ಆವೃತ್ತಿಗಳು
Kannada

`ಇನ್ವೆಸ್ಟ್ ಕರ್ನಾಟಕ' - ಹೂಡಿಕೆದಾರರಿಗೆ ಸುವರ್ಣಾವಕಾಶ...

ಜೆಆರ್​ಎಂ

27th Jan 2016
Add to
Shares
4
Comments
Share This
Add to
Shares
4
Comments
Share

`ಇನ್ವೆಸ್ಟ್ ಕರ್ನಾಟಕ' ಹೆಸರೇ ಸೂಚಿಸುವಂತೆ ಹೂಡಿಕೆದಾರರ ಪಾಲಿಗೆ ಇದೊಂದು ಸುವರ್ಣಾವಕಾಶ. ಸಮಾನ ಮನಸ್ಕರನ್ನು ಒಂದೆಡೆ ಸೇರಿಸುವ ವೇದಿಕೆ. ಇನ್ವೆಸ್ಟ್ ಕರ್ನಾಟಕ ವೇದಿಕೆಯಲ್ಲಿ ಉದ್ಯಮ ಲೋಕದ ದಿಗ್ಗಜರು ಪರಸ್ಪರ ಭೇಟಿಯಾಗಿ ಹೊಸ ಹೊಸ ಪರಿಕಲ್ಪನೆಗಳನ್ನು ಹಂಚಿಕೊಂಡು ಅಭಿವೃದ್ಧಿಯ ಕನಸನ್ನು ನನಸಾಗಿಸುವತ್ತ ಕರ್ನಾಟಕ ಇಟ್ಟಿರುವ ದಿಟ್ಟ ಹೆಜ್ಜೆ ಇದು. ಹೌದು ಫೆಬ್ರವರಿ 3ರಿಂದ 5ರವರೆಗೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‍ನಲ್ಲಿ `ಇನ್ವೆಸ್ಟ್ ಕರ್ನಾಟಕ' ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅಭಿವೃದ್ಧಿಯ ಮೂಲ ಮಂತ್ರಗಳಾದ ತಂತ್ರಜ್ಞಾನ, ನಾವೀನ್ಯತೆ, ಉದ್ಯೋಗ ಸೃಷ್ಟಿ ಮತ್ತು ಸಂರಕ್ಷಣೆ `ಇನ್‍ವೆಸ್ಟ್ ಕರ್ನಾಟಕ'ದ ಪ್ರಮುಖ ಉದ್ದೇಶ. ಈ ಮೂಲಕ ರಾಜ್ಯವನ್ನು ಅಭಿವೃದ್ಧಿಯ ದಿಕ್ಕಿನಲ್ಲಿ ಮುನ್ನಡೆಸಲು ಕರ್ನಾಟಕ ಸರ್ಕಾರ ಪಣ ತೊಟ್ಟಿದೆ.

image


ಯಶಸ್ವಿ ಪಾಲುದಾರಿಕೆ ಮತ್ತು ನಿರಂತರ ಬೆಳವಣಿಗೆಗಳಿಂದಾಗಿ ಇನ್ವೆಸ್ಟ್ ಕರ್ನಾಟಕ ಕಳೆದ ಕೆಲ ವರ್ಷಗಳಿಂದ ಅಪಾರ ಮೆಚ್ಚುಗೆ ಗಳಿಸಿದ್ದು, ಹೂಡಿಕೆದಾರರ ಮನಗೆದ್ದಿದೆ. ಈ ಬಾರಿ ಕೂಡ ಕರ್ನಾಟಕದಲ್ಲಿ ಅವಕಾಶಗಳನ್ನು ಅನ್ವೇಷಿಸಲು ಉದ್ಯಮಿಗಳು ಮತ್ತು ಜಾಗತಿಕ ಸಂಸ್ಥೆಗಳಿಗೆ ಸದವಕಾಶ ದೊರೆಯುವುದರಲ್ಲಿ ಅನುಮಾನವೇ ಇಲ್ಲ.

image


ಸಂಪರ್ಕ, ಸಂಬಂಧ ಮತ್ತು ಸಹಯೋಗ...

ಮೂರು ದಿನಗಳ ಕಾಲ ನಡೆಯಲಿರುವ ಇನ್ವೆಸ್ಟ್ ಕರ್ನಾಟಕ ಕಾರ್ಯಕ್ರಮ ವಲಯ, ಪಾಲುದಾರಿಕೆ ಮತ್ತು ವಿಷಯವಸ್ತುಗಳನ್ನು ಒಳಗೊಂಡಿದೆ. ಈ ಎಲ್ಲ ವಿಷಯಗಳ ಮೇಲೆ ವಿಚಾರಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದ್ದು, ಅವು ದೇಶೀಯ ಮತ್ತು ಜಾಗತಿಕ ಮಟ್ಟದ ಹೂಡಿಕೆದಾರರನ್ನು ಆಕರ್ಷಿಸಲಿವೆ. ಅತಿ ಹೆಚ್ಚಿನ ಬೆಳವಣಿಗೆ ಸಾಮರ್ಥ್ಯದೊಂದಿಗೆ ಕ್ಷೇತ್ರಗಳ ಬಗ್ಗೆ ಇನ್ವೆಸ್ಟ್ ಕರ್ನಾಟಕದಲ್ಲಿ ಹೆಚ್ಚು ಗಮನ ಕೇಂದ್ರೀಕರಿಸಲಾಗುತ್ತದೆ.

* ಆಟೊಮೊಬೈಲ್, ಏರೋಸ್ಪೇಸ್, ಯಾಂತ್ರಿಕ ಸಲಕರಣೆಗಳು, ರಕ್ಷಣಾ ಮತ್ತು ಹೆವ್ಹಿ ಎಂಜಿನಿಯರಿಂಗ್ ವಿಭಾಗಕ್ಕೆ ಸಂಬಂಧಿಸಿದ ಉತ್ಪಾದನೆ

* ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್

* ಕೃಷಿ ಮತ್ತು ಆಹಾರ ಸಂಸ್ಕರಣೆ

* ಟೆಕ್ಸ್​ಟೈಲ್ಸ್ ಮತ್ತು ಸಿದ್ಧ ಉಡುಪು

* ಸ್ಮಾರ್ಟ್ ಸಿಟಿಗಳು ಮತ್ತು ನಗರ ಮೂಲಸೌಕರ್ಯ

* ಮೂಲಭೂತ ಸೌಕರ್ಯ

* ಇಂಧನ ಮತ್ತು ನವೀಕರಿಸಬಹುದಾದ ಇಂಧನ

* ಪ್ರವಾಸೋದ್ಯಮ

ಇನ್ವೆಸ್ಟ್ ಕರ್ನಾಟಕ ಕಾರ್ಯಕ್ರಮದ ಹೈಲೈಟ್...

* ವಲಯ ಸೆಶನ್ಸ್

* ಪಾಲುದಾರ ದೇಶ/ರಾಜ್ಯ ಸೆಶನ್ಸ್

* ಬಿ2ಬಿ, ಬಿ2ಜಿ ನೆಟ್‍ವರ್ಕಿಂಗ್ ಅವಕಾಶಗಳು

* ಎಕ್ಸ್​​ಪೋ

ಕರ್ನಾಟಕದಲ್ಲೇ ಯಾಕೆ ಹೂಡಿಕೆ ಮಾಡಬೇಕು ಅನ್ನೋ ಪ್ರಶ್ನೆ ಕೂಡ ಬಂಡವಾಳಗಾರರಲ್ಲಿ ಮೂಡಬಹುದು. ಆದ್ರೆ ನಿಜಕ್ಕೂ ಕರ್ನಾಟಕ ಹೂಡಿಕೆದಾರರ ಪಾಲಿಗೆ ಸ್ವರ್ಗ. ಅದ್ಯಾಕೆ ಅನ್ನೋದನ್ನು ನೋಡೋಣ ಬನ್ನಿ.

1. ಕರ್ನಾಟಕದ ಜಿಡಿಪಿ ಬೆಳವಣಿಗೆ ದರ ಶೇ.7ರಷ್ಟಿದೆ

2. ವಿದೇಶಿ ನೇರ ಬಂಡವಾಳ ಆಕರ್ಷಣೆಯಲ್ಲಿ ಕರ್ನಾಟಕ ಭಾರತದಲ್ಲೇ 4ನೇ ಸ್ಥಾನದಲ್ಲಿದೆ

3. ದೇಶದಲ್ಲಿ ಅತಿ ಹೆಚ್ಚು ಜೀವವೈವಿಧ್ಯತೆಯುಳ್ಳ ರಾಜ್ಯ

4. ರಫ್ತು ವ್ಯಾಪಾರಕ್ಕೆ ಮುಕ್ತ ಅವಕಾಶಗಳನ್ನು ಕಲ್ಪಿಸುತ್ತಿರುವ ಅತಿ ಹೆಚ್ಚು ಜಾಗತೀಕರಣಗೊಂಡಿರುವ ರಾಜ್ಯ

5. 4ನೇ ಅತಿ ದೊಡ್ಡ ಜಾಗತಿಕ ಟೆಕ್ ಕ್ಲಸ್ಟರ್

6. 4ನೇ ಅತಿ ದೊಡ್ಡ ನುರಿತ ಕಾರ್ಯಪಡೆ ಹೊಂದಿರುವ ರಾಜ್ಯ

7. 90,000 ಎಕರೆ ಭೂಮಿಯ ಲಭ್ಯತೆ

8. ಪಾಲಿಸಿಗಳನ್ನು ಪರಿಚಯಿಸಿದ ಪ್ರವರ್ತಕ

9. ದೇಶದಲ್ಲಿ ಅತ್ಯುತ್ತಮ ಕಾರ್ಮಿಕ ಸಂಬಂಧ ಹೊಂದಿರುವ ರಾಜ್ಯ

10. ಜೀವನ ನಡೆಸಲು ಮತ್ತು ಉದ್ಯೋಗ ನಿರ್ವಹಣೆಗೆ ಅತ್ಯಂತ ಉತ್ತಮ ಸ್ಥಳ ಬೆಂಗಳೂರು

ಪರಸ್ಪರ ಪಾಲುದಾರಿಕೆ ಮತ್ತು ಸಹಯೋಗದೊಂದಿಗೆ ಕರ್ನಾಟಕವನ್ನು ಅತಿ ದೊಡ್ಡ ಕೈಗಾರಿಕಾ ಸ್ನೇಹಿ ರಾಜ್ಯವನ್ನಾಗಿಸಲು ಉದ್ಯಮಿಗಳು ಮತ್ತು ಹೂಡಿಕೆದಾರರ ಸಾಥ್ ಬೇಕಿದೆ. ಎಲ್ಲರೂ ಒಂದಾಗಿ ಕರ್ನಾಟಕವನ್ನು ಮುನ್ನಡೆಸೋಣ ಅನ್ನೋದು ರಾಜ್ಯ ಸರ್ಕಾರದ ಆಹ್ವಾನ. ನೀವೂ ಬನ್ನಿ `ಇನ್ವೆಸ್ಟ್ ಕರ್ನಾಟಕ' ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ. ಇದಕ್ಕೆ ನೀವು ಮಾಡಬೇಕಾಗಿರುವುದು ಇಷ್ಟೆ, investkarnataka2016.inಗೆ ಲಾಗಿನ್ ಆಗಿ ರಜಿಸ್ಟರ್ ಮಾಡಿಸಿ.

Add to
Shares
4
Comments
Share This
Add to
Shares
4
Comments
Share
Report an issue
Authors

Related Tags