ಆವೃತ್ತಿಗಳು
Kannada

ಇನ್ವೆಸ್ಟ್ ಕರ್ನಾಟಕ - ಹೂಡಿಕೆ, ನಾವೀನ್ಯತೆ ಮತ್ತು ಉದ್ಯಮಶೀಲ ರಾಜ್ಯ

ಟೀಮ್ ವೈ.ಎಸ್. ಕನ್ನಡ

YourStory Kannada
3rd Feb 2016
Add to
Shares
0
Comments
Share This
Add to
Shares
0
Comments
Share

ಜಾಗತಿಕ ಹೂಡಿಕೆದಾರರ ಸಮಾವೇಶ ಇನ್ವೆಸ್ಟ್ ಕರ್ನಾಟಕ-2016ರಲ್ಲಿ ಕೈಗಾರಿಕೋದ್ಯಮಿಗಳು, ಉದ್ಯಮಿಗಳು ಮತ್ತು ಸರ್ಕಾರಿ ಅಧಿಕಾರಿಗಳ ಸಮ್ಮಿಲನವಾಗಿದೆ. ಕರ್ನಾಟಕ ನೈಸರ್ಗಿಕ ಸಂಪನ್ಮೂಲಗಳ ಪ್ರಯೋಜನವನ್ನು ಪಡೆದಿದೆ. ಅದ್ಭುತ ಮಾನವ ಸಂಪನ್ಮೂಲ ಮತ್ತು ಉದ್ಯಮಶೀಲ ಪ್ರತಿಭೆಗಳನ್ನು ಕೂಡ ಹೊಂದಿದೆ ಅಂತಾ ಕೇಂದ್ರ ಹಣಕಾಸು ಸಚಿವ ಅರೂನ್ ಜೇಟ್ಲಿ ಹೇಳಿದ್ದಾರೆ. ``ಈ ಎಲ್ಲ ಪ್ರಯೋಜನಗಳನ್ನು ಪಡೆದುಕೊಂಡು ಕರ್ನಾಟಕ ದೇಶದ ಆರ್ಥಿಕತೆಗಿಂತ ಶೇ2ರಷ್ಟು ಅಧಿಕ ಪ್ರಗತಿ ಹೊಂದುವ ಸಾಮರ್ಥ್ಯ ಪಡೆದಿದೆ'' ಅಂತಾ ಅಭಿಪ್ರಾಯಪಟ್ಟಿದ್ದಾರೆ. ಇನ್ನು ಸಮಾರಂಭದಲ್ಲಿ ಮಾತನಾಡಿದ ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು, ಕರ್ನಾಟಕಕ್ಕೆ ಕೇಂದ್ರದ ಸಂಪೂರ್ಣ ಬೆಂಬಲ ಮತ್ತು ಸಹಕಾರವಿದೆ ಎಂದು ಅಭಯ ನೀಡಿದರು.

image


``ಜಗತ್ತಿನ ಮೂಲೆ ಮೂಲೆಯಿಂದ, ದೇಶದ ನಾನಾ ಭಾಗಗಳಿಂದ ಉದ್ಯಮಿಗಳು ಮತ್ತು ಹೂಡಿಕೆದಾರರನ್ನು ಆಹ್ವಾನಿಸಿರುವ ಏಕೈಕ ಉದ್ದೇಶ ಅಂದ್ರೆ ಭಾರತವನ್ನು ಕಾಡುತ್ತಿರುವ ಬಡತನವನ್ನು ಹೊಡೆದೋಡಿಸುವುದು'' ಅಂತಾ ಕರ್ನಾಟಕದ ಬೃಹತ್ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಸ್ಪಷ್ಟಪಡಿಸಿದ್ರು. ಇನ್ವೆಸ್ಟ್ ಕರ್ನಾಟಕ ಹೂಡಿಕೆದಾರರ ಭೇಟಿಗೆ ಪ್ರಶಸ್ತ ಸ್ಥಳ ಅನ್ನೋದು ದೇಶಪಾಂಡೆ ಅವರ ಮಾತು.

ಕರ್ನಾಟಕದ ಅಭಿವೃದ್ಧಿಗಾಗಿ ಮೂಲಸೌಕರ್ಯಗಳನ್ನು ಕಲ್ಪಿಸುವ ಅಗತ್ಯವಿದೆ ಅಂತಾ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ರು. ಸಮಾವೇಶದಲ್ಲಿ ಮಾತನಾಡಿದ ಅವರು ಕರ್ನಾಟಕದಲ್ಲಿ ರಸ್ತೆಗಳ ಅಭಿವೃದ್ಧಿಗಾಗಿ ಒಂದು ಲಕ್ಷ ಕೋಟಿ ರೂಪಾಯಿ ನೆರವು ನೀಡುವುದಾಗಿ ಘೋಷಿಸಿದ್ರು. ಬೆಂಗಳೂರಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದ ಗಡ್ಕರಿ ಇದನ್ನು ಪರಿಹರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿ ಕಾರ್ಯಯೋಜನೆ ರೂಪಿಸುತ್ತಿರುವುದಾಗಿ ತಿಳಿಸಿದ್ರು.

image


``ನಾವೇ ಭಾರತದ ಭವಿಷ್ಯ. ಸ್ಟೀಲ್, ಕೃಷಿ, ತಂತ್ರಜ್ಞಾನ, ವೈದ್ಯಕೀಯ ಕ್ಷೇತ್ರ, ಉದ್ಯಮ ಮತ್ತು ಉತ್ಪಾದನೆ ಎಲ್ಲದರಲ್ಲೂ ಹೂಡಿಕೆಯಲ್ಲಿ ನಾವೇ ಮುಂಚೂಣಿಯಲ್ಲಿದ್ದೇವೆ'' ಅಂತಾ ಸಚಿವ ಆರ್.ವಿ.ದೇಶಪಾಂಡೆ ಹೆಮ್ಮೆಯಿಂದ ಹೇಳಿಕೊಂಡ್ರು. ``2000ನೇ ಇಸ್ವಿಯಲ್ಲೇ ಹೂಡಿಕೆ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕರ್ನಾಟಕ ಈ ಪದ್ಧತಿಗೆ ನಾಂದಿ ಹಾಡಿದೆ. ಮೇಕ್ ಇನ್ ಇಂಡಿಯಾದ ಯಶಸ್ಸಿಗಾಗಿಯೂ ನಾವು ಶ್ರಮಿಸುತ್ತೇವೆ'' ಅಂತಾ ದೇಶಪಾಂಡೆ ಭರವಸೆ ನೀಡಿದ್ರು.

ಹೂಡಿಕೆದಾರರ ಸಮಾವೇಶದಲ್ಲಿ 300ಕ್ಕೂ ಹೆಚ್ಚು ಪ್ರದರ್ಶಕರು ಪಾಲ್ಗೊಂಡಿದ್ದಾರೆ. ವೆಬ್​ಸೈಟ್​ನಲ್ಲಿ 140ಕ್ಕೂ ಹೆಚ್ಚು ಯೋಜನೆಗಳ ಡಿಪಿಆರ್​ಗಳನ್ನು ಪ್ರಕಟಿಸಲಾಗಿದೆ. ಭಾರತದಲ್ಲಿ ಉದ್ಯಮಗಳು ಸಹಜವಾಗಿಯೇ ಬೆಳವಣಿಗೆ ಕಾಣುತ್ತಿವೆ, ಏರೋಸ್ಪೇಸ್ ಕ್ಷೇತ್ರದಲ್ಲೂ ಪ್ರಗತಿ ಸಾಧಿಸುವ ಸಾಮರ್ಥ್ಯ ಹೊಂದಿದೆ ಅನ್ನೋದು ಅರುಣ್ ಜೇಟ್ಲಿ ಅವರ ಹೆಮ್ಮೆಯ ನುಡಿ. ದೇಶದಲ್ಲಿ ಇನ್ನಷ್ಟು ಉತ್ಪಾದನಾ ಸೆಟ್ಅಪ್​ಗಳ ಅಗತ್ಯವಿದೆ ಅನ್ನೋದು ಅವರ ಅಭಿಪ್ರಾಯ.

ರಾಸಾಯನಿಕ ಕ್ಷೇತ್ರದ ಬೆಳವಣಿಗೆಗೆ ಇನ್ನಷ್ಟು ಪ್ರಯತ್ನಗಳು ಶೀಘ್ರದಲ್ಲೇ ಆಗಲಿವೆ. ಇದನ್ನು ಹೊರತುಪಡಿಸಿ ರಾಜ್ಯದ ಕೃಷಿ ಕ್ಷೇತ್ರದ ಬಗೆಗೂ ಹೆಚ್ಚು ಗಮನಹರಿಸುವ ಅಗತ್ಯವಿದೆ. ಹಾಗಾಗಿ ಕರ್ನಾಟಕದಲ್ಲಿ 13 ಲಕ್ಷ ಮೆಟ್ರಿಕ್ ಟನ್ ಸಾಮರ್ಥ್ಯದ ರಸಗೊಬ್ಬರ ಪ್ಲಾಂಟ್ ಸ್ಥಾಪಿಸುವುದಾಗಿ ಕೇಂದ್ರ ರಸಗೊಬ್ಬರ ಖಾತೆ ಸಚಿವ ಅನಂತ್ ಕುಮಾರ್ ಘೋಷಣೆ ಮಾಡಿದ್ದಾರೆ. ವಿಶೇಷ ಅಂದ್ರೆ ಕೇಂದ್ರ ಹಾಗೂ ರಾಜ್ಯದ ಸಚಿವರುಗಳಿಗೆ ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಪಾಲ್ಗೊಳ್ಳಲು ವಿಶೇಷ ಆಹ್ವಾನವಿತ್ತು.

image


ಕರ್ನಾಟಕ ರಾಜ್ಯ ಅಭೂತಪೂರ್ವ ಅಭಿವೃದ್ಧಿ ಕಾಣಲಿದೆ ಅನ್ನೋದ್ರಲ್ಲಿ ಯಾವುದೇ ಸಂದೇಶವಿಲ್ಲ. ಸದ್ಯ ಎಲ್ಲರ ಗಮನ ಮಾಹಿತಿ ತಂತ್ರಜ್ಞಾನ ವಲಯದ ಮೇಲಿದೆ. ಇನ್ವೆಸ್ಟ್ ಕರ್ನಾಟಕ ಕಾರ್ಯಕ್ರಮದ ಮೂಲಕ ಉತ್ಪಾದನೆ ಹಾಗೂ ಕೃಷಿ ಕ್ಷೇತ್ರಗಳಿಗೂ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಅಷ್ಟೇ ಅಲ್ಲ ಕರ್ನಾಟಕದಲ್ಲಿ ಪ್ಲಾಸ್ಟಿಕ್ ತಂತ್ರಜ್ಞಾನದೆಡೆಗೆ ಕೂಡ ಗಮನಹರಿಸುವುದಾಗಿ ಅನಂತ್ ಕುಮಾರ್ ಅಭಯವಿತ್ತರು.

Add to
Shares
0
Comments
Share This
Add to
Shares
0
Comments
Share
Report an issue
Authors

Related Tags