43ನೇ ವಯಸ್ಸಿನ ಮ್ಯಾರಾಥಾನ್ ಸ್ಪೆಷಲಿಸ್ಟ್ “ಅಂಜಲಿ”..!

ಟೀಮ್​ ವೈ.ಎಸ್​. ಕನ್ನಡ

43ನೇ ವಯಸ್ಸಿನ ಮ್ಯಾರಾಥಾನ್ ಸ್ಪೆಷಲಿಸ್ಟ್ “ಅಂಜಲಿ”..!

Tuesday July 18, 2017,

2 min Read

ಮನಸ್ಸಿದ್ದರೆ ಅದೇನು ಬೇಕಾದರೂ ಸಾಧಿಸಬಹುದು. ಮ್ಯಾರಾಥಾನ್ ಅಲ್ಲ, ಅದಕ್ಕಿಂತ ದೊಡ್ಡ ಸಾಧನೆಯನ್ನು ಕೂಡ ಮಾಡಬಹುದು ಅನ್ನುವುದಕ್ಕೆ 43 ವರ್ಷದ ಅಂಜಲಿ ಸರೌಗಿ ಉತ್ತಮ ಉದಾಹರಣೆ. ಅಂಜಲಿ 89 ಕಿಲೋಮೀಟರ್ ದೂರದ ಕಾಮ್ರೆಡ್ಸ್ ಮ್ಯಾರಾಥಾನ್ ಅನ್ನು ಯಶಸ್ವಿಯಾಗಿ ಮುಗಿಸಿದ ಮೊದಲ ಭಾರತೀಯ ಮಹಿಳೆ ಅನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ. ವಿಶ್ವದ ಅತ್ಯಂತ ಹಳೆಯ ಆಲ್ಟ್ರಾ ಮ್ಯಾರಾಥಾನ್ ನಲ್ಲಿ ಅಂಜಲಿ ಮಾಡಿದ ಸಾಧನೆಗಾಗಿ ಬಿಲ್ ರೌಡೆನ್ ಪದಕದ ಗೌರವ ಕೂಡ ಸಿಕ್ಕಿದೆ. ದಕ್ಷಿಣ ಆಫ್ರಿಕಾದ ಡರ್ಬಾನ್ ಮತ್ತು ಪೀಟರ್ ಮರಿಟ್ಸ್ ಬರ್ಗ್ ನಗರಗಳ ನಡುವೆ ಈ ಮ್ಯಾರಾಥಾನ್ ನಡೆದಿತ್ತು.

image


ನೀವು ಅಂದುಕೊಂಡ ಹಾಗೇ, ಅಂಜಲಿ ಚಿಕ್ಕ ವಯಸ್ಸಿನಲ್ಲಿ ಯಾವತ್ತೂ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿರಲಿಲ್ಲ. ಕಳೆದ 2 ವರ್ಷಗಳ ಹಿಂದೆ ಅಂಜಲಿ ಓಡುವ ಸಾಹಸವನ್ನು ಆರಂಭಿಸಿದ್ದರು. 41ನೇ ವರ್ಷ ವಯಸ್ಸಿನಲ್ಲಿ ಖ್ಯಾತನಾಮ ಅಥ್ಲೀಟ್ ಗಳೆಲ್ಲಾ ಟ್ರ್ಯಾಕ್ ಅಂಡ್ ಫೀಲ್ಡ್ ಗೆ ಗುಡ್ ಬೈ ಹೇಳುವುದು ಸಾಮಾನ್ಯ, ಆದ್ರೆ ಅಂಜಲಿ ಪಾಲಿಗೆ ಮಾತ್ರ ವಯಸ್ಸು ಅನ್ನುವುದು ಜಸ್ಟ್ ನಂಬರ್ ಮಾತ್ರ ಆಗಿತ್ತು. ಹೀಗಾಗಿ ಚಾಲೆಂಜ್ ಗಳನ್ನು ಸ್ವೀಕರಿಸಿದ್ದರು. ಸವಾಲುಗಳನ್ನು ಗೆದ್ದರು.

ಇದನ್ನು ಓದಿ: ಕಸ ವಿಲೇವಾರಿಗೆ ಹೊಸ ಟಚ್- ವಿಜಯವಾಡದಲ್ಲಿ ಎಲೆಕ್ಟ್ರಿಕ್ ರಿಕ್ಷಾಗಳದ್ದೇ ದರ್ಬಾರ್..!

ಅಂಜಲಿ ಸಾಹಸಕ್ಕೆ ಮೊದಲು ಪ್ರೋತ್ಸಾಹ ನೀಡಿದ್ದು 18 ವರ್ಷ ವಯಸ್ಸಿನ ಮಗಳು ಮಮತಾ. 2 ವರ್ಷಗಳ ಹಿಂದೆ ಮಮತಾ ಅಮ್ಮ ಅಂಜಲಿಯನ್ನು ಸಿಟಿ ಮ್ಯಾರಾಥಾನ್ ನಲ್ಲಿ ಓಡುವಂತೆ ಪ್ರೋತ್ಸಾಹಿಸಿದ್ರು. ಮೊದಲ ಓಟದಲ್ಲೇ ಮೊದಲ ಸ್ಥಾನ ಪಡೆದಾಗ ಅಂಜಲಿಗೆ ತನ್ನಲ್ಲಿದ್ದ ಶಕ್ತಿಯ ಬಗ್ಗೆ ಅರಿವಾಯಿತು. ಅಷ್ಟೇ ಅಲ್ಲ ಅದರಲ್ಲಿರುವ ಸಂತಸವನ್ನು ಅನುಭವಿಸಿದ್ದರು. ತನ್ನಲ್ಲಿ ಶಕ್ತಿ ಇರುವ ತನಕ ಓಟದಲ್ಲಿ ಭಾಗಿಯಾಗುವ ನಿರ್ಧಾರ ಮಾಡಿದ್ರು.

“ ಮಹಿಳೆಯರು ಸಾಮಾನ್ಯವಾಗಿ ತಮ್ಮ ಶಕ್ತಿಗಳ ಬಗ್ಗೆ ಹೆಚ್ಚು ಅರಿತುಕೊಂಡಿರುವುದಿಲ್ಲ. ನಮ್ಮಲ್ಲಿರುವ ಭಯವೇ ನಮ್ಮ ಮೊದಲ ಶತ್ರು. ನಾವು ಕನಸುಗಳ ಜೊತೆ ಹೆಚ್ಚು ಬದುಕಬೇಕು. ಭಯದ ಜೊತೆಗೆ ಅಲ್ಲ.”
- ಅಂಜಲಿ, ಮ್ಯಾರಾಥಾನ್ ಓಟಗಾರ್ತಿ

ಮುಂಬೈ ಹಾಫ್ ಮ್ಯಾರಾಥಾನ್ ಅಂಜಲಿ ಪಾಲಿಗೆ ಮೊದಲ ಅಂತರಾಷ್ಟ್ರೀಯ ಸ್ಪರ್ಧೆಯಾಗಿತ್ತು. ಅಂಜಲಿ ಮೊದಲ ಯತ್ನದಲ್ಲೇ ದ್ವಿತೀಯ ಸ್ಥಾನಿಯಾಗಿ ಮಿಂಚಿದ್ರು. 40ರ ಹರೆಯದಲ್ಲೂ ಉತ್ತಮ ಸಾಧನೆ ಮಾಡಿರುವ ಅಂಜಲಿಯ ನಿಜ ಜೀವನ ಕಷ್ಟದಲ್ಲೇ ಇದೆ. ಅಂಜಲಿ ತನ್ನ ಪತಿಯ ಜೊತೆಗೆ ಮೆಡಿಕಲ್ ಡಯಾಗ್ನಸ್ಟಿಕ್ ಸೆಂಟರ್ ಒಂದನ್ನು ನಡೆಸುತ್ತಿದ್ದಾರೆ. ಚಿಕಾಗೋ ಮ್ಯಾರಾಥಾನ್ ತಯಾರಿ ವೇಳೆ ಗಾಯಕ್ಕೆ ತುತ್ತಾಗಿದ್ದು, ಅಂಜಲಿ ಬದುಕಿಗೆ ದೊಡ್ಡ ಸವಾಲನ್ನೇ ಒಡ್ಡಿತ್ತು. ವೈದ್ಯರು ಅಂಜಲಿ ಮತ್ತೊಮ್ಮೆ ಓಡುವುದು ಅನುಮಾನ ಅನ್ನುವ ಷರಾ ಬರೆದಿದ್ದರು. ಆದ್ರೆ ಅಂಜಲಿ ಗೆಳೆಯರೊಬ್ಬರು ಭಾರತೀಯ ಲೇಖಕ ಅಮಿತ್ ಸೇಥ್ ಬರೆದಿದ್ದ ಡೇರ್ ಟು ರನ್ ಪುಸ್ತಕವನ್ನು ಉಡುಗೊರೆಯಾಗಿ ನೀಡಿದ್ದರು. ಅಮಿತ್ 2009ರಲ್ಲಿ ಕಾಮ್ರೆಡ್ ಮ್ಯಾರಾಥಾನ್ ಅನ್ನು ಮುಗಿಸಿ ದಾಖಲೆ ಬರೆದಿದ್ದರು. ಈ ಪುಸ್ತಕ ಅಂಜಲಿಯ ಗಾಯಗಳನ್ನು ಮರೆಯುವಂತೆ ಮಾಡಿತು, ಅಷ್ಟೇ ಅಲ್ಲ ಒಂದು ಹೆಜ್ಜೆ ಮುಂದಿಟ್ಟು ಮತ್ತೆ ಓಡುವಂತೆ ಮಾಡಿತ್ತು.

ಅಂದಹಾಗೇ, ಚಿಕ್ಕ ವಯಸ್ಸಿನಲ್ಲಿ ಅಂಜಲಿ ದುಂಡುಗಿನ ಹುಡುಗಿಯಾಗಿದ್ದರು. ಆದ್ರೆ ಓಡಲು ಆರಂಭಿಸಿದ ಮೇಲೆ ಸಣ್ಣಗಾಗಿದ್ದರು. ಫಿಟ್ ಅಂಡ್ ಹೆಲ್ದಿಯಾಗಿರುವ ಅಂಜಲಿ ಈಗ ಎಲ್ಲರಿಗೂ ಮಾದರಿ. ಮುಂದಿನ ವರ್ಷದ ಕಾಮ್ರೆಡ್ ಮ್ಯಾರಾಥಾನ್ ನಲ್ಲಿ ತನ್ನದೇ ಸಾಧನೆಯನ್ನು ಉತ್ತಮ ಪಡಿಸಿಕೊಳ್ಳುವ ಕನಸು ಅಂಜಲಿಗಿದೆ. ಅಷ್ಟೇ ಅಲ್ಲ ತನ್ನ ಮಗಳ ಜೊತೆ ಮ್ಯಾರಾಥಾನ್ ಓಟದ ಕನಸು ಕೂಡ ಕಾಣುತ್ತಿದ್ದಾರೆ. 

ಇದನ್ನು ಓದಿ:

1. ಬರಿ ಕಾಲಲ್ಲೇ ಓಡಿ, ಚಿನ್ನ ಗೆದ್ದ ಭಾರತದ ಬಂಗಾರ..!

2. ಶಿಕ್ಷಣಕ್ಕೆ ಸಿಕ್ಕಿದೆ ಹೊಸ ಅವತಾರ- ಪ್ರಾಕ್ಟೀಕಲ್​ನಲ್ಲೇ ಅಡಗಿದೆ ಭವಿಷ್ಯ..! 

3. ಆರೋಗ್ಯಕ್ಕೆ ಹಾನಿಕಾರಕವಾಗಿದ್ದರೂ ಡೋಂಟ್ ಕೇರ್, ತಂಬಾಕು ಸೇವನೆಗೆ ಇನ್ನೂ ಸಿಕ್ಕಿಲ್ಲ ಮುಕ್ತಿ..!