ಆವೃತ್ತಿಗಳು
Kannada

ಸರಕು ಸಾಗಣೆಗೆ ಸರಳ ಪರಿಹಾರ-ಗ್ರಾಹಕರ ಮನಗೆದ್ದ `ಸೆಂಡ್‍ಇಟ್ ಡಾಟ್ ಇನ್'

ಟೀಮ್​​ ವೈ.ಎಸ್​. ಕನ್ನಡ

8th Dec 2015
Add to
Shares
11
Comments
Share This
Add to
Shares
11
Comments
Share

`ಸೆಂಡ್‍ಇಟ್ ಡಾಟ್ ಇನ್' - ಆನ್‍ಲೈನ್ ಲಾಜಿಸ್ಟಿಕ್ಸ್ ಮಾರುಕಟ್ಟೆ ಸ್ಥಳ. ಇತ್ತೀಚಿನ ದಿನಗಳಲ್ಲಿ ಉದ್ಯಮಿಗಳು ಲಾಜಿಸ್ಟಿಕ್ಸ್ ವಲಯದತ್ತ ಆಕರ್ಷಿತರಾಗುತ್ತಿದ್ದಾರೆ. ವಾಹನಗಳ ಸಂಖ್ಯೆ ಹೆಚ್ಚಿಸುವ ಮೂಲಕ `ಸೆಂಡ್ ಇಟ್ ಡಾಟ್ ಇನ್' ಕೂಡ ಲಾಜಿಸ್ಟಿಕ್ಸ್ ಸಮಸ್ಯೆಗಳನ್ನು ಗಮನಹರಿಸುವತ್ತ ಹೆಚ್ಚು ಗಮನಹರಿಸಿದೆ. ನೀವೇನಾದ್ರೂ ರೋಡ್ ಟ್ರಿಪ್‍ಗೆ ಹೋಗಿದ್ರೆ ಹೆದ್ದಾರಿಯಲ್ಲಿ ಟ್ರಕ್‍ಗಳ ದೊಡ್ಡ ಪಡೆಯನ್ನು ನೋಡದೇ ಇದ್ರೆ ಪ್ರವಾಸ ಪೂರ್ಣವಾಗುವುದೇ ಇಲ್ಲ. ಒಮ್ಮೆ ಬೈಕ್ ಸವಾರಿ ಮಾಡುತ್ತಾ ಬೆಂಗಳೂರಿನಿಂದ ದಾವಣಗೆರೆಗೆ ಹೊರಟಿದ್ದ ನವೀನ್ ಬಗ್ರೇಚಾ ಮತ್ತು ಪುನೀತ್.ಬಿ. ಅವರಿಗೂ ಇಂಥದ್ದೇ ದೃಶ್ಯ ಕಣ್ಣಿಗೆ ಬಿದ್ದಿತ್ತು. ಲಾರಿಗಳ ಬೇಡಿಕೆಗೆ ತಂತ್ರಜ್ಞಾನದ ಮೂಲಕ ಪರಿಹಾರವೊಂದನ್ನು ಕಂಡುಕೊಳ್ಳಬೇಕೆಂಬ ಆಲೋಚನೆ ನವೀನ್ ಹಾಗೂ ಪುನೀತ್‍ಗೆ ಬಂದಿತ್ತು. ಸ್ನೇಹಿತರಾದ ಪಂಕಜ್ ಸಿಸೋಡಿಯಾ, ದರ್ಪಣ್ ಜೈನ್ ಹಾಗೂ ಗೌರವ್ ಕೂಡ ಇವರಿಗೆ ಸಾಥ್ ನೀಡಿದ್ರು.

ಕನೆಕ್ಟರ್‍ನಂತೆ ಕಾರ್ಯನಿರ್ವಹಣೆ...

ಸದ್ಯದ ಸ್ಥಿತಿ ಹೇಗಿದೆ ಅಂದ್ರೆ ಬಳಕೆದಾರರು ನಿರ್ವಾಹಕರ ಜೊತೆ ವ್ಯಕ್ತಿಗತವಾಗಿ ಸಂವಹನ ನಡೆಸಬೇಕು. ಇದ್ರಿಂದ ಬಳಕೆದಾರರಿಗೆ ಉತ್ತಮ ಅನುಭವ, ಬೆಲೆ ಹಾಗೂ ನಂಬಿಕಸ್ಥ ಸೇವೆ ದೊರೆಯಲಿದೆ. ಇನ್ನೊಂದೆಡೆ ನಿರ್ವಾಹಕರಿಗೆ ಆರ್ಡರ್ ಪಡೆದುಕೊಳ್ಳಲು ಸಾಮಾನ್ಯ ಸಂವಹನ ವ್ಯವಸ್ಥೆ ಇರುವುದಿಲ್ಲ. ವಹಿವಾಟು ಪ್ರತ್ಯೇಕವಾಗಿ ನಡೆದರೆ ಅಲ್ಲಿ ಸಂಪನ್ಮೂಲಗಳ ದಕ್ಷತೆಯನ್ನು ಉತ್ತಮಗೊಳಿಸುವಿಕೆ ಮತ್ತು ನಿರ್ವಾಹಕರ ಸಮಯವನ್ನು ಉಳಿಸಲು ಅವಕಾಶ ಇರುವುದಿಲ್ಲ ಅನ್ನೋ ಅಭಿಪ್ರಾಯ ದರ್ಪಣ್ ಜೈನ್ ಅವರದ್ದು. ಸಾರಿಗೆ ನಿರ್ವಾಹಕರ ಜೊತೆ ಸಂವಹನ ನಡೆಸಲು ಬಳಕೆದಾರರಿಗೆ ಸರ್ವೇಸಾಮಾನ್ಯ ವೇದಿಕೆ ಇಲ್ಲ. ಹಾಗಾಗಿ ಬಳಕೆದಾರರು ಮತ್ತು ಸಾರಿಗೆ ನಿರ್ವಾಹಕರ ನಡುವೆ ಸೇತುವೆಯಂತೆ `ಸೆಂಡ್‍ಇಟ್ ಡಾಟ್ ಇನ್' ಕಾರ್ಯನಿರ್ವಹಿಸುತ್ತಿದೆ.

image


ನಗರದೊಳಗೆ ಹಾಗೂ ನಗರಗಳ ನಡುವಣ ಸರಕು ಸಾಗಣೆಗೆ `ಸೆಂಡ್‍ಇಟ್ ಡಾಟ್ ಇನ್' ವ್ಯವಸ್ಥೆಗಳನ್ನು ಕಲ್ಪಿಸುತ್ತಿದೆ. ಇದಕ್ಕಾಗಿಯೇ ಬೇಡಿಕೆ ಆಧಾರದ ಮೇಲೆ ಕೆಲಸ ಮಾಡುವ ವಾಹನಗಳು `ಸೆಂಡ್‍ಇಟ್ ಡಾಟ್ ಇನ್'ನಲ್ಲಿವೆ. ಸರಕು ಸಾಗಣೆಯ ಅಗತ್ಯವಿದ್ದಲ್ಲಿ ಬಳಕೆದಾರರು `ಸೆಂಡ್‍ಇಟ್ ಡಾಟ್ ಇನ್' ವೇದಿಕೆಯಲ್ಲಿ ವಾಹನ ಬುಕ್ಕಿಂಗ್ ಮಾಡಬೇಕು. ಸಾಮೀಪ್ಯತೆಯ ಆಧಾರದ ಮೇಲೆ ವಾಹನಗಳನ್ನು ಬಳಕೆದಾರರಿಗೆ ಒದಗಿಸಲಾಗುತ್ತದೆ. ಈ ವೇದಿಕೆಯಲ್ಲಿ ರಿಯಲ್ ಟೈಮ್ ಟ್ರ್ಯಾಕಿಂಗ್, ಸ್ಥಿತಿ ನವೀಕರಣ, ಪ್ರೀಪೇಯ್ಡ್​​​ ಬುಕ್ಕಿಂಗ್ ಸೌಲಭ್ಯ ಮತ್ತು ಪ್ರಯಾಣ ದಾಖಲೆಗಳನ್ನಿಡಲು ಅವಕಾಶವಿದೆ. ಸರಿಯಾದ ಸಮಯಕ್ಕೆ, ಸರಕನ್ನು ನಿರ್ಧಿಷ್ಟ ಸ್ಥಳಕ್ಕೆ ತಲುಪಿಸುವ ಜವಾಬ್ಧಾರಿ `ಸೆಂಡ್‍ಇಟ್ ಡಾಟ್ ಇನ್'ನದ್ದು. ಬಳಕೆದಾರರ ಸರಕಿನ ಸುರಕ್ಷತೆ ಹೊಣೆ ಹೊತ್ತಿರುವ ಸಂಸ್ಥೆ, ಅವರ ನಂಬಿಕೆ ಗಳಿಸಿದೆ. ವಿಶ್ವಾಸಾರ್ಹತೆ ಬಗ್ಗೆ ಇಲ್ಲಿ ಯಾವುದೇ ಸಮಸ್ಯೆಗಳಿಲ್ಲ. ವಹಿವಾಟುಗಳನ್ನು ಸರಿಯಾಗಿ ಪ್ಲಾನ್ ಮಾಡಿಕೊಳ್ಳಲು ಸಹ ನಿರ್ವಾಹಕರಿಗೆ ನೆರವು ನೀಡಲಾಗುತ್ತಿದೆ. ಆರ್ಡರ್‍ಗಳ ಬಗ್ಗೆ ಸರಿಯಾದ ಮಾಹಿತಿಯಿಲ್ಲದೆ ವಾಹನ ಖಾಲಿಯಾಗಿ ಓಡಾಡುವಂತಾಗಬಾರದು ಎಂಬ ಕಾರಣಕ್ಕೆ ಎಲ್ಲಾ ಜಾಗರೂಕತೆ ವಹಿಸಲಾಗಿದೆ ಎನ್ನುತ್ತಾರೆ ದರ್ಪಣ್.

ಪ್ರಸ್ತುತ ಸನ್ನಿವೇಶ...

ಸದ್ಯ ಬೆಂಗಳೂರು ಮತ್ತು ಪುಣೆಯಲ್ಲಿ ಸೆಂಡ್‍ಇಟ್ ಕಾರ್ಯನಿರ್ವಹಿಸ್ತಾ ಇದೆ. ಈ ವರ್ಷಾಂತ್ಯದಲ್ಲಿ ಇನ್ನೂ ಕೆಲವು ನಗರಗಳಲ್ಲಿ ಸೇವೆಯನ್ನು ವಿಸ್ತರಿಸಲು ಸೆಂಡ್‍ಇಟ್ ಯೋಜನೆ ಹಾಕಿಕೊಂಡಿದೆ. ವೆಬ್‍ಸೈಟ್ ಮೂಲಕ, ಆ್ಯಂಡ್ರಾಯ್ಡ್ ಆ್ಯಪ್ ಮೂಲಕ ಅಥವಾ ಫೋನ್ ಕರೆ ಮಾಡಿ ಗ್ರಾಹಕರು ಆರ್ಡರ್ ಬುಕ್ ಮಾಡಬಹುದು. ಸರಿಯಾದ ನಿರ್ವಹಣೆ ಮತ್ತು ವಾಹನಗಳ ಸಂಚಾರದ ಬಗ್ಗೆ ಕ್ಷಣಕ್ಷಣದ ಮಾಹಿತಿ ಪಡೆಯಲು ಎಲ್ಲಾ ನಿರ್ವಾಹಕರು ಮೊಬೈಲ್ ಕ್ಲೈಂಟನ್ನು ಇನ್‍ಸ್ಟಾಲ್ ಮಾಡಿಕೊಂಡಿದ್ದಾರೆ.

ಆರಂಭದಲ್ಲಿ ಸೆಂಡ್‍ಇಟ್‍ಗೆ ಪ್ರತಿದಿನ ಕೇವಲ 4-5 ಆರ್ಡರ್‍ಗಳು ಸಿಗುತ್ತಿದ್ವು. ಈಗ ದಿನವೊಂದಕ್ಕೆ 40-50 ವಹಿವಾಟುಗಳು ನಡೆಯುತ್ತಿದ್ದು, ಒಂದು ಟಿಕೆಟ್‍ನ ಗಾತ್ರ ಕನಿಷ್ಠ ಅಂದ್ರೂ 400 ರೂಪಾಯಿ. ವಾಹನಗಳ ಸಂಖ್ಯೆ ಹೆಚ್ಚಳ, ಮಾರುಕಟ್ಟೆ ವಿಸ್ತಾರ ಮತ್ತು ತಂತ್ರಜ್ಞಾನ ಸುಧಾರಣೆಗಾಗಿ ಇನ್ನಷ್ಟು ಬಂಡವಾಳ ಹೂಡಲು ಸೆಂಡ್‍ಇಟ್ ತಂಡ ಸಜ್ಜಾಗಿದೆ. ಸಾರಿಗೆ, ದಾಸ್ತಾನು, ಸರಕು ಸಾಗಣೆ ಹೀಗೆ ಸಂಪೂರ್ಣ ಲಾಜಿಸ್ಟಿಕ್ಸ್ ಮಾರುಕಟ್ಟೆ ಬಗ್ಗೆ ಕಣ್ಣಿಟ್ಟಿದ್ರೆ, ಕೇವಲ ಸಾರಿಗೆ ಅದರಲ್ಲಿ ಶೇ.61ರಷ್ಟು ಪಾಲನ್ನು ಹೊಂದಿದೆ. ಯಾಕಂದ್ರೆ ಬಹುತೇಕ ಎಲ್ಲ ಕೈಗಾರಿಕೆಗಳು ಇದಕ್ಕಾಗಿಯೇ ಅವರ ಲಾಜಿಸ್ಟಿಕ್ಸ್ ಬಜೆಟ್‍ನಲ್ಲಿ ಅರ್ಧದಷ್ಟನ್ನು ವ್ಯಯಿಸುತ್ತಾರೆ ಅನ್ನೋದು ದರ್ಪಣ್ ಅವರ ಅಭಿಪ್ರಾಯ. ಮೆಟ್ರೋಪಾಲಿಟನ್ ಸಮೂಹಗಳೇ ಸೆಂಡ್‍ಇಟ್‍ನ ಪ್ರಮುಖ ಟಾರ್ಗೆಟ್. 2019ರ ವೇಳೆಗೆ ಈ ಇಂಡಸ್ಟ್ರಿಯ ಮೌಲ್ಯ 175 ಬಿಲಿಯನ್ ಡಾಲರ್ ಆಗಲಿದೆ ಅಂತಾ ಅಂದಾಜಿಸಲಾಗಿದೆ. ಹಾಗಾಗಿ ನಿರ್ವಾಹಕರ ಸಾಮರ್ಥ್ಯ ಹೆಚ್ಚಿಸಲು ಚುಕ್ಕೆಗಳ ಮಧ್ಯೆ ಸಂಪರ್ಕ ಕಲ್ಪಿಸಬೇಕು ಅಂತಾ ದರ್ಪಣ್ ಮಾರ್ಮಿಕವಾಗಿ ನುಡಿದಿದ್ದಾರೆ.

ಮಾರುಕಟ್ಟೆ...

ಲಾಜಿಸ್ಟಿಕ್ಸ್ ಅನ್ನು ಯಾವುದೇ ಉದ್ಯಮದ ಛಿದ್ರಗೊಂಡ ಹಾಗೂ ಅಸಂಘಟಿತ ಕಾರ್ಯ ಎಂದೇ ಬಿಂಬಿಸಲಾಗುತ್ತದೆ. ಇ-ಕಾಮರ್ಸ್ ಉದ್ಯಮಗಳ ಹೆಚ್ಚಳ, ಅಧಿಕವಾಗುತ್ತಿರುವ ಕಂಪನಿಗಳ ಬೇಡಿಕೆಯಿಂದಾಗಿ ಉದ್ಯಮ ಹಾಗೂ ಗ್ರಾಹಕರು ವಿತರಣೆ ಮತ್ತು ಪೂರೈಕೆ ಸರಣಿ ವ್ಯವಸ್ಥಿತವಾಗಿ, ಪಾರದರ್ಶಕವಾಗಿರಬೇಕೆಂದು ಬಯಸುತ್ತಾರೆ. ಭಾರತದಲ್ಲಿ ಲಾಜಿಸ್ಟಿಕ್ಸ್ ತಂತ್ರಜ್ಞಾನ ಮಾರುಕಟ್ಟೆಯ ಗಾತ್ರ ಅಂದಾಜು 2 ಬಿಲಿಯನ್ ಡಾಲರ್‍ನಷ್ಟಿದೆ. ಇದು ಆಗ್ನೇಯ ಏಷ್ಯಾ ಹಾಗೂ ಮಧ್ಯ ಪ್ರಾಚ್ಯ ರಾಷ್ಟ್ರಗಳಿಗಿಂತಲೂ ಅಧಿಕ. `ಒರಾಯನ್' ಸಾಫ್ಟ್​​​ವೇರ್, ಆನ್‍ಫ್ಲೀಟ್, ಬ್ರಿಂಗ್, ಇನ್‍ಫೋರ್, ಜೆಡಿಎ ಸಾಫ್ಟ್​​​ವೇರ್ ಮತ್ತು ಎಲಮೆಂಟಮ್‍ನಂತಹ ಕಂಪನಿಗಳು ಜಾಗತಿಕವಾಗಿ ಗುರುತಿಸಿಕೊಂಡಿವೆ.

ಲೇಖಕರು: ಸಿಂಧೂ ಕಶ್ಯಪ್​​

ಅನುವಾದಕರು: ಭಾರತಿ ಭಟ್​​​​

Add to
Shares
11
Comments
Share This
Add to
Shares
11
Comments
Share
Report an issue
Authors

Related Tags