ಆವೃತ್ತಿಗಳು
Kannada

ನಾಳೆಯ ಮಾರುಕಟ್ಟೆಗೆ ಇಂದೇ ತಯಾರಿ ಯೋಜನೆ: ಭಾರತೀಯ ಸ್ಟಾರ್ಟ್ ಅಪ್ ಸಂಸ್ಥೆಗಳ ಸ್ನೇಹಿ ಕ್ಲೌಡ್ ಸೇವೆ ಒದಗಿಸುವತ್ತ ಬ್ಲೂ-ಮಿಕ್ಸ್

ಟೀಮ್​​​ ವೈ.ಎಸ್​​. ಕನ್ನಡ

YourStory Kannada
16th Dec 2015
Add to
Shares
6
Comments
Share This
Add to
Shares
6
Comments
Share

ಕ್ಲೌಡ್ ಇದ್ದಲ್ಲಿ ಇವೆಲ್ಲವೂ ಸಾಧ್ಯ:

ಇಂದಿನ ಪೈಪೋಟಿ ಯುಗದಲ್ಲಿ ಸ್ಟಾರ್ಟ್ ಅಪ್ ಸಂಸ್ಥೆಗಳಿಗೆ ಅತ್ಯಗತ್ಯವಾಗಿ ಬೇಕಿರುವ ಸೇವೆಗಳಲ್ಲಿ ಕ್ಲೌಡ್ ಸರ್ವೀಸ್ ಸಹ ಒಂದು. ಅತ್ಯುತ್ತಮ ಫಲಿತಾಂಶಗಳನ್ನು ಪಡೆಯಲು, ಉತ್ಪಾದನೆಯನ್ನು ಹೆಚ್ಚಿಸಲು ಹಾಗೂ ತ್ವರಿತಗತಿಯಲ್ಲಿ ತಂತ್ರಜ್ಞಾನದ ನೆರವು ಪಡೆಯುವ ಜೊತೆಗೆ ಸುಗಮವಾಗಿ ವ್ಯವಹರಿಸಲು ಕ್ಲೌಡ್ ತಂತ್ರಜ್ಞಾನ ಅತ್ಯಗತ್ಯ ಅನ್ನುವ ಸ್ಥಿತಿ ಬಂದಿದೆ. ಇಂದಿನ ಬದಲಾಗುತ್ತಿರುವ ಔದ್ಯಮಿಕ ವಿಶ್ವದಲ್ಲಿ ಕ್ಲೌಡ್ ಸರ್ವೀಸ್​​ಗಳ ಅನಿವಾರ್ಯತೆ ಹೆಚ್ಚಾಗತೊಡಗಿದೆ.

ಐಬಿಎಂನಿಂದ ಜಾರಿಯಾದ ಉತ್ಪನ್ನ ಬ್ಲೂಮಿಕ್ಸ್ ಅತ್ಯುತ್ತಮ ಕ್ಲೌಡ್ ಸೇವೆಗಳನ್ನು ಒದಗಿಸಲೆಂದೆ ಜಾರಿಗೊಳಿಸಲಾದ ಅಂಗಸಂಸ್ಥೆ. ಪ್ಲಾಟ್​​ಫಾರ್ಮ್ ಆ್ಯಸ್​​ ಎ ಸರ್ವೀಸ್ (ಪಿಎಎಎಸ್) ಅಥವಾ ಪಾಸ್ ಮೂಲಕ ಕ್ಲೌಡ್ ಸೇವೆಗಳ ಹೊಸ ಆಯಾಮಗಳನ್ನು ಆವಿಷ್ಕರಿಸಲಾಗಿದೆ. ಬ್ಲೂಮಿಕ್ಸ್​ನ ಕ್ಲೌಡ್ ಫೌಂಡ್ರಿಯ ಸೇವೆಗಳನ್ನು ಐಬಿಎಂನಿಂದ ನೇರವಾಗಿ ಒದಗಿಸಲಾಗುತ್ತಿದೆ, ಇದರ ಕೆಲವು ಸೇವೆಗಳನ್ನು ಮೂರನೆಯ ವರ್ತಕರಿಗೆ ನೀಡಲಾಗುತ್ತಿದೆ. ಭವಿಷ್ಯದಲ್ಲಿ ಕ್ಲೌಡ್ ಸೇವೆಗಳಿಗಿರುವ ಪ್ರಾಧಾನ್ಯತೆಯನ್ನು ಪರಿಗಣಿಸಿ ಬ್ಲೂಮಿಕ್ಸ್ ಸಂಸ್ಥೆಯನ್ನು ಸ್ಥಾಪಿಸಲಾಗಿದೆ.

ಫೆಬ್ರವರಿ 2014ರಲ್ಲಿ ಬ್ಲೂಮಿಕ್ಸ್​​ನ ಬೇಟಾ ವರ್ಷನ್ ಘೋಷಣೆ ಮಾಡಲಾಗಿತ್ತು. ಇದು ಅದೇ ವರ್ಷದ ಜೂನ್​​ನಲ್ಲಿ ಗ್ರಾಹಕರಿಗೆ ಲಭ್ಯವಾಗಿತ್ತು. ಲಾಂಚ್ ಮಾಡಿದ ಒಂದೇ ವರ್ಷದಲ್ಲಿ ಭಾರತದ ಪಾಸ್ (ಪಿಎಎಎಸ್) ಮಾರುಕಟ್ಟೆಯಲ್ಲಿ ಬ್ಲೂಮಿಕ್ಸ್​​ನ ಬೇಟಾ ವರ್ಷನ್ ಸಾಕಷ್ಟು ಜನಪ್ರಿಯತೆ ಪಡೆದಿದೆ.

image


ಸ್ಟಾರ್ಟ್ಅಪ್ ಹಾಗೂ ಡೆವಲಪರ್ಸ್ ಏಕೆ ಬ್ಲೂಮಿಕ್ಸ್ ಬಯಸುತ್ತಾರೆ?

ಅಭಿವೃದ್ಧಿಪಡಿಸುವವರಿಗೆ:

ಬ್ಲೂಮಿಕ್ಸ್ ಕ್ಲೌಡ್ ಪೌಂಡ್ರಿ ಮೂಲದ ಸರ್ವರ್ ವ್ಯವಸ್ಥೆ ಹೊಂದಿದೆ. ಅಭಿವೃದ್ಧಿ ಪಡಿಸುವವರಿಗೆ ಫ್ರೇಮ್​​ವರ್ಕ್ ಹಾಗೂ ಸೇವೆಗಳನ್ನು ನಿರ್ಧರಿಸಲು ಈ ಕ್ಲೌಡ್ ಸರ್ವೀಸ್ ವ್ಯವಸ್ಥೆ ಅನುಕೂಲಕಾರಿ. ಜೊತೆಗೆ ಬ್ಲೂಮಿಕ್ಸ್ ತನ್ನ ಡ್ಯಾಶ್​​ಬೋರ್ಡ್​ನಲ್ಲಿ ಅಪ್ಲಿಕೇಶನ್​ಗಳನ್ನು ಕ್ರಿಯೆಟ್ ಮಾಡಬಲ್ಲ, ವ್ಯೂವ್ ಮಾಡಬಲ್ಲ ಹಾಗೂ ಅಪ್ಲಿಕೇಶನ್​ಗಳನ್ನ ಮ್ಯಾನೇಜ್ ಮಾಡಬಲ್ಲ ಸೌಕರ್ಯ ಹಾಗೂ ಅಪ್ಲಿಕೇಶನ್ ರಿಸೋರ್ಸ್ ಯೂಸೇಜ್ ಸೌಲಭ್ಯವೂ ಇದೆ.

ಬ್ಲೂಮಿಕ್ಸ್ ಡೆವಲಪರ್ಸ್​ಗಳಿಗೆ ವಿಸ್ಕೃತ ರೇಂಜ್ ಕಲ್ಪಿಸಿಕೊಡುವ ಜೊತೆಗೆ ಸ್ವಂತಿಕೆಯ ಅವಕಾಶಗಳನ್ನು ನೀಡುತ್ತದೆ. ಇದು ಡೆವಲಪರ್ಸ್​ಗಳಿಗೆ ತಮ್ಮದೇ ಆದ ವಿನೂತನ ಅತ್ಯಾಧುನಿಕ ಟೂಲ್​ಗಳನ್ನು ಸೃಷ್ಟಿಸಿ ಸಂಗ್ರಹಿಸಿಟ್ಟುಕೊಳ್ಳಲು ನೆರವಾಗುತ್ತದೆ. ಬ್ಲೂಮಿಕ್ಸ್​ನ ಬಳಕೆದಾರರ ಸ್ನೇಹಿ ಸೌಕರ್ಯಗಳು ಡೆವಲಪರ್ಸ್​ಗಳ ಮೆಚ್ಚುಗೆ ಹಾಗೂ ಪ್ರೀತಿ ಗಳಿಸಿಕೊಂಡಿದೆ.

ಡೆವಲಪರ್ಸ್​ಗಳಿಗೆ ಸಂಬಂಧಿಸಿದ ಮೂಲಸೌಕರ್ಯ ಕೊರತೆಯನ್ನು ಸಾಧ್ಯವಾದಷ್ಟು ನಿವಾರಿಸುವತ್ತ ಬ್ಲೂಮಿಕ್ಸ್ ಶ್ರಮವಹಿಸುತ್ತಿದೆ. ಈ ಮೂಲಕ ತನ್ನ ವ್ಯಾವಹಾರಿಕ ಪ್ರೋಗ್ರಾಮ್ ಆ್ಯಪ್​​​ ಅನ್ನು ಅದು ಅಭಿವೃದ್ಧಿಪಡಿಸಿಕೊಂಡಿದೆ. ಇದರ ಇನ್ನಿತರೆ ಸೌಲಭ್ಯಗಳು ಹೀಗಿವೆ:

ಇದು ಮೂಲಸೌಕರ್ಯ ಅಥವಾ ಅಪ್ಲಿಕೇಶನ್​​ಗಳ ಪಡೆದುಕೊಳ್ಳುವ ಸಮಯದ ಮಿತಿಯನ್ನು ಕಡಿತಗೊಳಿಸುತ್ತದೆ.

ಸಂಗ್ರಹಣೆ, ಬ್ಯಾಂಡ್ವಿಡ್ತ್ ಹಾಗೂ ಪ್ರೋಸೆಸಿಂಗ್​ಗಳಿಗೆ ಸಂಬಂಧಿಸಿದಂತೆ ಸುಲಭ ಹಾಗೂ ಸರಳ ವಿಧಾನ ಸಾಮರ್ಥ್ಯ ಹೊಂದಿದೆ

ಆಟೋಮ್ಯಾಟಿಂಗ್ ಟೆಕ್ನಿಕಲ್ ಕೌಶಲ್ಯಗಳು (ಅಂದರೆ ಡೆವಲಪರ್ಸ್ ಮೂಲಸೌಕರ್ಯಕ್ಕಾಗಿ ಅಥವಾ ಬ್ಯಾಕ್ ಎಂಡ್ ಸಪೋರ್ಟ್​ಗಾಗಿ ಕಾಯುವ ಅಗತ್ಯವಿಲ್ಲ)

ಟಿಸಿಓ-ಅಂದರೆ ಟೋಟಲ್ ಕಾಸ್ಟ್ ಓನರ್​ಶಿಪ್​ ಅನ್ನು ಕಡಿಮೆ ಮಾಡುತ್ತದೆ

ಹೊಸ ವರ್ಕ್​ಲೋಡ್​​​ಗಳಾದ ಸೋಶಿಯಲ್, ಮೊಬೈಲ್ ಹಾಗೂ ಬಿಗ್ ಡಾಟಾಗಳನ್ನು ಸುಗಮವಾಗಿ ನಿರ್ವಹಿಸುತ್ತದೆ.

ಐಬಿಎಂನ ಮಹತ್ವಾಕಾಂಕ್ಷಿ ಹಾಗೂ ವಿಸ್ತಾರವಾದ ಈ ಬ್ಲೂಮಿಕ್ಸ್ ಯೋಜನೆ (75ಕ್ಕೂ ಹೆಚ್ಚು ದೇಶಗಳಲ್ಲಿ ಬಳಕೆಯಲ್ಲಿದೆ) ಡೆವಲಪರ್ಸ್​ಗಳಿಗೆ ಕೇವಲ 5 ನಿಮಿಷದೊಳಗೆ ಲಾಗಿನ್ ಅನುಮತಿ ನೀಡುತ್ತದೆ. ನಿರಂತರವಾಗಿ ಬದಲಾವಣೆ ಮಾಡಿಕೊಳ್ಳುವ ಹಾಗೂ ತಂತ್ರಜ್ಞಾನಿಕ ಬದಲಾವಣೆಗಳನ್ನು ಮಾಡಿಕೊಳ್ಳಲು ಇದು ಅನುವು ಮಾಡಿಕೊಡುತ್ತದೆ. ಸರಳವಾಗಿ ಹೇಳುವುದಾದರೇ, ಬ್ಲೂಮಿಕ್ಸ್ ವ್ಯಾವಹಾರಿಕ ಅಪ್ಲಿಕೇಶನ್ ಡೆವಲಪರ್ಸ್​ಗಳಿಗೆ ಹೊಸ ಹೊಸ ಆವಿಷ್ಕಾರ ಹಾಗೂ ಅತ್ಯುತ್ತಮ ಗುಣಮಟ್ಟದ ಅಪ್ಲಿಕೇಶನ್ ಸೃಷ್ಟಿಗೆ ಸಂಪೂರ್ಣವಾಗಿ ಸಹಕರಿಸುತ್ತದೆ.

ಸ್ಟಾರ್ಟ್ಅಪ್​​ಗಳಿಗೆ:

ಮಾರುಕಟ್ಟೆಗೆ ಕಾಲಿಡುವ ಹೊಸ ಹೊಸ ಸಂಸ್ಥೆಗಳಿಗೆ ಬಳಕೆಮಾಡಿಕೊಳ್ಳಲು ಅತ್ಯಂತ ಸರಳ ಹಾಗೂ ಸುಲಲಿತ ವ್ಯವಸ್ಥೆ ಹೊಂದಿರುವ ಕಾರಣ ಬ್ಲೂಮಿಕ್ಸ್ ಸ್ಟಾರ್ಟ್ಅಪ್ ಸ್ನೇಹಿ ಎನಿಸಿದೆ. ಪೈಪೋಟಿದಾರರ ಜೊತೆ ಆರೋಗ್ಯಕರವಾಗಿ ಸ್ಫರ್ಧಿಸಲು ಇದು ಕೆಲವು ಆಯ್ಕೆಗಳನ್ನು ನೀಡುತ್ತದೆ. ಒಂದೇ ಲಾಗಿನ್ ಮೂಲಕ ಎಲ್ಲಾ ಸೇವೆಗಳಿಗೆ ಪ್ರೋಸೆಸ್ ಮಾಡಬಲ್ಲ ಸೌಕರ್ಯ ಹಾಗೂ ಎಲ್ಲಾ ಟೂಲ್​​ಗಳನ್ನೂ ಅದೇ ಲಾಗಿನ್ ಮೂಲಕ ಬಳಸಬಹುದಾದ ಅನುಕೂಲ ಇದರಲ್ಲಿದೆ.

ಭಾರತೀಯ ಔದ್ಯಮಿಕ ಕ್ಷೇತ್ರಗಳಲ್ಲಿ ಸ್ಟಾರ್ಟ್ ಅಪ್ ಸಂಸ್ಥೆಗಳ ಮೆಚ್ಚುಗೆ ಪಡೆದುಕೊಂಡಿರುವ ಬ್ಲೂಮಿಕ್ಸ್, ಅಂತರಾಷ್ಟ್ರೀಯವಾಗಿ ಕೆಲವು ಜಾಗತಿಕ ಸಹಭಾಗಿತ್ವ ಸಂಸ್ಥೆಗಳನ್ನು ಹೊಂದಿದೆ.. ಈ ಮೂಲಕ ಜಾಗತಿಕವಾಗಿ ಬ್ಲೂಮಿಕ್ಸ್ ಕಾರ್ಯಾಚರಣೆ ಆರಂಭಿಸಿದೆ.

ಆಲ್ಗೋ ಎಂಜಿನ್, ವೈಂಡ್ ಟರ್ಬೈನ್ ಪೋರ್ಟ್​ಪೋಲಿಯೂ ಮ್ಯಾನೇಜ್​​ಮೆಂಟ್​ ಹಾಗೂ ಅಭಿವೃದ್ಧಿಪಡಿಸುವ ಸೆಲ್ಯೂಷನ್ ಹೊಂದಿದೆ. ಜೊತೆಗೆ ಎಂಜಿನ್ಸ್ ಟರ್ಬೈನ್ ಮೂಲಕ ಡಾಟಾ ಜನರೇಟ್ ಮಾಡುವ ತನ್ಮೂಲಕ ವಿಂಡ್ ಟರ್ಬೈನ್ ಮಾಲಿಕರು/ಆಪರೇಟರ್​​ಗಳು/ಹೂಡಿಕೆದಾರರ ಆಸಕ್ತಿಯನ್ನು ವೃದ್ಧಿಸುತ್ತದೆ.

ಬ್ಲೂಮ್ಯಾಕ್ಸ್​​ನ ಮೇಲೆ ಅಭಿವೃದ್ಧಿಪಡಿಸಲಾದ ಇನ್ನೊಂದು ಉತ್ಪನ್ನ ಐನಿಯೋಸಾಫ್ಟ್. ಇದು ಉತ್ಪಾದನಾ ಘಟಕಗಳಲ್ಲಿ ಟೆಂಪರೇಚರ್, ಹ್ಯುಮಿಡಿಟಿ, ಕಾರ್ಬನ್ ಡೈ ಆಕ್ಸೈಡ್ ಲೆವೆಲ್, ಶಬ್ಧದ ಹಂತಗಳು ಮುಂತಾದ ಅಂಶಗಳನ್ನು ನಿಯಂತ್ರಿಸಿ, ಪವರ್, ವಾಟರ್ ಹಾಗೂ ಎಲ್ಪಿಜಿಯಂತಹ ಉಪಯೋಗಿಸಬಹುದಾದ ಅಂಶಗಳನ್ನು ನಿರ್ವಹಿಸುತ್ತದೆ.

ಬ್ಲೂಮಿಕ್ಸ್ ಅನ್ನು ಕೆಲವು ಕಾಲೇಜ್​ಗಳಲ್ಲೂ ಅಳವಡಿಸಿಕೊಳ್ಳಲಾಗಿದೆ. ಮೀರತ್ ಇನ್ಸಿಟ್ಯೂಟ್​​ ಆಫ್ ಎಂಜಿನಿಯರಿಂಗ್ ಹಾಗೂ ಟೆಕ್ನಾಲಜಿ (ಎಂಐಇಟಿ) ಸಹ ಬ್ಲೂಮಿಕ್ಸ್ ಸೌಲಭ್ಯವನ್ನು ಅಳವಡಿಸಿಕೊಳ್ಳಲು ಮುಂದಾಗಿದೆ. ಐಬಿಎಂ ಸಹಯೋಗದೊಂದಿಗೆ ಎಂಐಇಟಿ ಖಾಸಗಿಯಾಗಿ ಕ್ಲೌಡ್ ಪ್ರಯೋಗಾಲಯ ವಾತಾವರಣ ನಿರ್ಮಿಸಿಕೊಂಡಿದೆ. ಐಬಿಎಂ ಸೇರಿದಂತೆ ಬ್ಲೂಮಿಕ್ಸ್ ಪ್ಲಾಟ್​ಫಾರಂ ಭಾರತದಲ್ಲಿ ಖಾಸಗಿ ತಂತ್ರಜ್ಞಾನದ ಸಂಸ್ಥೆಗಳಿಗೆ ತರಭೇತಿ ಹಾಗೂ ಕೌಶಲ್ಯಗಳನ್ನು ಒದಗಿಸಿಕೊಡುತ್ತದೆ. ಈ ಡೆವಲಪ್​ಮೆಂಟ್​​ ವಿದ್ಯಾರ್ಥಿಗಳಿಗೆ ಹೊಸ ಹೊಸ ಕ್ಲೌಡ್ ತಂತ್ರಜ್ಞಾನಗಳ ಬಗ್ಗೆ ಅರಿವು ಮೂಡಿಸುತ್ತದೆ.

ಇದರ ಮುಂದಿನ ಭವಿಷ್ಯ:

ತನ್ನ ಅತ್ಯಂತ ವಿಭಿನ್ನ ಸಾಮರ್ಥ್ಯ ಹಾಗೂ ಸೌಕರ್ಯಗಳಿಂದ ಬ್ಲೂಮಿಕ್ಸ್ ಈಗಾಗಲೇ ಸ್ಟಾರ್ಟ್ಅಪ್ ಹಾಗೂ ಡೆವಲಪರ್ಸ್​ಗಳಿಂದ ಅತ್ಯುತ್ತಮ ಪ್ರತಿಕ್ರಿಯೆ ಪಡೆದುಕೊಳ್ಳತೊಡಗಿದೆ. ಮಾಧ್ಯಮಗಳ ಮಾಹಿತಿಯಂತೆ ಬ್ಲೂಮಿಕ್ಸ್ ಪ್ರತೀ ತಿಂಗಳು 10 ಸಾವಿರಕ್ಕಿಂತ ಹೆಚ್ಚಿನ ಬಳಕೆದಾರರನ್ನು ಹೆಚ್ಚಿಸಿಕೊಳ್ಳತೊಡಗಿದೆ. ಅದರಲ್ಲಿ ಮೂರನೆಯ ಒಂದು ಭಾಗದಷ್ಟು ಗ್ರಾಹಕರ ಭಾರತೀಯರು..

ಕಾರ್ತಿಕ್ ಪದ್ಮನಾಬನ್ ಪ್ರಕಾರ, ಬ್ಲೂಮ್ಯಾಕ್ಸ್ ಬಳಸುವ ಭಾರತೀಯ ಹಾಗೂ ಈಶಾನ್ಯ ಏಷ್ಯಾ ರಾಷ್ಟ್ರಗಳ ಗ್ರಾಹಕರಲ್ಲಿ ಹೆಚ್ಚಿನವರು ಭಾರತೀಯ ಸ್ಟಾರ್ಟ್ ಅಪ್ ಸಂಸ್ಥೆಗಳ ಮಾಲಿಕರೇ ಆಗಿದ್ದಾರೆ. ಸ್ವತಂತ್ರ ಸಾಫ್ಟ್​​ವೇರ್​ ಡೆವಲಪರ್​​ಗಳು ಹೆಚ್ಚಿನ ಪ್ರಮಾಣದಲ್ಲಿ ಬ್ಲೂಮಿಕ್ಸ್ ಬಳಸುತ್ತಿದ್ದಾರೆ.

ಭಾರತದಲ್ಲಷ್ಟೇ ಅಲ್ಲದೇ ವಿಶ್ವದಾದ್ಯಂತ ಬ್ಲೂಮಿಕ್ಸ್ ಅತ್ಯುತ್ತಮ ಪ್ರತಿಕ್ರಿಯೆ ಪಡೆದುಕೊಳ್ಳತೊಡಗಿದೆ. ಬ್ಲೂಮಿಕ್ಸ್​ನ ಹೈಬ್ರಿಡ್ ಸೆಲ್ಯೂಷನ್ ಇದರ ಅತ್ಯಾಧುನಿಕ ಆವಿಷ್ಕಾರವಾಗಿದ್ದು, ಸ್ಟಾರ್ಟ್ ಅಪ್​​ಗಳಿಗೆ ಇನ್ನಷ್ಟು ಗುಣಾತ್ಮಕ ಸೇವೆಗಳನ್ನು ಒದಗಿಸುವತ್ತ ಪ್ರಯತ್ನಿಸುತ್ತಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಗುಣಮಟ್ಟದ ಸೇವೆಗಳನ್ನು ಒದಗಿಸಲಿದೆ ಅನ್ನುತ್ತಾರೆ ದಕ್ಷಿಣ ಏಷ್ಯಾ ರಾಷ್ಟ್ರಗಳು ಹಾಗೂ ಭಾರತದ ಐಬಿಎಂ ಇಂಡಿಯಾದ ಕ್ಲೌಡ್ ಸೇವೆಗಳ ನಿರ್ದೇಶಕರಾದ ವಿವೇಕ್ ಮಲ್ಹೋತ್ರಾ.


ಅನುವಾದಕರು: ವಿಶ್ವಾಸ್​​

Add to
Shares
6
Comments
Share This
Add to
Shares
6
Comments
Share
Report an issue
Authors

Related Tags