ಕಿಲಿಮಂಜಾರೋ ಹತ್ತುವ ಮೂಲಕ ಚಿಕ್ಕ ವಯಸ್ಸಿನಲ್ಲಿಯೇ ಎಲ್ಲರ ಗಮನ ಸೆಳೆದ ಈ ಬಾಲಕ

ಒಂಭತ್ತರ ವಯಸ್ಸಿನ ಈ ಅದ್ವೈತ್ ಭಾರ್ತಿಯಾ ಕಿಲಿಮಂಜಾರೋ ಪರ್ವತ ಏರಲು ಪಾರ್ಕರ್ ಮತ್ತು ಈಜು ಸೇರಿಸಂತೆ ಕಠಿಣ ತರಬೇತಿಯನ್ನು ಪಡೆದರು. ಮುಂದಿನದು? ಯುರೋಪಿನ ಅತ್ಯುನ್ನತ ಶೀಕರವಾದ ಮೌಂಟ್ ಎಲ್ಬ್ರಸ್.

ಕಿಲಿಮಂಜಾರೋ ಹತ್ತುವ ಮೂಲಕ ಚಿಕ್ಕ ವಯಸ್ಸಿನಲ್ಲಿಯೇ ಎಲ್ಲರ ಗಮನ ಸೆಳೆದ ಈ ಬಾಲಕ

Tuesday August 20, 2019,

2 min Read

ಸಾಧನೆಗೆ ವಯಸ್ಸು ಬೇಡ ಮನಸ್ಸು ಬೇಕು. ಈ ಮಾತಿಗೆ ಪುಷ್ಟಿಯಾಗಿ ನಿಲ್ಲುವ ಎಷ್ಟೋ ಸಾಧಕರ ಯಶೋಗಾಥೆಯನ್ನು ನಾವು ನೋಡಿದ್ದೇವೆ, ಕೇಳಿದ್ದೇವೆ. ಸಾಧನೆ ಎಲ್ಲರಿಂದ ಸಾಧ್ಯ. ಅದಕ್ಕೆ ಪೂರಕವಾಗುವ ಪ್ರಯತ್ನ ನಮ್ಮದಾಗ ಬೇಕು ಅಷ್ಟೆ. ಹೆಚ್ಚಿನ ಮಕ್ಕಳು ಈ ವಯಸ್ಸಿನಲ್ಲಿ ಆಟ-ಪಾಠದ ನಡುವೆಯೇ ಕಳೆದು ಹೋಗುತ್ತಿರುವಾಗ ಪುಣೆಯ ನಿವಾಸಿಯಾದ ಅದ್ವೈತ್ ಭಾರ್ತಿಯಾ ಈ ಒಂಭತ್ತು ವರ್ಷದ ಬಾಲಕ ಕಿಲಿಮಂಜಾರೋ ಪರ್ವತವನ್ನು ಏರುವ ಮೂಲಕ ದಾಖಲೆ ನಿರ್ಮಿಸಿದ್ದಾನೆ.


ಆಫ್ರೀಕಾದ ಅತಿ ಎತ್ತರದ ಶಿಖರವಾಗಿರುವ ಕಿಲಿಮಂಜಾರೋ ಪರ್ವತವು ತಾಂಜಾನಿಯಾ ದೇಶದಲ್ಲಿದ್ದು, ಇದು ತಳಮಟ್ಟದಿಂದ 4,900 ಮೀಟರ್ ಮತ್ತು ಸಮುದ್ರ ಮಟ್ಟದಿಂದ 5,885 ಮೀಟರ್ ಎತ್ತರದಲ್ಲಿದೆ. ಅದ್ವೈತ್ ಅವರ ತಂಡವು ಏಳು ದಿನಗಳಲ್ಲಿ ಶಿಖರದ ಉತ್ತುಂಗಕ್ಕೇರಿತು. ಜುಲೈ 31 ರಂದು ಅವರ ದಂಡಯಾತ್ರೆ ಪೂರ್ಣವಾಯಿತು.


ಅದ್ವೈತ್ ಭಾರ್ತಿಯಾ (ಚಿತ್ರಕೃಪೆ: ಏಷ್ಯನ್ ಏಜ್)


ಇಂಡಿಯಾ ಟುಡೇ ವರದಿ ಪ್ರಕಾರ, ಎರಡು ತಿಂಗಳುಗಳ‌ ಕಾಲ ಕಠಿಣ ತರಬೇತಿ ಪಡೆದ ನಂತರ, ಅದ್ವೈತ್ ಅವರ ತಂಡ ಜುಲೈ 31 ರಂದು ಶಿಖರದ ಉತ್ತುಂಗಕ್ಕೆ ತಲುಪಿದರು.


ಪಿಟಿಐ ಜೊತೆ ಮಾತನಾಡಿದ ಅದ್ವೈತ್, "ಈ ಚಾರಣ ನಿಜವಾಗಿಯೂ ಕಷ್ಟಕರವಾಗಿತ್ತು. ಅದೇ ಸಮಯ ಅಷ್ಟೇ ವಿನೋದಮಯವಾಗಿತ್ತು. ಎವರೆಸ್ಟ್ ಬೇಸ್ ಕ್ಯಾಂಪ್ ಶೃಂಗಸಭೆಯಾಗಿತ್ತು. ಅಲ್ಲಿ ಮರದ ಮನೆಗಳಲ್ಲಿ ವಾಸಿಸುತ್ತಿದ್ದೆವು. ಆದರೆ, ಕಿಲಿಮಂಜಾರೊ ಚಾರಣದ ಸಮಯದಲ್ಲಿ ನಾವು ಡೇರೆಗಳಲ್ಲಿ ವಾಸಿಸುತ್ತಿದ್ದೆವು. ಹಿಮ ಮತ್ತು ಸುತ್ತ-ಮುತ್ತಲಿನ ಪ್ರದೇಶಗಳಿಗೆ ನಮ್ಮನ್ನು ಒಡ್ಡಿಕೊಳ್ಳುವುದು ಒಳ್ಳೆಯ ಅನುಭವವಾಗಿತ್ತು."


ಅದ್ವೈತ್ ತಮ್ಮ ದೈನಂದಿನ ದಿನಚರಿಯಲ್ಲಿ ಒಂದು ಗಂಟೆ ಈಜು ಮತ್ತು ಹೃದಯ ಸಂಬಂಧಿ ತರಬೇತಿಗಾಗಿ ಪುಟ್ಬಾಲ್, ಕ್ರಿಕೇಟ್‌ ಮತ್ತು ಟೆನಿಸ್ ಆಡುತ್ತಿದ್ದರು. ಜೊತೆಗೆ ಪಾರ್ಕರ್(ಮಿಲಿಟರಿ ಅಡಚಣೆ ತರಬೇತಿ) ಅನ್ನು ಪ್ರಾರಂಭಿಸಿದರು ಮತ್ತು ಅವರ ಆಡಳಿತದ ಭಾಗವಾಗಿ‌ 100 ಮಹಡಿಗಳನ್ನು ಏರುತ್ತಿದ್ದರು.


ತಮ್ಮ ಚಾರಣದ ಅನುಭವದ ಕುರಿತಾಗಿ ಎನ್‌ಡಿಟಿವಿಯೊಂದಿಗೆ ಮಾತನಾಡಿದ ಅವರು, "ನಾನು ಚಾರಣವನ್ನು ವೇಗವಾಗಿ ಪೂರ್ಣಗೊಳಿಸಬಹುದಿತ್ತು, ಆದರೆ ಪರ್ವತಗಳು ತುಂಬಾ ಸುಂದರವಾಗಿದ್ದವು ಅದಕ್ಕಾಗಿ ಆ ಸೌಂದರ್ಯವನ್ನು ಸವಿಯಲು ನಾನು ಸಾಕಷ್ಟು ವಿರಾಮವನ್ನು ತೆಗೆದುಕೊಂಡಿದ್ದೇನೆ".


ಪ್ರತಿ ಪರ್ವತವನ್ನು ಏರುತ್ತಾ


(ಚಿತ್ರಕೃಪೆ: ಹಿಂದೂಸ್ತಾನ್ ಟೈಮ್ಸ್)

ಚಾರಣ ಸುಲಭವಲ್ಲ, ಜೊತೆಗೆ ಒಂಭತ್ತು ವರ್ಷ ವಯಸ್ಸಿನವರು 21 ರಿಂದ 25° ಡಿಗ್ರಿ ಸೆಲ್ಸಿಯಸ್ ನಡುವಿನ ತಾಪಮಾನವನ್ನು ಹೊಂದಿರುವ ಎತ್ತರಕ್ಕೆ ಏರಿದಾಗ ಆಮ್ಲಜನಕದ ಕೊರತೆಯನ್ನು ಎದುರಿಸಬೇಕಾಯಿತು. " ಸಿಂಬಮ್‌ ಟು ಟು" (ಸಿಂಹದ ಮರಿ) ಎಂದೇ ಕರೆಯಲ್ಪಡುವ ದಂಡಯಾತ್ರೆಯ ನಾವಿಕ‌ ಸಮೀರ್ ಪಾಥಮ್ ಮೇಲ್ವಿಚಾರಣೆ ವಹಿಸಿದ್ದರು.


ಈ ಚಾರಣದಲ್ಲಿ‌ ಅದ್ಬೈತ್ ಅವರ ತಾಯಿ ಪಾಯಲ್ ಕೂಡ ಇದ್ದರು. ಅವರು, "ಹೆಚ್ಚುತ್ತಿರುವ ಎತ್ತರಕ್ಕೆ ಒಗ್ಗಿಕೊಳ್ಳಲು ಸಾಧ್ಯವಾಗದ ಕಾರಣ" ತಮ್ಮ ಪ್ರಯಾಣವನ್ನು 1,000 ಅಡಿಗಳಷ್ಟು ಕಡಿಮೆಗೊಳಿಸಬೇಕಾಯಿತು.


ತಮ್ಮ ಮಗನ ಯಶಸ್ಸಿನ ಕುರಿತು ಮಾತನಾಡಿದ ಅವರು, ಅದ್ವೈತ್ ಈ ಚಾರಣವನ್ನು ಪೂರ್ಣಗೊಳಿಸಿರುವ ಅವನ ಸಮಪರ್ಣೆಯ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಕೊನೆಯ ದಿನದಂದು‌ ಅದ್ಬೈತ್ ತುಂಬಾ ಭಾವುಕನಾಗಿದ್ದು, ತಮ್ಮ ಎಲ್ಲ ಪ್ರಯತ್ನಕ್ಕಾಗಿ ಸಂಬಂಧಿಸಿದ ಪೋರ್ಟರ್ ಗಳು, ಟೆಂಟ್ ಪಿಚರ್ ಮತ್ತು ಅಡುಗೆ ತಂಡಕ್ಕೆ ಪ್ರತ್ಯೇಕವಾಗಿ ಧನ್ಯವಾದಗಳನ್ನು ಅರ್ಪಿಸಿದರು.


ಅದ್ವೈತ್ ಈಗ ಹೊಸ ಕನಸಿನ ಹಾದಿಯಲ್ಲಿದ್ದಾರೆ, ಅದುವೇ ಯೂರೋಪಿನ ಅತ್ಯುನ್ನತ ಶಿಖರವಾದ ಮೌಂಟ್ ಎಲ್ಬ್ರಸ್ ಅನ್ನು ಏರುವುದು.