ಆವೃತ್ತಿಗಳು
Kannada

ಧರೆಗುರುಳುವ 5000 ಮರಗಳನ್ನು ಕಾಪಾಡಿದ ಪರಿಸರ ಪ್ರೇಮಿ..!

ಟೀಮ್​ ವೈ.ಎಸ್​. ಕನ್ನಡ

YourStory Kannada
2nd Mar 2017
Add to
Shares
22
Comments
Share This
Add to
Shares
22
Comments
Share

ಪರಿಸರವನ್ನು ಕಾಪಾಡಿಕೊಳ್ಳುವುದು ಇವತ್ತಿನ ಜಗತ್ತಿನಲ್ಲಿ ತುಂಬಾ ದೊಡ್ಡ ವಿಷಯ. ನಮ್ಮಲ್ಲಿನ ಪರಿಸರವನ್ನು ಮುಂದಿನ ಪೀಳಿಗೆಯವರಿಗೆ ಉಳಿಸಿಕೊಡುವುದೇ ದೊಡ್ಡ ಚಾಲೆಂಜ್. ಅಭಿವೃದ್ಧಿಯ ಮಾತು ಹೇಳಿ ಪರಿಸರವನ್ನು ಹಾಳು ಮಾಡುತ್ತಿದ್ದೇವೆ. ಆದ್ರೆ ಹೈದ್ರಾಬಾದ್​ನ ರಾಮಚಂದ್ರ ಅಪ್ಪಾರಿ ಪರಿಸರವನ್ನು ಕೆಡಿಸಿ, ಅಭಿವೃದ್ಧಿ ಸಾಧ್ಯವೇ ಇಲ್ಲ ಅನ್ನುತ್ತಾರೆ. 38 ವರ್ಷದ ರಾಮಚಂದ್ರ "ಗ್ರೀನ್ ಮಾರ್ನಿಂಗ್ ಹಾರ್ಟಿಕಲ್ಚರ್ ಸವೀಸಸ್ ಪ್ರೈವೇಟ್ ಲಿಮಿಟೆಡ್" ಅನ್ನುವ ಕಂಪನಿ ನಡೆಸುತ್ತಿದ್ದಾರೆ. ಅಂದಹಾಗೇ ರಾಮಚಂದ್ರ ನಡೆಸುತ್ತಿರುವ ಕಂಪನಿ ಬಿಲಿಯನ್​​ಗಟ್ಟಲೆ ದುಡ್ಡುಮಾಡುವ ಕಂಪನಿಯಲ್ಲ. ಬದಲಾಗಿ ಅಭಿವೃದ್ಧಿಯ ಹೆಸರಿನಲ್ಲಿ ನೆಲಕ್ಕುರುಳುವ ಮರಗಳನ್ನು ಪತ್ತೆಹಚ್ಚಿ, ಅವುಗಳನ್ನು ಬೇರೆಡೆಗೆ ಸ್ಥಳಾಂತರ ಮಾಡುವ ಕೆಲಸ ಮಾಡುತ್ತಿದ್ದಾರೆ.

image


ಒಂದು ಮರಕಡಿದು ಮತ್ತೊಂದು ಮರವನ್ನು ನೆಟ್ಟು ಬೆಳೆಸುವುದು ಹಳೆಯ ಸಂಸ್ಕೃತಿ. ಆದ್ರೆ ಈ ಕಾರ್ಯದಲ್ಲಿ ನೆಲಕ್ಕುರುಳಿಸಿದ ಮರಗಳು ಅದೆಷ್ಟೋ. ಮರಗಳನ್ನು ಬೆಳೆಸಿದ್ದು ಅಷ್ಟಕ್ಕಷ್ಟೇ ಇದೆ. ರಾಮಚಂದ್ರ ಮಾತ್ರ ಮರಗಳನ್ನು ಕಡಿದು ನೆಲಕ್ಕುರುಳಿಸುವ ಬದಲು ಅದನ್ನು ಬೇರೆಡೆ ಸ್ಥಳಾಂತರ ಮಾಡಿ ಅಲ್ಲಿ ಅದಕ್ಕೆ ಪೋಷಣೆ ನೀಡುವ ಕೆಲಸ ಮಾಡುತ್ತಿದ್ದಾರೆ. ಕ್ರಿಸ್ತಪೂರ್ವ 2000ದಲ್ಲಿ ಈಜಿಪ್ಟ್​​ನಲ್ಲಿ ಇಂತಹ ಪದ್ಧತಿ ಇತ್ತು ಅನ್ನೋದನ್ನ ಇತಿಹಾಸ ಹೇಳುತ್ತದೆ. ಈಗ ಪರಿಸರದ ಬಗ್ಗೆ ವಿಶ್ವಕ್ಕೇ ಕಾಳಜಿ ಹೆಚ್ಚಿದೆ, ಹೀಗಾಗಿ ಈ ಪದ್ಧತಿ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ರಾಮಚಂದ್ರ ಅಗ್ರಿಕಲ್ಚರ್ ನಲ್ಲಿ ಮಾಸ್ಟರ್ಸ್ ಹಾಗೂ ಅಗ್ರಿಬ್ಯುಸಿನೆಸ್​​ನಲ್ಲಿ ಎಂ.ಬಿ.ಎ. ಪದವಿ ಪಡೆದಿದ್ದರು. ಬ್ಯಾಂಕ್ ಉದ್ಯೋಗಿ ಆಗಿದ್ದರೂ ಅದ್ರಲ್ಲಿ ತೃಪ್ತಿ ಇರಲಿಲ್ಲ. ಹೀಗಾಗಿ ರಾಮಚಂದ್ರ ಪ್ರತಿದಿನವೂ ಕೃಷಿ ಹಾಗೂ ಪರಿಸರದ ಬಗ್ಗೆ ಹೆಚ್ಚು ಯೋಚನೆ ಮಾಡುತ್ತಿದ್ದರು. ಅಷ್ಟೇ ಅಲ್ಲ ಮರಗಳು ಕಡಿದು, ನೆಲಕ್ಕುರುಳಿಸುವ ಬದಲು ಅದನ್ನು ಮತ್ತೊಂದು ಸ್ಥಳಕ್ಕೆ ಸ್ಥಳಾಮತರ ಮಾಡುವ ಯೋಚನೆಯೊಂದಿಗೆ ಕಂಪನಿ ಆರಂಭಿಸಿದ್ರು.

“ ಕೃಷಿ ಬಗ್ಗೆ ಎಂಟು ವರ್ಷಗಳ ಅಭ್ಯಾಸ ಮಾಡಿ ನಂತರ, ಯಾವುದೋ ಒಂದು ಕೆಲಸಕ್ಕೆ ಸೇರಿಕೊಂಡಿದ್ದು ನನಗೆ ತೃಪ್ತಿ ನೀಡಿರಲಿಲ್ಲ. ನನ್ನ ಹವ್ಯಾಸಕ್ಕಾಗಿ ನಾನು ಆ ಕೆಲಸಕ್ಕೆ ನಾನು ರಾಜಿನಾಮೆ ನೀಡಿದೆ ”
- ರಾಮಚಂದ್ರ ಅಪ್ಪಾರಿ, ಪರಿಸರವಾದಿ

2009ರಲ್ಲಿ ರಾಮಚಂದ್ರ ಹೈದ್ರಾಬಾದ್- ವಿಜಯವಾಡ ಹೈವೇನಲ್ಲಿ ಪ್ರಯಾಣ ಮಾಡುವಾಗ ರಸ್ತೆ ಅಗಲೀಕರಣಕ್ಕಾಗಿ ನೂರಾರು ಮರಗಳನ್ನು ಕಡಿದುರುಳಿಸುವುದು ಕಂಡುಬಂತು. ಆವತ್ತಿನಿಂದ ರಾಮಚಂದ್ರ ಮರಗಳನ್ನು ಕಡಿದುರುಳಿಸುವ ಬದಲು ಬೇರೇನು ಮಾಡಬಹುದು ಅನ್ನುವ ಬಗ್ಗೆ ಸಂಶೋಧನೆ ಆರಂಭಿಸಿದ್ರು. ಕೊನೆಗೆ ಆಸ್ಟ್ರೇಲಿಯಾದಲ್ಲಿರುವಂತೆ ಮರಗಳನ್ನು ಬೇರೆಡೆಗೆ ಸ್ಥಳಾಂತರ ಮಾಡುವ ಬಗ್ಗೆ ತಿಳಿದುಕೊಂಡರು. " ಗ್ರೀನ್ ಮಾರ್ನಿಂಗ್ ಹಾರ್ಟಿಕಲ್ಚರ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್" ಅನ್ನುವ ಕಂಪನಿ ಸ್ಥಾಪಿಸಿ, ಮರಗಳನ್ನು ಸ್ಥಳಾಂತರ ಮಾಡುವ ಕೆಲವನ್ನು ಆರಂಭಿಸಿದ್ರು.

ಇದನ್ನು ಓದಿ: ಮೆಡಿಕಲ್ ಉದ್ಯಮಕ್ಕೂ ಒಂದು ನಿಯಮ ಬೇಕು- ಕಿರಣ್ ಮಜುಂದಾರ್ ಶಾ

ಆದ್ರೆ ಭಾರತ ಮತ್ತು ಆಸ್ಟ್ರೇಲಿಯಾದ ಮಣ್ಣು ಮತ್ತು ಇತರೆ ಅಂಶಗಳು ವಿಭಿನ್ನವಾಗಿದ್ದವು. ಅಲ್ಲಿ ಮರಗಳನ್ನು ಸ್ಥಳಾಂತರ ಮಾಡಲು ಉಪಯೋಗಿಸುತ್ತಿದ್ದ ಮಷಿನ್​ಗಳನ್ನು ಇಲ್ಲಿ ಉಪಯೋಗಿಸಲು ಸಾಧ್ಯವಿರಲಿಲ್ಲ. ಈ ಬಗ್ಗೆಯೂ ಅಧ್ಯಯನ ನಡೆಸಿದ ರಾಮಚಂದ್ರ ಮೊದಲಿಗೆ ಹೈದ್ರಾಬಾದ್ ಮೆಟ್ರೋ ರೈಲ್ವೇ ಜೊತೆಗೆ ತನ್ನ ಕೆಲಸವನ್ನು ಆರಂಭಿಸಿದ್ರು. ಈ ಕೆಲಸದಲ್ಲಿ ರಾಮಚಂದ್ರ ಸುಮಾರು 800 ಮರಗಳನ್ನು ರಕ್ಷಿಸಿದ್ರು. ರಾಮಚಂದ್ರನ್ ಕೆಲಸ ಸುದ್ದಿಯಾಯಿತು. ಈಗ ರಾಮಚಂದ್ರನ್ ಆರಂಭಿಸಿದ ಕೆಲಸ ಬೆಂಗಳೂರು, ವಿಶಾಖಪಟ್ಟಣ ಮತ್ತು ದೆಹಲಿಗೆ ವಿಸ್ತರಿಸುವ ನಿರೀಕ್ಷೆ ಇದೆ.

“ಮರಗಳನ್ನು ಸ್ಥಳಾಂತರ ಮಾಡುವ ಕೆಲಸ ಸುಲಭವಿಲ್ಲ. ಒಂದು ವೇಳೆ ಮರಗಳ ಸಂಖ್ಯೆ ಹೆಚ್ಚಿದ್ದರೆ, ಖರ್ಚು ಕಡಿಮೆ ಆಗುತ್ತದೆ. ಸುಮಾರು 6000 ರೂಪಾಯಿಗಳಿಗೆ ಒಂದು ಮರವನ್ನು ಸ್ಥಳಾಂತರ ಮಾಡಬಹುದು. ಆದ್ರೆ ಒಂದು ಮರವಿದ್ದರೆ ಖರ್ಚು 1.5 ಲಕ್ಷದ ಗಡಿ ದಾಟಬಹುದು.”
- ರಾಮಚಂದ್ರ ಅಪ್ಪಾರಿ, ಪರಿಸರವಾದಿ

ಮರಗಳನ್ನು ಸ್ಥಳಾಂತರ ಮಾಡುವ ಮೊದಲು ಸಾಕಷ್ಟು ಕೆಲಸಗಳನ್ನು ಮಾಡಬೇಕಾಗುತ್ತದೆ. ಮರಗಳ ಬೇರುಗಳಿಗೆ ಗಾಯವಾಗದಂತೆ ಮರದ ಸುತ್ತ ಸುಮಾರು 4 ಅಡಿ ಸುತ್ತಳತೆಯಲ್ಲಿ ಗುಂಡಿ ತೋಡಲಾಗುತ್ತದೆ. ನಂತರ ಬೇರುಗಳಿಗೆ ಕೆಮಿಕಲ್​ಗಳನ್ನು ಹಚ್ಚಿ ಅದರ ಸಾಗಾಣಿಕೆ ಸುಲಭವಾಗುವಂತೆ ಮಾಡಲಾಗುತ್ತದೆ. ಈ ಎಲ್ಲಾ ಕಾರ್ಯಗಳು ತುಂಬಾ ಜಾಗಾರೂಕವಾಗಿ ಮತ್ತು ನಾಜೂಕಾಗಿ ನಡೆಯಬೇಕು

“ ಭಾರತದಲ್ಲಿ ಹೈದ್ರಾಬಾದ್ ಬಿಟ್ರೆ, ಗುಜರಾತ್ ಮತ್ತು ಬೆಂಗಳೂರಿನ ಕೆಲವು ಕಡೆ ಮಾತ್ರ ಮರಗಳ ಸ್ಥಳಾಂತರ ನಡೆಯುತ್ತದೆ. ಗುಲ್ಮೊಹರ್, ನೀಮ್, ಜಮೂನ್, ಮಾವು ತರಹದ ಮರಗಳನ್ನು ಸುಲಭವಾಗಿ ಸ್ಥಳಾಂತರ ಮಾಡಬಹುದು. ಇಲ್ಲಿ ತನಕ ನಾವು ಸುಮಾರು 5000 ಮರಗಳ ಸ್ಥಳಾಂತರ ಮಾಡಲಾಗಿದೆ. ಇದು ನಿಧಾನಗತಿಯ ಕೆಲಸ ಆಗಿರುವುದರಿಂದ ಕೊಂಚ ದುಬಾರಿ ಕೆಲಸವಾಗಿದೆ. ”
- ರಾಮಚಂದ್ರ ಅಪ್ಪಾರಿ, ಪರಿಸರವಾದಿ

ಒಂದು ಮರವನ್ನು ಕಡಿದು ಮತ್ತೊಂದು ಮರವನ್ನು ನೆಟ್ಟು ಬೆಳೆಸುವುದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಆದ್ರೆ ರಾಮಚಂದ್ರ ಅಪ್ಪಾರಿಯವರು ಮರಗಳ ಸ್ಥಳಾಂತರ ಮುಂದಿನ ದಿನಗಳಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆಯುವುದು ಖಚಿತ. 

ಇದನ್ನು ಓದಿ: 

1. ಕೃಷಿಕ ಎಸಿಪಿ ಆಗಿದ್ದು ಹೇಗೆ..? ಧಿಘವ್​​ಕರ್ ಕಥೆ ಕೇಳಿ..!

2. ಭಾರತ ಶ್ರೀಮಂತವಾಗುತ್ತಿದೆ- ಯಾಕೆ ಅಂತೀರಾ.. ಇದನ್ನು ಓದಿ..!

3. ಔಷಧ ಉದ್ಯಮದ ಯಶಸ್ವಿ ಸಾರಥಿ : ದೇಶದ 2ನೇ ಶ್ರೀಮಂತ ದಿಲೀಪ್ ಸಾಂಘ್ವಿ 

Add to
Shares
22
Comments
Share This
Add to
Shares
22
Comments
Share
Report an issue
Authors

Related Tags