10 ಸಾವಿರ ಡ್ರೆಸ್ ಡಿಸೈನ್ ಹೊಂದಿರುವ ಮಹಿಳೆಯರ ಫೆವರೆಟ್ ವೆಬ್​ಸೈಟ್ banglewale

ಟೀಮ್​ ವೈ.ಎಸ್​.ಕನ್ನಡ

10 ಸಾವಿರ ಡ್ರೆಸ್ ಡಿಸೈನ್ ಹೊಂದಿರುವ ಮಹಿಳೆಯರ ಫೆವರೆಟ್ ವೆಬ್​ಸೈಟ್ banglewale

Wednesday March 09, 2016,

3 min Read

ಅಂಗಡಿ ಸುತ್ತಿ ಸುತ್ತಿ ಸುಸ್ತಾದ್ರೂ ಬೇಕಾದ ವಸ್ತು ಸಿಗೋದಿಲ್ಲ. ವೆರೈಟಿ ಇಲ್ಲ ನಾಳೆ ಬನ್ನಿ ಎನ್ನುತ್ತಾರೆ ಅಂಗಡಿ ಮಾಲೀಕರು. ಬಂದ ದಾರಿಗೆ ಸುಂಕ ಇಲ್ಲ ಅಂತಾ ವಾಪಸ್ ಬರ್ತಾರೆ ಗ್ರಾಹಕರು. ಆದ್ರೆ ಈಗ ಅಂಗಡಿ ಸುತ್ತುವ ತೊಂದರೆ ಇಲ್ಲ. ಇದು ಆನ್ಲೈನ್ ಯುಗ. ದೇಶದಲ್ಲಿ ಆನ್​ಲೈನ್ ವ್ಯಾಪಾರ ವರ್ಷದಿಂದ ವರ್ಷಕ್ಕೆ ವೇಗವಾಗಿ ಬೆಳೆಯುತ್ತಿದೆ. ಆನ್​ಲೈನ್ ನಲ್ಲಿ ಅತಿ ಹೆಚ್ಚು ಮಾರಾಟವಾಗುವ ವಸ್ತುಗಳಲ್ಲಿ ಬಟ್ಟೆ ಕೂಡ ಒಂದು. ಆನ್​ಲೈನ್ ನಲ್ಲಿ ಖರೀದಿ ಮಾಡುವ ಗ್ರಾಹಕರಿಗೆ ಒಂದೇ ಕಡೆ ವೆರೈಟಿ ವೆರೈಟಿ ಡಿಸೈನ್ ಸಿಗುತ್ತೆ. ಮಧ್ಯವರ್ತಿಗಳ ಪ್ರವೇಶವಿರದ ಕಾರಣ ಗ್ರಾಹಕರಿಗೆ ಅವರು ಖರೀದಿಸುವ ವಸ್ತುಗಳ ಮೇಲೆ ರಿಯಾಯಿತಿ ಕೂಡ ಸಿಗುತ್ತದೆ. ಹಬ್ಬ ಬಂದ್ರೆ ಆಫರ್ ಮೇಲೆ ಆಫರ್. ಶಾಪಿಂಗ್ ಕಿರಿಕಿರಿ ಇಲ್ಲದೆ ಕುಳಿತಲ್ಲಿಯೇ ಬೇಕಾದಷ್ಟು ಬಟ್ಟೆಗಳನ್ನು ಖರೀದಿಸುವ ಅವಕಾಶವನ್ನು ಆನ್​ಲೈನ್ ಮಾರುಕಟ್ಟೆ ನೀಡುತ್ತಿದೆ.

ಜನರಲ್ಲಿ ಆನ್​ಲೈನ್ ಪ್ರೀತಿ ಹೆಚ್ಚಾಗುತ್ತಿರುವುದನ್ನು ಗಮನಿಸಿದ ಆಗ್ರಾದ ನಿವಾಸಿ ಅಖಿಲ್ ಅಗರ್ವಾಲ್ ಆನ್​ಲೈನ್ ವ್ಯಾಪಾರ ಶುರುಮಾಡಿದ್ದಾರೆ. ಅಖಿಲ್ 2013ರಲ್ಲಿ banglewale.com ಆರಂಭಿಸಿದ್ರು. ಅಖಿಲ್ ಶುರುಮಾಡಿರುವ banglewale.com ಮಹಿಳೆಯರ ಫೆವರೆಟ್ ವೆಬ್ ಸೈಟ್ ನಲ್ಲಿ ಒಂದಾಗಿದೆ. ಅದ್ರಲ್ಲಿ ಎಥ್ನಿಕ್ ಡ್ರೆಸ್ ಜೊತೆಗೆ ವಿವಿಧ ಬಗೆಯ ಆಭರಣಗಳು ಸಿಗುವಂತೆ ಮಾಡಿದ್ದಾರೆ.

image


ಅಖಿಲ್ ಅಗರ್ವಾಲ್ ಅಹಮದಾಬಾದ್ ನಲ್ಲಿ ಬ್ಯುಸಿನೆಸ್ ಮ್ಯಾನೇಜ್ ಮೆಂಟ್ ನಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಮಾಡಿದ್ದಾರೆ. ಅವರ ಕುಟುಂಬಸ್ಥರು ಹಿಂದಿನಿಂದಲೂ ಒಂದಿಲ್ಲೊಂದು ವ್ಯಾಪಾರ ಮಾಡ್ತಿದ್ದರಂತೆ. ಹಾಗಾಗಿ ಅಖಿಲ್ ಬಾಲ್ಯದಲ್ಲಿಯೇ ತಾವು ಮುಂದೆ ವ್ಯಾಪಾರ ಕ್ಷೇತ್ರದಲ್ಲಿ ಹೆಸರು ಮಾಡಬೇಕೆಂಬ ಬಯಕೆ ಹೊಂದಿದ್ದರು. ಅಧ್ಯಯನದ ನಂತರ ತಮ್ಮ ಗುರಿ ತಲುಪುವ ದಾರಿ ಹುಡುಕಿದ್ರು. ಫಿರೋಜಾಬಾದ್ ನಲ್ಲಿ ಗಾಜಿನ ಬಳೆಗಳು ಕಡಿಮೆ ಸಿಗ್ತವೆ ಎಂಬುದನ್ನು ಅಖಿಲ್ ಗುರುತಿಸಿದ್ರು. ಈ ನಿಟ್ಟಿನಲ್ಲಿ ಕೆಲಸ ಶುರುಮಾಡಿದ್ರು. ಆಗ ಶುರುವಾಗಿದ್ದು banglewale.com.

ಗಾಜಿನ ಬಳೆಗಳನ್ನು ಆನ್ಲೈನ್ ನಲ್ಲಿ ಮಾರಾಟ ಮಾಡುವುದು ಆಗ ಹೊಸ ವಿಚಾರವಾಗಿತ್ತು. ಆದ್ರೆ ಅಖಿಲ್ ನಿರೀಕ್ಷಿಸಿದ ಮಟ್ಟಕ್ಕೆ ಈ ವ್ಯಾಪಾರ ತಲುಪಲಿಲ್ಲ. ಗಾಜಿನ ಬಳೆಗಳ ಜೊತೆ ಬೇರೆ ವಸ್ತುಗಳನ್ನೂ ಆನ್ಲೈನ್ ನಲ್ಲಿ ಮಾರಾಟ ಮಾಡುವ ಬಗ್ಗೆ ಚಿಂತನೆ ನಡೆಸಿದ್ರು. ಆಗ ಯಾರೋ ಮಹಿಳೆಯರ ಬಟ್ಟೆಯನ್ನು ಮಾರಾಟ ಮಾಡುವಂತೆ ಸಲಹೆ ನೀಡಿದ್ರಂತೆ. ಇದು ಅಖಿಲ್ ಗೆ ಬೆಸ್ಟ್ ಅನ್ನಿಸ್ತು. ಹಾಗಾಗಿ ಬಳೆಗಳ ಜೊತೆ ಮಹಿಳೆಯರ ಬಟ್ಟೆ ಮಾರಾಟವನ್ನು ಆನ್ಲೈನ್ ನಲ್ಲಿ ಶುರು ಮಾಡಿದ್ರು. ದಿನ ಕಳೆದಂತೆ ಬಟ್ಟೆಗಳಿಗೆ ಬೇಡಿಕೆ ಜಾಸ್ತಿಯಾಯ್ತು. ಆಗ ಅಖಿಲ್ ಇದನ್ನು ಗಂಭೀರವಾಗಿ ಪರಿಗಣಿಸಿದ್ರು.

ಎಥ್ನಿಕ್ ಡ್ರೆಸ್ ಮಾರಾಟದಲ್ಲಿ banglewale.com ತನ್ನದೆ ವಿಶಿಷ್ಟತೆಯನ್ನು ಹೊಂದಿದೆ. ವಿವಿಧ ವಿನ್ಯಾಸದ ಸುಮಾರು 10 ಸಾವಿರ ಆಯ್ಕೆಗಳಿವೆ. ಬೇರೆ ವೆಬ್ಸೈಟ್ ಗಳಲ್ಲಿ ಒಂದೇ ಉತ್ಪನ್ನಕ್ಕೆ ಬೇರೆ ಬೇರೆ ಬೆಲೆಗಳಿರುತ್ತವೆ. ಆದ್ರೆ ಅಖಿಲ್ ಪ್ರಕಾರ ಅವರ ಉತ್ಪನ್ನಗಳ ಬೆಲೆ ಒಂದೆ ರೀತಿಯಲ್ಲಿದೆ. ಉತ್ಪನ್ನಗಳ ಬಗ್ಗೆ ಪಾರದರ್ಶಕವಾಗಿದ್ದು,ಸರಿಯಾದ ಬೆಲೆ ನೀಡುತ್ತಿದೆ banglewale.com. banglewale.com ವೆಬ್ಸೈಟ್ ನಲ್ಲಿ 1200ದಿಂದ ಹಿಡಿದು 15 ಸಾವಿರ ಬೆಲೆಯ ಎಥ್ನಿಕ್ ಡ್ರೆಸ್ ಗಳು ಜಾಸ್ತಿ ಮಾರಾಟವಾಗುತ್ತವೆ. ದಿನಕ್ಕೆ100ಕ್ಕೂ ಹೆಚ್ಚು ಆರ್ಡರ್ ಬರುತ್ತದೆಯಂತೆ. ಲೆಹಂಗಾವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಯೋಚನೆ ಅಖಿಲ್ ಅವರಿಗಿದೆ. ಅದು 1 ಲಕ್ಷ ಬೆಲೆಬಾಳಬಹುದೆಂದು ನಿರೀಕ್ಷಿಸಲಾಗ್ತಿದೆ. ಗ್ರಾಹಕರಿಗೆ ಸಮಸ್ಯೆಯಾಗದಿರಲು ಅಖಿಲ್ ಫೋನ್ ಮೂಲಕ ಗ್ರಾಹಕರ ಸಮಸ್ಯೆಯನ್ನು ಆಲಿಸಿ ಪರಿಹರಿಸ್ತಾರೆ.

image


banglewale.comನಲ್ಲಿ ಕೇವಲ ಮಹಿಳೆಯರ ಎಥ್ನಿಕ್ ಡ್ರೆಸ್ಸೊಂದೇ ಅಲ್ಲ ವಿವಿಧ ಬಗೆಯ ಆಭರಣಗಳು ಸಿಗುತ್ತವೆ. ಅಖಿಲ್ ಹೇಳುವಂತೆ ಅವರು ವೆಬ್ ಸೈಟ್ ನಲ್ಲಿ ಮಾರಾಟ ಮಾಡುವ ವಸ್ತುಗಳು ಸೂರತ್ ನಿಂದ ತರಿಸ್ತಾರಂತೆ. ಸದ್ಯ ಅವರ banglewale.com ಗೆ 10 ಸಾವಿರ ಗ್ರಾಹಕರಿದ್ದಾರೆ. ಸಾಮಾನ್ಯವಾಗಿ 15 ನೂರರಿಂದ 2 ಸಾವಿರ ಬೆಲೆಯ ಡ್ರೆಸ್ ಜಾಸ್ತಿ ಮಾರಾಟವಾಗುತ್ತದೆಯಂತೆ.

banglewale.com ಪ್ರತಿ ತಿಂಗಳು ಶೇಕಡಾ 20, 30ರಷ್ಟು ವೇಗದಲ್ಲಿ ಪ್ರಸಿದ್ಧಿ ಪಡೆಯುತ್ತಿದೆ. ಅದಾಗ್ಯೂ ಮನೆ ಹಾಗೂ ಲಾಜಿಸ್ಟಿಕ್ಸ್ ವೆಚ್ಚ ಕೂಡ ಜಾಸ್ತಿ ಇದೆಯಂತೆ.ಮಾರಾಟವಾದ ವಸ್ತುಗಳನ್ನು ವಾಪಸ್ ಪಡೆಯುವುದು ಒಂದು ತಲೆ ನೋವಿನ ಕೆಲಸವಂತೆ. ಶೇಕಡಾ 20ರಷ್ಟು ಮಾರಾಟವಾದ ವಸ್ತುಗಳು ಬೇರೆ ಬೇರೆ ಕಾರಣಕ್ಕೆ ವಾಪಸ್ ಬರುತ್ತವೆಯಂತೆ. banglewale.com ನಲ್ಲಿ ಮೂರು ಜನರ ಟೀಂ ಇದೆ. ಅವರು ಹೊರಗುತ್ತಿಗೆ ಮೇಲೆ ಕೆಲಸ ಮಾಡ್ತಾರಂತೆ. ಅಖಿಲ್ ಗೆ ಹೂಡಿಕೆಯ ಅವಶ್ಯಕತೆ ಇಲ್ಲವಂತೆ . ಚಿಲ್ಲರೆ ವ್ಯಾಪಾರವನ್ನು ಅವರು ಮತ್ತಷ್ಟು ಬಲಪಡಿಸಬೇಕಂತೆ. ಮುಂದಿನ ದಿನಗಳಲ್ಲಿ ಈ ನಿಟ್ಟಿನಲ್ಲಿ ಅಖಿಲ್ ಕೆಲಸ ಮಾಡಲಿದ್ದಾರೆ.

ಲೇಖಕರು : ಹರೀಶ್

ಅನುವಾದಕರು: ರೂಪ ಹೆಗಡೆ