಾಪಿಸಲಾಗುವುದು ಎಂದು ಇರಾನಿ ಹೇಳಿದರು.


ರಾಜೇಶ್ವರಿ ಚಟರ್ಜಿ ಅವರ ಗೌರವಾರ್ಥ ಸ್ಥಾನವನ್ನು ಎಂಜಿನಿಯರಿಂಗ್ ಸಂಸ್ಥೆಗಳಲ್ಲಿ ಸ್ಥಾಪಿಸಲಾಗುವುದು ಮತ್ತು ಬಯೋಮೆಡಿಕಲ್ ಸಂಶೋಧನಾ ಕ್ಷೇತ್ರದಲ್ಲಿ ಕಮಲ್ ರಣದಿವೆ ಅವರ ಹೆಸರಿನಲ್ಲಿ ಸ್ಥಾಪಿಸಲಾಗುವುದು.