ಆವೃತ್ತಿಗಳು
Kannada

ಕಲಿಕೆಗೆ ಹೊಸ ಆಯಾಮ ಕೊಟ್ಟ “ಬೈಚಿತ್ರ ಪಾಠ್ ಶಾಲಾ”

ಟೀಮ್ ವೈ.ಎಸ್.

2nd Oct 2015
Add to
Shares
6
Comments
Share This
Add to
Shares
6
Comments
Share

“ಕಲಿಸುವುದನ್ನು ಕೃತಿಯ ಮೂಲಕ ಮಾಡಿ. ಯಾವುದು ಕೃತಿಯಿಂದ ಸಾಧ್ಯವಾಗುವುದಿಲ್ಲವೋ ಆಗ ಶಬ್ದಗಳ ಮೊರೆ ಹೋಗಿ” ಎಂಬ ರೌಸ್ಸಿಯಾನ ತತ್ವವನ್ನು ಒಳಗೊಂಡ ಹೊಸ ಪದ್ಧತಿಯನ್ನು ಗಾಂಧೀಜಿ ಪ್ರಸ್ತಾಪಿಸಿದ್ದರು. ಈಗಿಲ್ಲಿ ಗಾಂಧೀಜಿಯವರ ಪ್ರಸ್ತಾಪ ಮಾಡಲು ಕಾರಣ, ಸ್ವಲ್ಪ ಇಂತಹುದೇ ಒಂದು ಪರಿಕಲ್ಪನೆಯನ್ನು ಹೋಲುವ ಶೈಕ್ಷಣಿಕ ಪದ್ಧತಿಯನ್ನು ಕೋಲ್ಕತ್ತದಲ್ಲಿರುವ ಸಂಸ್ಥೆಯೊಂದು ಪ್ರಾರಂಭಿಸಿದ್ದು, ಈ ಪದ್ಧತಿ ಈಗ ಇಡೀ ಕೋಲ್ಕತ್ತದಲ್ಲಿ ಸಂಚಲನವುಂಟು ಮಾಡಿದೆ. ಎಷ್ಟರ ಮಟ್ಟಿಗೆ ಎಂದು ತಿಳಿಯಬೇಕಾದರೆ ಒಮ್ಮೆ ನೀವು ಈ ಸಂಸ್ಥೆಯ ವರ್ಕ್‍ಶಾಪ್ ಅಟೆಂಡ್ ಮಾಡಲೇಬೇಕು.

ಹೌದು, ಇದು ನಿಮಗೆ ಉತ್ಪ್ರೇಕ್ಷೆ ಎನಿಸಿದರೂ, ಆ ವರ್ಕ್‍ಶಾಪ್‍ನಲ್ಲಿ ಸ್ವತಃ ಭಾಗವಹಿಸಿ, ಅನುಭವ ಪಡೆದುಕೊಂಡು ಬಂದಿರುವ ಶಿಕ್ಷಕರು, ವಿದ್ಯಾರ್ಥಿಗಳ ಮಾತುಗಳನ್ನು ನೀವು ಕೇಳಿದಾಗ ಹಾಗೆನಿಸದೆ ಇರದು. ಇಷ್ಟೆಲ್ಲಾ ಹೇಳಿದ ಮೇಲೆ ಆ ಸಂಸ್ಥೆ ಯಾವುದು ಎಂಬ ಕೂತುಹಲ ನಿಮಗಿದ್ದೇ ಇರುತ್ತದೆ. ಅಂದಹಾಗೆ ‘ಲರ್ನಿಂಗ್ ವಿಥ್ ಮೂವಿಂಗ್ ಇಮೇಜಸ್’ ಎಂಬ ಕಾನ್ಸೆಪ್ಟ್ ಇಟ್ಟುಕೊಂಡು ಆರಂಭವಾದ ಆ ಸಂಸ್ಥೆಯ ಹೆಸರು “ಬೈಚಿತ್ರ ಪಾಠ್ ಶಾಲಾ”.

image


2010ರಿಂದ ಇದುವರೆಗೆ ಸುಮಾರು 25 ವರ್ಕ್‍ಶಾಪ್‍ಗಳನ್ನು ಕಂಡಕ್ಟ್ ಮಾಡಿರುವ ಬೈಚಿತ್ರ ಪಾಠ್ ಶಾಲಾ ಮೂಲತಃ ಕೋಲ್ಕಾತ್ತದಲ್ಲಿರುವ ಹಳೆಯ ಮಾಧ್ಯಮ ಗ್ರಂಥಾಲಯ. ಈ ಗ್ರಂಥಾಲಯದಲ್ಲಿ 1,000 ಕ್ಕಿಂತಲೂ ಹೆಚ್ಚಿನ ಪುಸ್ತಕಗಳು, ವರ್ತಮಾನ ಪತ್ರಿಕೆಗಳಿವೆ. ಅಷ್ಟೇ ಅಲ್ಲ, ವಿಶ್ವದ ಪ್ರಖ್ಯಾತ ಚಲನಚಿತ್ರಗಳ ಅದ್ಭುತ ಕಲೆಕ್ಷನಗಳಿವೆ. ಈ ಕಲೆಕ್ಷನ್ಸ್ ನಲ್ಲಿ ಕಲೆ, ಹೌಸ್ ಫಿಲ್ಮ್ಸ್, ಶೈಕ್ಷಣಿಕ, ಸಾಕ್ಷ್ಯಚಿತ್ರ, ಅಪರೂಪದ ಪ್ರಾಯೋಗಿಕ ಸಂಬಂಧಿತ ಚಲನಚಿತ್ರಗಳೂ ಇವೆಯಂತೆ.

ವರ್ಕ್ ಶಾಪ್‍ನಲ್ಲಿ ಏನೆಲ್ಲಾ ಕಲಿಯಬಹುದು?

ವರ್ಕ್ ಶಾಪ್‍ನಲ್ಲಿ ಶಿಕ್ಷಕರು ಮಾತ್ರವಲ್ಲದೆ ವಿದ್ಯಾರ್ಥಿಗಳೂ ಭಾಗವಹಿಸಬಹುದು. ಈ ಮೊದಲೇ ಹೇಳಿದ ಹಾಗೆ ಇಲ್ಲಿ ಯಾವುದೇ ವಿಷಯವನ್ನಾದರೂ ವೀಡಿಯೋ, ಪಿಕ್ಚರ್ಸ್ ಹಾಗೂ ಚಲನಚಿತ್ರಗಳ ಮುಖಾಂತರ ಪರಿಚಯಿಸಲಾಗುತ್ತದೆ. “ಸುಮಾರು 10 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಐಸಿಟಿ ಬಗ್ಗೆ ಅಂದರೆ ಮಾಹಿತಿ ಮತ್ತು ಸಂವಹನ ತ್ರಂತ್ರಜ್ಞಾನದ ಬಗ್ಗೆ ಬೆಳಕು ಚೆಲ್ಲಲಾಗುತ್ತಿದ್ದು, ಯುಪಿಎ ಸರ್ಕಾರ ಸಿಸಿಇ ಅಂದರೆ ನಿರಂತರ ಸಮಗ್ರ ಮೌಲ್ಯಮಾಪನದ ಕುರಿತ ಕಾನ್ಸೆಪ್ಟ್ ಒಂದನ್ನು ಆರಂಭಿಸಿದೆ. ಆದರೆ ಬೈಚಿತ್ರ ಪಾಠ್ ಶಾಲಾದಲ್ಲಿ ಇವೆರಡೂ ಕಾನ್ಸೆಪ್ಟ್ ಉಪಯೋಗಿಸಿಕೊಂಡು ಲರ್ನಿಂಗ್ ವಿಥ್ ಮೂವಿಂಗ್ ಇಮೇಜಸ್ ಎಂಬ ಕಾನ್ಸೆಪ್ಟ್ ರೆಡಿ ಮಾಡಿದೆ. ಇದು ಪ್ರತಿಯೊಬ್ಬರ ಕಲಿಕೆಗೂ ಸಹಾಯಕವಾಗಿದ್ದು, ಜುಲೈ 2012ರಲ್ಲಿ “ಬೈಚಿತ್ರ ಪಾಠ್ ಶಾಲಾ” ಸೊಸೈಟಿಯಾಗಿ ನೋಂದಣಿಯಾಗಿದೆ” ಎಂದು ಸಂಸ್ಥಾಪಕ ಕಾರ್ಯದರ್ಶಿ ಶುಭ ದಾಸ್ ಮೊಲಿಕ್ ತಮ್ಮ ಸಂಸ್ಥೆಯ ಬಗ್ಗೆ ಪರಿಚಯ ಮಾಡಿಕೊಂಡಿದ್ದಾರೆ.

image


ಕಲಿಕೆಯಾಯ್ತು ಮನರಂಜನೆ

ಬಹಳಷ್ಟು ಚಲನಚಿತ್ರಗಳನ್ನು ಶೈಕ್ಷಣಿಕ ವಿಷಯವಾಗಿ ತೆಗೆದುಕೊಂಡು ಸಮಗ್ರವಾಗಿ ಕಲಿಸುವುದು ಬೈಚಿತ್ರ ಪಾಠ್ ಶಾಲಾದ ವಿಶೇಷತೆ. ಪಾಠಗಳನ್ನು ಪ್ರಖ್ಯಾತ ಸಾಕ್ಷ್ಯಚಿತ್ರಗಳು, ಚಲನಚಿತ್ರಗಳು, ಯೂಟ್ಯೂಬ್ ವೀಡಿಯೋ, ನ್ಯೂಸ್ ಮತ್ತು ಟೆಲಿವಿಷನ್ ಪ್ರೋಗ್ರಾಮ್’ಗಳ ಮೂಲಕ ಅಭಿವೃದ್ಧಿಪಡಿಸಿ, ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಮಾಧ್ಯಮಗಳ ವಿಮರ್ಶೆಗೆ ಹಚ್ಚಲಾಗುವುದು. ಹೀಗೆ ಈ ರೀತಿಯ ವಿಧಾನಗಳನ್ನು ಉಪಯೋಗಿಸಿಕೊಂಡು ಕಲಿಸುತ್ತಿರುವುದು ಬೈಚಿತ್ರ ಪಾಠ್ ಶಾಲಾದ ಹೆಗ್ಗಳಿಕೆ. ಚಲನಚಿತ್ರಗಳು ಹೇಗೆ ವಿದ್ಯಾರ್ಥಿಗಳಿಗೆ ಉಪಯೋಗವಾಗುತ್ತವೆ ಎಂಬ ಪ್ರಶ್ನೆ ನಿಮಲ್ಲಿ ಮೂಡಿದರೆ ಅದಕ್ಕೂ ಉತ್ತರವಿದೆ. ಸಿನಿಮಾ ಬಗ್ಗೆ ಆಸಕ್ತಿ ಇರುವವರಿಗೆ ಉತ್ತಮ ಗುಣಮಟ್ಟದ ಚಿತ್ರಗಳನ್ನು ತೋರಿಸಿದಾಗ ಸಿನಿಮಾ ನಿರ್ದೇಶನದ ಬಗ್ಗೆ ಒಂದು ಐಡಿಯಾ ಬರುತ್ತದೆ. ಜತೆಗೆ ಚಿತ್ರದಲ್ಲಿ ವಿಜ್ಞಾನ, ಗಣಿತ, ಇತಿಹಾಸ, ಭೂಗೋಳ ಮತ್ತು ಜೀವನ ಕೌಶಲ್ಯದಂತಹ ವಿಷಯಗಳು ಬರುವುದರಿಂದ ಈ ಕುರಿತು ಚರ್ಚಿಸಲು ಅನುವು ಮಾಡಿಕೊಡಲಾಗುತ್ತದೆ. ಇದರಿಂದ ಸಾಮಾನ್ಯ ಜ್ಞಾನ, ಭೌದ್ಧಿಕ ಮಟ್ಟ ಹೆಚ್ಚಲು ಸಹಕಾರಿಯಾಗುತ್ತದೆ. ಅದಕ್ಕೆ ಸಿನಿಮಾಗಳನ್ನು ಆರಿಸುವಾಗಲೇ ಅಳೆದು ತೂಗಿ ನಂತರ ಪ್ರದರ್ಶಿಸಲಾಗುತ್ತದೆ. ಅಂದಹಾಗೆ 2010ರಲ್ಲಿ ನಡೆದ ಮೊಟ್ಟ ಮೊದಲನೆಯ ದೊಡ್ಡ ವರ್ಕ್‍ಶಾಪ್‍ಗೆ ‘ಟೂಲ್ಸ್ ಇನ್ ಸ್ಕೂಲ್ಸ್’ ಎಂದು ಹೆಸರಿಡಲಾಗಿತ್ತು. ಇದರಲ್ಲಿ ಕೋಲ್ಕಾತ್ತದ ವಿವಿಧ ಶಾಲೆಗಳ 50ಕ್ಕೂ ಹೆಚ್ಚು ಶಿಕ್ಷಕರು ಭಾಗವಹಿಸಿದ್ದರು.

ಇಂದು ತಂತ್ರಜ್ಞಾನ ಎಂಬುದು ಜನರ ಜೀವನ ಮತ್ತು ಸಂಸ್ಕøತಿಯೊಂದಿಗೆ ಹಾಸುಹೊಕ್ಕಾಗಿದ್ದು, ಅದು ಇಂದಿನ ಕಲಿಕೆಯ ಮೇಲೂ ನೇರ ಪರಿಣಾಮ ಬೀರಿದೆ. ತಂತ್ರಜ್ಞಾನ ಬೆರಳ ತುದಿಯಲ್ಲೇ ಇರುವುದರಿಂದ, ವಿದ್ಯಾರ್ಥಿಗಳು ಫೇಸ್‍ಬುಕ್, ವಾಟ್ಸ್‍ಅಪ್‍ಗೆ ಅಡಿಕ್ಟ್ ಆಗಿದ್ದಾರೆ. ಅವರನ್ನು ಆ ಪ್ರಪಂಚದಿಂದ ಕ್ಲಾಸ್‍ರೂಮ್ ಪ್ರಪಂಚಕ್ಕೆ ಕರೆತಂದು ಕೂರಿಸುವುದು ಕಷ್ಟಸಾಧ್ಯ. ಆದರೂ ಇವನ್ನೆಲ್ಲಾ ಮೆಟ್ಟಿನಿಂತು, ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ವಿವಿಧ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಮಾಡುತ್ತಿರುವುದು ಬೈಚಿತ್ರ ಪಾಠ್ ಶಾಲಾದ ಹಿರಿಮೆ ಎನ್ನಬಹುದು. ತಂತ್ರಜ್ಞಾನವನ್ನು ಹೀಗೂ ಉಪಯೋಗಿಸಿಕೊಳ್ಳಬಹುದು ಎಂದು ತೋರಿಸಿಕೊಟ್ಟಿರುವ ಈ ಸಂಸ್ಥೆ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಡುವಲ್ಲಿ ಯಶಸ್ವಿಯಾಗಿದೆ ಎಂದರೆ ತಪ್ಪಾಗಲಾರದು.

image


ಯಾರ್ಯಾರು ಏನು ಹೇಳ್ತಾರೆ?

"ಬೈಚಿತ್ರ ಪಾಠ್ ಶಾಲಾ ನನ್ನ ಕಣ್ಣು ತೆರೆಸಿತು. ಶೈಕ್ಷಣಿಕ ವಿಧಾನವನ್ನು ಹೀಗೂ ಅಳವಡಿಸಕೊಳ್ಳಬಹುದು ಎಂಬುದನ್ನು ಇದರಿಂದ ನೋಡಿ ಕಲಿಯಬಹುದು. ಇಲ್ಲಿನ ಕಲಿಕೆ ಬಹಳ ಸುಲಭವಾಗಿ, ಪರಿಣಾಕಾರಿಯಾಗಿದೆ. "

ರೋಶನಿ ದಾಸ್ ಗುಪ್ತಾ, ಇಂಗ್ಲಿಷ್ ಶಿಕ್ಷಕಿ, ಲೊರೆಟೊ ಡೇ ಸ್ಕೂಲ್, ಕೊಲ್ಕತ್ತಾ

" ಒಂದು ಸಿನಿಮಾ ಮಾಡುವ ಸಾಮರ್ಥ್ಯ ನನ್ನಲ್ಲೂ ಇದೆ ಎಂಬ ಆತ್ಮವಿಶ್ವಾಸ ಬಂದಿದ್ದು ಬೈಚಿತ್ರ ಪಾಠ್ ಶಾಲಾದಿಂದ".

ರಜೀಬ್ ಕೊಟಾಳ್, ವಿದ್ಯಾರ್ಥಿ

"ಬೈಚಿತ್ರ ಪಾಠ್ ಶಾಲಾದ ವರ್ಕ್‍ಶಾಪ್‍ನಲ್ಲಿ ಭಾಗವಹಿಸಿದ್ದರಿಂದ ಬಹಳಷ್ಟು ಒಳ್ಳೆಯ ವಿಷಯಗಳನ್ನು ತಿಳಿದುಕೊಂಡೆ. ಇಲ್ಲಿ ಹೊಸ ಸಾಧನಗಳನ್ನು ಉಪಯೋಗಿಸಿಕೊಂಡು ಏನೆಲ್ಲಾ ಮಾಡಬಹುದು ಎಂಬುದನ್ನು ಅರಿಯಬಹುದು."

ಜೋಯಿತಾ ದಾಸ್ ಗುಪ್ತಾ, ಪ್ರಾಂಶುಪಾಲರು, ಟೆಕ್ನೊ ಇಂಡಿಯಾ ಸ್ಕೂಲ್

Add to
Shares
6
Comments
Share This
Add to
Shares
6
Comments
Share
Report an issue
Authors

Related Tags