ಆವೃತ್ತಿಗಳು
Kannada

"ತಿಥಿ"ಫೇಮಸ್ ಆಗಿದ್ದು ಹೇಗೆ ಗೊತ್ತಾ..? ಸೆಕ್ಯುರಿಟಿ ಗಾರ್ಡ್​ನ ಕಥೆಗೆ ಸಿಕ್ತು ನ್ಯೂ ಲುಕ್​...!

ಟೀಮ್​ ವೈ.ಎಸ್​. ಕನ್ನಡ

23rd Jun 2016
Add to
Shares
1
Comments
Share This
Add to
Shares
1
Comments
Share

ಇದು ಸತ್ತಾಗ ಮಾಡೋ ತಿಥಿ ಅಲ್ಲ. ಸಿನಿಮಾ ಜಗತ್ತು ಮೆಚ್ಚಿ ಕೊಂಡಾಡುತ್ತಿರೋ ತಿಥಿ. ಪ್ರೇಕ್ಷಕರು ಇಷ್ಟ ಪಟ್ಟಿರೋ ತಿಥಿ 11ದಿನ ಹಳ್ಳಿಯಲ್ಲಿ ನಡೆಯೋ ತಿಥಿ. ಒಂದೂವರೆ ವರ್ಷದ ಶ್ರಮ. ಈ ತಿಥಿಯ ವಿಶೇಷತೆ ಅಂದ್ರೆ ಸೆಕ್ಯೂರಿಟಿ ಗಾರ್ಡ್ ಬರೆದ ಕತೆ ಇದು. ಬ್ಯೂಸಿನೆಸ್ ಮ್ಯಾನ್ ಆಕ್ಷನ್ ಕಟ್ ಹೇಳಿದ ಚಿತ್ರ ಇಂದು ಜಗತ್​ ಪ್ರಸಿದ್ದವಾಗಿದೆ. ವಿಶೇಷ ಅಂದ್ರೆ ಇದು ನಮ್ಮ ಸೊಗಡಿನ ಚಿತ್ರ ನಮ್ಮ ಸಂಸ್ಕೃತಿಯ ಸಿನಿಮಾ. ಇಷ್ಟಕ್ಕೂ ತಿಥಿ ಇಷ್ಟು ಫೇಮಸ್ ಆಗಲು ಸಾಕಷ್ಟು ಸೀಕ್ರೆಟ್ ಇದೆ.

image


 ತಿಥಿ ಇಡೀ ವಿಶ್ವ ಸಿನಿಮಾರಂಗದಲ್ಲಿ ಹೊಸ ಟ್ರೆಂಡ್ ಸೆಟ್ ಮಾಡಿರೋ ಸಿನಿಮಾ ಕನ್ನಡ ಚಿತ್ರರಂಗ ಮಾತ್ರವಲ್ಲದೆ ಇಡೀ ವಿಶ್ವ ಸಿನಿಮಾರಂಗ ಮೆಚ್ಚಿರೋ ಚಿತ್ರ. ಯಾರು ಕೂಡ ಊಹಿಸಲಾರದ ಮಟ್ಟಕ್ಕೆ ಪ್ರದರ್ಶಗೊಳ್ತಿರೋ ಚಿತ್ರ ತಿಥಿ ಅಷ್ಟೇ ಅಲ್ಲದೆ 11 ಕ್ಕೂ ಹೆಚ್ಚು ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರದರ್ಶನಗೊಂಡು ಪ್ರಶಸ್ತಿಗಳನ್ನ ಬಾಚಿಕೊಳ್ತಿರೋ ಚಿತ್ರ. ತಿಥಿ ಸಿನಿಮಾ ಕಮರ್ಷಿಯಲ್ ಚಿತ್ರ ಅಲ್ಲ, ಯಾವ ದೊಡ್ಡ ಸ್ಟಾರ್ ಇಲ್ಲದ ಸಿನಿಮಾ, ಆದ್ರೂ ಕೂಡ ಜಗತ್ತಿನ ಸೂತ್ರವನ್ನ ತಲೆಕೆಳಗೆ ಮಾಡಿರೋ ಚಿತ್ರ.

ಇದನ್ನು ಓದಿ: ಹಿರೇಗೌಡರ ಮಂಡ್ಯ ಟು ಇಂಟರ್​ನ್ಯಾಷನಲ್​ ಸ್ಟೋರಿ

ಎಲ್ಲವೂ ಸಿಂಪಲ್ ಸಿನಿಮಾ ಸೂಪರ್

ಇನ್ನು ತಿಥಿ ಸಿನಿಮಾವನ್ನ ಯಾವುದೇ ಅದ್ಭುತ ಲೋಕೇಶನ್​​ಗಳಲ್ಲಿ ಸಿನಿಮಾವನ್ನ ಚಿತ್ರೀಕರಣ ಮಾಡಿಲ್ಲ. ತಿಥಿ ಚಿತ್ರದಲ್ಲಿ ಹಳ್ಳಿ ಜನರೇ ಪಾತ್ರಧಾರಿಗಳು ಮಂಡ್ಯದ ಹಳ್ಳಿ, ಸಿನಿಮಾ ಲೋಕೇಷನ್ಸ್. ಚಿತ್ರಕತೆ ತಯಾರು ಮಾಡಿ ಕಲಾವಿದರನ್ನ ಆಯ್ಕೆ ಮಾಡಲಾಯ್ತು. ಸಿನಿಮಾ ಕತೆ ಬರೆದಿರೋ ಹೀರೇಗೌಡರು ಒಂದು ಕಾಲಕ್ಕೆ ರಾಮ್ ರೆಡ್ಡಿ ಅವರ ಮನೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡ್ತಿದ್ರು. ಆ ಸಮಯದಲ್ಲಿ ಪರಿಚಿತರಾಗುವ ರಾಮ್ ರೆಡ್ಡಿ ಮತ್ತು ಹೀರೇಗೌಡ ಸ್ನೇಹಿತರಾಗುತ್ತಾರೆ. ನಂತ್ರ ಇಬ್ಬರು ಸೇರಿ ಸಿನಿಮಾ ಮಾಡಲು ನಿರ್ಧಾರ ಮಾಡ್ತಾರೆ. ಹೀರೇಗೌಡ ಅವ್ರದ್ದು ಮಂಡ್ಯ ಆಗಿರೋದ್ರಿಂದ ಅಲ್ಲಿಯ ಸೊಗಡಿನ ಕತೆಯನ್ನ ಸಿನಿಮಾ ಮಾಡಲು ಮುಂದಾಗ್ತಾರೆ. ಕಲಾವಿದರೆಲ್ಲಾ ಹಳ್ಳಿಯವರೇ. ಆದ್ದರಿಂದ ಚಿತ್ರೀಕರಣಕ್ಕಾಗಿ ಯಾರು ಬಿಡುವು ಮಾಡಿಕೊಳ್ಳಲು ತಯಾರಿರಲ್ಲ. ಅದಕ್ಕಾಗಿ ಚಿತ್ರತಂಡ ಅವರ ಬಿಡುವಿನ ಸಮಯದಲ್ಲಿ ಸಿನಿಮಾದ ಚಿತ್ರೀಕರಣ ಮಾಡಿ ಗೆದ್ದಿದೆ.

image


"ತಿಥಿ"ಗೆ ಹಾಲೆಂಡ್ ಕ್ಯಾಮೆರಾ ಮ್ಯಾನ್

ತಿಥಿ ಸಿನಿಮಾವನ್ನ ಅಪ್ಪಟ ನ್ಯಾಚುರಲ್ ಆಗಿ ಚಿತ್ರೀಕರಿಸಿದ್ದು ಹಾಲೆಂಡ್​ನ ಕ್ಯಾಮೆರಾಮ್ಯಾನ್ ಡೋರಾನ್ ಟೆಂಪಟ್. ಮೊದಲಿನಿಂದಲೇ ಫೋಟೋಗ್ರಾಫಿ ಬಗ್ಗೆ ಪರಿಚಯವಿದ್ದ ರಾಮ್ ರೆಡ್ಡಿಗೆ ಇಂಟರ್ ನ್ಯಾಷನಲ್ ಸಿನಿಮಾಟೊಗ್ರಫರ್​ಗಳ ಪರಿಚಯವಿದೆ. ಅದ್ರಂತೆ ಅವ್ರ ಸ್ನೇಹಿತನಾದ ಡೋರಾನ್ ಅವ್ರಿಗೆ ಸಿನಿಮಾ ಬಗ್ಗೆ ಇದ್ದ ಇಂಟ್ರೆಸ್ಟ್ ತಿಥಿ ಸಿನಿಮಾದಲ್ಲಿ ವರ್ಕ್ ಔಟ್ ಆಯ್ತು. ಇನ್ನು ಚಿತ್ರ ಮತ್ತಷ್ಟು ರಿಯಲಿಸ್ಟಿಕ್ ಆಗಿ ಬರಲಿ ಅನ್ನೋ ಉದ್ದೇಶದಿಂದ ಚಿತ್ರದಲ್ಲಿ ಡಬ್ಬಿಂಗ್ ಮಾಡಿಲ್ಲ. ದೃಶ್ಯವನ್ನ ಚಿತ್ರೀಕರಣ ಮಾಡೋವಾಗ್ಲೆ ಲೈವ್ ಸೌಂಡ್ ರೆರ್ಕಾಡಿಂಗ್ ಮಾಡಿರೋದು ವಿಶೇಷ. ಇಷ್ಟೇ ಅಲ್ಲದ ಹೀಗೆ ತಿಥಿ ಸಿನಿಮಾದಲ್ಲಿ ಮತ್ತಷ್ಟು ವಿಶೇಷ ಹಾಗೂ ಆಶ್ಚರ್ಯವೆನ್ನಿಸೋ ಸಂಗತಿಗಳು ಸಾಕಷ್ಟಿವೆ. ಇತ್ತೀಚಿಗಷ್ಟೇ ಚೈನಾದಲ್ಲಿ ನಡೆದ ಶಾಂಗೈ ಇಂಟರ್ ನ್ಯಾಷನಲ್ ಸಿನಿಮೋತ್ಸವದಲ್ಲೂ ಕೂಡ ತಿಥಿ ಎರಡು ಪ್ರಶಸ್ತಿಗಳನ್ನ ಪಡೆದುಕೊಂಡಿದೆ. ತಿಥಿ ಪಡೆದುಕೊಳ್ತಿರೋ ಪ್ರಸಿದ್ದಿಯನ್ನ ನೋಡಿದ್ರೆ ಈ ಬಾರಿಯ ಆಸ್ಕರ್ ನಲ್ಲಿ ಕನ್ನಡದ ತಿಥಿ ಸಿನಿಮಾ ಪ್ರಶಸ್ತಿ ಪಡೆಯಲಿದೆ ಅನ್ನೋ ಮಾತುಗಳು ಕೇಳಿ ಬರ್ತಿವೆ. ಹಾಗೇನಾದ್ರು ಆದ್ರೆ ಪ್ರತಿಯೊಬ್ಬ ಕನ್ನಡಿಗರಿಗೆ ಇದು ಹೆಮ್ಮೆಯ ವಿಚಾರ.

ಇದನ್ನು ಓದಿ:

1. ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಕ್ರಾಂತಿ- ಅವಮಾನ ಮಾಡಿದ ವಿದೇಶಿಗನಿಗೆ ತಕ್ಕ ಉತ್ತರ

2. ಹೂವಿನ ಹಾದಿಯಲ್ಲಿ ಸಾಧನೆಯ ಕಂಪು..!

3. ಟ್ರೇಲರ್​ನಲ್ಲೇ ಅಡಗಿದೆ ಎಲ್ಲಾ ರಹಸ್ಯಗಳು..

Add to
Shares
1
Comments
Share This
Add to
Shares
1
Comments
Share
Report an issue
Authors

Related Tags