ಆವೃತ್ತಿಗಳು
Kannada

ಸುಂದರ ಮನೆಗಳ ನಿರ್ಮಾಣಕ್ಕೆ ಸಿವಿಲ್ ಎಂಜಿನಿಯರ್ ಇಂದ್ರಾಣಿ ಮುಖರ್ಜಿ ಬ್ಯಾಂಬೂ ಬಳಸುತ್ತಾರೆ

ಆರ್​​.ಪಿ.

RP
17th Nov 2015
Add to
Shares
0
Comments
Share This
Add to
Shares
0
Comments
Share

ಈಶಾನ್ಯ ಭಾರತದಲ್ಲಿ 7 ವರ್ಷಗಳ ಕಾಲ ಮಗುವಾಗಿ ಬೆಳೆದಿದ್ದು, ನಮ್ಮ ನಡುವಿನ ಅತ್ಯಂತ ನವೀಕರಿಸಬಹುದಾದ ನೈಸರ್ಗಿಕ ಸಂಪನ್ಮೂಲದ ಕಡೆಗೆ ಆಕೆಯ ಆಸಕ್ತಿ ಸೆಳೆದಿತ್ತು. ಅದೇ ಬ್ಯಾಂಬೂ ಅಥವಾ ಬೊಂಬು. ತಂದೆಯ ವರ್ಗಾವಣೆಗೊಳ್ಳುವ ಕೆಲಸದ ಕಾರಣ ಇಂದ್ರಾಣಿ ಒಂದು ತಿಂಗಳ ಮಗುವಾಗಿದ್ದಾಗ ತ್ರಿಪುರಾಗೆ ನಂತ್ರ ಅಸ್ಸಾಂಗೆ ಹೋಗ್ತಾರೆ. ಅವರ ತಂದೆ ಒಎನ್‍ಜಿಸಿಯಲ್ಲಿ ಹಿರಿಯ ಹಣಕಾಸು ಅಧಿಕಾರಿಯಾಗಿದ್ದ ಕಾರಣ ಅವರು ಕುಟುಂಬವನ್ನು ಬೇರೆ ಬೇರೆ ಸ್ಥಳಗಳಿಗೆ ಕರೆದುಕೊಂಡು ಹೋಗ್ತಾರೆ. ಸುಂದರ ಬ್ಯಾಂಬೂ ಕಾಡುಗಳ ಮಧ್ಯೆ ಕಾಲ ಕಳೆದದ್ದು ತನ್ನ ಸಮೃದ್ಧ ಅನುಭವ ಎನ್ನುತ್ತಾರೆ ಬ್ಯಾಂಬೂಜ್‍ನ ಸಹ ಸಂಸ್ಥಾಪಕಿ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಇಂದ್ರಾಣಿ. ನವೀಕರಿಸಬಹುದಾದ ಸಂಪನ್ಮೂಲವನ್ನು ಸಮರ್ಥನೀಯ ಅಭಿವೃದ್ಧಿಗೆ ಬಳಕೆಯ ವಿಚಾರದೊಂದಿಗೆ ಕಂಪನಿ ಹುಟ್ಟಿಕೊಂಡಿತು. ಭಾರತದಲ್ಲಿ ಹೇರಳವಾಗಿ ಕಂಡುಬರುವ ಮತ್ತು ನಿರ್ಮಾಣಕ್ಕೆ ಶಕ್ತಿಕೊಡುವ ವಸ್ತುವಾಗಿ ಬ್ಯಾಂಬೂವಿನ ಆಯ್ಕೆಯಲ್ಲಿ ಸ್ಪಷ್ಟತೆಯಿತ್ತು.

image


ಮೊದಲ ಪೀಳಿಗೆಯ ಉದ್ಯಮ ಬ್ಯಾಂಬೂಜ್ಹ್​​ ಬೆಂಗಳೂರಿನಲ್ಲಿ ನೆಲೆನಿಂತಿದೆ. ಇದರ ಮೂಲಕ ಅನೇಕ ಸಂಸ್ಥೆಗಳನ್ನು ಬ್ಯಾಂಬೂ ಬಳಕೆ ಮಾಡುವಂತೆ ಮುಟ್ಟುತ್ತಿದ್ದಾರೆ. ವಿವಿಧ ಎಂಎನ್‍ಸಿ ಕಂಪನಿಗಳ ಬೇರೆ ಬೇರೆ ಹುದ್ದೆಗಳಲ್ಲಿ 13 ವರ್ಷಗಳ ಕಾಲ ಕೆಲಸ ಮಾಡಿದ ಮೇಲೆ ಸಿವಿಲ್ ಎಂಜಿನಿಯರ್ ಇಂದ್ರಾಣಿಗೆ ತನ್ನ ಹೃದಯಕ್ಕೆ ಹತ್ತಿರವಾದುದನ್ನು ಮಾಡಬೇಕು ಎಂದು ನಿರ್ಧಾರ ಮಾಡಿದರು. ತನ್ನ ಸುತ್ತಲಿನ ಸಮಾಜಕ್ಕೆ ನವೀಕರಿಸಬಹುದಾದ ಪರಿಹಾರ ಮತ್ತು ಹಸಿರು ಕೊಡಬೇಕೆಂದು ಕೆಲಸ ಶುರುಮಾಡಿದರು.

ವಾಣಿಜ್ಯಿಕವಾಗಿ ಯಶಸ್ವಿ ಉದ್ಯಮವನ್ನಾಗಿಸಲು ಬ್ಯಾಂಬೂಜ್ಹ್​​ ಉತ್ಸಾಹದಿಂದ ಶುರುವಾಯಿತು. “ಸಾಂಪ್ರದಾಯಿಕ ಕಟ್ಟಡ ನಿರ್ಮಾಣ ವಲಯದಲ್ಲಿ ಬಹಳ ಕಾಲ ಇದ್ದೆ. ಹಸಿರು ಸೃಷ್ಟಿಸಲು ಮತ್ತು ದೀರ್ಘಕಾಲದ ಸಮರ್ಥನೀಯ ಪರಿಹಾರಕ್ಕೆ ನನ್ನ ಹೃದಯ ಬಯಸುತ್ತಿತ್ತು” ಎಂದು ಹೇಳ್ತಾರೆ ಇಂದ್ರಾಣಿ.

ಶುರುಮಾಡುವ ಆಲೋಚನೆ

ಚಿಕ್ಕವಯಸ್ಸಲ್ಲೇ ಮದುವೆಯಾದ ಇಂದ್ರಾಣಿ, ಸಿವಿಲ್ ಎಂಜಿನಿಯರ್ ಪತಿ ಸಾಮ್ರಾಟ್ ಸಾಹರಿಗೆ ತಮ್ಮ ಸ್ಟಾರ್ಟ್‍ಅಪ್ ಬಗ್ಗೆ ಪೋಷಕರಿಗೆ ತಿಳಿಹೇಳಲು ಆಗಲಿಲ್ಲ. ಅವರ ಮೇಲಿನ ಕಡಿಮೆ ವಿಶ್ವಾಸಕ್ಕಿಂತ ಅವರು ಕೆಲಸ ಬಿಡೋದರ ಬಗ್ಗೆ ಪೋಷಕರಲ್ಲಿ ಅಸಮಾಧಾನ ಇತ್ತು. “ಎರಡೂ ಕಡೆ ಪೋಷಕರು ಸರ್ಕಾರಿ ಉದ್ಯೋಗಿಗಳು, 5 ವರ್ಷಗಳ ಹಿಂದೆ ಅವರಿಗೆ ಸ್ಟಾರ್ಟ್‍ಅಪ್ ಬಗ್ಗೆ ಅರಿವಿರಲಿಲ್ಲ” ಎನ್ನತ್ತಾರೆ ಇಂದ್ರಾಣಿ.

ಸಂಸ್ಥೆಯಲ್ಲಿ ಉದ್ಯೋಗಿ ಆಗೋದಕ್ಕಿಂತ ಹೊಸ ಉದ್ಯಮ ಪ್ರಾರಂಭಿಸುವುದು ಸಂಪೂರ್ಣ ಭಿನ್ನ. “ಉದ್ಯಮ ರೋಲರ್ ಕೋಸ್ಟರ್ ರೈಡ್ ಇದ್ದಹಾಗೇ, ಪ್ರತಿಯೊಬ್ಬರು ಪ್ರತಿದಿನವೂ ಸವಾಲು ಎದುರಿಸಬೇಕು. ಅಪಾಯ ಎದುರಿಸಲು ವೈಯಕ್ತಿಕ ಸಾಮರ್ಥ್ಯ ಇರಬೇಕು. ಪ್ರಯಾಣದಲ್ಲಿ ತಾನು ಉಳಿದುಕೊಂಡೆ ಅನ್ನೋ ಅರ್ಥಗರ್ಭಿತ ಮನಸ್ಸು ಅವರಿಗಿರಬೇಕು” ಅನ್ನೋದು ಇಂದ್ರಾಣಿ ಮಾತು. ಇದಕ್ಕೂ ಹೆಚ್ಚಾಗಿ ಕಟ್ಟಡ ನಿರ್ಮಾಣಕ್ಕೆ ಎಲ್ಲ್ಲೆಡೆ ಒಪ್ಪಿಕೊಳ್ಳದ ಬ್ಯಾಂಬೂವನ್ನು ಪರ್ಯಾಯವಾಗಿ ಬಳಸಲು ಸಂಸ್ಥೆ ನಿರ್ಧರಿಸಿತು.

image


ಬ್ಯಾಂಬೂ ಬಗ್ಗೆ ಅರಿವು ಮೂಡಿಸುವುದು, ದೊಡ್ಡ ಸಂಸ್ಥೆಗಳು ಮತ್ತು ಸರ್ಕಾರದ ಸಂಸ್ಥೆಗಳನ್ನು ಭೇಟಿ ಮಾಡಿ ಉದ್ಯಮದಲ್ಲಿ ಹೂಡಿಕೆ ಮಾಡಿ ಎಂದು ಹೇಳುವುದು ಹಾಗೂ ಅವರ ಪರಿಹಾರಗಳನ್ನು ನಂಬುವಂತೆ ಮಾಡಿಸುವುದು ಅತಿದೊಡ್ಡ ಸಮಸ್ಯೆ. ಇದಕ್ಕೂ ಮಿಗಿಲಾಗಿ ವಿನ್ಯಾಸ, ನಿರ್ಮಾಣದಿಂದ ಹಣಕಾಸು, ವಿರತಣೆಯವರೆಗೆ ಒಬ್ಬಳೇ ಉಸ್ತುವಾರಿ ವಹಿಸಿಕೊಂಡ ಮಹಿಳಾ ಉದ್ಯಮಿಯಾಗಿರೋದು ಇಂದ್ರಾಣಿಗೆ ಅತಿದೊಡ್ಡ ಸವಾಲು.

ಕಟ್ಟಡ ನಿರ್ಮಾಣಕ್ಕೆ ಬ್ಯಾಂಬೂ ಬಳಕೆಯ ಯೋಚನೆ

ಬ್ಯಾಂಬೂಗೆ ಕಲಾತ್ಮಕ ಸ್ಮರ್ಶ ಸಿಕ್ಕರೂ ಅದರ ರಚನೆ ಗಟ್ಟಿಯಾಗಿದೆ ಮತ್ತು ನೂರಾರು ವರ್ಷಗಳ ಕಾಲ ಬಾಳಬಲ್ಲ ತಾಕತ್ತು ಇದೆ. “ಭೂಕಂಪನ ಪ್ರದೇಶಗಳಲ್ಲಿ ಇದರಿಂದ ಕಟ್ಟಡ ನಿರ್ಮಾಣ ಉತ್ತಮ” ಅಂತಾರೆ ಇಂದ್ರಾಣಿ. ಗೋಪುರ, ರೆಸಾರ್ಟ್, ಸೀಲಿಂಗ್ ರಚನೆ, ಪಾರ್ಕಿಂಗ್ ಶೆಡ್, ತಿನಿಸು ಕೇಂದ್ರ, ಗುಡಿಸಲು ಇತ್ಯಾದಿ ರಚನೆಗಳಿಗೆ ಬ್ಯಾಂಬೂ ಈಗ ಬಳಕೆಯಾಗ್ತಿದೆ. ಇದೆಲ್ಲವನ್ನೂ ಶಕ್ತಿಶಾಲಿಯಾದ ಬ್ಯಾಂಬೂಸಾ ಬಾಲ್ಕೋ ಆ ಬ್ಯಾಂಬೂನಿಂದ ನಿರ್ಮಾಣ ಮಾಡಲಾಗ್ತಿದೆ.

ವಿಶೇಷ ಅಂದ್ರೆ ಬ್ಯಾಂಬೂಜ್ಹ್​​ ವಾಹನ ಕವಚ ನಿರ್ಮಾಣದ ಬಳಕೆಗೆ ಬ್ಯಾಂಬೂ ಮ್ಯಾಟ್ ಬೋರ್ಡ್ ಹೊರತಂದು ಈಗಾಗಲೇ ಪ್ರಚಲಿತವಾಗಿದೆ. ಅಲ್ಲದೇ ಬಸ್ ಫ್ಲೋರಿಂಗ್, ಸೀಟಿಂಗ್, ವಿಭಾಗಗಳ ರಚನೆಯಲ್ಲಿ ಸಾಂಪ್ರದಾಯಿಕ ಪ್ಲೇವುಡ್ ಬೋರ್ಡ್ ಬದಲಿಗೆ ಬ್ಯಾಂಬೂ ಬಳಕೆಯಾಗುತ್ತಿದ್ದು ಇದಕ್ಕೆ ಭಾರತ ಸರ್ಕಾರದ ಅಸೋಸಿಯೇಷನ್ ಆಫ್ ಸ್ಟೇಟ್ ರೋಡ್ ಟ್ರಾನ್ಸ್​​ಪೋರ್ಟ್ ಅಂಡರ್‍ಟೇಕಿಂಗ್‍ನ ಅನುಮೋದನೆ ಇದೆ.

ಆಕೆಯ ಆದರ್ಶ ವ್ಯಕ್ತಿಗಳು

ತನ್ನ ತಾಯಿ ಮತ್ತು ಸ್ವಾಮಿ ವಿವೇಕಾನಂದರನ್ನು ಆದರ್ಶ ವ್ಯಕ್ತಿಗಳನ್ನಾಗಿ ಇಂದ್ರಾಣಿ ಸ್ವೀಕರಿಸಿದ್ದಾರೆ. ಗೃಹಿಣಿ ತಾಯಿಯಿಂದ ತಾಳ್ಮೆಯಿಂದಿರೋ ಕಲೆ, ಅನುಕಂಪ ಹಾಗೂ ಸದಾ ತಗ್ಗಿಬಗ್ಗಿ ನಡೆಯುವುದನ್ನು ಕಲಿತರು. ತನ್ನಿಬ್ಬರು ಹೆಣ್ಮಕ್ಕಳನ್ನು ನೋಡಿಕೊಳ್ಳಲು ಇಂದ್ರಾಣಿ ತಾಯಿ ವೃತ್ತಿಯನ್ನೇ ತ್ಯಜಿಸಿದರು.

image


ಇನ್ನು ಸ್ವಾಮಿ ವಿವೇಕಾಂದನರ ಜೀವನ ಮತ್ತು ಬೋಧನೆಗಳು ಇಂದ್ರಾಣಿ ಜೀವನದಲ್ಲಿ ಅತಿಯಾದ ಪ್ರಭಾವ ಬೀರಿದ್ದು, ಆತ್ಮವಿಶ್ವಾಸ ಮತ್ತು ಶಿಸ್ತನ್ನು ಕಲಿಸಿದೆ.

ದಂಪತಿ ಪರಸ್ಪರ ಪೂರಕವಾಗಿದ್ದಾರೆ

ಬ್ಯಾಂಬೂಜ್ಹ್​​ನ ಇಬ್ಬರೂ ಸಹ ಸಂಸ್ಥಾಪಕರಾದ ಇಂದ್ರಾಣಿ ಮತ್ತು ಆಕೆಯ ಪತಿ ಸಾಮ್ರಾಟ್ ಪರಸ್ಪರ ಪೂರಕವಾಗಿದ್ದಾರೆ. “ಅವರು ನನ್ನ ಅರ್ಹತೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದಲ್ಲಿ ಸದಾ ನಂಬಿಕೆ ಇಟ್ಟಿದ್ದಾರೆ. ಅವರೊಟ್ಟಿಗೆ ಕೆಲಸ ಮಾಡುವುದು ಅತ್ಯುತ್ತಮ ಹಾಗೂ ನನಗೆ ಅವರ ಬೆಂಬಲ ಸದಾ ಇದೆ” ಎಂದು ಹೇಳ್ತಾರೆ ಇಂದ್ರಾಣಿ. ತಮ್ಮ ಸ್ವಂತ ಹಣದ ಪಾಲುದಾರಿಕೆಯಲ್ಲಿ 2010ರಲ್ಲಿ ಬ್ಯಾಂಬೂಜ್ಹ್​​ ಉದ್ಯಮ ಪ್ರಾರಂಭಿಸಿದ್ದರು.

Add to
Shares
0
Comments
Share This
Add to
Shares
0
Comments
Share
Report an issue
Authors

Related Tags