ಆವೃತ್ತಿಗಳು
Kannada

ಮಕ್ಕಳು ಸ್ಕೂಲ್ ನಲ್ಲಿದ್ರೂ ಮಾತನಾಡಿರಿ..!

ಟೀಮ್ ವೈ.ಎಸ್.

26th Sep 2015
Add to
Shares
1
Comments
Share This
Add to
Shares
1
Comments
Share

ನಾವು ಏನೇನೋ ಮಾಡಬೇಕು ಎಂದುಕೊಂಡಿರುತ್ತೇವೆ. ಬಹುತೇಕ ಮಂದಿ ಅದನ್ನು ಮಾಡದೆ ಕವಲು ದಾರಿಯಲ್ಲಿ ಹೆಜ್ಜೆ ಹಾಕಿ ಬದುಕಿನ ಹಾದಿಯನ್ನೇ ತಪ್ಪಿಬಿಡುತ್ತೇವೆ. ಆದರೆ, ಬಾಹುಲ್ ಚಂದ್ರ ತಾವು ಅಂದುಕೊಂಡಿದ್ದನ್ನು ಕೊನೆಗೂ ಸಾಧಿಸಿಬಿಟ್ಟಿದ್ದಾರೆ. ಬ್ರಿಟನ್, ಆಸ್ಟ್ರೇಲಿಯಾ, ಅಮೆರಿಕಾದಲ್ಲಿ 2,000ಕ್ಕೂ ಹೆಚ್ಚು ಗ್ರಾಹಕರೊಂದಿಗೆ 1,000ಕ್ಕೂ ಹೆಚ್ಚು ವೆಬ್ ವ್ಯವಸ್ಥೆ ಮತ್ತು ತನ್ನ ಸಂಸ್ಥೆ ಡಾಟ್ ಸ್ಕ್ವೇರ್ ನಲ್ಲಿ 2000ಕ್ಕೂ ಹೆಚ್ಚು ಅಪ್ಲಿಕೇಶನ್ ಗಳನ್ನು ಅಭಿವೃದ್ಧಿಪಡಿಸಿದ ಬಳಿಕವೂ ಅವರಿಗೆ ನೆಮ್ಮದಿ ಇರಲಿಲ್ಲ. ಕೊನೆಗೆ ತನ್ನದೇ ಆದ ಹೊಸ ಸಾಧನೆಯೊಂದನ್ನು ಮಾಡಿಯೇ ಬಿಟ್ಟಿದ್ದಾರೆ.

2014ರ ಕ್ರಿಸ್ಮಸ್. ಬಾಹುಲ್ ಮತ್ತು ಪ್ರಶಾಂತ್ ತಮ್ಮ ಕುಟುಂಬದ ಜೊತೆ ಜೈಪುರದಲ್ಲಿ ಕಾಲಕಳೆಯುತ್ತಿದ್ದರು. ಮಧ್ಯಾಹ್ನ ಊಟದ ವೇಳೆಗೆ ಬಾಹುಲ್ ಗೆ ಕರೆಯೊಂದು ಬಂದಿತ್ತು. ತನ್ನ ಮಗನ ಸಹಪಾಠಿಯೊಬ್ಬನ ಹುಟ್ಟುಹಬ್ಬದ ಪಾರ್ಟಿಗೆ ಅವನನ್ನು ಆಹ್ವಾನಿಸಲಾಗಿತ್ತು. ಆದರೆ, ಚಿಕ್ಕ ಮಗನನ್ನು ಪಾರ್ಟಿಗೆ ಕಳುಹಿಸುವುದು ಹೇಗೆ? ಚಿಂತೆಗೆ ಬಿದ್ದ ಅವರು ಪಾರ್ಟಿಗೆ ಕಳುಹಿಸಲು ಹಿಂದೇಟು ಹಾಕಿದ್ದರು.

ಸ್ಕೂಲ್ ಟಾಕ್ ಟೀಮ್

ಸ್ಕೂಲ್ ಟಾಕ್ ಟೀಮ್


ಮಕ್ಕಳ ಪೋಷಕರಿಗೆ ಒಬ್ಬರ ಜೊತೆ ಮತ್ತೊಬ್ಬರ ಸಂಪರ್ಕವಿರಲಿಲ್ಲ. ಇದರಿಂದ ನಿತ್ಯದ ಚಟುವಟಿಕೆಗಳಲ್ಲಿ ಸಮಸ್ಯೆ ಸೃಷ್ಟಿಯಾಗುತ್ತಿತ್ತು. ಅಷ್ಟೇ ಅಲ್ಲ, ಪೋಷಕರ ಮಧ್ಯೆ ಯಾವುದೇ ಸಂಪರ್ಕ ಜಾಲವಿರಲಿಲ್ಲ. ಶಾಲೆಗೆ ಸಂಬಂಧಿಸಿದ ಸಂವಹನ ನಿಯಮಿತವಾಗಿರುತ್ತಿತ್ತು. ಇಂತಹ ಅವ್ಯವಸ್ಥೆಯನ್ನು ಸರಿಪಡಿಸಲು ಏನಾದರೂ ಮಾಡಲೇಬೇಕು ಎಂದುಕೊಂಡಾಗ ಹುಟ್ಟಿಕೊಂಡಿದ್ದೇ ಸ್ಕೂಟಾಕ್ಸ್. ಈ ಆ್ಯಪ್ ಮೂಲಕ ಒಂದು ಶಾಲೆಯ ವಿದ್ಯಾರ್ಥಿಗಳ ಪೋಷಕರು ಪರಸ್ಪರ ಸಂಪರ್ಕ ಸಾಧಿಸಬಹುದಾಗಿದೆ.

ಬಾಹುಲ್ ಅವರಿಗೆ 7 ಮತ್ತು 3 ವರ್ಷ ವಯಸ್ಸಿನ ಇಬ್ಬರು ಮಕ್ಕಳಿದ್ದಾರೆ. ಅವರು, ಆ್ಯಪ್ ಸೃಷ್ಟಿಸುವ ಸಂಬಂಧ ಒಂದೆರಡು ಪೋಷಕರ ಜೊತೆ ಚರ್ಚೆ ನಡೆಸಿದ್ದರು. ತಮ್ಮ ಮಕ್ಕಳ ಅಭಿವೃದ್ಧಿ ಬಗ್ಗೆ ಕೆಲವು ತಾಯಂದಿರು ವಾಟ್ಸ್ಅಪ್ ಗ್ರೂಪ್ ನಲ್ಲಿ ಚರ್ಚೆ ನಡೆಸುತ್ತಿದ್ದರು. ಮಕ್ಕಳ ಬೆಳವಣಿಗೆಯಲ್ಲಿ ಅಪ್ಪಂದಿರ ಪಾತ್ರ ತುಂಬಾ ಕಡಿಮೆಯಾಗುತ್ತಿರುವುದೂ ಗಮನಕ್ಕೆ ಬಂತು. ಹೀಗಾಗಿ, ನಾವು ಪೋಷಕರು, ಶಿಕ್ಷಕರು ಎಲ್ಲರನ್ನೂ ಒಂದೇ ಸೂರಿನಡಿ ತರಲು ಚಿಂತನೆ ನಡೆಸಿದೆವು. ಪರಸ್ಪರರ ಮಧ್ಯೆ ಸಂವಹನ ಪ್ರಕ್ರಿಯೆಯನ್ನು ಸರಳೀಕರಿಸಿ, ಡೈರಿ ಸಂಸ್ಕೃತಿಗೆ ಅಂತ್ಯ ಹಾಡಲು ತೀರ್ಮಾನಿಸಿದ್ದೆವು ಎಂದು ಬಾಹುಲ್ ಹೇಳುತ್ತಾರೆ.

image


ಸ್ಕೂಟಾಕಿಂಗ್ ಹೇಗೆ..?

2015ರ ಜೂನ್ ನಲ್ಲಿ ಆರಂಭವಾದ ಸ್ಕೂಟಾಕ್ಸ್ ಒಂದು ವೃತ್ತಿಪರ ಸಮುದಾಯವಾಗಿದ್ದು, ಶಿಕ್ಷಕರು ಮತ್ತು ಪೋಷಕರನ್ನು ಬೆಸೆಯಲು ಅಪ್ಲಿಕೇಶನ್ ಮತ್ತು ಟೂಲ್ಸ್ (ವೆಬ್, ಆಂಡ್ರಾಯ್ಡ್ ಮತ್ತು ಐಓಎಸ್) ಹೊಂದಿದೆ. ಪೋಷಕರಿಗೆ ಬ್ಲಾಗ್ ಮತ್ತು ಪೋಸ್ಟ್ ಗಳ ಮೂಲಕ ಕಲಿಯುವ ಅವಕಾಶವನ್ನೂ ಒದಗಿಸಿರುವುದು ಈ ಅಪ್ಲಿಕೇಶನ್ ನ ವಿಶೇಷತೆ ಎಂದು ಸಂಸ್ಥಾಪಕರಾದ ಪ್ರಶಾಂತ್ ಗುಪ್ತಾ ಮತ್ತು ಬಾಹುಲ್ ಚಂದ್ರ ಹೇಳುತ್ತಾರೆ.

ಜೈಪುರದ ಸೈಂಟ್ ಕ್ಸೇವಿಯರ್ ಶಾಲೆ ಈ ಅಪ್ಲಿಕೇಶನ್ ಅಳವಡಿಸಿಕೊಂಡ ಮೊದಲ ಶಾಲೆಯಾಗಿದೆ. ಸಧ್ಯಕ್ಕೆ ರಾಜಸ್ಥಾನದಾದ್ಯಂತ 19 ಶಾಲೆಗಳಲ್ಲಿ ಇದನ್ನು ಬಳಸುತ್ತಿದ್ದಾರೆ. ಸುಮಾರು 6 ಸಾವಿರ ಮಂದಿ ಪಾವತಿ ಗ್ರಾಹಕರಿದ್ದಾರೆ. ಮುಂದಿನ ತಿಂಗಳಲ್ಲಿ ಈ ಸಂಖ್ಯೆಯನ್ನು 2.3 ಲಕ್ಷಕ್ಕೆ ಏರಿಸುವುದು ಸಂಸ್ಥೆಯ ಗುರಿಯಾಗಿದೆ.

ಸ್ಕೂಟಾಕ್ಸ್  ಸಂಸ್ಥಾಪಕರಾದ ಬಾಹಲ್ ಚಂದ್ರ ಮತ್ತು ಪ್ರಶಾಂತ್ ಗುಪ್ತಾ

ಸ್ಕೂಟಾಕ್ಸ್ ಸಂಸ್ಥಾಪಕರಾದ ಬಾಹಲ್ ಚಂದ್ರ ಮತ್ತು ಪ್ರಶಾಂತ್ ಗುಪ್ತಾ


1.5 ಕೋಟಿ ರೂಪಾಯಿ ಬಂಡವಾಳದೊಂದಿಗೆ ಸ್ಕೂಟಾಕ್ಸ್ ಆರಂಭವಾಯಿತು. ಇದು 8 ವಿವಿಧ ಮಾದರಿಗಳಲ್ಲಿ ಸೇವೆ ಒದಗಿಸುತ್ತಿದೆ. ಕಾರ್ಯಕ್ರಮ ಯೋಜನೆ, ಮಕ್ಕಳ ತಜ್ಞರು, ಸ್ಥಳೀಯ ಶಿಕ್ಷಕರು, ಮಕ್ಕಳಿಗೆ ಸುದ್ದಿ ಸೇರಿದಂತೆ ಚರ್ಚೆಗೂ ಅವಕಾಶ ಒದಗಿಸಿದೆ. ಸಧ್ಯಕ್ಕೆ ಈ ವೇದಿಕೆಯಲ್ಲಿ ಮಕ್ಕಳ ತಜ್ಞರಷ್ಟೇ ಲಭ್ಯರಿದ್ದಾರೆ. ಮುಂದಿನ ದಿನಗಳಲ್ಲಿ ಮಕ್ಕಳ ಆಪ್ತಸಲಹೆಗಾರರನ್ನೂ ಈ ವೇದಿಕೆಯಡಿ ತಂದು, ಪೋಷಕರಿಗೆ ಉಚಿತ ಸಲಹೆ ನೀಡುವಂತೆ ಮಾಡಲು ಸಂಸ್ಥೆ ಯೋಜನೆ ರೂಪಿಸಿದೆ.

ನಮ್ಮ ಜೊತೆ ಸಹಿ ಮಾಡುವ ಪ್ರತಿ ಶಾಲೆ ಕೂಡಾ ನಮ್ಮ ಬೆಳವಣಿಗೆಯ ಪಾಲುದಾರನಾಗಿದೆ. ಒಂದು ಶಾಲೆಯ ಒಂದು ತರಗತಿಯ ಜೊತೆ ಒಪ್ಪಂದ ಮಾಡಿಕೊಂಡರೂ, ನಾವು 70-80 ಪೋಷಕರನ್ನು ಪಡೆಯುತ್ತೇವೆ. ನಮ್ಮ ಬಳಕೆದಾರರ ಸಂಖ್ಯೆ ಪ್ರತಿಮೂರು ವಾರಕ್ಕೆ ಡಬಲ್ ಆಗುತ್ತಿದೆ. 5 ದಶಲಕ್ಷ ಸಕ್ರಿಯ ಗ್ರಾಹಕರನ್ನು ಹೊಂದುವುದು ನಮ್ಮ ಗುರಿಯಾಗಿದೆ ಎನ್ನುತ್ತಾರೆ ಬಾಹುಲ್.

ಸ್ಕೂಟಾಕ್ಸ್ಅನ್ನು ಬಳಸಬೇಕಾದರೆ ಚಂದಾದಾರರಾಗಲೇ ಬೇಕು. ಸಧ್ಯಕ್ಕೆ ಸ್ಕೂಟಾಕ್ಸ್ ಶಾಲೆಗಳ ಮುಖಾಂತರ ಪ್ರತಿ ವಿದ್ಯಾರ್ಥಿಗೆ ಪ್ರತಿವರ್ಷ 499 ರೂಪಾಯಿಗಳನ್ನು ಸಂಗ್ರಹಿಸುತ್ತಿದೆ. ವರ್ಷಾಂತ್ಯದ ವೇಳೆಗೆ ಏನಿಲ್ಲವೆಂದರೂ 5 ಕೋಟಿ ಆದಾಯ ಸಂಗ್ರಹಿಸುವ ಗುರಿ ಹೊಂದಿದ್ದೇವೆ ಎನ್ನುತ್ತಾರೆ ಬಾಹುಲ್.

ಮುಂದಿನ ಹಾದಿ...

ಸಧ್ಯಕ್ಕೆ ಸ್ಕೂಟಾಕ್ಸ್ ಸಂಸ್ಥೆಯಲ್ಲಿ ವೆಬ್ ಮತ್ತು ಕಂಟೆಂಟ್ ಡೆವಲಪರ್ಸ್, ದತ್ತಾಂಶ ಸಂಗ್ರಹ, ಪರಿಶೀಲನೆ ಸಾಮಾಜಿಕ ಜಾಲತಾಣ ತಜ್ಞರು, ಮಾರಾಟ ತಜ್ಞರು ಸೇರಿದಂತೆ ಸುಮಾರು 40 ಮಂದಿ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸಿಬ್ಬಂದಿ ಸಂಖ್ಯೆಯನ್ನು 60ಕ್ಕೆ ಏರಿಸಲು ಚಿಂತನೆ ನಡೆಸಲಾಗಿದೆ.

ಸುಮಾರು 40 ನಗರಗಳಲ್ಲಿ ತಮ್ಮ ಇರುವಿಕೆ ಸ್ಥಾಪಿಸಲು ಹೊರಟಿರುವ ಸ್ಕೂಟಾಕ್ಸ್ ಮುಂಬೈ, ಗುರಗಾಂವ್ ಮತ್ತು ದೆಹಲಿಗಳಲ್ಲಿ ವೇಗವಾಗಿ ಬೆಳೆಯುತ್ತಿದೆ.

ಮುಂದಿನ ಆರು ತಿಂಗಳುಗಳಲ್ಲಿ ಸ್ಕೂಟಾಕ್ಸ್, ಶಿಕ್ಷಕರು, ಪೋಷಕರು ಮತ್ತು ಶಾಲಾ ಪ್ರಾಂಶುಪಾಲರಿಗೆ ಜಾಗೃತಿ ಮೂಡಿಸುವ ಸೆಮಿನಾರ್ ಗಳನ್ನು ಆಯೋಜಿಸಲಿದೆ. ಈ ಮೂಲಕ ತಮ್ಮ ಉತ್ಪನ್ನವನ್ನು ಮಾರಾಟ ಮಾಡುವ ಯೋಜನೆಯೂ ಇದೆ. ಒಂದು ಶಾಲೆ ಸ್ಕೂಟಾಕ್ಸ್ ಅನ್ನು ಬಳಸಿದರೆ ಕನಿಷ್ಟ 3,500 ವಿದ್ಯಾರ್ಥಿಗಳು, 7 ಸಾವಿರ ಪೋಷಕರು ಮತ್ತು 200 ಶಾಲಾ ಶಿಕ್ಷಕರನ್ನು ಸ್ಕೂಟಾಕ್ಸ್ ವೇದಿಕೆಗೆ ತರಲಿದೆ.

ಸ್ಕೂಟಾಕ್ಸ್ ಈಗಾಗಲೇ ಹಲವು ಹೂಡಿಕೆದಾರರೊಂದಿಗೆ ಮಾತುಕತೆ ನಡೆಸುತ್ತಿದ್ದು, ಬಂಡವಾಳದ ನಿರೀಕ್ಷೆಯಲ್ಲಿದೆ.

ಕಲಿತ ಪಾಠಗಳೇನು?

ಸ್ಕೂಟಾಕ್ಸ್ ನ ಒಂದೇ ಮಾದರಿಯನ್ನು ಇಟ್ಟುಕೊಂಡು ನಾವು ಶಾಲೆಗಳ ಬಳಿಗೆ ಹೋಗಬೇಕಿತ್ತು. ಒಂದೇ ಬಾರಿಗೆ 8 ಮಾದರಿಗಳನ್ನು ಅಭಿವೃದ್ಧಿಪಡಿಸಿರುವುದರಿಂದ, ಗ್ರಾಹಕರು ಎಲ್ಲವನ್ನೂ ಬಳಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಪರೀಕ್ಷಿಸುವ ಗುಂಪುಗಳು ಹೆಚ್ಚು ಕೆಲಸಗಳನ್ನು ಮಾಡಬೇಕಾಗಿ ಬಂತು. ಹೀಗಾಗಿ, ನಮ್ಮ ಮಾದರಿಗಳನ್ನು ಪುನರ್ ಪರಿಷ್ಕರಿಸಿ, ಸರಳವಾಗಿ ಬಳಸುವಂತೆ ರೂಪಿಸಬೇಕಾಯಿತು. ಹೀಗೆ ಆರಂಭದಲ್ಲಿ ಸ್ಕೂಟಾಕ್ಸ್ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಯಿತು.

ಕ್ಷೇತ್ರ :

ಎಫ್ಐಸಿಸಿಐ ವರದಿ ಪ್ರಕಾರ ಭಾರತದಲ್ಲಿ ಕೆ-12 ಸ್ಕೂಲ್ ಸಿಸ್ಟಮ್ ಜಗತ್ತಿನಲ್ಲಿಯೇ ಅತಿದೊಡ್ಡ ವ್ಯವಸ್ಥೆಯಾಗಿದೆ. ಇದರಲ್ಲಿ ಸುಮಾರು 1.4 ದಶಲಕ್ಷ ಶಾಲೆಗಳಿದ್ದು ಸುಮಾರು 250 ದಶಲಕ್ಷ ವಿದ್ಯಾರ್ಥಿಗಳಿದ್ದಾರೆ. ಟಾಪ್ 20 ರಾಜ್ಯಗಳಲ್ಲಿನ ಖಾಸಗಿ ಶಾಲೆಗಳನ್ನು ಗಣನೆಗೆ ತೆಗೆದುಕೊಂಡರೆ ಸುಮರು 55% ವಿದ್ಯಾರ್ಥಿಗಳು ಸೆಕೆಂಡರಿ ಮತ್ತು ಹೈಯರ್ ಸೆಕೆಂಡರಿ ತರಗತಿಗಳಲ್ಲಿ ಜ್ಞಾನಾರ್ಜನೆ ಮಾಡುತ್ತಿದ್ದಾರೆ.

ಖಾಸಗಿ ಶಾಲೆಗಳನ್ನೇ ಹೆಚ್ಚು ಫೋಕಸ್ ಮಾಡುತ್ತಿರುವುದರಿಂದ, ಹಾಗೂ ಈ ವಲಯ 4% ಬೆಳವಣಿಗೆ ಸಾಧಿಸುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಭಾರೀ ಪ್ರಮಾಣದಲ್ಲಿ ಗ್ರಾಹಕರು ದೊರೆಯುವ ಸಾಧ್ಯತೆ ಇದೆ.

Add to
Shares
1
Comments
Share This
Add to
Shares
1
Comments
Share
Report an issue
Authors

Related Tags