ಆವೃತ್ತಿಗಳು
Kannada

ಕನ್ನಡ ಕಲಿಕೆಗೊಂದು ಆನ್​ಲೈನ್ ಕೋರ್ಸ್..!

ಕೃತಿಕಾ

26th Nov 2015
Add to
Shares
7
Comments
Share This
Add to
Shares
7
Comments
Share

ಇಂಟರ್​​​ನೆಟ್​​ನ ಪ್ರಭಾವ ಹೆಚ್ಚಾಗುತ್ತಿದ್ದಂತೆ ಅದು ಎಲ್ಲಾ ಕಡೆಯೂ ತನ್ನ ಕದಂಬಬಾಹುಗಳನ್ನ ಬೀರುತ್ತಲೇ ಇದೆ. ಇಂಟರ್​​ನೆಟ್ ಅಸಾಧ್ಯ ಸಾಧ್ಯತೆಗಳನ್ನ ಜನರ ಮುಂದೆ ಇಟ್ಟಿದೆ. ಇದಕ್ಕೆ ಆನ್​​ಲೈನ್ ಶಿಕ್ಷಣವೂ ಹೊರತಾಗಿಲ್ಲ. ಆನ್​ಲೈನ್ ಮೂಲಕವೇ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಇವತ್ತು ಹಲವು ಕೋರ್ಸ್ ನಡೆಸುತ್ತಿವೆ. ಆದ್ರೆ ಕನ್ನಡದ ಮಟ್ಟಿಗೆ ಇಂತಹ ಯಾವುದೇ ಕೋರ್ಸ್​ಗಳು ಇರಲಿಲ್ಲ. ಈ ಕೊರತೆಯನ್ನು ನೀಗಿಸಿ ಆನ್​​ಲೈನ್ ಮೂಲಕ ಕನ್ನಡ ಕಲಿಸಬಹುದು ಎಂಬುದನ್ನು ಮೈಸೂರಿನ ಭಾರತೀಯ ಭಾಷಾ ಸಂಸ್ಥಾನ ತೋರಿಸಿಕೊಟ್ಟಿದೆ.

image


ಕನ್ನಡ ಮರೆಯಾಗುತ್ತಿದೆ ಎಂಬ ಆತಂಕ ಹೆಚ್ಚುತ್ತಿರುವಾಗಲೇ ಕನ್ನಡದ ಉಳಿಸಿ ಬೆಳೆಸಲು ಒಂದು ಅಪೂರ್ವ ಪ್ರಯತ್ನ ನಡೆಯುತ್ತಿದೆ. ಹೌದು,ಆನ್​ಲೈನ್ ಮೂಲಕ ಕನ್ನಡ ಕಲಿಯುವ ಕೊರ್ಸ್ ಆರಂಭಿಸಿ ಕನ್ನಡ ಬರದಿರುವವರಿಗೆ ಕಲಿಯುವ ದಾರಿ ತೋರಿಸುವ ಕೆಲಸ ಸದ್ದಿಲ್ಲದೇ ನಡೆಯುತ್ತಿದೆ. ಇಂತದ್ದೊಂದು ಉತ್ತಮ ಕೆಲಸವನ್ನು ಮಾಡುತ್ತಿರುವ ಸಂಸ್ಥೆ ಮೈಸೂರಿನ ಭಾರತೀಯ ಭಾಷಾ ಸಂಸ್ಥಾನ. ಕನ್ನಡ ಕಲಿಯಲು ಆಸಕ್ತಿ ಹೊಂದಿದವವರಿಗೆ ಕನ್ನಡ ಭಾಷೆಯನ್ನು ಸುಲಭವಾಗಿ ಕಲಿಯಲು ಸಾಂಸ್ಕೃತಿಕ ನಗರಿ ಮೈಸೂರಿನ ಭಾರತೀಯ ಭಾಷಾ ಸಂಸ್ಥಾನ(ಸಿಐಐಎಲ್) ಆನ್​​ಲೈನ್ ಕೋರ್ಸ್ ನಡೆಸುತ್ತಿದೆ. ಇದಕ್ಕೆ ಕನ್ನಡಿಗರಿಂದ ಮತ್ತು ಕನ್ನಡೇತರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕನ್ನಡೇತರರಿಗೆ ಕನ್ನಡ ಕಲಿಸಲೆಂದೇ “ಸಿಐಐಎಲ್”ಆರಂಭಿಸಿರುವ ಕನ್ನಡ ಆನ್​ಲೈನ್ ಕಲಿಕೆ ಕೋರ್ಸ್ ಮೂಲಕ ಕನ್ನಡ ಓದಲು, ಬರೆಯಲು ಮತ್ತು ಮಾತನಾಡಲು ಕಲಿಯುವ ಅವಕಾಶ ಕನ್ನಡೇತರರಿಗೆ ಲಭ್ಯವಾಗಗಿದೆ. ಈ ಕೋರ್ಸ್ ಅನ್ನು ಭಾರತೀಯ ಭಾಷಾ ಸಂಸ್ಥಾನ ಕಳೆದ ಹತ್ತು ವರ್ಷಗಳಿಂದಲೂ ನಡೆಸಿಕೊಂಡು ಬರುತ್ತಿದೆ. ಈ ಮೂಲಕ ಕನ್ನಡವನ್ನು ಉಳಿಸಿ ಬೆಳೆಸಿಕೊಂಡು ಬರುವ ಅಪೂರ್ವ ಕೆಲಸವನ್ನು ಸದ್ದಿಲ್ಲದೇ ಮಾಡುತ್ತಿದೆ. ಭಾಷಾ ವಿಜ್ಞಾನಿಯಾಗಿದ್ದ ಲಿಂಗದೇವರು ಹಳೇಮನೆ ಈ ಕೊರ್ಸ್ ಅನ್ನು ಅಭಿವೃದ್ದಿಪಡಿಸಿದ್ದರು.

http://www.kannada online.info ವೆಬ್ ಸೈಟ್ ಮೂಲಕ ಕನ್ನಡ ಕಲಿಸಿಕೊಡಲಾಗುತ್ತದೆ. ಪ್ರತೀ ವರ್ಷವೂ ಆನ್ ಲೈನ್ ಮೂಲಕ ಕನ್ನಡ ಕಲಿಯುವವರ ಅಂಖ್ಯೆ ಹೆಚ್ಚುತ್ತಿದ್ದು, ಕೋರ್ಸ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ವೆಬ್​​ಸೈಟ್ ಮೂಲಕವೇ ಸರಳವಾಗಿ ಕನ್ನಡ ಓದಲು, ಬರೆಯಲು, ಮಾತನಾಡಲು ಅವಕಾಶ ಸಿಕ್ಕಿರುವುದು ಇದಕ್ಕೆ ಕಾರಣ. ಅಲ್ಲದೆ ಸರ್ಕಾರದ ಅನುದಾನ ಇರೋದ್ರಿಂದಾಗಿ ಅತಿ ಕಡಿಮೆ ಬೆಲೆಯಲ್ಲಿ ಕೋರ್ಸ್ ಲಭ್ಯವಿರುವುದೇ ಕನ್ನಡ ಕಲಿಯುವವರ ಆಸಕ್ತಿ ಹೆಚ್ಚಲು ಕಾರಣವಾಗಿದೆ.

image


ದೇಶೀಯ ವಿಧ್ಯಾರ್ಥಿಗಳಿಗೆ ಆನ್ ಲೈನ್ ಮೂಲಕ ಕನ್ನಡ ಕೋರ್ಸ್ ಕಲಿಕೆಗೆ ಕೇವಲ ಐನೂರು ರೂಪಾಯಿ ಫೀಸ್ ನಿಗದಿಪಡಿಸಲಾಗಿದೆ. ಇನ್ನು ವಿದೇಶಿಯರಿಗೆ ಕನ್ನಡ ಕಲಿಕೆಗೆ ಐವತ್ತು ಡಾಲರ್ ಫೀಸ್ ನಿಗದಿ ಮಾಡಲಾಗಿದೆ. ಭಾರತೀಯ ಭಾಷಾ ಸಂಸ್ಥಾನವು ಆನ್ಲೈನ್ ಮೂಲಕ ಕನ್ನಡ ಕಲಿಕೆಯನ್ನು ರೂಪಿಸಿದ್ದು, ಇದರ ಜತೆಗೆ ಬಾಂಗ್ಲಾ ಹಾಗು ತಮಿಳು ಭಾಷೆಯನ್ನೂ ಕೂಡ ಆನ್ ಲೈನ್ ಮೂಲಕ ಕಲಿಯುವ ಅವಕಾಶ ಕಲ್ಪಿಸಿದೆ. ಕನ್ನಡ ಭಾಷೆಯ ಬಗ್ಗೆ ಪರಿಚಯವೇ ಇಲ್ಲದವರೂ ಕೂಡ ತಾವು ಇದ್ದಲಿಂದಲೇ ಸುಲಭವಾಗಿ ಭಾಷೆ ಕಲಿಯಬಹುದಾಗಿರೋದ್ರಿಂದ ಈ ಕೋರ್ಸ್ ಜನಪ್ರಿಯತೆ ಗಳಿಸುತ್ತಿದೆ.

ಭಾರತೀಯ ಭಾಷೆಗಳನ್ನು ಉಳಿಸಿ ಬೆಳೆಸುವ ಉದ್ದೇಶವನ್ನಿಟ್ಟುಕೊಂಡು ಭಾರತೀಯ ಭಾಷಾ ಸಂಸ್ಥಾನ ಕೆಲಸ ಮಾಡುತ್ತಿದೆ. ಈ ನಿಟ್ಟಿನಲ್ಲಿ ಆನ್ ಲೈನ್ ಮೂಲಕ ಕನ್ನಡ ಕಲಿಸುವ ಕೆಲಸ ಮಾಡುತ್ತಿದ್ದೇವೆ. ಹತ್ತು ವರ್ಷಗಳ ಹಿಂದೆ ನಾವು ಈ ಕೋರ್ಸ್ ಆರಂಭಿಸಿದಾಗ ಕೆಲವರು ಕುಹುಕವಾಡಿದ್ರು. ಆದ್ರೆ ನಮಗೆ ಈ ಕೋರ್ಸ್ ಯಶಸ್ವಿಯಾಗುವ ಬಗ್ಗೆ ನಂಬಿಕೆಯಿತ್ತು. ಪ್ರತೀ ವರ್ಷ ಸುಮಾರು ಸಾವಿರಕ್ಕೂ ಹೆಚ್ಚು ಮಂದಿ ಆನ್ ಲೈನ್ ಕೋರ್ಸ್ ಮೂಲಕ ಕನ್ನಡ ಕಲಿಯುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಬೇರೆ ರಾಜ್ಯಗಳಕಂದ ಇಲ್ಲಿಗೆ ಬಂದು ನೆಲೆಯೂರಿರುವ ಸಂಖ್ಯೆ ದೊಡ್ಡದಿದೆ. ಹೀಗಾಗಿ ನಾವು ಈ ಕೋರ್ಸ್ ಪಾರಂಭ ಮಾಡಿದೆವು. ಈಗ ಕನ್ನಡ ಕಲಿಯುವವರ ಸಂಖ್ಯೆ ಹೆಚ್ಚುತ್ತಿದೆ ಅದೂ ಆನ್ ಲೈನ್ ಮೂಲಕ ಅಂತಾರೆ ಭಾರತೀಯ ಭಾಷಾ ಸಂಸ್ಥೆಯ ನಿರ್ಧೇಶಕ ಆದೇಶ್ ಕುಮಾರ್ ಮಿಶ್ರಾ.

image


ಕನ್ನಡ ಕಲಿಕೆಯಲ್ಲಿ ನಾಲ್ಕು ಭಾಗಗಳಿದ್ದು, ಮೊದಲ ಭಾಗದಲ್ಲಿ ಕನ್ನಡ ಅಕ್ಷರಗಳ ಬಗ್ಗೆ ಕಲಿಸಿಕೊಡಲಾಗುತ್ತದೆ. ಕನ್ನಡವನ್ನು ಬರೆಯುವುದು, ಉಚ್ಛರಿಸುವುದು, ಪದರಚನೆಯನ್ನು ಕಲಿಯಬಹುದು. ವೆಬ್​ಸೈಟ್​​ಗೆ ಹೋಗಿ ಪರದೆಯ ಮೇಲಿನ “ಅ” ಅಕ್ಷರದಮೇಲೆ ಕ್ಲಿಕ್ ಮಾಡಿದರೆ, ಅದರ ಉಚ್ಛಾರಣೆಯ ಧ್ವನಿ ಕೇಳಿಸುತ್ತದೆ.ಕನ್ನಡ ಪದಗಳ ಪಕ್ಕದಲ್ಲೇ ಇಂಗ್ಲಿಷ್ ಅಕ್ಷರಗಳನ್ನು ಬರೆಯಲಾಗಿದ್ದು, ಇಂಗ್ಲಿಷ್ ಮೂಲಕ ಕನ್ನಡವನ್ನು ಸುಲಭವಾಗಿ ಕಲಿಯಬಹುದಾಗಿದೆ. ಇನ್ನು ಎರಡನೇ ಭಾಗದಲ್ಲಿ ವ್ಯಾಕರಣದ ಬಗ್ಗೆ ಕಲಿಸಿಕೊಡಲಾಗುತ್ತದೆ. ಕನ್ನಡದ ಚಿಕ್ಕ ಚಿಕ್ಕ ಪದಗಳನ್ನು ಬಳಸಿ ವಾಕ್ಯ ರಚನೆಮಾಡುವ ಕೌಶಲ್ಯವನ್ನು ಈ ಭಾಗದಲ್ಲಿ ಕಲಿಸಿಕೊಡಲಾಗುತ್ತದೆ. ಮೂರು ಮತ್ತು ನಾಲ್ಕನೇ ಭಾಗದಲ್ಲಿ ಕನ್ನಡ ಭಾಷೆಯ ಇತಿಹಾಸ, ಸಾಹಿತ್ಯ, ಮತ್ತು ಕರ್ನಾಟಕದ ಇತಿಹಾಸ, ಸಂಸ್ಕೃತಿ, ಪರಂಪರೆ ಬಗ್ಗೆ ತಿಳಿದುಕೊಳ್ಳಬಹುದಾಗಿದೆ.

ಈ ಕೋರ್ಸ್ ಆರಂಭಿಸಿದ ನಂತರ ಆನ್ ಲೈನ್ ಮೂಲಕ ಕನ್ನಡ ಕಲಿಯುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ. ಅದರಲ್ಲೂ ಕನ್ನಡ ಕಲಿಯಲು ಟೆಕ್ಕಿಗಳು, ವೈದ್ಯರು ಹೆಚ್ಚಿನ ಸಂಖ್ಯೆಯಲ್ಲಿ ಮುಂದಾಗುತ್ತಿದ್ದಾರೆ. ಇಂತದ್ದೊಂದು ಅತ್ಯುತ್ತಮ ಕಾರ್ಯ ನಡೆಸಿಕೊಂಡು ಬರುತ್ತಿರುವ ಭಾರತೀಯ ಭಾಷಾ ಸಂಸ್ಥಾನ ಕನ್ನಡಿಗರ ಶ್ಲಾಘನೆಗೆ ಪಾತ್ರವಾಗಿದೆ...

Add to
Shares
7
Comments
Share This
Add to
Shares
7
Comments
Share
Report an issue
Authors

Related Tags