ಆವೃತ್ತಿಗಳು
Kannada

ಉದ್ಯಮಿಗಳಿಗೆ ಉಬರ್ ಸಿಇಒ ಟ್ರಾವಿಸ್ ಕಲಾನಿಕ್ ರ ಕಿವಿಮಾತುಗಳು..

ಟೀಮ್​ ವೈ.ಎಸ್​. ಕನ್ನಡ

22nd Jan 2016
Add to
Shares
1
Comments
Share This
Add to
Shares
1
Comments
Share

ಟ್ರಾವಿಸ್ ಕಲಾನಿಕ್. ಟ್ಯಾಕ್ಸಿ ಉದ್ಯಮಕ್ಕೆ ಹೊಸ ಭಾಷ್ಯ ಬರೆದ ಉದ್ಯಮಿ. ಟ್ರಾವೆಲರ್ಸ್ ಉದ್ಯಮದ ಆಳ ಅಗಲವನ್ನ ಅರಿತು ಕೊನೆಗೆ ಅದೇ ಯಶಸ್ಸಿನ ಹಾದಿಯಲ್ಲಿ ಸಾಗಿರುವ ಉದ್ದಿಮೆದಾರ. ಉಬರ್ ಅನ್ನೋ ಟ್ರಾವೆಲರ್ಸ್ ಸಂಸ್ಥೆಯನ್ನ ಹುಟ್ಟುಹಾಕಿ ಇವರು ಅದನ್ನ ಬೆಳೆಸಿದ ರೀತಿಗೆ ಇಡೀ ಜಗತ್ತೇ ಶಹಬ್ಬಾಸ್ ಗಿರಿ ಕೊಟ್ಟಿದೆ. ಇನ್ನು ಉದ್ಯಮದಲ್ಲಿ ದೈತ್ಯನಾಗಿ ಬೆಳೆದಿರುವ ಟ್ರಾವಿಸ್ ಅವರನ್ನ ಜನವರಿ 16ರಂದು ನಡೆದ ಸ್ಟಾರ್ಟ್ ಅಪ್ ಇಂಡಿಯಾ ಕಾರ್ಯಕ್ರಮಕ್ಕೆ ಭಾರತ ಸರ್ಕಾರ ಆಹ್ವಾನಿಸಿತ್ತು. ಆಗ ಒಬ್ಬ ಉದ್ದಿಮೆದಾರನಾಗಿ ಟ್ರಾವಿಸ್ ಕಲಾನಿಕ್ ಮಾತನಾಡಿದ ರೀತಿ ಅಚ್ಚರಿ ಮೂಡಿಸಿತು. ವಿಜ್ಞಾನ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ 20 ನಿಮಿಷಗಳ ಕಾಲ ಮಾತನಾಡಿದ ಅವರು ತಮ್ಮ ಉಬರ್ ಕಂಪನಿ ಸಾಗಿ ಬಂದ ಹಾದಿಯನ್ನ ತೆರೆದಿಟ್ಟರು. ತಾವು ಬೆಳೆದು ಬಂದ ಕಥೆಯನ್ನ ರಸವತ್ತಾಗಿ ವರ್ಣಿಸಿದ ಕಲಾನಿಕ್, ಇತರೆ ಉದ್ಯಮಿಗಳಿಗೆ ಕೆಲವು ಕಿವಿ ಮಾತುಗಳನ್ನ ಹೇಳಿದ್ರು.

image


1 . ಬೆಳವಣಿಗೆಯತ್ತ ಲಕ್ಷ್ಯಕೊಡಿ

ಟ್ರಾವಿಸ್ ಕಲಾನಿಕ್ ತಮ್ಮ ಮಾತು ಆರಂಭಿಸುವ ಮೊದಲು ಕಂಪ್ಯೂಟರ್ ಸ್ಕ್ರೀನ್ ನಲ್ಲಿ ಅಂಬೆಗಾಲಿಡುತ್ತಿರುವ ಮಗುವಿನ ಚಿತ್ರವನ್ನ ತೋರಿಸಿದ್ರು. ಅದರ ಮೂಲಕ ತಮ್ಮ ಬಾಲ್ಯದ ಜೀವನವನ್ನ ನೆನಪಿಸಿಕೊಂಡರು. ಬಾಲ್ಯದಲ್ಲಿ ತಾವು ಯಾವಾಗಲೂ ಇತರರನ್ನ ಅನುಕರಿಸಲು ಯತ್ನಿಸುತ್ತಿದ್ದುದಾಗಿ ಹೇಳಿದ್ರು. ಟ್ರಾವಿಸ್ ಅವರ ತಂದೆ ಇಂಜಿನಿಯರ್ ಆಗಿದ್ದು ಇವರಿಗೆ ಬಾಲ್ಯದಲ್ಲಿ ಸರ್ವ ರೀತಿಯಲ್ಲೂ ನೆರವು ನೀಡಿದ್ದನ್ನ ಸ್ಮರಿಸಿದ್ರು. ಆರಂಭದಿಂದಲೇ ಹೇಗೆ ಬೆಳೆಯಬೇಕು ಅನ್ನುವುದರ ಕಡೆ ಲಕ್ಷ್ಯವಿದ್ದರೆ ಮುಂದಿನ ಹಾದಿ ಬಲು ಸುಲಭ ಅನ್ನೋದು ಟ್ರಾವಿಸ್ ಕಲಾನಿಕ್ ಅವರ ಅಭಿಪ್ರಾಯ..

2. ಕಳೆದುಕೊಂಡಿದ್ದನ್ನ ಹುಡುಕಿ ..

ಉಬರ್ ಹುಟ್ಟಿಕೊಂಡ ಕಥೆಯನ್ನ ಟ್ರಾವಿಸ್ ಸ್ವಾರಸ್ಯಕರವಾಗಿ ವಿವರಿಸುತ್ತಾರೆ. “ ಒಮ್ಮೆ ಪ್ಯಾರೀಸ್ ನಲ್ಲಿ ನಾವು ಪ್ರಯಾಣಕ್ಕಾಗಿ ಟ್ಯಾಕ್ಸಿ ಹುಡುಕಿದ್ರೂ ನಮಗೆ ಸಿಗಲಿಲ್ಲ . ” ಅಂತ ಆ ಕ್ಷಣಗಳನ್ನ ಅವರು ನೆನಪಿಸಿಕೊಳ್ಳುತ್ತಾರೆ. ಹೀಗೆ ಅಲ್ಲಿನ ಮಾರ್ಕೆಟ್ ನಲ್ಲಿದ್ದ ದೊಡ್ಡ ಅವಕಾಶವನ್ನ ಬಳಸಿಕೊಂಡಿದ್ದನ್ನ ಅವರು ಮೆಲುಕು ಹಾಕಿದ್ರು. ಇನ್ನು ಇದ್ರ ಜೊತೆಗೇ ನ್ಯೂಯಾರ್ಕ್ ನಲ್ಲಿದ್ದ ಪರಿಸ್ಥಿಯನ್ನೂ ಇವರು ಸೂಕ್ಷ್ಮವಾಗಿ ಅವಲೋಕಿಸಿದ್ರು. ಅಲ್ಲಿ ಮುಂದಿನ 60 ವರ್ಷಗಳಿಗೆ ನಿಗದಿತ ಟ್ಯಾಕ್ಸಿಗಳಿಗೆ ಲೈಸೆನ್ಸ್ ನೀಡಲಾಗಿತ್ತು. ಹೀಗಾಗಿ ಕ್ಯಾಬ್ ಮಾಲಿಕರು ಸರ್ವೀಸ್ ನೀಡದಿರುವ ಬಗ್ಗೆ ಸತಾಯಿಸುತ್ತಾ ಪ್ರಯಾಣಿಕರಲ್ಲಿ ಕೃತಕ ಭಯ ಹುಟ್ಟಿಸುತ್ತಿದ್ರು. ಇನ್ನು ಅಲ್ಲಿನ ಡ್ರೈವರ್ ಗಳು ಕ್ಯಾಬ್ ಓಡಿಸುವ ನಿತ್ಯದ ಲೈಸೆನ್ಸ್ ಪಡೆಯಲು 150 ಅಮೆರಿಕನ್ ಡಾಲರ್ ಪಾವತಿಸಬೇಕಿತ್ತು. ಇದು ಚಾಲಕರಿಗೆ ಹಾಗೂ ಪ್ರಯಾಣಿಕರಿಗೆ ಭಾರೀ ಹೊರೆಯಾಗುತ್ತಿತ್ತು. ಪರಿಸ್ಥಿತಿಯ ಲಾಭ ಪಡೆದ ಉಬರ್ ಡ್ರೈವರ್ ಹಾಗೂ ಪ್ರಯಾಣಿಕರಿಗೆ ನೆರವಾಯ್ತು.

3.ಸಮಸ್ಯೆಗಳನ್ನ ಎಷ್ಟು ಕೆಟ್ಟದಾಗಿ ಪರಿಹರಿಸುತ್ತೀರಾ..?

“ ಉಬರ್ ನಲ್ಲಿ ನಾನು ಸಮಸ್ಯೆಗಳನ್ನ ಪರಿಹರಿಸುವ ಚೀಫ್ . ಗಣಿತದ ಪ್ರೊಫೆಸರ್ ಹೇಗೆ ಸಮಸ್ಯೆಗಳನ್ನ ಅರ್ಥ ಮಾಡಿಕೊಂಡು ಅದನ್ನ ಬಿಡಿಸುತ್ತಾರೋ ಹಾಗೆ ಕಠಿಣ ಸಮಸ್ಯೆಗಳನ್ನ ಸವಾಲುಗಳನ್ನಾಗಿ ತೆಗೆದುಕೊಳ್ಳುತ್ತೇನೆ ” ಅಂತ ಟ್ರಾವಿಸ್ ಕಲಾನಿಕ್ ಉಬರ್ ನಲ್ಲಿ ತಾವು ನಿರ್ವಹಿಸುತ್ತಿರುವ ಪಾತ್ರದ ಬಗ್ಗೆ ವಿವರಿಸುತ್ತಾರೆ. ಉಬರ್ ಚಾಲಕರ ಚಾಲನಾ ಕೌಶಲ್ಯ ಮತ್ತು ಅವರ ಸಮಯದ ಪರಿಪಾಲನೆಯನ್ನ ತಿಳಿದುಕೊಳ್ಳಲು ಹೀಟ್ ಮ್ಯಾಪ್ ಗಳನ್ನ ಬಳಸಲಾಗುತ್ತದೆ. ಹೀಗಾಗಿ ಪ್ರಯಾಣಿಕರೂ 15 ನಿಮಿಷಗಳ ಅಂತರದಲ್ಲಿ ತಮಗೆ ಬೇಕಾದ ಕ್ಯಾಬ್ ಪಡೆಯಲು ಸಾಧ್ಯವಾಗುತ್ತದೆ. ಹೀಗೆ ಯಾವುದೇ ಸಮಸ್ಯೆಗಳನ್ನ ಸರಳವಾಗಿ ಪರಿಹರಿಸಲಾಗುತ್ತಿದೆ ಅಂತ ಟ್ರಾವಿಸ್ ವಿವರಿಸುತ್ತಾರೆ. ಇನ್ನು ನೀವೇನಾದ್ರೂ ಕೇವಲ ಒಂದು ಸಮಸ್ಯೆಯನ್ನಷ್ಟೇ ಪರಿಹರಿಸಿ ಅದಕ್ಕೇ ತೃಪ್ತಿ ಪಡುವುದಾದರೆ ನೀವು ಉತ್ತಮ ಉದ್ಯಮಿ ಅಲ್ಲ ಅನ್ನೋದು ಕಲಾನಿಕ್ ಅವರ ಅಭಿಪ್ರಾಯ. ಗೂಗಲ್ ಡ್ರೈವರ್ ಲೆಸ್ ಕಾರು ಪರೀಕ್ಷಿಸಲು ಪಡುತ್ತಿರುವ ಪ್ರಯತ್ನದ ರೀತಿ ಹೊಸ ಸಾಹಸಕ್ಕೆ ಕೈ ಹಾಕುತ್ತಿರಬೇಕು ಅಂತ ಅವರು ಅಭಿಪ್ರಾಯ ಪಟ್ರು.

4.ವಿಶ್ಲೇಷಣಾತ್ಮಕವಾಗಿ ಹಾಗೂ ಕ್ರಿಯಾಶೀಲರಾಗಿ ಇರಬೇಕು

ಕ್ರಿಯಾಶೀಲರಾಗಿ ಯೋಚಿಸದೇ ಇದ್ರೆ ಅದು ಎಷ್ಟೇ ವಿನೂತನವಾಗಿದ್ರೂ ನೆಲಕಚ್ಚುತ್ತೆ ಅನ್ನೋದು ಟ್ರಾವಿಸ್ ಕಲಾನಿಕ್ ಅವರ ಅಭಿಪ್ರಾಯ. ಕ್ರಿಯಾಶೀಲತೆಯ ಜೊತೆಗೆ ವಿಶ್ಲೇಷಣೆ ಮಾಡುವ ಮನಸ್ಥಿತಿ ಬಂದಾಗಲೇ ಅದ್ಭುತವಾದುದನ್ನ ಸೃಷ್ಠಿಸಲು ಸಾಧ್ಯ ಅನ್ನೋದು ಟ್ರಾವಿಸ್ ನಂಬಿಕೆ. ಇದಕ್ಕೆ ಅವರು ಕೊಡುವ ಉದಾಹರಣೆ ಕಂಪ್ಯೂಟರ್. ಕಂಪ್ಯೂಟರ್ ಎಷ್ಟೇ ವೇಗವಾಗಿದ್ರೂ ಅದಕ್ಕೆ ಕ್ರಿಯಾಶೀಲತೆ ತುಂಬದಿದ್ರೆ ಅದು ನಿಷ್ಕ್ರೀಯವಾಗುತ್ತೆ ಅಂತ ಅವರು ವಿವರಿಸುತ್ತಾರೆ.

5. ಕಲ್ಪನೆ ಮತ್ತು ವಾಸ್ತವದ ನಡುವಿನ ವ್ಯತ್ಯಾಸ ತಿಳಿಯಿರಿ

“ ಕಲ್ಪನೆ ಮತ್ತು ವಾಸ್ತವದ ನಡುವೆ ಯಾವತ್ತೂ ದೊಡ್ಡ ಅಂತರವಿರುತ್ತದೆ. ಹೊಸತನವನ್ನ ಹುಡುಕುವವರು ಸದಾ ಅಚ್ಚರಿಯನ್ನ ಸದಾ ಹೊರಗೆಡವುತ್ತಾರೆ ” ಅಂತ ಟ್ರಾವಿಸ್ ಪ್ರತಿಪಾದಿಸುತ್ತಾರೆ. ಇನ್ನು ಜನದಟ್ಟಣೆ ಹಾಗೂ ಸಂದಣಿಯನ್ನಷ್ಟೇ ಗಮನದಲ್ಲಿಟ್ಟುಕಂಡು ಶುರುಮಾಡುವ ಉದ್ಯಮಗಳು ಯಾವತ್ತಿಗೂ ಅಷ್ಟಾಗಿ ಫಲಕೊಡುವುದಿಲ್ಲ ಅಂತಾರೆ ಉಬರ್ ಕಂಪೆನಿಯ ಮಾಲಿಕ. ಒಬ್ಬ ಶ್ರೇಷ್ಠ ಉದ್ಯಮಿ ಸವಾಲುಗಳನ್ನ ಸುಲಭವಾಗಿ ಅರ್ಥಮಾಡಿಕೊಳ್ಳುತ್ತಾನೆ ಮತ್ತು ಅದನ್ನ ನಿಭಾಯಿಸುತ್ತಾನೆ ಅನ್ನೋದು ಇವರ ನಂಬಿಕೆ.

image


6. ಮ್ಯಾಜಿಕ್ ಮಾಡಿಬಿಡಿ

ತಂಡವನ್ನ ಆಯ್ಕೆಮಾಡಿಕೊಳ್ಳುವಾಗ ಯಾವತ್ತಿಗೂ ಎಚ್ಚರಿಕೆಯಿಂದರಬೇಕು. ಹೀಗಾದ್ರೆ ಭವಿಷ್ಯವನ್ನೂ ಅತ್ಯುತ್ತಮ ರೀತಿಯಲ್ಲಿ ಕಾಪಾಡಿಕೊಳ್ಳಬಹುದು ಅನ್ನೋದು ಟ್ರಾವಿಸ್ ಕಲಾನಿಕ್ ಅವರ ಅನುಭವದ ಮಾತು. ಜನರಿಂದ ನಾವು ಹಣ ಸಂಪಾದಿಸುವುದಕ್ಕಿಂತ ಅವರು ಹಣವನ್ನ ಉಳಿತಾಯ ಮಾಡುವಂತಾದರೆ ಅಥವಾ ಅವರ ಹಣಕ್ಕೆ ಬೆಲೆ ಸಿಗುವುದು ಅಂತಾದ್ರೆ ನೀವು ಜಾದೂ ಮಾಡಿದಂತೆ ಅನ್ನೋದು ಉಬರ್ ಕಂಪನಿ ಮಾಲಿಕರ ಅನುಭವದ ನುಡಿ.

7.ಉತ್ತಮ ಕಥೆಗಳನ್ನ ಹೇಳಿ

ನಿಮ್ಮ ಹೊಸ ಕಂಪನಿ ಅಥವಾ ಟೆಕ್ನಾಲಾಜಿಯತ್ತ ಜನರನ್ನ ಸೆಳೆಯಬೇಕಾದ್ರೆ ಗ್ರಾಹಕರು ಮೆಚ್ಚಿಕೊಳ್ಳಬಹುದಾದ ಕಥೆಗಳನ್ನ ಹೆಣೆಯಿರಿ. ಇದಕ್ಕೆ ಪೂರಕವಾದ ವಿಡೀಯೋ ತೋರಿಸಿದ ಟ್ರಾವಿಸ್ ಕಲಾನಿಕ್ ಪ್ರತೀ ದಿನವೂ ಗ್ರಾಹಕರು ಟ್ಯಾಕ್ಸಿಗಳಿಗಾಗಿ ಹುಡುಕಾಡುವ ರೀತಿಯನ್ನ ತೆರೆದಿಟ್ಟರು. ಇಂತಹ ಸಂದರ್ಭಗಳನ್ನ ಬಳಸಿಕೊಂಡೇ ಉಬರ್ ಗಟ್ಟಿಯಾಯ್ತು ಅಂತ ತಮ್ಮ ಸಕ್ಸಸ್ ರಹಸ್ಯವನ್ನ ತೆರೆದಿಟ್ರು. ಇವೆಲ್ಲವುದರ ಜೊತೆಗೆ ಯಾವುದೇ ಉದ್ಯಮಿ ಯಶಸ್ವಿಯಾಗಬೇಕು ಅಂದ್ರೆ ಅವನಿಗೆ ಚಾಂಪಿಯನ್ ಆಗುವ ಮನಸ್ಥಿ ಇರಬೇಕು. ಹಾಗೂ ತನ್ನ ಪ್ರಯತ್ನದೆಡೆಗೆ ಪೂರ್ಣ ಲಕ್ಷ್ಯ ನೀಡಿದ್ರೆ ಮಾತ್ರ ಯಶಸ್ಸನ್ನ ಸುಲಭವಾಗಿ ಸಾಧಿಸಬಹುದು ಅನ್ನೋದು ಇವರ ಪ್ರತಿಪಾದನೆ.

ಲೇಖಕರು – ದೀಪ್ತಿ ನಾಯರ್, ಹರ್ಷಿತ್ ಮಲ್ಯ

ಅನುವಾದ – ಬಿ ಆರ್ ಪಿ , ಉಜಿರೆ

Add to
Shares
1
Comments
Share This
Add to
Shares
1
Comments
Share
Report an issue
Authors

Related Tags